Carrot Day : ಕಣ್ಣಿಗೂ ಬೆಸ್ಟು, ಹೃದಯಕ್ಕೂ ಬೇಕು ಈ ಕ್ಯಾರೇಟ್

ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿ ದಿನ ನಿಯಮಿತವಾಗಿ ಕ್ಯಾರೆಟ್ ಸೇವನೆ ಮಾಡ್ಬೇಕು. ಏಪ್ರಿಲ್ ನಾಲ್ಕರಂದು ಅಂತರಾಷ್ಟ್ರೀಯ ಕ್ಯಾರೆಟ್ ದಿನ ಆಚರಣೆ ಮಾಡಲಾಗುತ್ತದೆ. ಇಂದು ಕ್ಯಾರೆಟ್ ತರಹೇವಾರು ಆಹಾರ ತಯಾರಿಸಿ ಈ ದಿನ ಎಂಜಾಯ್ ಮಾಡು. 
 

International Carrot Day 2023 History Significance Celebration Of Carrot Day

ಪ್ರತಿ ವರ್ಷ ಏಪ್ರಿಲ್ 4 ರಂದು ವಿಶ್ವ ಕ್ಯಾರೆಟ್ ದಿನವನ್ನು ಆಚರಿಸಲಾಗುತ್ತದೆ. ಕ್ಯಾರೆಟ್‌ನ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.  ದೇಶಾದ್ಯಂತ ಜಂಕ್ ಫುಡ್‌ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪೌಷ್ಟಿಕಾಂಶವಿರುವ ಆಹಾರ ಸೇವನೆಯನ್ನು ಜನರು ಮರೆಯುತ್ತಿದ್ದಾರೆ. ಜನರಿಗೆ ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ. ಹಾಗಾಗಿಯೇ ಕ್ಯಾರೆಟ್ ದಿನವನ್ನು ಆಚರಿಸಲಾಗ್ತಿದೆ. ಈ ದಿನ ಕ್ಯಾರೆಟ್ ಗೆ ಸಂಬಂದಿಸಿದಂತ ಮಾಹಿತಿಯನ್ನು ಪಡೆಯುವುದು ಅವಶ್ಯಕ. ಕ್ಯಾರೆಟ್ ನ ಪ್ರಯೋಜನಗಳು ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ. 

ಅಂತರಾಷ್ಟ್ರೀಯ ಕ್ಯಾರೆಟ್ (Carrot) ದಿನ ಯಾವಾಗ ಶುರುವಾಯ್ತು? :  ಅಂತರರಾಷ್ಟ್ರೀಯ ಕ್ಯಾರೆಟ್ ದಿನವನ್ನು 2003ರಿಂದ ಮೊದಲ ಬಾರಿ ಆಚರಿಸಲಾಯ್ತು. 2012 ರಿಂದ ಇದನ್ನು ಪ್ರಪಂಚದಾದ್ಯಂತ ಆಚರಿಸಿಕೊಂಡು ಬರಲಾಗ್ತಿದೆ. ಫ್ರಾನ್ಸ್ (France), ಸ್ವೀಡನ್, ಇಟಲಿ, ರಷ್ಯಾ, ಜಪಾನ್, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ವಿವಿಧ ಖಂಡಗಳ ಅನೇಕ ದೇಶಗಳಲ್ಲಿ ಅಂತರರಾಷ್ಟ್ರೀಯ ಕ್ಯಾರೆಟ್ ಡೇಯನ್ನು ಆಚರಿಸಿಕೊಂಡು ಬರಲಾಗ್ತಿದೆ. 

ಕ್ಯಾರೆಟ್‌ನ ಮೂಲ ಹೆಸರು ಡೌಕಸ್ ಕ್ಯಾರೋಟಾ. ಏಷ್ಯಾದ ಜನರು ಮೊದಲು ಕ್ಯಾರೆಟ್ ಕೃಷಿಯನ್ನು ಪ್ರಾರಂಭಿಸಿದರು. ನಂತ್ರ  ಪ್ರಪಂಚದ ಇತರ ದೇಶಗಳಲ್ಲಿ ಅದನ್ನು ಬೆಳೆಯಲಾಯ್ತು. ಕ್ಯಾರೆಟ್ ಮೂಲವು ಪಂಜಾಬ್ ಮತ್ತು ಕಾಶ್ಮೀರದ ಬೆಟ್ಟಗಳಲ್ಲಿದೆ ಎನ್ನಲಾಗುತ್ತದೆ. ಕ್ಯಾರೆಟ್ ನಲ್ಲಿ ಅನೇಕ ಬಣ್ಣಗಳನ್ನು ನಾವು ನೋಡ್ಬಹುದು. ಕೆಂಪು, ಹಳದಿ ಕಿತ್ತಳೆ ಮತ್ತು ಕಪ್ಪು. ಎಲ್ಲ ಬಣ್ಣದ ಕ್ಯಾರೆಟ್ ಕೂಡ ಅನೇಕ ಪ್ರಯೋಜನಗಳನ್ನು ಹೊಂದಿದೆ. 

HEALTH TIPS : ದಿನಕ್ಕೆ 10 ಸಾವಿರ ಸ್ಟೆಪ್ಸ್ ನಡೆಯೋದು ಕಷ್ಟವೇನಲ್ಲ! ಇಷ್ಟ್ ಮಾಡಿ ಸಾಕು

ಕ್ಯಾರೆಟ್ ಪ್ರಯೋಜನಗಳು : 
ಕಣ್ಣಿನ ಆರೋಗ್ಯಕ್ಕೆ ಇದು ಬೆಸ್ಟ್ :
ಕ್ಯಾರೆಟ್ ಕಣ್ಣುಗಳಿಗೆ ವರಕ್ಕಿಂತ ಕಡಿಮೆಯಿಲ್ಲ. ಬೀಟಾ ಕ್ಯಾರೋಟಿನ್, ಆಲ್ಫಾ ಕ್ಯಾರೋಟಿನ್ ಒಂದು ಸಾವಯವ ವರ್ಣದ್ರವ್ಯವಾಗಿದ್ದು, ಇದು ಲುಟೀನ್ ಎಂದು ಕರೆಯಲ್ಪಡುತ್ತದೆ. ಇದು ಕ್ಯಾರೆಟ್ ನಲ್ಲಿ ಸಮೃದ್ಧ ಪ್ರಮಾಣದಲ್ಲಿ ಕಂಡುಬರುತ್ತದೆ. ಬೀಟಾ ಕ್ಯಾರೋಟಿನ್ ವಯಸ್ಸಾದಂತೆ ಕಣ್ಣಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ವಿಟಮಿನ್ ಸಿ ನಂತಹ ಇತರ ಖನಿಜಗಳು ಸಹ ಇದರಲ್ಲಿ ಕಂಡುಬರುತ್ತವೆ. ಇದು ವಯಸ್ಸಾದಾಗ ಉಂಟಾಗುವ ಮ್ಯಾಕ್ಯುಲರ್ ಡಿಜೆನರೇಶನ್‌ನಿಂದ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ.

ಹೃದಯಕ್ಕೆ ಒಳ್ಳೆಯದು : ಕ್ಯಾರೆಟ್ ತಿನ್ನುವುದರಿಂದ ಹೃದ್ರೋಗಿಗಳಿಗೂ ಪ್ರಯೋಜನವಾಗುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಹೃದಯಕ್ಕೆ ಪ್ರಯೋಜನಕಾರಿಯಾಗಿದೆ.ಇದಲ್ಲದೆ ಕ್ಯಾರೆಟ್‌ನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿರುವ ಫೈಬರ್ ತೂಕವನ್ನು ನಿಯಂತ್ರಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.  

Health Tips : ಬೇಗನೆ ಅಜ್ಜನ ಹಾಗೇ ಆಗೋದು ಇಷ್ಟ ಇಲ್ಲಾ ಅಂದ್ರೆ ಈ ಆಹಾರ ಸೇವಿಸಿ

ರೋಗನಿರೋಧಕ ಶಕ್ತಿ ಹೆಚ್ಚಳ : ಕ್ಯಾರೆಟ್‌ನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ನಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ಸಾವಯವ ಸಂಯುಕ್ತಗಳು ದೇಹವನ್ನು ಅನೇಕ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಕೆಲಸ ಮಾಡುತ್ತವೆ. 

ಜೀರ್ಣಕ್ರಿಯೆಗೆ ಒಳ್ಳೆಯದು : ಕ್ಯಾರೆಟ್‌ನಲ್ಲಿ ಫೈಬರ್‌ ಅಂಶವಿದೆ. ಇದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಡಯಟ್ ನಲ್ಲಿ ಕಚ್ಚಾ ಆಹಾರ ಸೇವನೆ ಮಾಡ್ಬೇಕು. ಇದ್ರಿಂದ ಮಲ ವಿಸರ್ಜನೆ ಸುಲಭವಾಗುತ್ತದೆ. 

ಚರ್ಮದ ಆರೋಗ್ಯಕ್ಕೆ ಕ್ಯಾರೆಟ್ : ಯುವಿ ಕಿರಣಗಳು ಚರ್ಮದ ಮೇಲೆ ಹಾನಿಯುಂಟು ಮಾಡುತ್ತವೆ. ಒಣ ಚರ್ಮ, ಸುಕ್ಕು, ಪಿಗ್ಮೆಂಟೇಶನ್ ಮುಂತಾದ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.  ಕ್ಯಾರೆಟ್ ನಲ್ಲಿರುವ ಆಂಟಿ-ಆಕ್ಸಿಡೆಂಟ್, ಸ್ವತಂತ್ರ ರಾಡಿಕಲ್ ಮತ್ತು ಯುವಿ ಕಿರಣಗಳಿಂದ ರಕ್ಷಿಸುವ ಮೂಲಕ ಸದಾ ನಮ್ಮ ವಯಸ್ಸನ್ನು ಮುಚ್ಚಿಡುವ ಕೆಲಸ ಮಾಡುತ್ತದೆ. 
 

Latest Videos
Follow Us:
Download App:
  • android
  • ios