ಸ್ನಾನ ಮಾಡುವುದು ಮನುಷ್ಯನ ದಿನಚರಿಯ ನಿತ್ಯಕರ್ಮಗಳಲ್ಲೊಂದು. ಕೆಲವೊಬ್ಬರು ಬೆಳಗ್ಗೆ, ಇನ್ನು ಕೆಲವೊಬ್ಬರು ರಾತ್ರಿ ಸ್ನಾನ ಮಾಡೋ ಅಭ್ಯಾಸ ಇಟ್ಕೊಂಡಿರುತ್ತಾರೆ. ಆದ್ರೆ ರಾತ್ರಿ ಮಲಗೋ ಮುಂಚೆ ಬಿಸಿನೀರಿನ ಸ್ನಾನ ಒಳ್ಳೇದಾ ಅಥವಾ ತಣ್ಣೀರಿನ ಸ್ನಾನ ಒಳ್ಳೇದಾ?
ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಸ್ನಾನ ಮಾಡುವ ಅಭ್ಯಾಸ ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಅದರಲ್ಲೂ ಸರಿಯಾದ ಸಮಯವನ್ನು ಅನುಸರಿಸುವವರು ಕಡಿಮೆ. ಜನರಿಗೆ ಕೆಲಸದ ಒತ್ತಡದಲ್ಲಿ, ಸ್ನಾನ ಮಾಡಲು ಮತ್ತು ತಿನ್ನಲು ನಿರ್ದಿಷ್ಟ ಸಮಯವಿಲ್ಲ. ಬೆಳಗ್ಗೆ ಅಥವಾ ಸಂಜೆ ಫ್ರೀ ಆದಾಗ ಸ್ನಾನ ಮಾಡಿಕೊಳ್ಳುತ್ತಾರೆ. ಕೆಲಸದಿಂದ ದಣಿದು ಬಂದಾಗ ಸ್ನಾನ ಮಾಡುವ ಅಭ್ಯಾಸ ರಿಫ್ರೆಶ್ ಆಗಲು ಸಹಾಯ ಮಾಡುತ್ತದೆ. ಬಿಸಿ ಮತ್ತು ತಣ್ಣನೆಯ ಎರಡೂ ಸ್ನಾನಗಳು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ. ಕೆಲವೊಮ್ಮೆ ಬಿಸಿ ಶವರ್ ನಿಮಗೆ ಆರಾಮವನ್ನು ನೀಡಬಹುದು. ಇನ್ನು ಕೆಲವೊಮ್ಮೆ ತಣ್ಣನೆಯ ಶವರ್ ಕೆಲಸವನ್ನು ಮಾಡಬಹುದು. ಹಾಗಿದ್ರೆ ಮಲಗೋ ಮುಂಚೆ ಬಿಸಿನೀರು ಅಥವಾ ತಣ್ಣೀರು ಯಾವ ಸ್ನಾನ ಒಳ್ಳೇದು. ಇವೆರಡರ ಪ್ರಯೋಜನಗಳು ಮತ್ತು ಅನಾನುಕೂಲಗಳು ಇಲ್ಲಿವೆ.
ಬಿಸಿ ನೀರಿನ ಸ್ನಾನ ಮಾಡುವುದರಿಂದ ಸಿಗುವ ಪ್ರಯೋಜನಗಳು
ಮಲಗುವ ಮುನ್ನ ಕನಿಷ್ಠ ಒಂದು ಗಂಟೆ ಬಿಸಿ ಸ್ನಾನ (Bath) ಮಾಡುವುದು ನಿಮ್ಮ ನಿದ್ರೆಯ (Sleep) ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಸುಲಭವಾಗಿ ಮತ್ತು ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಶವರ್ ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಒತ್ತಡ (Pressure)ವನ್ನು ಕಡಿಮೆ ಮಾಡುತ್ತದೆ. ನಿಮ್ಮ ದೇಹವು (Body) ಆರಾಮವಾಗಿರುವಾಗ ಬೇಗನೇ ನಿದ್ರೆ ಆವರಿಸಿಕೊಳ್ಳುತ್ತದೆ. ಮನಸ್ಸಿಗೆ ಹೆಚ್ಚು ಒತ್ತಡವಿದ್ದಾಗ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯೂ ಹೆಚ್ಚು. ಆದ್ರೆ ಮಲಗುವ ಮುನ್ನ ಬಿಸಿನೀರಿನ ಸ್ನಾನವನ್ನು ಮಾಡಿದಾಗ, ನೀವು ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ನಿದ್ರೆಯ ಸಮಯದಲ್ಲಿ ಸಂಭವಿಸಬಹುದಾದ ಪಾರ್ಶ್ವವಾಯು ಅಥವಾ ಹೃದಯ ಸ್ತಂಭನವನ್ನು ತಡೆಯಬಹುದು.
ಸ್ನಾನ ಮಾಡುವಾಗ ಮೈ ಉಜ್ಜಲು ಬ್ರಶ್ ಬಳಸ್ತೀರಾ ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ ನೋಡಿ
ಬಿಸಿ ನೀರಿನ ಸ್ನಾನ ಮಾಡುವುದರಿಂದಾಗುವ ತೊಂದರೆಗಳು
ಬಿಸಿನೀರಿನ ಸ್ನಾನವು ನಿಮ್ಮ ತ್ವಚೆಯನ್ನು ಒಣಗಿಸಿ ತುರಿಕೆಯನ್ನುಂಟು ಮಾಡಬಹುದು. ಆದರೆ 10-15 ನಿಮಿಷಗಳಂತಹ ಸೀಮಿತ ಅವಧಿಯವರೆಗೆ ಮಾತ್ರ ಸ್ನಾನ ಮಾಡುವ ಮೂಲಕ ನೀವು ಇದನ್ನು ನಿಯಂತ್ರಿಸಬಹುದು. ದೀರ್ಘ ಸ್ನಾನವನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಚರ್ಮದಿಂದ ತೇವಾಂಶವನ್ನು ಕಿತ್ತುಕೊಳ್ಳಬಹುದು ಮತ್ತು ಚರ್ಮವು ಒಣಗುತ್ತದೆ. ಹಾಗಿದ್ರೆ ತಣ್ಣೀರು ಸ್ನಾನ ಮಾಡೋದ್ರಿಂದ ಆರೋಗ್ಯಕ್ಕೇನು ಪ್ರಯೋಜನವಿದೆ, ಏನು ತೊಂದ್ರೆಯಿದೆ ಎಂಬುದನ್ನು ತಿಳಿದುಕೊಳ್ಳೋಣ.
ತಣ್ಣೀರಿನ ಸ್ನಾನದ ಪ್ರಯೋಜನಗಳು
ಸುಸ್ತಾಗಿ ಬಂದಾಗ ತಣ್ಣೀರಿನ ಸ್ನಾನ ಎಚ್ಚರವಾಗಿರಲು ಸಹಾಯ ಮಾಡುತ್ತದೆ. ತಣ್ಣನೆಯ ಸ್ನಾನ ಮಾಡುವಾಗ, ನೊರ್ಪೈನ್ಫ್ರಿನ್ ಮತ್ತು ಕಾರ್ಟಿಸೋಲ್ ದೇಹದಲ್ಲಿ ಬಿಡುಗಡೆಯಾಗುತ್ತದೆ. ಇದು ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಬೆಚ್ಚಗಾಗಲು ಸಹಾಯ ಮಾಡುತ್ತದೆ. ಅಲ್ಲದೆ, ರಕ್ತದಲ್ಲಿನ ಕಾರ್ಟಿಸೋಲ್ ಹೆಚ್ಚಿದ ಪ್ರಮಾಣವು ನಿಮಗೆ ಹೆಚ್ಚು ಕಾಲ ಎಚ್ಚರವಾಗಿರಲು ಸಹಾಯ ಮಾಡುತ್ತದೆ. ವ್ಯಾಯಾಮದ ನಂತರ ಸ್ನಾಯುಗಳಿಗೆ ಪರಿಹಾರವನ್ನು ಒದಗಿಸಲು ತಣ್ಣೀರಿನ ಸ್ನಾನ ಒಳ್ಳೆಯದು. ಸಾಮಾನ್ಯವಾಗಿ ವ್ಯಾಯಾಮದ ನಂತರ, ನಿಮ್ಮ ಸ್ನಾಯುಗಳು ನೋಯುತ್ತಿರುವಂತೆ ನಿಮಗೆ ಭಾಸವಾಗಬಹುದು. ಇಂಥಾ ಸಂದರ್ಭದಲ್ಲಿ ತಣ್ಣೀರಿನ ಸ್ನಾನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ಥಿತಿಯನ್ನು ಸುಧಾರಿಸಲು ನೀವು ಐಸ್ ಸ್ನಾನವನ್ನು ಸಹ ಬಳಸಬಹುದು.
ತ್ವಚೆ ಹೊಳೆಯುವಂತೆ ಮಾಡುವ ಬಾತ್ ಪೌಡರ್ ಮನೆಯಲ್ಲೇ ತಯಾರಿಸಿ
ತಣ್ಣೀರಿನ ಸ್ನಾನದ ಅನಾನುಕೂಲಗಳು:
ತಣ್ಣನೆಯ ಸ್ನಾನದ ನಂತರ, ನೀವು ತಂಪಾದ ಸಂವೇದನೆಯನ್ನು ಅನುಭವಿಸಬಹುದು ಮತ್ತು ಅದು ದೀರ್ಘಕಾಲ ಉಳಿಯಬಹುದು. ನಿಮ್ಮ ಕೈ ಮತ್ತು ಪಾದಗಳು ತಣ್ಣಗಾದ ಅನುಭವವಾಗುತ್ತದೆ. ವಾತಾವರಣ ತಣ್ಣಗಿದ್ದಾಗ ತಣ್ಣೀರಿನ ಸ್ನಾನ ಮಾಡಿದರೆ ಶೀತ ಜ್ವರ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ತಣ್ಣೀರಿನ ಸ್ನಾನ ಕೈ, ಕಾಲು ಸೆಳೆತಕ್ಕೂ ಕಾರಣವಾಗುತ್ತದೆ.
