ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸೋಮವಾರ ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ಯೋಗ ಗುರು ಸ್ವಾಮಿ ಶಿವಾನಂದ ಅವರ 125 ವರ್ಷಗಳ ಆರೋಗ್ಯವಂತ ಜೀವನದ ರಹಸ್ಯ ಇಲ್ಲಿದೆ...
ಪದ್ಮಶ್ರೀ (Padmashri Award) ಪ್ರಶಸ್ತಿ ಪಡೆಯುವ ಮುನ್ನ ಯೋಗ (Yoga) ಗುರು ಸ್ವಾಮಿ ಶಿವಾನಂದರು (Swami Sivananda) ಪ್ರಧಾನಿ ಮೋದಿ (Prime minister Narendra Modi) ಮತ್ತು ರಾಷ್ಟ್ರಪತಿ ಕೋವಿಂದ್ (Ramnath Kovind) ಅವರಿಗೆ ಬಾಗಿ ಮಂಡಿಯೂರಿ ನಮಸ್ಕಾರ ಮಾಡಿದರು. 125 ವರ್ಷಗಳ ವಿನಯವಂತ ಜೀವನದ ಸಾಕಾರ ಅದಾಗಿತ್ತು. ಬರಿಗಾಲಿನಲ್ಲಿ ಅವಧೂತನಂತೆ ನಡೆದು ಬಂದ ಅವರು ಸಕಲರ ಚಪ್ಪಾಳೆ, ಮೆಚ್ಚುಗೆ ಗಳಿಸಿದರು.
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಟ್ಟಮಡೈನಲ್ಲಿ ಜನಿಸಿದ ಸ್ವಾಮಿ ಶಿವಾನಂದರು ಯೋಗ, ವೇದಾಂತ ಮತ್ತು ವಿವಿಧ ವಿಷಯಗಳ ಕುರಿತು 296 ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪುಸ್ತಕಗಳು ಸೈದ್ಧಾಂತಿಕ ಜ್ಞಾನಕ್ಕಿಂತ ಯೋಗ ತತ್ತ್ವಶಾಸ್ತ್ರದ ಪ್ರಾಯೋಗಿಕ ಅನ್ವಯವನ್ನು ಒತ್ತಿಹೇಳಿವೆ.
ಆಗಸ್ಟ್ 1896ರಲ್ಲಿ ಜನಿಸಿದ 125 ವರ್ಷ ವಯಸ್ಸಿನ ಇವರು ಯೋಗ ಲೆಜೆಂಡ್. 125 ವರ್ಷಗಳ ಜೀವನದಲ್ಲಿ ಯಾವತ್ತೂ ಅನಾರೋಗ್ಯಕ್ಕೆ ದಾಖಲೆ ಇಲ್ಲ. ಅವರು ಇನ್ನೂ ಗಂಟೆಗಳ ಕಾಲ ಯೋಗ ಮಾಡುವಷ್ಟು ಬಲವಾಗಿ ತಮ್ಮ ದೇಹದ ಸಾಮರ್ಥ್ಯ ಉಳಿಸಿಕೊಂಡಿದ್ದಾರೆ.
ಸ್ವಾಮಿ ಶಿವಾನಂದರು ತಮ್ಮ 6ನೇ ವಯಸ್ಸಿಗೆ ಮುಂಚೆಯೇ ತಮ್ಮ ಹೆತ್ತವರು ಮತ್ತು ಸಹೋದರಿಯನ್ನು ಕಳೆದುಕೊಂಡರು. ಆ ಸಮಯದಲ್ಲಿ ಅವರು ತಮ್ಮ ಕುಟುಂಬದ ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದರು. ಬ್ರಹ್ಮಚರ್ಯದ ಮಾರ್ಗವನ್ನು ಆರಿಸಿಕೊಂಡರು. ಅವರ ಸಂಬಂಧಿಕರು ಅವರನ್ನು ಆಧ್ಯಾತ್ಮಿಕ ಗುರುಗಳಿಗೆ ಒಪ್ಪಿಸಿದರು.
ಸೂರ್ಯ ನಮಸ್ಕಾರದೊಂದಿಗೆ ಈ ಯೋಗಾಸನ ಮಾಡಿದ್ರೆ ಉತ್ತಮ ಅರೋಗ್ಯ
ಪಶ್ಚಿಮ ಬಂಗಾಳದ ನವದ್ವೀಪ್‌ನಲ್ಲಿರುವ ತಮ್ಮ ಗುರೂಜಿ ಆಶ್ರಮಕ್ಕೆ ಯೋಗಾನಂದರು ಬಂದರು. ಅಲ್ಲಿನ ಗುರು ಓಂಕಾರಾನಂದ ಗೋಸ್ವಾಮಿ ಇವರನ್ನು ಬೆಳೆಸಿದರು, ಶಾಲಾ ಶಿಕ್ಷಣವಿಲ್ಲದೆ ಯೋಗ ಸೇರಿದಂತೆ ಎಲ್ಲಾ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು. ಅವರೊಂದಿಗೆ ಲಂಡನ್‌ನಿಂದ ಪ್ರಾರಂಭಿಸಿ, ಯುರೋಪ್, ರಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ 34 ದೇಶಗಳನ್ನು ಪ್ರವಾಸ ಮಾಡಿದರು.
ದೀರ್ಘಾಯುಸ್ಸಿನ ರಹಸ್ಯ
ಸ್ವಾಮಿಗಳು ತಮ್ಮ ಜೀವನವನ್ನು ಸಮಾಜದ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಯೋಗ, ಶಿಸ್ತು ಮತ್ತು ಬ್ರಹ್ಮಚರ್ಯದಲ್ಲಿ ಅವರ ಆರೋಗ್ಯವಂತ ದೀರ್ಘಾಯುಷ್ಯದ ರಹಸ್ಯ ಅಡಗಿದೆ.
ಸ್ವಾಮಿ ಬೆಳಗಿನ ಜಾವ 3 ಗಂಟೆಗೆ ಮುಂಚೆಯೇ ಎಚ್ಚರಗೊಳ್ಳುತ್ತಾರೆ. ಅವರ ದಿನಚರಿ ಒಂದೇ ಥರ. ನೆಲದ ಮೇಲೆ ಚಾಪೆಯನ್ನು ಹಾಸಿ ಮಲಗುತ್ತಾರೆ. ಮರದ ಹಲಗೆಯನ್ನು ತಲೆದಿಂಬಾಗಿ ಬಳಸುತ್ತಾರೆ. ಯಾವುದೇ ಕೈಕಾಲುಗಳ ಗಂಟುನೋವು ಮುಂತಾದ ತೊಡಕುಗಳಿಲ್ಲದೆ ಫಿಟ್ ಆಗಿರುವ ಇವರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೆ. ತಾವೇ ಎಲ್ಲಾ ದಿನ ಕೆಲಸ ಮಾಡುತ್ತಾರೆ.
ಅವರದು ಸರಳ ಜೀವನ. ಸರಳ ಸಸ್ಯಾಹಾರ ಸೇವಿಸುತ್ತಾರೆ. ನಿಸ್ವಾರ್ಥ ಭಾವನೆಯಿಂದ ಇತರರಿಗೆ ಸೇವೆ ಸಲ್ಲಿಸುತ್ತಾರೆ. ಅವರ ಬಾಲ್ಯದಲ್ಲಿ ಬಡತನವು ಅವರನ್ನು ಅನೇಕ ಬಾರಿ ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಮಾಡಿತ್ತು. ಕೆಲವೊಮ್ಮೆ ಅವರ ಕುಟುಂಬ ಬರಿಯ ಗಂಜಿಯ ತಿಳಿಯನ್ನು ಕುಡಿದು ಬದುಕಿತ್ತು. ಜಗತ್ತೇ ನನ್ನ ಮನೆ, ಇಲ್ಲಿರುವ ಜನರು ನನ್ನ ತಂದೆ-ತಾಯಿ ಬಂಧುಗಳು, ಇವರನ್ನು ಪ್ರೀತಿಸುವುದು ಮತ್ತು ಸೇವೆ ಮಾಡುವುದು ನನ್ನ ಧರ್ಮ ಎಂಬುದು ಅವರ ಜೀವನದ ತತ್ವಜ್ಞಾನ.
International Day Of Happiness: ನೀವು ಸಂತೋಷವಾಗಿದ್ದೀರಾ ? ಇಲ್ಲಾಂದ್ರೆ ಈ ಯೋಗ ಟಿಪ್ಸ್ ಫಾಲೋ ಮಾಡಿ
ಮೂರು ದಶಕಗಳಿಂದ ಅವರು ಕಾಶಿಯ (Varanasi) ಘಾಟ್‌ಗಳಲ್ಲಿ ಜನರಿಗೆ ಯೋಗಾಭ್ಯಾಸ ಕಲಿಸುತ್ತಿದ್ದಾರೆ. ಅವರ ಆರೋಗ್ಯಕರ ಮತ್ತು ಸುದೀರ್ಘ ಜೀವನವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಗಮನವನ್ನು ಸೆಳೆದಿದೆ.
ಮಾನವ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರು ಕಳೆದ 50 ವರ್ಷಗಳಿಂದ ಪುರಿಯಲ್ಲಿ ಕುಷ್ಠರೋಗ (Leprosy) ಪೀಡಿತ ಜನರ ಸೇವೆ ಮಾಡುತ್ತಾರೆ. ಕುಷ್ಠರೋಗಿಗಳಿಗೆ ಸ್ವಾಮಿ ಶೀವಾನಂದರು ತಮ್ಮಿಂದಾದ ಸೇವೆ ಮಾಡುತ್ತಾರೆ. ಅವರಿಗೆ ಆಹಾರ ಪದಾರ್ಥಗಳು, ಹಣ್ಣುಗಳು, ಬಟ್ಟೆಗಳು, ಚಳಿಗಾಲದ ಉಡುಪುಗಳು, ಹೊದಿಕೆಗಳು, ಸೊಳ್ಳೆ ಪರದೆಗಳು, ಅಡುಗೆ ಪಾತ್ರೆಗಳಂತಹ ವಿವಿಧ ವಸ್ತುಗಳನ್ನು ಒದಗಿಸುತ್ತಾರೆ.
ಯೋಗ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಯೋಗವು ಆರೋಗ್ಯಕರ ಜೀವನವನ್ನು ನಡೆಸಲು ಮಾರ್ಗ ಎಂದು ಸ್ವಾಮಿ ನಂಬುತ್ತಾರೆ. ಯೋಗ ಇಂದ್ರಿಯಗಳು, ಮನಸ್ಸು ಮತ್ತು ಚಿತ್ತವನ್ನು ನಿಯಂತ್ರಿಸುತ್ತದೆ. ಇದು ದೇವರು ಮತ್ತು ದೈವತ್ವಕ್ಕೆ ಒಂದು ಮಾರ್ಗ ಎನ್ನುತ್ತಾರೆ.
Padma Shri ಪ್ರಧಾನಿ, ರಾಷ್ಟ್ರಪತಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು!
ಪ್ರಶಸ್ತಿ ಪುರಸ್ಕಾರಗಳು
ಸ್ವಾಮಿ ಶಿವಾನಂದ ಅವರಿಗೆ ಬೆಂಗಳೂರಿನಲ್ಲಿ 2019ರಲ್ಲಿ ಯೋಗ ರತ್ನ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 2019ರಲ್ಲಿ ವಿಶ್ವ ಯೋಗ ದಿನವಾದ ಜೂನ್ 21ರಂದು ಯೋಗ ಪ್ರದರ್ಶನದಲ್ಲಿ ಅವರು ಭಾಗವಹಿಸಿದ ದೇಶದ ಅತ್ಯಂತ ಹಿರಿಯ ಎನಿಸಿದ್ದರು. 30 ನವೆಂಬರ್ 2019ರಂದು ಸಮಾಜಕ್ಕೆ ಅವರ ಕೊಡುಗೆಗಾಗಿ ಅವರಿಗೆ ಬಸುಂಧರ ರತ್ನ ಪ್ರಶಸ್ತಿ ನೀಡಲಾಯಿತು.
