ತುರ್ತು ಚಿಕಿತ್ಸೆ ಇನ್ನು ಹಕ್ಕು: ಆರೋಗ್ಯ ಮಸೂದೆ ಅಂಗೀಕರಿಸಿದ ರಾಜಸ್ಥಾನ: ವಿಧಾನಸಭೆ

ತುರ್ತು ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಪೂರ್ವ ಶುಲ್ಕ, ವೆಚ್ಚ ಪಾವತಿ ಮಾಡದೆಯೇ ಚಿಕಿತ್ಸೆ ಪಡೆಯುವುದನ್ನು ಹಕ್ಕು ಎಂದು ಘೋಷಿಸುವ ಮಸೂದೆಯನ್ನು ರಾಜ್ಯ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ.

Emergency treatment is a right Rajasthan Assembly passed the Health Bill akb

ಜೈಪುರ: ತುರ್ತು ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಪೂರ್ವ ಶುಲ್ಕ, ವೆಚ್ಚ ಪಾವತಿ ಮಾಡದೆಯೇ ಚಿಕಿತ್ಸೆ ಪಡೆಯುವುದನ್ನು ಹಕ್ಕು ಎಂದು ಘೋಷಿಸುವ ಮಸೂದೆಯನ್ನು ರಾಜ್ಯ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ.

ಈ ಮಸೂದೆಗೆ ರಾಜ್ಯಪಾಲರ (Governor) ಅಂಗೀಕಾರ ಸಿಕ್ಕ ಬಳಿಕ ಅದು ಕಾನೂನಿನ ಸ್ವರೂಪ ಪಡೆದುಕೊಳ್ಳಲಿದೆ. ಈ ಯೋಜನೆಯಡಿ ಯಾವುದೇ ವ್ಯಕ್ತಿ ತುರ್ತು ಸಂದರ್ಭದಲ್ಲಿ ಯಾವುದೇ ಪೂರ್ವ ಶುಲ್ಕ ಪಾವತಿ ಮಾಡದೆಯೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಬಳಿಕ ಹಣ ಪಾವತಿ ಮಾಡಬಹುದು. ಒಂದು ವೇಳೆ ರೋಗಿಗೆ ಹಣ ನೀಡಲು ಸಾಧ್ಯವಾಗದೇ ಹೋದಲ್ಲಿ ಸರ್ಕಾರವೇ ಹಣ ಪಾವತಿ ಮಾಡಲಿದೆ. ಕಳೆದ ಸೆಪ್ಟೆಂಬರ್‌ನಲ್ಲಿಯೇ ಈ ಮಸೂದೆಯನ್ನು ಸದನದಲ್ಲಿ ಮಂಡಿಸಲಾಗಿತ್ತು. ಆದರೆ ಬಳಿಕ ಅದನ್ನು ಆಯ್ಕೆ ಸಮಿತಿಗೆ ಪರಿಶೀಲನೆಗೆ ನೀಡಲಾಗಿತ್ತು. ಬಳಿಕ ಅದು ನೀಡಿದ ಸಲಹೆಗಳನ್ನು ಅಳವಡಿಸಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗಿದೆ.

ಪಾಕಿಸ್ತಾನದಲ್ಲಿ ಇದೀಗ ಔಷಧಕ್ಕೂ ಹಾಹಾಕಾರ:ತುರ್ತು ಶಸ್ತ್ರಚಿಕಿತ್ಸೆಗೂ ಔಷಧ ಇಲ್ಲದ ದುಸ್ಥಿತಿ

ಇಷ್ಟದ ವ್ಯಕ್ತಿಯನ್ನು ವಿವಾಹವಾಗುವುದು ಮೂಲಭೂತ ಹಕ್ಕು, ಹೈಕೋರ್ಟ್ ಅಭಿಪ್ರಾಯ

Latest Videos
Follow Us:
Download App:
  • android
  • ios