ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೃದಯಾಘಾತ ಸಮಸ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲೇ ಹೃದಯಾಘಾತ, ಕಿಡ್ನಿ, ಸ್ಟ್ರೋಕ್ ಸೇರಿದಂತೆ ಮಾರಾಣಾಂತಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದೀಗ ICMR ನಡೆಸಿದ ಅಧ್ಯಯನ ವರದಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ. 

ನವದೆಹಲಿ (ಜು.13) ಭಾರತೀಯರು ಕಾಲ ಬದಲಾದಂತೆ ತಮ್ಮ ಆಹಾರ ಪದ್ಧತಿ ಬದಲಿಸಿದ್ದಾರೆ. ಆಯಾ ಪ್ರಾಂತ್ಯ, ರಾಜ್ಯ, ಜಿಲ್ಲೆಗಳಲ್ಲಿ ಆಯಾ ಆಹಾರ ಪದ್ಧತಿ ಇದೆ. ಆದರೆ ಇವೆಲ್ಲವನ್ನೂ ಅಚ್ಚುಕಟ್ಟಾಗಿ ಯಾರೂ ಪಾಲಿಸುತ್ತಿಲ್ಲ. ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ( ICMR ) ಇದೀಗ ಮಹತ್ವದ ಅಧ್ಯಯನ ವರದಿ ಬಿಡುಗಡೆ ಮಾಡಿದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆ ಹೃದಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಅನ್ನೋ ಬಹಿರಂಗವಾಗಿದೆ. ಈ ವರದಿ ಪ್ರಕಾರ ಭಾರತೀಯರು ಪ್ರತಿ ದಿನ ತಮ್ಮ ಆಹಾರದಲ್ಲಿ ಅತೀಯಾದ ಉಪ್ಪು ಸೇವಿಸುತ್ತಿರುವುದೇ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿ ದಿನ ಗರಿಷ್ಠ ಎಷ್ಟು ಉಪ್ಪು ಸೇವಿಸಬಹುದು?

ದೇಹಕ್ಕೆ ಉಪ್ಪು ಅಗತ್ಯ. ಆದರೆ ಅತೀಯಾದರೇ ವಿಷ. ಆದರೆ ಹೊಸ ಆಹಾರ ಪದ್ಧತಿಯಲ್ಲಿ ಉಪ್ಪು, ಎಣ್ಣೆಯಲ್ಲಿ ಕರಿದ ಆಹಾರಗಳಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಒಬ್ಬ ವ್ಯಕ್ತಿ ಪ್ರತಿ ದಿನ ಗರಿಷ್ಠ 5 ಗ್ರಾಂ ಉಪ್ಪು ಸೇವಿಸಬಹುದು. ಇದಕ್ಕಿಂತ ಹೆಚ್ಚಾದರೆ ಉಪ್ಪು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದಿದೆ. ಆದರೆ ಭಾರತೀಯರು ಸರಾಸರಿ ಅಂಕಿ ಅಂಶ ಪ್ರಕಾರ ಒಬ್ಬ ವ್ಯಕ್ತಿ 9.2 ಗ್ರಾಂ ಉಪ್ಪು ಸೇವಿಸುತ್ತಿದ್ದಾರೆ. ಹಲವು ಖಾದ್ಯಗಳ ಮೂಲಕ ಈ ಉಪ್ಪು ದೇಹ ಸೇರುತ್ತಿದೆ. ಇದು ಭಾರತೀಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ICMR ಅಧ್ಯಯನ ವರದಿ ಹೇಳಿದೆ. ಭಾರತೀಯರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಉಪ್ಪು ಸೇವಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಾಕಾರಿ ಎಂದಿದೆ.

ಅಧಿಕ ಉಪ್ಪು ಸೇವನೆಯಿಂದ ಸಮಸ್ಯೆ ಏನು?

ಅಧಿಕ ಉಪ್ಪು ಸೇವನೆಯಿಂದ ಹೈಪರ್‌ಟೆನ್ಶನ್, ಸ್ಟ್ರೋಕ್, ಹೃದಯ ಸಬಂಧಿ ಸಮಸ್ಯೆ, ಸ್ಟ್ರೋಕ್, ಕಿಡ್ನಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಉಪ್ಪು ಅಧಿಕ ಸೇವನೆಯಿಂದ ರಕ್ತದ ಒತ್ತಡ (ಬಿಪಿ )ಭಾರಿ ವ್ಯತ್ಯಸಾವಾಗುತ್ತಿದೆ. ಇದರಿಂದ ದೇಹದ ಎಲ್ಲಾ ಭಾಗಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತದ ಚಲನವಲನದಲ್ಲಿ ವ್ಯತ್ಯಾಸವಾಗಲಿದೆ.

ಕಡಿಮೆ ಸೋಡಿಯಂ ಸೇವನೆಯಿಂದ ರಕ್ತದೊತ್ತಡ ಕಡಿಮೆ ಮಾಡಲು ಸಾಧ್ಯವಾಗಲಿದೆ. ದೇಹದ ಬಿಪಿ ಸರಿಯಾಗಿರಬೇಕು, ಲೋ ಬಿಪಿ, ಹೈ ಬಿಪಿ ಎರಡೂ ಅತ್ಯಂತ ಅಪಾಯಕಾರಿ. ಇದಕ್ಕೆ ಕಡಿಮೆ ಸೋಡಿಯಂ ಸೇವನೆಯೇ ಮುಖ್ಯ ಔಷಧಿ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಹಿರಿಯ ವಿಜ್ಞಾನಿ ಹಾಗೂ ಅಧ್ಯಯನದ ಪ್ರಧಾನ ತನಿಖಾಧಿಕಾರಿ ಡಾ. ಶರಣ್ ಮುರಳಿ ಹೇಳಿದ್ದಾರೆ.