3 ತಿಂಗಳ ಚಿಕಿತ್ಸೆಯಿಂದ 10 ಕೆಜಿ ಕಳೆದುಕೊಂಡ ಯತಿ; ಮಗನ ಆರೋಗ್ಯದ ಬಗ್ಗೆ ಸತ್ಯ ಬಿಚ್ಚಿಟ್ಟ ಪರಿಮಳ

ಸೋಷಿಯಲ್ ಮೀಡಿಯಾದಲ್ಲಿ ಮಗನ ಬಗ್ಗೆ ಹರಿದು ಬರುವ ನೆಗೆಟಿವ್ ಕಾಮೆಂಟ್‌. ಆರೋಗ್ಯದ ಬಗ್ಗೆ ಸತ್ಯ ಹೇಳಿ ಜನರಿಗೆ ಅರಿವು ಮೂಡಿಸಿದ ಪರಿಮಗಳ.

Parimala Jaggesh talks about son Yathiraj weight and pituitary gland health vcs

ಕನ್ನಡ ಚಿತ್ರರಗದ ನವರಸ ನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳಾ ಜನಪ್ರಿಯ ನ್ಯೂಟ್ರಿಷನಿಸ್ಟ್. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಪಾಸಿಟಿವ್ ಇದ್ದ ಕಡೆ ನೆಗೆಟಿವ್ ಇದ್ದೇ ಇರುತ್ತದೆ...ಪರಿಮಳ ಏನೇ ಪೋಸ್ಟ್‌ ಮಾಡಿದ್ದರೂ ಮೊದಲು ನಿಮ್ಮ ಮಗನನ್ನು ಸಣ್ಣ ಮಾಡಿ ಎಂದು ಕಾಮೆಂಟ್‌ಗಳು ಬರುತ್ತಿತ್ತಂತೆ. ಏನೂ ತಿಳಿದುಕೊಳ್ಳದೆ ಕಾಮೆಂಟ್ ಮಾಡುವವರಿಗೆ ಪರಿಮಳ ಜಗ್ಗೇಶ್‌ ಕೆಲವೊಂದು ಅರಿವು ಮೂಡಿಸುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

'ಆರೋಗ್ಯದ ಬಗ್ಗೆ ನಾನು ಜನರಿಗೆ ಮಾಹಿತಿ ನೀಡಿದಾಗ 1000ರ ಜನರಲ್ಲಿ ಯಾರೋ ಒಬ್ರು ಇಬ್ರು ಮೊದಲು ನಿನ್ನ ಚಿಕ್ಕ ಮಗನನ್ನು ಸಣ್ಣ ಮಾಡಿಸು ಅಂತ ಕಾಮೆಂಟ್ ಹಾಕ್ತಾರೆ. ನಮ್ಮ ಬಗ್ಗೆ ಅವರಿಗೆ ಏನೂ ಗೊತ್ತಿರುವುದಿಲ್ಲ. ಆರಂಭದ ದಿನಗಳಲ್ಲಿ ತಾಯಿ ಆಗಿ ನನಗೆ ಬೇಸರ ಆಗುತ್ತಿತ್ತು ಆದರೆ ಇದೇ ಮೊದಲು ನಾನು ಕಾರಣ ರಿವೀಲ್ ಮಾಡುತ್ತಿರುವುದು. ನಾನು ಎಷ್ಟು ಕಟ್ಟು ನಿಟ್ಟಾಗಿ ಡಯಟ್ ಮಾಡುತ್ತೀನಿ ಅದಕ್ಕೂ ಹೆಚ್ಚಿಗೆ ಕಟ್ಟು ನಿಟ್ಟಾಗಿ ಮಗ ಯತಿರಾಜ್‌ ಪಾಲಿಸುತ್ತಾನೆ. ಒಂದು ದಿನ ನಾನು ಪ್ರೀತಿಯಿಂದ ಹೆಚ್ಚು ಕಡಿಮೆ ಅಡುಗೆ ಮಾಡುತ್ತೀನಿ ಎಂದು ಆತನೇ ಅಡುಗೆ ಮಾಡಿಕೊಳ್ಳುತ್ತಾರೆ. ಎಷ್ಟೇ ಡಯಟ್ ಮಾಡಿದರೂ 100 ಗ್ರಾಂ ಕಡಿಮೆ ಆಗಿಲ್ಲ. ಕಾರಣ ಏನೆಂದು ಚೆಕ್ ಮಾಡಿಸಿದ್ದೀವಿ ಆದರೆ ತಿಳಿಯಲಿಲ್ಲ' ಎಂದು ಪರಿಮಳ ಕನ್ನಡ ಜನಪ್ರಿಯ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ರಾಗಿ ಗಂಜಿಗೆ ಮಸಾಲೆಯ ಟ್ವಿಸ್ಟ್ ಕೊಟ್ಟ ಪರಿಮಳ ಜಗ್ಗೇಶ್, ನೀವೂ ಟ್ರೈ ಮಾಡಿ ನೋಡಿ..

'ಜಗ್ಗೇಶ್ ವೈಯಕ್ತಿಕ ಕೆಲಸದ ಮೇಲೆ ವಿದೇಶಕ್ಕೆ ಪ್ರಯಾಣ ಮಾಡಿದ್ದರು. ಅಲ್ಲಿ ಇಂಡಿಯನ್‌ ವೈದ್ಯರನ್ನು ಭೇಟಿ ಮಾಡಿದಾಗ ಮಗನ ಆರೋಗ ಬಗ್ಗೆ ಚರ್ಚೆ ಮಾಡಿದ್ದಾರೆ. ಆಗ ವೈದ್ಯರು ಒಮ್ಮ ಪಿಟ್ಯುಟರಿ ಗ್ರಂಧಿ ಸ್ಕ್ಯಾನ್ ಮಾಡಿಸುವಂತೆ ಸಲಹೆ ಕೊಟ್ಟಿದ್ದಾರೆ. ಅಲ್ಲಿಂದ ಜಗ್ಗೇಶ್ ಕರೆ ಮಾಡಿ ವೈದ್ಯರ ಜೊತೆ ಮಾತನಾಡಿಸಿದ್ದರು. ಆಗ ವೈದ್ಯರು ಪಿಟ್ಯುಟರಿ  ಗ್ಲಾಂಡ್‌ ಗ್ರೋತ್ ಹಾರ್ಮೋನ್ ಬಗ್ಗೆ ತಿಳಿಸಿದ್ದರು. ಆ ಗ್ಲಾಂಡ್‌ನಲ್ಲಿ Vaccume ಇದೆ ಅಲ್ಲಿ ಕಾಲಿ ಇದೆ ಅಂತ ತಿಳಿಯಿತ್ತು. ಯತಿ ಬಾಲ್ಯದಲ್ಲಿ ನಾವು ಅದನ್ನು ಗಮನಿ ಚಿಕಿತ್ಸೆ ನೀಡಿದ್ದರೆ ಬಹುಶ ಉದ್ದ ಆಗುತ್ತಿದ್ದ. ಈಗ ಅದನ್ನು ಗಮನಿಸಿದ್ದೀವಿ ಚಿಕಿತ್ಸೆ ಪಡೆಯುತ್ತಿದ್ದಾನೆ' ಎಂದು ಪರಿಮಳ ಹೇಳಿದ್ದಾರೆ.ಹೊಟ್ಟೆ ಕರಗಿಸುವ ಮ್ಯಾಜಿಕ್​! ಎರಡು ಗಂಟೆಯ ಸೀಕ್ರೆಟ್​ ಹೇಳಿದ ಜಗ್ಗೇಶ್ ಹೆಂಡತಿ ಪರಿಮಳ

'ಆ ವ್ಯಾಕ್ಯೂಮ್ ನಿಂದ ಹಾರ್ಮೋನ್‌ ಬ್ಯಾಲೆನ್ಸ್‌ ಆಗದ ಕಾರಣ ಸಣ್ಣ ಆಗುತ್ತಿರಲಿಲ್ಲ. ಮೂರು ತಿಂಗಳ ಕಾಲ ವೈದ್ಯರು ಹೇಳಿದ ರೀತಿ ಚಿಕಿತ್ಸೆ ಪಡೆದ ನಂತರ ಮಗ 10 ಕೆಜಿ ಸಣ್ಣಗಾಗಿದ್ದಾನೆ. ಇನ್ನು 6 ತಿಂಗಳು ಅಥವಾ ಒಂದು ವರ್ಷದಲ್ಲಿ ಫಿಟ್ ಆಗುತ್ತಾನೆ. ಪ್ರತಿ ಸಲ ಈ ರೀತಿ ಒಬ್ಬರು ಕಾಮೆಂಟ್ ಮಾಡಿದಾಗ ಅವರಿಗೆ ಪರಿಸ್ಥಿತಿ ಅರ್ಥ ಮಾಡಿಸಲು ಆಗುತ್ತಿರಲಿಲ್ಲ. ಜನರಿಗೆ ಏನೂ ಅರ್ಥವಾಗುವುದಿಲ್ಲ ಅಥವಾ ತಿಳಿದುಕೊಂಡಿರುವುದಿಲ್ಲ ಸುಮ್ಮನೆ ಕಾಮೆಂಟ್ ಮಾಡುತ್ತಾರೆ. ಈ ಕೆಲಸ ಆರಂಭಿಸುವ ಮುನ್ನ ಜಗ್ಗೇಶ್ ಹಲವು ಸಲ ಯೋಚಿಸುವಂತೆ ಹೇಳಿದ್ದರು ಏಕೆಂದರೆ ನಾನು ತುಂಬಾ ಸೆನ್ಸಿಟಿವ್ ವ್ಯಕ್ತಿ..ಸೋಷಿಯಲ್ ಮೀಡಿಯಾದಲ್ಲಿ ಬರುವ ನೆಗೆಟಿವ್ ಕಾಮೆಂಟ್‌ ತೆಗೆದುಕೊಳ್ಳಲು ಸ್ಟ್ರಾಂಗ್ ಇದ್ದೀನಾ ಅನ್ನೋ ಪ್ರಶ್ನೆ ಹುಟ್ಟಿತ್ತು. ನನ್ನ ಮಗನ ಒಪ್ಪಿಗೆ ಪಡೆದ ಮೇಲೆ ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದು. ದಯವಿಟ್ಟು ದಪ್ಪ ಇರುವವರನ್ನು ನೋಡಿ ಕಾಮೆಂಟ್ ಮಾಡಬೇಡಿ. ಬಟ್ಟೆ ಹಾಕಿಕೊಳ್ಳುವಾಗ ಯಾವ ಸೈಜ್‌ ತೆಗೆದುಕೊಳ್ಳುತ್ತಿದ್ದೀನಿ ದಪ್ಪ ಆಗುತ್ತಿದ್ದೀನಿ ಅಂತ ಆ ವ್ಯಕ್ತಿಗೆ ಅರ್ಥವಾಗುತ್ತಿರುತ್ತದೆ. ನಾವು ಹೇಳುವ ಅಗತ್ಯವಿಲ್ಲ' ಎಂದಿದ್ದಾರೆ ಪರಿಮಳ.  

Latest Videos
Follow Us:
Download App:
  • android
  • ios