ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದ್ರೆ ಹಲ್ಲಿಗೂ ಎಫೆಕ್ಟ್
ಒಬ್ಬ ವ್ಯಕ್ತಿಯು ಮಧುಮೇಹವನ್ನು (Diabetes) ಹೊಂದಿದ್ದರೆ, ವ್ಯಕ್ತಿಯ ದೇಹದ ಅನೇಕ ಭಾಗಗಳು ನಿಧಾನವಾಗಿ ಹಾನಿಗೊಳಗಾಗುತ್ತಿರುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದರಿಂದ ಹಲ್ಲುಗಳು ಸಹ ಹಾನಿಗೊಳಗಾಗುತ್ತವೆ ಎಂದು ನಿಮಗೆ ತಿಳಿದಿದೆಯೇ? ಹೌದು ಮಧುಮೇಹದಿಂದ ಹಲ್ಲುಗಳು ಹಾನಿಗೊಳಗಾಗುತ್ತವೆ.
ಇತ್ತೀಚಿನ ದಿನಗಳಲ್ಲಿ ಮಧುಮೇಹವು ಒಂದು ಸಾಮಾನ್ಯ ಕಾಯಿಲೆಯಾಗಿ ಬದಲಾಗಿದೆ. ಬಹಳಷ್ಟು ಜನರು, ವಿಶೇಷವಾಗಿ ಭಾರತದಲ್ಲಿ, ಇದರ ಮಧುಮೇಹ ರೋಗಕ್ಕೆ ಒಳಗಾಗುತ್ತಿದ್ದಾರೆ. ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಆಗ ಮಾತ್ರ ಅವರ ಆರೋಗ್ಯ ಸುರಕ್ಷಿತವಾಗಿರುತ್ತೆ.
ಮಧುಮೇಹ ರೋಗಿಗಳ ರಕ್ತದಲ್ಲಿ ಸಕ್ಕರೆ ಮಟ್ಟವು (Sugar levels) ಆಗಾಗ್ಗೆ ಹೆಚ್ಚಾಗುತ್ತದೆ. ಇದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಕಾರಣದಿಂದಾಗಿ, ಅವರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಲ್ಲಿಗೆ ಸಂಬಂಧಿಸಿದಂತೆ ಮಧುಮೇಹದಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ನೋಡೋಣ.
ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದರೆ, ಹಲ್ಲುಗಳ ಮೇಲೆ ಪರಿಣಾಮ ಬೀರಬಹುದು. ಮಧುಮೇಹವು ಅನೇಕ ರೋಗಗಳಿಗೆ ಕಾರಣವಾಗಬಹುದು ಎಂದು ಹಲವಾರು ಅಧ್ಯಯನಗಳು ಈಗಾಗಲೇ ಸ್ಪಷ್ಟಪಡಿಸಿವೆ. ಇದು ಹೃದ್ರೋಗ (Heart disease)ಮತ್ತು ಮೂತ್ರಪಿಂಡದ ಕಾಯಿಲೆ ಸೇರಿದಂತೆ ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಆದಾಗ್ಯೂ, ರಕ್ತದಲ್ಲಿನ ಸಕ್ಕರೆ ಮಟ್ಟಗಳಲ್ಲಿನ ಹೆಚ್ಚಳವು ನಿಮ್ಮ ಹಲ್ಲುಗಳನ್ನು ಹಾನಿಗೊಳಿಸಬಹುದು. ಇದನ್ನು ತಡೆಯುವುದು ಹೇಗೆಂದು ತಿಳಿಯೋಣ.
ಮಧುಮೇಹವು ನಿಮ್ಮ ಹಲ್ಲುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಕ್ಯಾವಿಟಿ : ಬ್ಯಾಕ್ಟೀರಿಯಾಗಳು ಬಾಯಿಯನ್ನು ಪ್ರವೇಶಿಸಲು ಅನೇಕ ಮಾರ್ಗಗಳಿವೆ. ಆದರೆ ಅವು ರಕ್ತದೊಂದಿಗೆ ಸಂಬಂಧ ಹೊಂದಿದ್ದರೆ.. ಅವು ಹಲ್ಲುಗಳ ಸುತ್ತಲೂ ಒಂದು ಪದರವನ್ನು ರೂಪಿಸುತ್ತವೆ. ಇದನ್ನು ಪ್ಯಾನೆಲ್ ಎಂದು ಕರೆಯಲಾಗುತ್ತದೆ. ಈ ಪ್ಯಾನೆಲ್ ಒಂದು ವಿಶೇಷ ರೀತಿಯ ಆಸಿಡ್ ಹೊಂದಿರುತ್ತದೆ. ಇದು ನಿಮ್ಮ ಹಲ್ಲುಗಳು ಕೊಳೆಯಲು ಕಾರಣವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ವೇಗವಾಗಿ ಏರಿದಾಗ ಕುಳಿಗಳ (Cavities)ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಒಸಡಿನ ಕಾಯಿಲೆ (Gum disease) : ಮಧುಮೇಹವು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೂ ಪರಿಣಾಮ ಬೀರಬಹುದು. ಮಧುಮೇಹವು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ತುಂಬಾ ದುರ್ಬಲಗೊಳಿಸುತ್ತದೆ. ಇದು ನಿಮಗೆ ಇತರ ರೋಗಗಳಿಗೆ ತುತ್ತಾಗುವಂತೆ ಮಾಡುತ್ತೆ. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಒಸಡು ರೋಗ ಸಮಸ್ಯೆ ಹೆಚ್ಚಾಗುತ್ತೆ. ಇದರಿಂದಾಗಿ ಒಸಡುಗಳು ಕೊಳೆಯಲು ಕಾರಣವಾಗುತ್ತದೆ.
ಹಲ್ಲಿನ ಸಮಸ್ಯೆ (dental problem) ಇಲ್ಲದಿದ್ದರೂ ಸಹ ಮಧುಮೇಹ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sugar level) ನಿಯಂತ್ರಣದಲ್ಲಿಡಬೇಕು. ಇದನ್ನು ನಿಯಮಿತವಾಗಿ ಪರಿಶೀಲಿಸಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತೆ.
ಪ್ರತಿದಿನ ಬೆಳಿಗ್ಗೆ ಎದ್ದ ನಂತರ, ರಾತ್ರಿಯಲ್ಲಿ ಮಲಗುವ ಮೊದಲು ನೀವು ಖಂಡಿತವಾಗಿಯೂ ಬ್ರಷ್ ಮಾಡಬೇಕು. ಅಲ್ಲದೇ ಎರಡು ಹಲ್ಲುಗಳ ನಡುವೆ ಸಿಕ್ಕಿಹಾಕಿಕೊಂಡ ಯಾವುದೇ ಆಹಾರವನ್ನು ತೆಗೆದುಹಾಕಲು ಮಾತ್ರ ಡೆಂಟಲ್ ಫ್ಲೋಸ್ ಅನ್ನು ಬಳಸಿ. ಇದರಿಂದ ಹಲ್ಲು ಕ್ಲೀನ್ ಆಗಿ ಇಡಬಹುದು.
ಸಿಗರೇಟುಗಳು (smoking), ಆಲ್ಕೋಹಾಲ್, ತಂಪು ಪಾನೀಯಗಳು ಇತ್ಯಾದಿಗಳು ನಿಮ್ಮ ಆರೋಗ್ಯವನ್ನು ಮಾತ್ರವಲ್ಲ ಹಲ್ಲುಗಳನ್ನು ಹಾನಿಗೊಳಿಸಬಹುದು. ಅದಕ್ಕಾಗಿಯೇ ಸಾಧ್ಯವಾದಷ್ಟು ಅವುಗಳಿಂದ ದೂರವಿರಿ. ಇದರಿಂದ ಹಲ್ಲುಗಳ ಸಮಸ್ಯೆಯೂ ಕಡಿಮೆಯಾಗುವ ಸಾಧ್ಯತೆ ಇದೆ.
ನಿಯಮಿತವಾಗಿ ದಂತವೈದ್ಯರನ್ನು (dentist) ಭೇಟಿ ಮಾಡಿ. ನಿಮ್ಮ ಹಲ್ಲುಗಳನ್ನು ಪರೀಕ್ಷಿಸಿಕೊಳ್ಳಿ. ಅಗತ್ಯವಿದ್ದಾಗ ಸ್ಕೇಲಿಂಗ್ ಗೆ ಒಳಗಾಗಿ. ವರ್ಷಕ್ಕೆ ಎರಡು ಬಾರಿಯಾದರೂ ದಂತ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.