ಬಾಂಬೆ ಬ್ಲಡ್ ಗ್ರೂಪ್ ಅನ್ನೋ ಅತಿ ಅಪರೂಪದ ರಕ್ತದ ಗುಂಪು ಯಾರಿಗಿರುತ್ತೆ?
ಅತ್ಯಂತ ಅಪರೂಪದಲ್ಲಿ ಅಪರೂಪದ ರಕ್ತದ ಮಾದರಿ ಎಂದರೆ ಬಾಂಬೆ ಬ್ಲಡ್ ಗ್ರೂಪ್. ದೇಶದಲ್ಲಿ ಕೇವಲ ೪೫೦ ಜನ ಈ ರಕ್ತದ ಗುಂಪನ್ನು ಹೊಂದಿದ್ದಾರೆ. ಇದು ಸಾಮಾನ್ಯ ರಕ್ತಕ್ಕಿಂತ ವಿಭಿನ್ನ ರೀತಿಯಲ್ಲಿ ವರ್ತಿಸುತ್ತದೆ. ಈ ಗುಂಪನ್ನು ಹೊಂದಿರುವ ಜನ ರಾಷ್ಟ್ರೀಯ ದತ್ತಾಂಶ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.
ಮುಂಬೈನ ಪರೇಲ್ ಪ್ರದೇಶ ಇತ್ತೀಚೆಗೆ ವಿಶಿಷ್ಟ ಸಂಗತಿಯೊಂದಕ್ಕೆ ಸಾಕ್ಷಿಯಾಗಿತ್ತು. ಅಂದು ಅಪರೂಪದ ಬಾಂಬೆ ಬ್ಲಡ್ ಗ್ರೂಪ್ ಹೊಂದಿದ್ದ ಸುಮಾರು 50 ಜನ ಜತೆಯಾಗಿ ಹೆಜ್ಜೆ ಹಾಕಿದರು, ಮೈಲಿಗಲ್ಲನ್ನು ಸ್ಥಾಪಿಸಿದರು. ಅಪರೂಪದ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳು ಜತೆಯಾಗಿ ಮುಂಬೈನ ಬೀದಿಯಲ್ಲಿ ಸಾಗಿದ್ದು ಅತ್ಯಂತ ವಿಶಿಷ್ಟ ವಿದ್ಯಮಾನವಾಗಿದೆ. ಈ ರಕ್ತದ ಮಾದರಿ ಹೊಂದಿರುವ ವ್ಯಕ್ತಿಗಳಷ್ಟೇ ಅಲ್ಲ, ಅವರ ಕುಟುಂಬದ ಸದಸ್ಯರೂ ಈ ಪಯಣದಲ್ಲಿ ಪಾಲ್ಗೊಂಡಿದ್ದರು. ಇದು ಎಷ್ಟು ಅಪರೂಪದ ರಕ್ತದ ಗುಂಪು ಎಂದರೆ ಹತ್ತು ಸಾವಿರ ಮಂದಿಯಲ್ಲಿ ಕೇವಲ ಒಬ್ಬರಲ್ಲಿ ಕಂಡುಬರಬಹುದು. ಬಾಂಬೆ ರಕ್ತದ ಗುಂಪು ಎನ್ನುವ ವಿಶಿಷ್ಟ ಮಾದರಿಯನ್ನು ಹೊಂದಿರುವ ವ್ಯಕ್ತಿಗಳ ಕುಟುಂಬದ ಸದಸ್ಯರೆಲ್ಲ ಅಂದು ಪರೀಕ್ಷೆಗೆ ಒಳಗಾದರು. ರಾಷ್ಟ್ರೀಯ ದತ್ತಾಂಶ ನಿರ್ಮಾಣದ ಉದ್ದೇಶದಿಂದ ನಡೆದ ಈ ಕಾರ್ಯಕ್ರಮ ವಿಭಿನ್ನವಾಗಿತ್ತು. ಅತ್ಯಂತ ಅಪರೂಪದಲ್ಲಿ ಅಪರೂಪವಾದ ಬ್ಲಡ್ ಗ್ರೂಪ್ ಈ ವ್ಯಕ್ತಿಗಳಲ್ಲಿ ನಿರ್ಮಾಣವಾಗಿದ್ದು ಹೇಗೆ ಎನ್ನುವ ಪ್ರಶ್ನೆ ಇಲ್ಲಿ ಮೂಡುತ್ತದೆ.
ಬಾಂಬೆ ಬ್ಲಡ್ ಗ್ರೂಪ್ (Bombay Blood Group). 1952ರಲ್ಲಿ ಡಾ.ವೈ.ಎಂ.ಭೆಂಡೆ ಎನ್ನುವವರು ಇದನ್ನು ಪತ್ತೆ ಮಾಡಿದರು. ಬ್ಲಡ್ ಗ್ರೂಪ್ ರೆಫರೆನ್ಸ್ ಕೇಂದ್ರದಲ್ಲಿ ಇದನ್ನು ಗುರುತಿಸಲಾಯಿತು. ಇದೇ ಸಂಸ್ಥೆಯನ್ನು ಈಗ ಐಸಿಎಂಆರ್-ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಮ್ಯೂನೋಹೆಮಟಾಲಜಿ ಎಂಬುದಾಗಿ ಕರೆಯಲಾಗುತ್ತದೆ. ಈ ರಕ್ತದ ಗುಂಪು (Blood Group) ಭಾರತ ಹಾಗೂ ಭಾರತದ ಉಪಖಂಡಗಳಲ್ಲಿ ಮಾತ್ರ ಕಂಡುಬರುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಇರಾನ್ ನಲ್ಲಿ ಕಂಡುಬಂದಿದೆ. ಈ ರಕ್ತದ ಗುಂಪು ಇತರೆ ರಕ್ತದ ಮಾದರಿಗಳೊಂದಿಗೆ ಅತಿ ವಿಶಿಷ್ಟವಾಗಿ ವರ್ತಿಸುತ್ತದೆ. ಇವರ ರಕ್ತಸಾರ ಅಥವಾ ಸೀರಮ್ (Serum) ಎನ್ನುವ ಅಂಶ ಬೇರೆ ಎಬಿಒ ರಕ್ತದ ಗುಂಪಿನಲ್ಲಿರುವ ಎಲ್ಲ ಕೆಂಪು ರಕ್ತಕಣಗಳ (Red Blood Cell) ಮೇಲೆ ದಾಳಿ (Attack) ಮಾಡುತ್ತದೆ!
3 ತಿಂಗಳ ಚಿಕಿತ್ಸೆಯಿಂದ 10 ಕೆಜಿ ಕಳೆದುಕೊಂಡ ಯತಿ; ಮಗನ ಆರೋಗ್ಯದ ಬಗ್ಗೆ ಸತ್ಯ ಬಿಚ್ಚಿಟ್ಟ ಪರಿಮಳ
ಭಾರತದಲ್ಲಿ (India) ಇದುವರೆಗೆ ಕೇವಲ 450 ಜನರನ್ನು ಈ ರಕ್ತದ ಗುಂಪು ಹೊಂದಿದ್ದಾರೆಂದು ಗುರುತಿಸಲಾಗಿದೆ. ಎಷ್ಟು ಆತಂಕದ ಸಂಗತಿ ನೋಡಿ. ಅಗತ್ಯ ಸಮಯದಲ್ಲಿ ಇವರಿಗೆ ರಕ್ತ ದೊರೆಯಲು ಎಷ್ಟು ಕಷ್ಟವಾಗಬಹುದು (Difficult) ಎಂದು ಊಹಿಸಿ. ಹೀಗಾಗಿ, ಬಾಂಬೆ ಬ್ಲಡ್ ಗ್ರೂಪ್ ಹೊಂದಿರುವ ವ್ಯಕ್ತಿಗಳು (Person) ಬೇರೆ ಬೇರೆ ಸ್ಥಳಗಳಲ್ಲಿ ಹಂಚಿಹೋಗಿದ್ದಾರೆ, ಸಂಘಟಿತರಾಗಿಲ್ಲ. ಅವರು ಬ್ಲಡ್ ಬ್ಯಾಂಕ್ (Bank) ನಂತಹ ಸೌಲಭ್ಯ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ರಕ್ತದಾನಿಗಳು (Donors) ಅಗತ್ಯ ಸಮಯದಲ್ಲಿ ರಕ್ತ ದಾನ ಮಾಡಲೆಂದೇ ದೇಶದ ಒಂದು ನಗರದಿಂದ ಮತ್ತೊಂದು ನಗರಕ್ಕೂ ಪ್ರಯಾಣಿಸುವುದು ಅನಿವಾರ್ಯವಾಗಿದೆ.
ರಾಷ್ಟ್ರೀಯ ದತ್ತಾಂಶ ಸಂಗ್ರಹ
ವೈದ್ಯಕೀಯ ತುರ್ತು ಸನ್ನಿವೇಶಗಳನ್ನು ನಿಭಾಯಿಸಲು ರಾಷ್ಟ್ರೀಯ ದತ್ತಾಂಶ (National Registry) ವ್ಯವಸ್ಥೆ ರೂಪಿಸುವುದು ಅಗತ್ಯ. ದಾನಿಗಳನ್ನು ಸುಲಭವಾಗಿ ಸಂಪರ್ಕಿಸುವ ಮೂಲಕ ಪ್ರಾಣ (Life) ಉಳಿಸುವ ಕಾರ್ಯ ಮಾಡಬಹುದು ಎನ್ನುತ್ತಾರೆ. ಐಸಿಎಂಆರ್ ಎನ್ಐಎಚ್ ನ ನಿರ್ದೇಶಕಿ ಡಾ.ಮನೀಷಾ ಮಡ್ಕೈಕರ್. ಪಿಜಿಐ ಚಂಡೀಗಢ, ಮೆಡಿಕಲ್ ಕಾಲೇಜ್ ಹಾಸ್ಟಿಟಲ್ ಕೋಲ್ಕತ, ಜವಾಹರ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ಪುದುಚೇರಿ, ಕೆಇಎಂ ಹಾಸ್ಪಿಟಲ್ ಪರೇಲ್ ಮುಂಬೈನ ನಾಲ್ಕು ಕೇಂದ್ರಗಳ ಮೂಲಕ ಈ ಕೇಂದ್ರ (Center) ಕಾರ್ಯನಿರ್ವಹಣೆ ಮಾಡುತ್ತಿದೆ.
ದೇಶದಲ್ಲಿ 450 ಜನರನ್ನು ಗುರುತಿಸಲಾಗಿದ್ದರೂ ಎಲ್ಲರೂ ರಕ್ತದಾನ ಮಾಡಲು ಸಶಕ್ತರಾಗಿಲ್ಲ. ಹೀಗಾಗಿ, ಅಪರೂಪದ ರಕ್ತದ ಗುಂಪಿನವರಿಗೂ ದಾನ ಮಾಡಬಲ್ಲ ಇತರೆ ಅಪರೂಪದ ರಕ್ತದ ಗುಂಪಿನ ವ್ಯಕ್ತಿಗಳಿಗೆ ತಲಾಶೆ ಮಾಡಲಾಗುತ್ತಿದೆ. ಅಚ್ಚರಿಯೆಂದರೆ, ಬಾಂಬೆ ಬ್ಲಡ್ ಗ್ರೂಪ್ ರಕ್ತದಾನದ ವಿಚಾರದಲ್ಲಿ ಲೈಫ್ ಬ್ಲಡ್ ಕೌನ್ಸಿಲ್ ಎನ್ನುವ ಎನ್ ಜಿಒ ಸಂಸ್ಥೆ ಕೆಲಸ ಮಾಡುತ್ತಿದೆ. ಬಾಂಬೆ ಬ್ಲಡ್ ಗುಂಪಿನ ರಕ್ತವನ್ನು ಬಾಂಗ್ಲಾದೇಶ ಹಾಗೂ ವಿಯೆಟ್ನಾಂ ದೇಶಗಳಿಗೂ ಸಹ ರವಾನೆ ಮಾಡುತ್ತದೆ.
ಎದೆನೋವು ಜೊತೆ ವಾಂತಿ ಬಂದ್ರೆ ಎಚ್ಚರ!
ವೈದ್ಯರ ಪ್ರಕಾರ, ಸರಿಸುಮಾರು 45 ರಕ್ತದ ಗುಂಪು ವ್ಯವಸ್ಥೆಗಳಿವೆ ಹಾಗೂ 360 ಆಂಟಿಜೆನ್ ಗಳಿವೆ. ಹೀಗಾಗಿ, ದತ್ತಾಂಶ ಸಂಗ್ರಹ ವ್ಯವಸ್ಥೆ ನಿರ್ಮಿಸುವುದು ಅತ್ಯಗತ್ಯ. ಇಂಥದ್ದೇ ಅಪರೂಪದ ರಕ್ತದ ಗುಂಪು ಹೊಂದಿರುವ ಜನರಿದ್ದರೂ ಇರಬಹುದು.