ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ಗಳಿಂದ ಹೆಸರುವಾಸಿಯಾದ ರೇಷ್ಮಾ ಆಂಟಿ, ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚಿಕೊಂಡ ವಿಡಿಯೋ ಮಾಡಿದ್ದಾರೆ. ಬಾಳೆಹಣ್ಣಿನ ಸಿಪ್ಪೆಯ ಉಪಯೋಗಗಳ ಬಗ್ಗೆ ಹೇಳಿದ್ದರೂ, ಜನರು ಪೋಲಿ ಕಾಮೆಂಟ್ಸ್‌ ಮಾಡಿದ್ದಾರೆ. ನವೀನ್ ಜೊತೆಗಿನ ಡ್ಯಾನ್ಸ್ ರೀಲ್ಸ್‌ಗಳಿಗೂ ಟ್ರೋಲ್ ಆಗಿದ್ದಾರೆ. ಆದರೂ, ರೇಷ್ಮಾ ಟ್ರೋಲ್‌ಗಳನ್ನು ಲೆಕ್ಕಿಸದೆ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ.

ಇನ್‌ಸ್ಟಾಗ್ರಾಂ ಓಪನ್ ಮಾಡಿದರೆ ಸಾಕು ಹಾಯ್ ಫ್ರೆಂಡ್ ಎಂದು ರಾಗ ಹಾಡಿಕೊಂಡು ವಿಡಿಯೋ ಅಪ್ಲೋಡ್ ಮಾಡುವ ಸುಂದರಿ ರೀಲ್ಸ್‌ ರೇಶ್ಮಾ. ರೇಶ್ಮಾ ಆಂಟಿ, ಮುಸ್ಲಿಂ ಆಂಟಿ, ಕ್ವೀನ್ಸ್‌ ಆಫ್‌ ರೇಶ್ಮಾ..ಹೀಗೆ ಡಿಫರೆಂಟ್ ಹೆಸರುಗಳಿಂದ ಫೇಮಸ್ ಆಗಿ ಕಿರುತೆರೆಯಲ್ಲಿ ಮಿಂಚಿಬಿಟ್ಟರು. ಈಗ ಅದೇ ಆಂಟಿ ಬಾಳೆ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚಿಕೊಂಡು ರೀಲ್ಸ್‌ ಮಾಡಿದ್ದಾರೆ. ಬ್ಯೂಟಿ ಟಿಪ್ಸ್‌ ನೀಡಲು ಪಾಸಿಟಿವ್ ಸಂದೇಶ ಸಾರಲು ಮುಂದಾದ ಆಂಟಿಗೆ ಬಂದಿರುವುದು ಬರೀ ಪೋಲಿ ಕಾಮೆಂಟ್ಸ್‌.

'ಬಾಳೆಹಣ್ಣು ತಿಂದು ಬಿಸಾಡಬಾರದು. ಏಕೆಂದರೆ ಅದರಲ್ಲಿ ವಿಟಮಿನ್ ಸಿ, ವಿಟಮಿನ್ ಡಿ ಮತ್ತು ವಿಟಮಿನ್ ಎ ಇರುತ್ತಂತೆ. ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಪಳಪಳ ಅಂತ ಹೊಳೆಯುತ್ತದೆ. ಯಾರ್ ಯಾರು ತಿನ್ನುತ್ತಾರೋ ಅವರ ಸಿಪ್ಪೆಗೆ ಕಾಯುತ್ತಿದ್ದೆ. ತಿಂದ ತಕ್ಷಣ ಬಿಸಾಡಿದ್ದರು. ಕಸವನ್ನು ರಸ ಮಾಡಿ ಕುಡಿ ಎನ್ನುತ್ತಾರೆ ಅದಕ್ಕೆ ಮುಖಕ್ಕೆ ಹಚ್ಚಿಕೊಂಡೆ. ಅವರಿಂದ ಬಾಳೆ ಹಣ್ಣು ಕಿತ್ತುಕೊಂಡು ತಿನ್ನುತ್ತಿದ್ದೀನಿ. ನನ್ನಂತೆ ಎಲ್ಲರೂ ಮಾಡಿಕೊಳ್ಳಿ' ಎಂದು ವಿಡಿಯೋದಲ್ಲಿ ರೇಶ್ಮಾ ಆಂಟಿ ಮಾತನಾಡಿದ್ದಾರೆ. ಈ ವಿಡಿಯೋವನ್ನು ನೋಡಿ ನಗಬೇಕಾ ಅಥವಾ ಮಾಹಿತಿ ಕೊಟ್ಟಿದ್ದಾರೆ ಅಂತ ಖುಷಿ ಪಡಬೇಕಾ ಎಂದು ಜನರಿಗೆ ಅರ್ಥವೇ ಆಗಿಲ್ಲ. 

ನಾದಿನಿ ನಿಶಾಳ ಕೊರಳಿಗೆ ಚಿನ್ನದ ನೆಕ್‌ಲೆಸ್‌ ಹಾಕಿದ ಯೂಟ್ಯೂಬರ್ ಮಧು ಗೌಡ; ಫೋಟೋ

'ತಿಳುವಳಿಕೆ ಇದ್ರೂ ಪೆದ್ದಿ ತರ ಕೆಲಸ ಮಾಡುತ್ತಾಳೆ, ಜನರ ಗಮನ ಸೆಳೆಯಲು ಈ ರೀತಿ ನಾಟಕಗಳು ಶುರುವಾಗುತ್ತದೆ, ಡವ್ ಜೊತೆ ಚೆನ್ನಾಗಿರುತ್ತಾಳೆ ಗಂಡ ಜೊತೆಗಿದ್ದರೆ ಹುಚ್ಚಿ ಆಗುತ್ತಾರೆ' ಎಂದು ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಿದೆ. ಕೆಲವು ತಿಂಗಳುಗಳಿಂದ ಕ್ರಿಯೇಟರ್ ನವೀನ್‌ ಜೊತೆ ರೇಶ್ಮಾ ಡ್ಯಾನ್ಸ್‌ ರೀಲ್ಸ್ ಮಾಡುತ್ತಿದ್ದಾರೆ. ಟ್ರೆಂಡ್‌ನಲ್ಲಿ ಇರುವ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೆ ಮಾರ್ಕೆಟ್‌ನಲ್ಲಿ ಫೇಮಸ್ ಆಗಿರುವ ಮೇಕಪ್ ಆರ್ಟಿಸ್ಟ್‌ಗಳು ಹಾಗೂ ಫ್ಯಾಷನ್ ಡಿಸೈನರ್‌ಗಳ ಸಂಪರ್ಕ ಬೆಳೆಸಿಕೊಂಡಿದ್ದಾರೆ. ನವೀನ್ ನನ್ನ ತಮ್ಮ ನನ್ನ ಸ್ನೇಹಿತ ಅಂತ ಹೇಳಿದರೂ ಕೂಡ ಕಟ್ಟಪ್ಪ ನಿನ್ನ ಬಾಯ್‌ಫ್ರೆಂಡ್ ಶೀಘ್ರದಲ್ಲಿ ಡಿವೋರ್ಸ್ ಆಗಲಿದೆ ಎಂದು ನೆಗೆಟಿವ್ ಟ್ರೋಲ್ ಎದುರಿಸಿದ್ದರು. ಜನರು ಎಷ್ಟೇ ನೆಗೆಟಿವ್ ಆಗಿ ಟ್ರೋಲ್ ಮಾಡಿದರೂ ಸಹ ಕೇರ್ ಮಾಡದೆ ರೇಶ್ಮಾ ತಮ್ಮ ಕೆಲಸ ಮುಂದುವರೆಸಿಕೊಂಡು ಮನೆ ಜವಾಬ್ದಾರಿ ಹೊತ್ತಿದ್ದಾರೆ. 

ಹರಿಕೃಷ್ಣ ಹೆಂಡತಿ ಅಂತ ಅದೆಷ್ಟೋ ಜನ ಶೋಗೆ ಕರೆಯುವುದಿಲ್ಲ: ಗಾಯಕಿ ವಾಣಿ

View post on Instagram