ಗರ್ಭಿಣಿ, ಸಲಿಂಗಿಗಳಿಗೆ ನೇಣುಶಿಕ್ಷೆ, ಅಂಗವಿಕಲರಿಗೆ ವಿಷ, ಕಿಮ್ ಜಾಂಗ್‌ಗೆ ಕ್ರೌರ್ಯಕ್ಕಿಲ್ಲ ಕೊನೆ!
ಉತ್ತರಕೊರಿಯಾದಲ್ಲಿ ವ್ಯಾಪಕವಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ದಕ್ಷಿಣ ಕೊರಿಯಾ ವರದಿ ಮಾಡಿದೆ. ಗರ್ಭಿಣಿಯರು ಮತ್ತು ಸಲಿಂಗಿಗಳಿಗೆ ಉತ್ತರ ಕೊರಿಯಾದಲ್ಲಿ ನೇಣುಗಂಬದ ಶಿಕ್ಷೆ ನೀಡಲಾಗುತ್ತಿದೆ. ಅಂಗವಿಕರಿಗೆ ನೀಡುವ ಆಹಾರದಲ್ಲಿ ಕ್ರಿಮಿನಾಶಕಗಳನ್ನು ಹಾಕಿ ಅವರನ್ನು ಸಾಯಿಸಲಾಗುತ್ತಿದೆ ಎಂದು ಹೇಳಿದೆ.
ನವದೆಹಲಿ (ಮಾ.31): ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯವು ಆಘಾತಕಾರಿ ವರದಿಯನ್ನು ನೀಡಿದೆ. ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸೂಚನೆಯ ಅನ್ವಯ ಮಕ್ಕಳು ಹಾಗೂ ಗರ್ಭಿಣಿಯರನ್ನು ಅಮಾನುಷವಾಗಿ ಗಲ್ಲಿಗೇರಿಸಲಾಗುತ್ತಿದೆ. ಅಂಗವಿಕಲರಾದವರಿಗೆ ಬಲವಂತವಾಗಿ ಕ್ರಿಮಿನಾಶಕ ನೀಡಿ ಸಾಯಿಸುವ ಮೂಲಕ ಭಯಾನಕ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡಿದೆ ಎಂದು ಮಾಹಿತಿ ನೀಡಿದೆ. ಈ ಬಗ್ಗೆ ಇಂಗ್ಲೆಂಡ್‌ನ ಡೇಲಿ ಮೇಲ್ ಪತ್ರಿಕೆ ವರದಿ ಮಾಡಿದೆ. ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ಮಾನ ಪ್ರಯೋಗಗಳಿಗೆ ಬಳಸಿಕೊಳ್ಳಲಾದ ಆರು ತಿಂಗಳ ಗರ್ಭಿಣಿ ತಾಯಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ಅದರೊಂದಿಗೆ 'ಕುಬ್ಜರ ಪಟ್ಟಿ'ಯಲ್ಲಿರುವ ಮಹಿಳೆಯರನ್ನು ಗರ್ಭಕಂಠಕ್ಕೆ ಒಳಗಾಗುವಂತೆ ಒತ್ತಾಯಿಸಲಾಗಿದೆ ಎಂದು ವರದಿ ಮಾಡಿದೆ. ಆಸ್ಪತ್ರೆಯಲ್ಲಿರುವ ನರ್ಸ್‌ಗಳಿಗೆ ಕುಬ್ಜರ ಪಟ್ಟಿಯನ್ನು ಸಿದ್ಧ ಮಾಡುವಂತೆ ಸೂಚಿಸಲಾಗಿದೆ. ಕುಬ್ಜತೆ ಹೊಂದಿರುವ ಮಹಿಳೆಯ ಮೇಲೆ ಗರ್ಭಕಂಠವನ್ನು ನಡೆಸಲಾಗಿದೆ. ಅದಲ್ಲದೆ, ಚಿತ್ರವಿಚಿತ್ರ ಮಾನವ ಪ್ರಯೋಗಗಳಿಗೆ ಒಳಗಾದ ಮಹಿಳೆಯರನ್ನು ಗಲ್ಲಿಗೇರಿಸಲಾಗಿದ್ದು, ಈ ಸಾಕ್ಷ್ಯ ಹೊರಗೆ ಬರದಂತೆ ತಡೆಹಿಡಿಯಲಾಗಿದೆ.
ಇನ್ನು ಆರು ತಿಂಗಳ ಗರ್ಭಣಿಯನ್ನು ಸಾವರ್ಜನಿಕವಾಗಿ ನೇಣುಗಂಬಕ್ಕೇರಿಸಲು ಕಾರಣವವೂ ಇದೆ. ಉತ್ತರ ಕೊರಿಯಾದಲ್ಲಿ ವ್ಯಾಪಾಕವಾಗಿ ವೈರಲ್ ಆದ ವಿಡಿಯೋದಲ್ಲಿ ಗರ್ಭಿಣಿಯು ದಿವಂಗತ ಕಿಮ್ ಇಲ್-ಸಂಗ್ ಅವರ ಚಿತ್ರದ ಮುಂದೆ ನೃತ್ಯ ಮಾಡುತ್ತಿದ್ದಳು. ಇದು ವೈರಲ್ ಆದ ಕಾರಣಕ್ಕೆ ಆಕೆಯನ್ನು ಹುಡುಕಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ದಕ್ಷಿಣ ಕೊರಿಯಾದ ಏಕೀಕರಣ ರಾಜ್ಯಗಳ ಸಚಿವಾಲಯದ ವರದಿಯಲ್ಲಿ ಭಯಾನಕ ವಿವರಗಳು ದಾಖಲಾಗಿವೆ. ಜಗತ್ತಿನಲ್ಲಿ ಏಕಾಂಗಿಯಾಗಿರುವ ರಾಷ್ಟ್ರವು ಸಲಿಂಗಕಾಮಿ, ಅವರ ಧರ್ಮಕ್ಕಾಗಿ ಮತ್ತು ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸಿದ ನಾಗರಿಕರಿಗೆ ಮರಣದಂಡನೆ ಶಿಕ್ಷೆ ಜಾರಿ ಮಾಡಿದೆ.
ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯವು ಅಂತರ ಕೊರಿಯನ್ ವ್ಯವಹಾರಗಳನ್ನು ನಿರ್ವಹಿಸುತ್ತದೆ. ಸಚಿವಾಲಯದ 450 ಪುಟಗಳ ವರದಿಯುಲ್ಲಿ ಉತ್ತರ ಕೊರಿಯಾವು, ಡಗ್ಸ್ ಮಾರಾಟ ಮಾಡಿದ, ದಕ್ಷಿಣ ಕೊರಿಯಾ ಮಾಧ್ಯಮಗಳೊಂದಿಗೆ ಮಾತನಾಡಿದ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ ವ್ಯಕ್ತಿಗಳನ್ನೂ ಗಲ್ಲಿಗೇರಿದೆ ಎಂದು ಹೇಳಿದೆ.2017 ರಿಂದ 2022 ರವರೆಗೆ ತಮ್ಮ ತಾಯ್ನಾಡಿನಿಂದ ಪಲಾಯನ ಮಾಡಿದ 500 ಕ್ಕೂ ಹೆಚ್ಚು ಉತ್ತರ ಕೊರಿಯನ್ನರಿಂದ ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವಿವರಗಳನ್ನು ಸಂಗ್ರಹಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
"ಉತ್ತರ ಕೊರಿಯಾದ ನಾಗರಿಕರ ಬದುಕುವ ಹಕ್ಕಿಗೆ ಹೆಚ್ಚಿನ ಬೆದರಿಕೆ ಇದೆ ಎಂದು ತೋರುತ್ತದೆ. ಮಾದಕವಸ್ತು ಅಪರಾಧಗಳು, ದಕ್ಷಿಣ ಕೊರಿಯಾದ ಮಾಧ್ಯಮಗಳೊಂದಿಗೆ ಮಾತನಾಡುವುದು ಮತ್ತು ಧಾರ್ಮಿಕ ಮತ್ತು ಮೂಢನಂಬಿಕೆಗಳ ಆಚರಣೆ ಮಾಡಿದವರಿಗೆ ಮರಣದಂಡನೆಯನ್ನು ನೀಡಲಾಗುತ್ತಿದೆ' ಎಂದು ಏಕೀಕರಣ ಇಲಾಖೆಯ ಸಚಿವರು ತಿಳಿಸಿದ್ದಾರೆ.
ಜಪಾನ್ ಬಳಿ ಉತ್ತರ ಕೊರಿಯಾ ಕ್ಷಿಪಣಿ ಪತನ: ತೀವ್ರ ಆತಂಕ
ಉತ್ತರದ 'ಭೀಕರ' ಮಾನವ ಹಕ್ಕುಗಳ ಉಲ್ಲಂಘನೆಯ ಗಮನವನ್ನು ವಿಶ್ವಕ್ಕೆ ತಿಳಿಸುವ ಗುರಿ ಹೊಂದಿರುವ ಸಚಿವಾಲಯವು ತನ್ನ ವಾರ್ಷಿಕ ವರದಿಯನ್ನು ಗುರುವಾರ ಮೊದಲ ಬಾರಿಗೆ ಸಾರ್ವಜನಿಕರಿಗೆ ಬಹಿರಂಗಪಡಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಅಮೆರಿಕ, ದಕ್ಷಿಣ ಕೊರಿಯಾ ಮೇಲೆ ಅಣುಬಾಂಬ್ ದಾಳಿಗೆ ಉತ್ತರ ಕೊರಿಯಾ ಸಿದ್ಧತೆ!
ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ದಕ್ಷಿಣ ಕೊರಿಯಾ ಮೂಲದ ವಿಡಿಯೋಗಳನ್ನು ನೋಡಿಕೊಂಡು, ಅಫೀಮು ಸೇವನೆ ಮಾಡುತ್ತಿದ್ದ ಆರು ಜನ ಯುವಕರನ್ನು ಕಾಂಗ್ವಾನ್ ಪ್ರಾಂತ್ಯದ ವೊನ್ಸಾನ್ ನಗರದ ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ. ಅದರೊಂದಿಗೆ ಕುಬ್ಜರು ಹಾಗೂ ಅಂಗವಿಕರಿಗೆ ಕ್ರಿಮಿನಾಶಕ ನೀಡಿ ಸಾಯಿಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.