ಕೊಳೆ ಹೋಗ್ಲಿ ಅಂತ ಮೈ ತಿಕ್ಕಿ ತಿಕ್ಕಿ ಸ್ನಾನ ಮಾಡ್ತೀರಾ ? ಚರ್ಮದಲ್ಲಿ ಕಲೆಯಾಗುತ್ತೆ ಹುಷಾರ್

ಆರೋಗ್ಯ ಚೆನ್ನಾಗಿರಲು ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಹೀಗಾಗಿಯೇ ಚಿಕ್ಕಂದಿನಲ್ಲೇ ಅಜ್ಜಿ, ಅಮ್ಮಂದಿರು ಚೆನ್ನಾಗಿ ತಿಕ್ಕಿ, ತಿಕ್ಕಿ ಸ್ನಾನ ಮಾಡಿ ಬಾ ಎನ್ನುತ್ತಿದ್ದರು. ಆದ್ರೆ ಈ ರೀತಿ ಸ್ನಾನ ಮಾಡೋ ಅಭ್ಯಾಸ ಆರೋಗ್ಯಕ್ಕೆ ತುಂಬಾ ಕೆಟ್ಟದ್ದು ಅನ್ನೋದು ನಿಮ್ಗೆ ಗೊತ್ತಿದ್ಯಾ?

If You Take Bath Like This, Then Change The Habit Immediately Vin

ಸ್ನಾನ ಮಾಡುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವೊಬ್ಬರು ಐದೇ ನಿಮಿಷದಲ್ಲಿ ಸ್ನಾನ ಮುಗಿಸಿದರೆ, ಇನ್ನು ಕೆಲವರಿಗೆ ಅರ್ಧ ಗಂಟೆಯಾದರೂ ಸ್ನಾನ ಮುಗಿಯುವುದಿಲ್ಲ. ಸೋಪು ಹಾಕಿ ಮೈ ಉಜ್ಜಿ ಉಜ್ಜಿ ನೀರು ಹಾಕಿಕೊಳ್ತಾ ಸ್ನಾನ ಮಾಡ್ತಾನೇ ಇರ್ತಾರೆ. ಆದ್ರೆ ಈ ರೀತಿ ತಿಕ್ಕಿ ತಿಕ್ಕಿ ಸ್ನಾನ ಮಾಡೋದ್ರಿಂದ ಚರ್ಮಕ್ಕೆ (Skin) ಹಾನಿಯಾಗುತ್ತೆ ಅನ್ನೋ ವಿಷ್ಯ ನಿಮ್ಗೊತ್ತಾ ?  ಏಕೆಂದರೆ ಈ ರೀತಿ ಸ್ನಾನ ಮಾಡುವುದರಿಂದ ತ್ವಚೆಗೆ ಆಗುವ ಹಾನಿಗೆ (Damage) ಮತ್ತೆ ದೀರ್ಘಕಾಲ ಚಿಕಿತ್ಸೆ (Treatment) ನೀಡಬೇಕಾಗಬಹುದು. ಈ ಬಗ್ಗೆ ಮಾಹಿತಿ ನೀಡುವ ವೇಳೆ ಸ್ವತಃ ಡಾ.ಜಯಶ್ರೀ ಶರದ್ ಅವರು ಜನರಿಗೆ ಎಚ್ಚರಿಕೆ (Warning) ನೀಡಿದ್ದಾರೆ.

ಮೈ ತಿಕ್ಕಲು ಬಳಸುವ ಲೂಫಾಗಳಿಂದ (ಮೈ ತಿಕ್ಕುವ ಬ್ರಶ್) ಹಿಡಿದು ಸ್ಕ್ರಬ್ಬಿಂಗ್ ವರೆಗಿನ ವಸ್ತುಗಳನ್ನು ಬಳಸುವುದು ಚರ್ಮಕ್ಕೆ ಗಂಭೀರ ಹಾನಿಯನ್ನು ಉಂಟುಮಾಡುತ್ತದೆ ಎಂಬುದನ್ನು ಅವರು ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಇದು ಚರ್ಮಲ್ಲಿ ಕಪ್ಪು ಕಲೆಗಳನ್ನು (Black marks) ಉಲ್ಬಣಗೊಳಿಸುತ್ತದೆ. ಸಾಮಾನ್ಯವಾಗಿ ಜನರು ಸ್ನಾನದ ಸಮಯದಲ್ಲಿ ತಮ್ಮ ಕುತ್ತಿಗೆ, ಮೊಣಕೈಗಳು, ಮೊಣಕಾಲುಗಳು ಅಥವಾ ದೇಹದ (Body) ಯಾವುದೇ ಭಾಗವನ್ನು ಸ್ಕ್ರಬ್ ಮಾಡುತ್ತಾರೆ. ಮೊಣಕೈ ಮತ್ತು ಮೊಣಕಾಲುಗಳು ಹೆಚ್ಚು ಕಪ್ಪಗಿರುವ ಕಾರಣ ಜನರು ಹೀಗೆ ಮಾಡುತ್ತಾರೆ. ಆದರೆ, ವೈದ್ಯರ ಪ್ರಕಾರ ಹೀಗೆ ಮಾಡುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಲೂಫಾ ಅಥವಾ ಮೆಕ್ಯಾನಿಕಲ್ ಸ್ಕ್ರಬ್‌ಗಳು ಚರ್ಮದ ಮೇಲಿನ ಪದರದ ಮೇಲೆ ಪರಿಣಾಮ ಬೀರುತ್ತವೆ ಎಂದು ಜಯಶ್ರೀ ಶರದ್ ಹೇಳಿದ್ದಾರೆ.

ಮಲಗೋ ಮುಂಚೆ ಬಿಸಿನೀರಿನ ಸ್ನಾನ ಮಾಡಿದ್ರೆ ಹೃದಯ ಸ್ತಂಭನದ ಅಪಾಯ ಕಡಿಮೆ

ಚರ್ಮದ ಮೇಲಿನ ಪದರವು ಈ ರೀತಿ ಹಾನಿಗೊಳಗಾದಾಗ, ಚರ್ಮವು ಯುವಿ ಕಿರಣಗಳಿಗೆ ಹೆಚ್ಚು ಸೂಕ್ಷ್ಮವಾಗಿರುತ್ತದೆ ಎಂದು ವೈದ್ಯರು ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿ, ದದ್ದುಗಳು, ಟ್ಯಾನಿಂಗ್ ಮತ್ತು ಸನ್‌ಬರ್ನ್‌ಗಳ ಸಮಸ್ಯೆ ಶುರುವಾಗುತ್ತದೆ.

ಹೈಪರ್ಪಿಗ್ಮೆಂಟೇಶನ್ ಸಮಸ್ಯೆ: ಸ್ಕ್ರಬ್ಬಿಂಗ್‌ನಿಂದ ಉಂಟಾಗುವ ಘರ್ಷಣೆಯು ಹೈಪರ್ಪಿಗ್ಮೆಂಟೇಶನ್‌ಗೆ ಕಾರಣವಾಗುತ್ತದೆ. ಇದರೊಂದಿಗೆ, ಮ್ಯಾಕ್ಯುಲರ್ ಅಮಿಲೋಯ್ಡೋಸಿಸ್‌ನ ಎಂಬ ಸ್ಥಿತಿಯು ಕೈಗಳು ಮತ್ತು ಹಿಂಭಾಗದಲ್ಲಿ ಕಾಣಿಸಿಕೊಳ್ಳಬಹುದು. ಇದರಲ್ಲಿ ಅಮಿಲಾಯ್ಡ್ ಎಂಬ ಪ್ರೋಟೀನ್ ವರ್ಣದ್ರವ್ಯವು ಅವನತಿಯನ್ನು ಪ್ರಾರಂಭಿಸುತ್ತದೆ ಮತ್ತು ಹೈಪರ್ಪಿಗ್ಮೆಂಟೇಶನ್‌ಗೆ ಕಾರಣವಾಗುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು, ಅತಿಯಾದ ಎಫ್ಫೋಲಿಯೇಷನ್ ​​ಮತ್ತು ಲೂಫಾ ಮತ್ತು ಸ್ಕ್ರಬ್ಬಿಂಗ್ ಬಳಕೆಯನ್ನು ತಪ್ಪಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕಪ್ಪು ಮೊಣಕೈಗಳು ಮತ್ತು ಮೊಣಕಾಲುಗಳಿಗೆ ಏನು ಮಾಡಬೇಕು ?
ಅತಿ ಹೆಚ್ಚು ಸ್ಕ್ರಬ್ಬಿಂಗ್ ಮಾಡುವುದರಿಂದ ಕಪ್ಪಾಗಿರುವ ಮೊಣಕೈ ಅಥವಾ ಮೊಣಕಾಲುಗಳ ಬಣ್ಣ ಬದಲಾಗುವುದಿಲ್ಲ. ಹೀಗಾಗಿ ಸ್ಕ್ರಬ್ ಮಾಡುವುದನ್ನು ತಪ್ಪಿಸಿ, ತಜ್ಞರು ನೀಡಿರುವ ಈ ಕೆಲ ಸಲಹೆಗಳನ್ನು ಫಾಲೋ ಮಾಡಬಹುದು.

ಫ್ರೆಶ್ ಆಗ್ಬೇಕು ಅಂತ ಪದೇ ಪದೇ ಸ್ನಾನ ಮಾಡೋ ಅಭ್ಯಾಸ ಒಳ್ಳೇದಲ್ಲ !

ಪ್ರತಿದಿನ ಬೆಳಗ್ಗೆ ಸನ್‌ಸ್ಕ್ರೀನ್ ಅನ್ವಯಿಸಿ.
ಘರ್ಷಣೆಯನ್ನು ಕಡಿಮೆ ಮಾಡಲು ಮೊಣಕಾಲುಗಳು ಮತ್ತು ಮೊಣಕೈಗಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದನ್ನು ತಪ್ಪಿಸಿ.
ಪ್ರತಿ ದಿನ ಬೆಳಗ್ಗೆ ಕೈ, ಕಾಲುಗಳಿಗೆ ಸನ್‌ ಸ್ಕ್ರೀನ್ ಲೋಷನ್ ಹಚ್ಚಿ. ಜೆಂಟಲ್ ಎಕ್ಸ್ಫೋಲಿಯೇಶನ್. ಇದಕ್ಕಾಗಿ, AHA ಮತ್ತು BHA ಕೆಮಿಕಲ್ ಎಕ್ಸ್‌ಫೋಲಿಯೇಟರ್ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಮೊಣಕೈ ಮತ್ತು ಮೊಣಕಾಲುಗಳನ್ನು ಚೆನ್ನಾಗಿ ತೇವಗೊಳಿಸಿ. ನಿಮ್ಮ ಆಹಾರದಲ್ಲಿ ವಿಟಮಿನ್-ಎ ಮತ್ತು ವಿಟಮಿನ್-ಇ ಆಹಾರಗಳನ್ನು ಹೆಚ್ಚು ಸೇರಿಸಿ.

Beauty Tips: ವಾರಕ್ಕೊಮ್ಮೆ ಉಪ್ಪು ನೀರಿನಲ್ಲಿ ಸ್ನಾನ ಮಾಡಿ ನೋಡಿ

Latest Videos
Follow Us:
Download App:
  • android
  • ios