ನೀವು ಕುಡಿಯೋ ನೀರಲ್ಲಿ ಲಿಥಿಯಂ ಇದೆಯೇ? ಭ್ರೂಣವನ್ನು ಅಪಾಯಕ್ಕೆ ದೂಡುತ್ತೆ ಈ ಅಂಶ
ಪರಿಸರ ಮಾಲಿನ್ಯ ಅದರಲ್ಲಿಯೂ ಆಹಾರ ಹಾಗೂ ನೀರಿನ ಮಾಲಿನ್ಯ ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮ ಅಷ್ಟಿಷ್ಟಲ್ಲ. ಅಂಗವೈಕಲ್ಯ ಹಾಗೂ ನರ ದೌರ್ಬಲ್ಯ ಸಮಸ್ಯೆಗೂ ಈ ಮಾಲಿನ್ಯಗೊಂಡ ನೀರು ಕಾರಣವಾಗಲಿದೆ ಎಂದು ಸಂಶೋಧನೆಯೊಂದು ತಿಳಿಸಿದೆ.
ಡೆನ್ಮಾರ್ಕ್: ಪರಿಸರ ಮಾಲಿನ್ಯ ಅದರಲ್ಲಿಯೂ ಆಹಾರ ಹಾಗೂ ನೀರಿನ ಮಾಲಿನ್ದಯ ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮ ಅಷ್ಟಿಷ್ಟಲ್ಲ. ಅಂಗವೈಕಲ್ಯ ಹಾಗೂ ನರ ದೌರ್ಬಲ್ಯ ಸಮಸ್ಯೆಗೂ ಈ ಮಾಲಿನ್ಯಗೊಂಡ ನೀರು ಕಾರಣವಾಗಲಿದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ (UCLA)ಆರೋಗ್ಯ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಹೆಚ್ಚಿನ ಪ್ರಮಾಣದ ಲಿಥಿಯಂ ಇರುವ ನೀರನ್ನು ಕುಡಿದರೆ, ಗರ್ಭಿಣಿಯರಿಗೆ ಅನಾರೋಗ್ಯ ಕಾಡಲಿದ್ದು, ಹುಟ್ಟುವ ಮಕ್ಕಳನ್ನು ಆಟಿಸ್ಟಿಕ್ ಸ್ಪೆಕ್ಟ್ರಮ್ ಡಿಸಾರ್ಡರ್ ಕಾಡುವ ಸಾಧ್ಯತೆ ಇರುತ್ತದೆ.
ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ (JAMA), ಪೀಡಿಯಾಟ್ರಿಕ್ಸ್‌ನಲ್ಲಿ ಏಪ್ರಿಲ್ 3 ರಂದು ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಕುಡಿಯುವ ನೀರಿನಲ್ಲಿ ನೈಸರ್ಗಿಕವಾಗಿಯೇ ಸೃಷ್ಟಿಯಾಗುವ ಲಿಥಿಯಂ ಅಂಶ ಆಟಿಸಂ ರೋಗವನ್ನು ಉಂಟು ಮಾಡುವ ಸಾಧ್ಯತೆ ತುಂಬಾ ಜಾಸ್ತಿ, ಎಂದು ವರದಿ ಸ್ಪಷ್ಟಪಡಿಸಿದೆ.
ಆಟಿಸಂ ಎಂದರೇನು?
ನರಮಂಡಲದ ಬೆಳವಣಿಗೆಯ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎನ್ನುತ್ತಾರೆ. ಸಾವಿರ ಜನರಲ್ಲಿ ಒಬ್ಬರಿಗೋ, ಇಬ್ಬರಿಗೋ ಇದು ಕಾಣಿಸಿಕೊಳ್ಳುತ್ತದೆ. 1980ರಿಂದ ಈ ಪ್ರಮಾಣ ತುಸು ಹೆಚ್ಚಾಗಿದೆ. 'ಮಾನವನ ಮೆದುಳಿನ ಮೇಲೆ ಪರಿಣಾಮ ಬೀರುವ ಯಾವುದೇ ಕುಡಿಯುವ ನೀರಿನ ಕಲ್ಮಶಗಳು ತೀವ್ರವಾದ ಪರಿಶೀಲನೆಗೆ ಅರ್ಹ ಎಂದು UCLA ನಲ್ಲಿನ ಡೇವಿಡ್ ಜೆಫೆನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ನರವಿಜ್ಞಾನದ ಪ್ರಾಧ್ಯಾಪಕ ಮತ್ತು ಎಪಿಡೆಮಿಯಾಲಜಿ ಮತ್ತು ಪರಿಸರ ಆರೋಗ್ಯದ ಪ್ರಾಧ್ಯಾಪಕ ಬೀಟ್ ರಿಟ್ಜ್ ಹೇಳಿದ್ದಾರೆ.
ಗರ್ಭಿಣಿ, ಸಲಿಂಗಿಗಳಿಗೆ ನೇಣುಶಿಕ್ಷೆ, ಅಂಗವಿಕಲರಿಗೆ ವಿಷ, ಕಿಮ್ ಜಾಂಗ್‌ಗೆ ಕ್ರೌರ್ಯಕ್ಕಿಲ್ಲ ಕೊನೆ!
ಫೀಲ್ಡಿಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ, ಮುಂಬರುವ ದಿನಗಳಲ್ಲಿ ಲಿಥಿಯಂ ಬ್ಯಾಟರಿ ಬಳಕೆ ಮತ್ತು ಅಂತರ್ಜಲ ಮಾಲಿನ್ಯದ ಪರಿಣಾಮ ಹಾಗೂ ಭೂ ಕುಸಿತದಿಂದ ನೀರಿನಲ್ಲಿ ಲಿಥಿಯಂನ ಮಾನವಜನ್ಯ ಮೂಲಗಳು ಹೆಚ್ಚು ವ್ಯಾಪಕವಾಗಿ ಹರಡಬಹುದು. ನಮ್ಮ ಅಧ್ಯಯನದ ಫಲಿತಾಂಶಗಳು ಉತ್ತಮ ಗುಣಮಟ್ಟದ ಡ್ಯಾನಿಶ್ ಡೇಟಾವನ್ನು ಆಧರಿಸಿವೆ. ಆದರೆ ಅದನ್ನು ಪ್ರಪಂಚದ ಇತರ ಜನಸಂಖ್ಯೆ ಮತ್ತು ಪ್ರದೇಶಗಳುಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಲಿಥಿಯಂನ ಮೂಡ್-ಸ್ಟೆಬಿಲೈಸಿಂಗ್ ಪರಿಣಾಮಗಳಿಂದ, ಕೆಲವು ಲಿಥಿಯಂ ಕಾಂಪೌಂಡ್‌ಗಳನ್ನು ಖಿನ್ನತೆ ಮತ್ತು ಬೈಪೋಲಾರ್ ಅಸ್ವಸ್ಥತೆಗಳಿಗೆ ಚಿಕಿತ್ಸೆಯಾಗಿಯೂ ದೀರ್ಘಕಾಲ ಬಳಸಲಾಗುತ್ತದೆ. ಗರ್ಭಪಾತ ಮತ್ತು ಹೃದಯ ವೈಪರೀತ್ಯಗಳು ಅಥವಾ ನವಜಾತ ಶಿಶುಗಳ ದೋಷಗಳ ಹೆಚ್ಚಿನ ಅಪಾಯವೂ ಲಿಥಿಯಂಗೆ ಸಂಬಂಧಿಸಿದೆ. ಈ ಬಗ್ಗೆ ಹೆಚ್ಚೆಚ್ಚು ಪುರಾವೆಗಳ ದಕ್ಕಿದ್ದು, ತಾಯಂದಿರು ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿ ಲಿಥಿಯಂ ಅನ್ನು ತೆಗೆದುಕೊಳ್ಳಬಹುದೇ ಎಂಬ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ.
ರಿಟ್ಜ್ ಮತ್ತು ಲೈವ್ ಅವರು ಡೆನ್ಮಾರ್ಕ್‌ನ 151 ಸಾರ್ವಜನಿಕ ಜಲಮಂಡಳಿಗಳ ನೀರಿನಲ್ಲಿ ಲಿಥಿಯಂ ಮಟ್ಟವನ್ನು ವಿಶ್ಲೇಷಿಸಿದ ಡ್ಯಾನಿಶ್ ಸಂಶೋಧಕರೊಂದಿಗೆ ಕೆಲಸ ಮಾಡಿದ್ದಾರೆ. ಇದು ದೇಶದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ನೀರನ್ನು ಪೂರೈಸುತ್ತದೆ. ಗರ್ಭಾವಸ್ಥೆಯಲ್ಲಿ ತಾಯಂದಿರ ಮನೆಗಳಿಗೆ ಯಾವ ಜಲಮಾರ್ಗಗಳ ಮೂಲಕ ನೀರು ಪೂರೈಕೆ ಆಗುತ್ತದೆ ಎಂಬುದನ್ನು ಗುರುತಿಸಲು, ಸಂಶೋಧಕರು ಡೆನ್ಮಾರ್ಕ್‌ನ ಸಮಗ್ರ ನಾಗರಿಕ ನೋಂದಾವಣೆ ವ್ಯವಸ್ಥೆಯಿಂದ ವಿಳಾಸ ಮಾಹಿತಿಯನ್ನು ಪಡೆದಿದ್ದರು.
ವಿಜಯಪುರ: ಗರ್ಭಧರಿಸಿದ ಶ್ವಾನಕ್ಕೂ ಸೀಮಂತ ಭಾಗ್ಯ!
ಮನೋವೈದ್ಯಕೀಯ ಅಸ್ವಸ್ಥತೆ ರೋಗಿಗಳ ರಾಷ್ಟ್ರವ್ಯಾಪಿ ಡೇಟಾಬೇಸ್ ಬಳಸಿಕೊಂಡು, ಸಂಶೋಧಕರು 1997-2013ರಲ್ಲಿ ಜನಿಸಿದ ಮಕ್ಕಳನ್ನು ಪರೀಕ್ಷಿಸಿದ್ದಾರೆ. ನರ ದೌರ್ಬಲ್ಯ ಇರದ 63,681 ಮಕ್ಕಳನ್ನು, ನರ ವೈಕಲ್ಯತೆ ಇರುವ 12,799 ಮಕ್ಕಳೊಂದಿಗೆ ಹೋಲಿಸಲಾಗಿದೆ. ಸಂಶೋಧಕರು ತಾಯಿಯ ಗುಣಲಕ್ಷಣಗಳು, ಕೆಲವು ಸಾಮಾಜಿಕ, ಆರ್ಥಿಕ ಅಂಶಗಳು ಮತ್ತು ವಾಯು ಮಾಲಿನ್ಯದ ಪ್ರಭಾವಗಳನ್ನು ಈ ಅಧ್ಯಯನದ ವೇಳೆ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಎಲ್ಲ ಮಾಹಿತಿ ಮೇಲೆ ನೀರಲ್ಲಿ ಲೀಥಿಯಂ ಅಂಶವಿತ್ತು ಎಂಬ ಅಂಶವೂ ಹೆಚ್ಚು ಅನಾಹುತಕ್ಕೆ ಕಾರಣವಾಗಿದೆ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಲಿಥಿಯಂ ಮಟ್ಟಗಳು ಹೆಚ್ಚಾದಂತೆ, ಆಟಿಸಂ (Autism) ರೋಗ ನಿರ್ಣಯದ ಅಪಾಯವೂ ಹೆಚ್ಚಾಗುತ್ತದೆ, ಎಂದು ಸಂಶೋಧಕರು ವರದಿ ಮಾಡಿದ್ದಾರೆ. ದಾಖಲಾದ ಲಿಥಿಯಂ ಮಟ್ಟಗಳ ಕಡಿಮೆ ಕ್ವಾರ್ಟೈಲ್‌ಗೆ ಹೋಲಿಸಿದರೆ ಬೇರೆ ರೀತಿಯಲ್ಲಿ ಹೇಳುವುದಾದರೆ, 25 ಶೇಕಡಾವಾರು - ಎರಡನೇ ಮತ್ತು ಮೂರನೇ ಕ್ವಾರ್ಟೈಲ್‌ಗಳಲ್ಲಿ ಲಿಥಿಯಂ ಮಟ್ಟಗಳು ನರ ದೌರ್ಬಲ್ಯದ 24-26% ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿವೆ. ಅತ್ಯಧಿಕ ಕ್ವಾರ್ಟೈಲ್‌ನಲ್ಲಿ, ಕಡಿಮೆ ಕ್ವಾರ್ಟೈಲ್‌ಗೆ ಹೋಲಿಸಿದರೆ ಅಪಾಯವು ಶೇ.46 ಹೆಚ್ಚಾಗಿದೆ.
ಹೆಚ್ಚಿದ ಲಿಥಿಯಂ ಮಟ್ಟ ಮತ್ತು ಅಸ್ವಸ್ಥತೆ ಉಪವಿಧಗಳಿಂದ ಡೇಟಾ ವಿಭಜಿಸಿದಾಗ ಆಟಿಸಂ ಡಿಸಾರ್ಡರ್‌ನ ಹೆಚ್ಚಿನ ಅಪಾಯದ ನಡುವೆ ಇದೇ ರೀತಿಯ ನರ ದೌರ್ಬಲ್ಯದ ಸಂಬಂಧವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಸಣ್ಣ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರಗಳಲ್ಲಿ ವಾಸಿಸುವವರಿಗೆ ಲಿಥಿಯಂ ಮಟ್ಟ ಮತ್ತು ಆಟಿಸಂ ಅಪಾಯದ ನಡುವಿನ ಸಂಬಂಧ ಹೆಚ್ಚಾಗಿದೆ, ಎಂದು ಕಂಡು ಕೊಳ್ಳಲಾಗಿದೆ.
ಸಾರ್ವಜನಿಕ ಆರೋಗ್ಯ ಸಂಶೋಧಕರಿಗೆ ಅಮೂಲ್ಯವಾದ ಸಂಪನ್ಮೂಲಗಳೆಂದು ಸಾಬೀತಾಗಿರುವ ಡೆನ್ಮಾರ್ಕ್‌ನ ಸಮಗ್ರ ನಾಗರಿಕ ಡೇಟಾಬೇಸ್ ಜೊತೆಗೆ, ಹಲವಾರು ಇತರೆ ಅಂಶಗಳು ಡೆನ್ಮಾರ್ಕ್ ಅನ್ನು ಈ ಅಧ್ಯಯನವನ್ನು ಪ್ರಬಲಗೊಳಿಸಿದೆ. ಡೆನ್ಮಾರ್ಕ್‌ನ (Denmark) ಬಾಟಲ್ ನೀರಿನ ಬಳಕೆ ಯುರೋಪ್‌ನಲ್ಲಿ ಅತ್ಯಂತ ಕಡಿಮೆ. ಅಂದರೆ ಡೆನ್ಮಾರ್ಕ್‌ನ ಜನರು ಹೆಚ್ಚಾಗಿ ಟ್ಯಾಪ್ ನೀರನ್ನು ಅವಲಂಬಿಸಿದ್ದಾರೆ. ದೇಶವು ಅವುಗಳ ನೀರು ಪೂರೈಕೆಯಲ್ಲಿ ಲೋಹ ಮತ್ತು ಇತರೆ ಮಾಲಿನ್ಯಕಾರಕಗಳನ್ನು ಅಳೆಯಲು ಸೂಕ್ತ ವ್ಯವಸ್ಥೆ ಇದೆ. ಇತರೆ ದೇಶಗಳಿಗೆ ಹೋಲಿಸಿದರೆ ಡೆನ್ಮಾರ್ಕ್ ನೀರಿನಲ್ಲಿ ಲಿಥಿಯಂ (Lithium) ಮಟ್ಟವು ಕಡಿಮೆ ಮತ್ತು ಮಧ್ಯಮ ವ್ಯಾಪ್ತಿಯಲ್ಲಿರಬಹುದು ಎಂದು ರಿಟ್ಜ್ ಹೇಳಿದ್ದಾರೆ.
ಸೃಷ್ಟಿ ಆರ್ ಜೋಯ್ಸ್, ತೃತೀಯ ಬಿಎ, ಮಹಾಜನ್ ಕಾಲೇಜು, ಮೈಸೂರು