ಜನಪ್ರಿಯ ನಿರೂಪಕಿ ಅನುಪಮಾ ಗೌಡ ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ಅವರು ಯಾವುದೇ ಅಪರಾಧ ಮಾಡಿಲ್ಲ. ಅಭಿಮಾನಿಗಳ ಫ್ಯಾನ್ ಪೇಜ್‌ನಲ್ಲಿ, "ಅನುಪಮಾ ಕೋಟಿಗಟ್ಟಲೆ ಹುಡುಗರ ಹೃದಯ ಕದ್ದಿದ್ದಾರೆ" ಎಂದು ತಮಾಷೆಗಾಗಿ ಪೋಸ್ಟ್ ಮಾಡಲಾಗಿತ್ತು. ಈ ಹಿಂದೆ ಅವರು 'ಚಿ ಸೌ ಸಾವಿತ್ರಿ' ಧಾರಾವಾಹಿಯಲ್ಲಿ ನಟಿಸಿದ್ದರು. 'ತ್ರಿಯಂಬಕಮ್' ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ಜನಪ್ರಿಯ ನಿರೂಪಕಿ ಅನುಪಮಾ ಗೌಡ ಅರೆಸ್ಟ್ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ. ಅನುಪಮಾ ನಿರೂಪಣೆ ಮಾಡುತ್ತಿರುವ ಫೋಟೋ ಮೇಲೆ ಅರೆಸ್ಟ್ ಎಂದು ಬರೆದು ಹರಿದು ಬಿಡಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ಆಪ್ತರು ಸಿಕ್ಕಾಪಟ್ಟೆ ಗಾಬರಿ ಆಗಿದ್ದಾರೆ. ಆದರೆ ಅರೆಸ್ಟ್ ಆಗುವಂತ ಕೆಲಸ ಅನುಪಮಾ ಏನ್ ಮಾಡಿದ್ದಾರೆ? ಅನುಪಮಾ ಯಾಕೆ ಅರೆಸ್ಟ್ ಆಗಿರುವುದು? ಎಂಬ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಸ್ವತಃ ಅಭಿಮಾನಿಗಳೇ ಸತ್ಯ ತಿಳಿದುಕೊಳ್ಳಲು ವೈರಲ್ ಫೋಟೋ ಹಿಂದೆ ಬಿದ್ದಿದ್ದಾರೆ. ಆಗ ಫ್ಯಾನ್ ಪೇಜ್‌ನಲ್ಲಿ ಪೋಸ್ಟ್ ಆಗಿರುವ ಅಸಲಿ ಫೋಟೋ ಸಿಕ್ಕಿದೆ.
ಹೌದು! ಅನುಪಮಾ ಗೌಡ ಅರೆಸ್ಟ್ ಆಗಿದ್ದಾರೆ ಆದರೆ ಯಾವುದೇ ಕ್ರೈಂ ಮಾಡಿ ಅಲ್ಲ. 'ಫೇಮಸ್ ಅಕ್ಟರ್ ಮತ್ತು ಆಂಕರ್ ಆಗಿರುವ ಅನುಪಮಾ ಗೌಡ ಅರೆಸ್ಟ್ ಆಗಿದ್ದಾರೆ ಕಾರಣ ಕೋಟಿಗಟ್ಟಲೆ ಹುಡುಗರ ಹೃದಯವನ್ನು ಕದ್ದಿದ್ದಾರೆ. ಅವರ ಧ್ವನಿ ಮತ್ತು ನಗುವಿಗೆ ಜನರು ಫುಲ್ ಫಿದಾ ಆಗಿದ್ದಾರೆ' ಎಂದು ಫ್ಯಾನ್ಸ್ ಪೇಜ್‌ನಲ್ಲಿ ಬರೆದುಕೊಳ್ಳಲಾಗಿದೆ. ಇದನ್ನು ಓದಿದ ಮೇಲೆ ಎಲ್ಲರಿಗೂ ಕೊಂಚ ಸಮಾಧಾನ ಆಗಿದೆ. ಅರೆಸ್ಟ್ ಮಾಡಿರುವ ಕಾರಣ ತಿಳಿದು ಕೂಲ್ ಆಗಿದ್ದಾರೆ. ಆರಂಭದಲ್ಲಿ ಹಲವರು ಫೋಟೋ ನೋಡಿ ನಟಿಗೆ ಕಾಲ್ ಮಾಡಿದ್ದರಂತೆ. 'ಈ ವಿಚಾರವನ್ನು ಸಖತ್ ಕೂಲ್ ಆಗಿ ಹೇಳಬಹುದಿತ್ತು, ತಮಾಷೆ ಮಾಡಲು ಒಂದು ಕಾರಣ ಬೇಡ್ವಾ?, ಎಷ್ಟೋ ಜನರು ಇದನ್ನು ಬ್ರೇಕಿಂಗ್ ನ್ಯೂಸ್ ಮಾಡಿಕೊಂಡಿರುತ್ತಾರೆ, ಇದನ್ನು ಅನುಪಮಾ ಗೌಡ ಅವರಿಗೆ ಗೊತ್ತಿದ್ಯಾ?' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ದೂರ ಆಗಿರೋದು ಕೂಡ ಒಂದು ಕಾರಣಕ್ಕೆ; ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ ಬಗ್ಗೆ ಅನುಪಮಾ ಗೌಡ ಹೇಳಿಕೆ
ಚಿ ಸೌ ಸಾವಿತ್ರಿ ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಅನುಪಮಾ ಗೌಡ ಕರಿಯರ್ ಬ್ರೇಕ್ ಸಿಕ್ಕಿದ್ದು ಅಕ್ಕ ಸೀರಿಯಲ್‌ನಿಂದ. ಡಬಲ್ ರೋಲ್‌ನಲ್ಲಿ ಜನರ ಗಮನ ಸೆಳೆದ ಸುಂದರಿ ಕನ್ನಡಿಗರಿಗೆ ಹತ್ತಿರವಾಗಿದ್ದು ಬಿಗ್ ಬಾಸ್ ಸೀಸನ್ 5ರಿಂದ. ಇದಾದ ಮೇಲೆ ಮಜಾ ಭಾರತ, ಕನ್ನಡದ ಕೋಗಿಲೆ, ರಾಜಾ ರಾಣಿ, ನಮ್ಮಮ್ಮ ಸೂಪರ್ ಸ್ಟಾರ್, ಬಿಗ್ ಬಾಸ್ ಮತ್ತೊಂದು ಸೀಸನ್, ಸುವರ್ಣ ಸೂಪರ್ ಸ್ಟಾರ್, ಸುವರ್ಣ ಜಾಕ್‌ಪಾಟ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ. ಇದರ ಜೊತೆ ಜೊತೆಯಲ್ಲಿ ಸಿನಿಮಾ ಮಾಡುತ್ತಿದ್ದರು. 2019ರಲ್ಲಿ ನಟಿಸಿರುವ ತ್ರಿಯಂಬಕಮ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.
ಒಂಟಿಯಾಗಿ ಬಾಲಿಗೆ ಹೊರಟ ಅನುಪಮಾ; ಫೋಟೋ ತೆಗೆದಿದ್ದು ಯಾರು ಅಂತಿದ್ದಾರೆ ಫ್ಯಾನ್ಸ್
![]()
