Padma Shri ಪ್ರಧಾನಿ, ರಾಷ್ಟ್ರಪತಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು!

  • 125ರ ಹರೆಯದ ಯೋಗ ಗುರು ಶಿವಾನಂದರಿಗೆ ಪದ್ಮಶ್ರೀ ಪ್ರಶಸ್ತಿ
  • ಮೋದಿ, ರಾಮನಾಥ್ ಕೋವಿಂದ್ ಪಾದಕ್ಕೆ ನಮಸ್ಕರಿಸಿದ ಸಂತ
  • ಅತ್ಮೀಯವಾಗಿ ಬರಮಾಡಿಕೊಂಡು ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ
  • ಯೋಗ ಗುರು ಬಾಬಾ ಶಿವಾನಂದ ವಿಡಿಯೋ ವೈರಲ್
     
125 year old Yoga Guru Swami Sivananda bows down to PM Modi president kovind before receive Padma Shri award ckm

ನವದೆಹಲಿ(ಮಾ.21): ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಸೇರಿದಂತೆ ಭಾರತದ ಅತ್ಯುನ್ನತ ಪ್ರಶಸ್ತಿ ಪ್ರಧಾನ ಸಮಾರಂಭ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಇದೀಗ ಪದ್ಮಶ್ರೀ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ನಡೆದ ಅತ್ಯಂತ ಅಪ್ತ ಘಟನೆ ವಿಡಿಯೋ ವೈರಲ್ ಆಗಿದೆ. ಕಾಶಿಯ 125 ವರ್ಷದ ಯೋಗ ಗುರು ಬಾಬಾ ಶಿವಾನಂದ್ ಅವರಿಗೆ ರಾಷ್ಟ್ರಪ್ರತಿ ರಾಮನಾಥ್ ಕೋವಿಂದ್ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಆದರೆ ಪ್ರಶಸ್ತಿ ಸ್ವೀಕರಿಸಲು ಬಂದ ಸಂತ ಶಿವಾನಂದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪಾದ ನಮಸ್ಕರಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಇವರು ಪ್ರಶಸ್ತಿ ಸ್ವೀಕಾರಕ್ಕೂ ಮೊದಲು ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.

Padmashrre Mahalinga Naik : ಮಹಾಲಿಂಗ ನಾಯ್ಕರ ಗುಣಗಾನ ಮಾಡಿದ ಪಿಎಂ ಮೋದಿ

ದೇಶದ ಉನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸೋಮವಾರ ಪ್ರಧಾನ ಮಾಡಿದರು. ಭಾರತದ ಮೊದಲ ಸಿಡಿಎಸ್‌ ಬಿಪಿನ್‌ ರಾವತ್‌ ಮತ್ತು ರಾಧೇಶ್ಯಾಮ್‌ ಖೇಮ್ಕಾ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ.ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌, ಟಾಟಾ ಕಂಪನಿಯ ಅಧ್ಯಕ್ಷ ಎನ್‌. ಚಂದ್ರಶೇಖರನ್‌ , ಮಾಜಿ ಸಿಎಜಿ ರಾಜೀವ್‌ ಮೆಹರ್ಷಿ, ಸೀರಂ ಸಂಸ್ಥೆಯ ಸಂಸ್ಥಾಪಕ ಸೈರಸ್‌ ಪೂನಾವಾಲ ಸೇರಿದಂತೆ 8 ಜನರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ರಾವತ್‌ ಅವರ ಪರವಾಗಿ ಅವರ ಪುತ್ರಿ ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು. ಖೇಮ್ಕಾ ಪರವಾಗಿ ಅವರ ಕುಟುಂಬಸ್ಥರು ಪ್ರಶಸ್ತಿ ಸ್ವೀಕರಿಸಿದರು.

 

 

ಅಷ್ಟೇ ಅಲ್ಲದೇ ಈ ಬಾರಿ ಹಲವು ತೆರೆಮರೆಕಾಯಿಗಳಂತಿದ್ದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ವರ್ಷ ಒಟ್ಟು 128 ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿತ್ತು. ಇದರಲ್ಲಿ 2 ಪದ್ಮ ವಿಭೂಷಣ, 17 ಪದ್ಮ ಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.

ದಾಸೋಹಕ್ಕೆ ಬೇಕಾದ ದವಸ ತಾವೇ ಉತ್ತು, ಬೆಳೆಯುವ ಸಂತ ರೈತ ರತ್ನ ಪ್ರಶಸ್ತಿಗೆ ಆಯ್ಕೆ

ನಡ​ಕ​ಟ್ಟಿನ ಸೇರಿ ರಾಜ್ಯದ ಮೂವ​ರಿ​ಗೆ 28ರಂದು ಪದ್ಮಶ್ರೀ ಪ್ರದಾ​ನ
2022ನೇ ಸಾಲಿನ ಪದ್ಮಶ್ರೀ ಪುರಸ್ಕೃತರಾದ ರಾಜ್ಯದ ಅಮೈ ಮಹಾಲಿಂಗ ನಾಯ್‌್ಕ, ಅಬ್ದುಲ್‌ ಖಾದರ್‌ ನಡಕಟ್ಟಿನ ಮತ್ತು ಎಚ್‌.ಆರ್‌.ಕೇಶವಮೂರ್ತಿ ಅವರು ಮಾ.28ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಸ್ವೀಕರಿಸಿಲಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿಯಾಗಿರುವ ಮಹಾಲಿಂಗ ನಾಯ್ಕ ಅವರು ಏಕಾಂಗಿಯಾಗಿ ಸುರಂಗಗಳನ್ನು ತೋಡಿ ನೀರಿನ ಚಿಲುಮೆ ಉಕ್ಕಿಸಿ ಬರಡು ಭೂಮಿಯಲ್ಲಿ ಕೃಷಿ ಮಾಡಿದವರು. ಧಾರವಾಡ ಜಿಲ್ಲೆ ಅಣ್ಣಿಗೇರಿಯ ಅಬ್ದುಲ್‌ ಖಾದರ್‌ ನಡಕಟ್ಟಿನ ಅವರು ರೈತರಿಗೆ ಉಪಯುಕ್ತವಾದ ಕೃಷಿ ಸಲಕರಣೆ, ಯಂತ್ರಗಳನ್ನು ತಯಾರಿಸಿ, ಆವಿಷ್ಕಾರ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಶಿವಮೊಗ್ಗದ ಎಚ್‌.ಆರ್‌.ಕೇಶವಮೂರ್ತಿ ಅವರಿಗೆ ಕಲೆ ವಿಭಾಗದಲ್ಲಿ ಪದ್ಮಶ್ರೀ ಸಂದಿದೆ.

ನಡಕಟ್ಟಿನಗೆ ಸಿದ್ಧಲಿಂಗಶ್ರೀ ಪ್ರಶಸ್ತಿ ಪ್ರದಾನ
ಪದ್ಮಶ್ರೀ ಪುರಸ್ಕೃತ ಎ.ಐ. ನಡಕಟ್ಟಿನ ಅವರಿಗೆ ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ರಾಜ್ಯ ಪ್ರಶಸ್ತಿ ಲಭಿಸಿದೆ. ಗುರುವಾರ ಇಲ್ಲಿನ ನಿಂಗಮ್ಮ ಹೂಗಾರ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ . 25 ಸಾವಿರ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿದ್ದು ನಡಕಟ್ಟಿನ ದಂಪತಿಗೆ ನೀಡಿ ಗೌರವಿಸಲಾಯಿತು.ಈ ವೇಳೆ ಮಾತನಾಡಿದ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆ ಡಾ. ಸುಧಾ ಕೌಜಗೇರಿ, ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಸಂಗೀತ, ಕೃಷಿ, ಕನ್ನಡ ಭಾಷೆ, ನೆಲ, ಜಲ, ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಜನಸಾಮಾನ್ಯರ ಶ್ರೀಗಳಾಗಿ ಮಾತೃವಾತ್ಸಲ್ಯದ ಕರುಣೆಯ ಮೂರ್ತಿಯಾಗಿದ್ದರು. ಪ್ರತಿವರ್ಷ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios