Asianet Suvarna News Asianet Suvarna News

ಹಲ್ಲಿನ ಅಂದ ಕೆಡಿಸುವ 'ಪಾಚಿ'ಗೆ ಪರಿಹಾರ ನಮ್ಮಲ್ಲೇ ಇದೆ!

ಯಾರಾದರು ನಮ್ಮನ್ನು ನೋಡಿ ಒಮ್ಮೆ ನಕ್ಕರೆ ಆ ನಗು ಕಣ್ಣಿಗೆ ಕಟ್ಟಿದಂತೆ ಇರುತ್ತದೆ. ಇನ್ನು ಕೆಲವರಲ್ಲಿ ಹಲ್ಲುಗಳು ಎದ್ದು ಕಾಣುವಂತೆ ನಗುತ್ತಾರೆ. ಅದು ಸಹ ನೋಡಲು ಆಗುವುದಿಲ್ಲ. ಕೆಲವರ ಹಲ್ಲಿನಲ್ಲಿನ ಆ ಕೊಳೆಯ ಅಂಶ ಸಾಕಪ್ಪಾ ಅನಿಸುವಷ್ಟು ಇರುತ್ತದೆ. ಹಲ್ಲಿನ ಸುತ್ತ ಪಾಚಿಯಂತೆ ಕಟ್ಟಿರುವ ಬಗ್ಗೆ ಹಾಗೂ ಅದನ್ನು ಹೇಗೆ ಹೋಗಲಾಡಿಸಬಹುದು ಎಂಬುದರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

Is Tartar are the problem when you Smile tips to remove
Author
Bangalore, First Published Jun 11, 2022, 3:57 PM IST

ಯಾರಾದರು ನಮ್ಮನ್ನು ನೋಡಿ ಒಮ್ಮೆ ನಕ್ಕರೆ (Smile) ಆ ಸ್ಮೆöÊಲ್ ಕಣ್ಣಿಗೆ ಕಟ್ಟಿದಂತೆ ಇರುತ್ತದೆ. ಇನ್ನು ಕೆಲವರಲ್ಲಿ ಹಲ್ಲುಗಳು(Teeth) ಎದ್ದು ಕಾಣುವಂತೆ ನಗುತ್ತಾರೆ. ಅದು ಸಹ ನೋಡಲು ಆಗುವುದಿಲ್ಲ. ಕೆಲವರ ಹಲ್ಲಿನಲ್ಲಿನ ಆ ಕೊಳೆಯ ಅಂಶ ಸಾಕಪ್ಪಾ ಅನಿಸುವಷ್ಟು ಇರುತ್ತದೆ. ಹಲ್ಲಿನ ಸುತ್ತ ಪಾಚಿಯಂತೆ(Tatar) ಕಟ್ಟಿರುವ ಬಗ್ಗೆ ಹಾಗೂ ಅದನ್ನು ಹೇಗೆ ಹೋಗಲಾಡಿಸಬಹುದು ಎಂಬುದರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

ನಗು ಆರೋಗ್ಯಕ್ಕೆ (Health) ಉತ್ತಮ ಹೌದು. ಆದರೆ ನಕ್ಕರೆ ಇನ್ನೊಬ್ಬರಿಗೆ ಹೇಸಿಗೆಯಾಗಬಾರದು ಅಲ್ವೆ. ಈ ಮಾತು ಏಕೆ ಹೇಳಿದೆನೆಂದರೆ ನಕ್ಕಾಗ ಕಾಣಿಸುವ ನಮ್ಮ ಹಲ್ಲುಗಳು ಸ್ವಚ್ಛವಾಗಿದ್ದರೆ ಇನ್ನೊಬ್ಬರಿಗೆ ನಮ್ಮ ಜೀವನ ಶೈಲಿ ಹೇಗಿದೆ ಎಂಬುದು ತಿಳಿಯುತ್ತದೆ. ಅಷ್ಟೆ ಅಲ್ಲದೆ ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಆರೋಗ್ಯ ಹೇಗಿದೆ ಎಂಬುದನ್ನು ತಿಳಿಸುತ್ತದೆ.

ದೈನಂದಿನ ಜೀವನದಲ್ಲಿ ಎಷ್ಟೋ ಆಹಾರ(Food) ಪದಾರ್ಥಗಳನ್ನು ಸೇವಿಸುತ್ತೇವೆ. ಆಗ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳು(Bacteria) ಆಹಾರಕ್ಕೆ ಜೊತೆಯಾಗುತ್ತವೆ. ಹೀಗೆ ಆಹಾರ ಸೇವಿಸಿದಾಗ ಆಗಲಿ ಅಥವಾ ನಂತರದಲ್ಲಾಗಲಿ ದುರ್ವಾಸನೆ(Bad Smell) ಅಥವಾ ಕೆಟ್ಟದಾಗಿ ಕಾಣಬಾರದು. ಕೆಲವರಿಗೆ ಬೆಳಗ್ಗೆ(Morning) ತಿಂಡಿ(Breakfast) ಏನು ತಿಂದೆವೆAದು ನಮ್ಮ ಹಲ್ಲು ನೋಡಿದರೆ ತಿಳಿಯುತ್ತೆ. ಏಕೆಂದರೆ ಹಲ್ಲಿನ ಸಂಧಿಗಳಲ್ಲಿ, ಒಸಡಿನ(Gum) ಸುತ್ತ ಕೂತಿರುವ ಸಣ್ಣ ಆಹಾರ ಪದಾರ್ಥಗಳಿಂದ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಟಾರ್ಟರ್(Tatar) ಎಂದು ಕರೆಯುತ್ತಾರೆ. ಇಂತಹ ಸನ್ನಿವೇಶಗಳು ಸಾಮಾನ್ಯವಾಗಿ ಎದುರಿಸುತ್ತೇವೆ. ನಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಇದನ್ನು ಹೇಗೆ ತಗೆಯಬಹುದು ಎಂಬುದರ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್. 

Health Tips : ಟೂತ್ ಪೇಸ್ಟ್ ತೆಗದೆುಕೊಳ್ಳುವಾಗ ಇದನ್ನು ಗಮನಿಸ್ತೀರಾ?

1. ಆಹಾರ, ಪಾನೀಯಗಳ(Drinks) ಮೇಲಿರಲಿ ಎಚ್ಚರ
ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಎಂಬುದು ಬಹಳ ಮುಖ್ಯ. ನಾರಿನ ಪದಾರ್ಥಗಳು ಸೇವಿಸಿದಾಗ ಹಲ್ಲಿನ ಸಂಧುಗಳಲ್ಲಿ ಸಿಲುಕಬಹುದು. ಕಾಫಿ(Coffee) ಕುಡಿದಾಗ ಅದರ ಅಂಶವು ಹಲ್ಲಿನ ಮೇಲೆ ಪಾಚಿಯಂತೆ ಕಟ್ಟುವುದು. ಸಾಫ್ಟ್ ಡ್ರಿಂಕ್ಸ್(Soft Drinks), ಡಾರ್ಕ್ ಜ್ಯೂಸ್(Dark Juice) ಇಂತಹ ಪದಾರ್ಥಗಳನ್ನು ಅವಾಯ್ಡ್(Avoid) ಮಾಡುವುದು ಒಳ್ಳೆಯದು. ಏಕೆಂದರೆ  ಹಲ್ಲಿನ ಮೇಲೆ ಇದರ ಅಂಶಗಳು ಕುಳಿತುಕೊಳ್ಳುತ್ತವೆ.
2. ಧೂಮಪಾನ ಬಿಟ್ಟುಬಿಡಿ
ಸಾಮಾನ್ಯವಾಗಿ ಚೈನ್ ಸ್ಮೋರ‍್ಸ್ಗಳನ್ನು(Chain Smokers) ಅವರ ಹಲ್ಲು, ತುಟಿ ನೋಡಿಯೇ ಕಂಡುಹಿಡಿಯಬಹುದು. ಏಕೆಂದರೆ ಹಲ್ಲಿನ ಹಾಗೂ ತುಟಿಯ ಬಣ್ಣವೂ ಗಾಢವಾದ ಬಣ್ಣಕ್ಕೆ(Dark Color) ತಿರುಗಿರುತ್ತವೆ. ಇದಕ್ಕೆ ಕಾರಣ ಅದರಲ್ಲಿನ ನಿಕೋಟಿನ್(Nicotine) ದೇಹದಲ್ಲಿನ ಸಲೈವಾ(Saliva) ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ಬ್ಯಾಕ್ಟೀರಿಯಾ(Bacteria) ಹಾಗೂ ಪಾಚಿ ಕಟ್ಟುವುದನ್ನು ಹೆಚ್ಚಿಸುತ್ತದೆ. 

ಮಕ್ಕಳು ಖುಷಿ ಪಡುತ್ತವೆ ಅಂತ ಸಿಕ್ಕಾಪಟ್ಟೆ ಚಿಪ್ಸ್ ಕೊಟ್ಟರೆ ಹಲ್ಲು ಹಾಳಾಗುತ್ತೆ!

3. ಎರಡು ಬಾರಿ ಬ್ರಶ್ ಮಾಡಿ
ಪ್ರತೀ ದಿನ ಸೇವಿಸುವ ಆಹಾರವು ಹಲ್ಲಿನ ಮೇಲೆ, ಸಂಧುಗಳಲ್ಲಿ ಕುಳಿತಿರುತ್ತವೆ. ಇದರಿಂದ ದುರ್ವಾಸನೆ ಹರಡುತ್ತದೆ. ಹಾಗಾಗಿ ಮೂರು ಬಾರಿ(Three time Brush) ಬ್ರಶ್ ಮಾಡುವುದು ಒಳ್ಳೆಯದು. ಅದು ಆಗದಿದ್ದಲ್ಲಿ ಎರಡು ಬಾರಿ(Two time) ಅಂದರೆ ಬೆಳಗ್ಗೆ(Morning) ಹಾಗೂ ರಾತ್ರಿ(Night) ಮಲಗುವ ಮುನ್ನ(Before Sleep) ಬ್ರಶ್ ಮಾಡುವುದು ಹಲ್ಲಿನ ಹಾಗೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಬ್ರಶ್ ಮಾಡುವಾಗ ಸಾಫ್ಟ್(Soft) ಆಗಿ ಬ್ರಶ್ ಮಾಡಬೇಕು. ಇದರಿಂದ ಹಲ್ಲಿನ ಗುಣಮಟ್ಟ ಕಾಯ್ದುಕೊಳ್ಳಬಹುದು. 
4. ಬಾಯಿ ಒಣಗಲು ಬಿಡಬೇಡಿ
ಬಾಯಿ ಒಣಗುವುದು(Dry) ಒಳ್ಳೆಯ ಸಂಕೇತವಲ್ಲ. ಕೆಟ್ಟ ಉಸಿರಾಟದ(Bad Breath) ಸಮಸ್ಯೆಗೆ ಕಾರಣವಾಗುತ್ತದೆ. ಸಲೈವಾ(Saliva) ಉತ್ಪನ್ನ ಕಡಿಮೆಯಾದರೂ ಬ್ಯಾಕ್ಟೀರಿಯಾ ಹಾಗೂ ಪಾಚಿಕಟ್ಟುವುದು ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ. ಹಾಗಾಗಿ ಆಗಾಗ್ಗೆ ಏನಾದರು ಸೇವಿಸುವುದು, ನೀರು(Water) ಕುಡಿಯುವುದರಿಂದ ಬಾಯಿ ತೇವವಾಗಿದ್ದಷ್ಟು ಒಳ್ಳೆಯದು. 

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದ್ರೆ ಹಲ್ಲಿಗೂ ಎಫೆಕ್ಟ್

 5. ಸ್ಚಚ್ಚವಾಗಿಟ್ಟುಕೊಳ್ಳಿ
ಪ್ರತೀ ಬಾರಿಯೂ ಬ್ರಶ್(Brush) ಮಾಡಿದರೂ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪ್ರತೀ ಆರು ತಿಂಗಳಿಗೊಮ್ಮೆ(Six Months) ವೈದ್ಯರ(Doctor) ಬಳಿ ಹೋಗಿ ಬಾಯಿಯಲ್ಲಿ ಕಟ್ಟಿರುವ ಪಾಚಿಯನ್ನು ಸ್ವಚ್ಛಗೊಳಿಸಬೇಕು. ಇದರಿಂದ ಹಲ್ಲು ಹಾಗೂ ಬಾಯಿಯಲ್ಲಿನ ಕೆಟ್ಟ ಅಂಶಗಳು ಹೋಗುವುದಲ್ಲದೆ ಹಲ್ಲಿನಲ್ಲಿ ಹುಳುಕಾಗುವುದು, ಪುಡಿಯಾಗುವುದನ್ನು ತಪ್ಪಿಸಬಹುದು.

Follow Us:
Download App:
  • android
  • ios