Health Tips: ಕುಳಿತು ಕೆಲಸ ಮಾಡೋರು ಆಹಾರ ಸೇವಿಸಿದ್ಮೇಲೆ ಈ ಕೆಲಸ ಮಾಡೋದನ್ನು ಮರಿಬೇಡಿ
ಒಂದೇ ಕಡೆ ಕುಳಿತು ಕೆಲಸ ಮಾಡೋದಲ್ವಾ..ಬೊಜ್ಜು, ಅಜೀರ್ಣ ಮಾಮೂಲಿ ಎನ್ನುವವರಿದ್ದಾರೆ. ಆದ್ರೆ ಈ ಸಮಸ್ಯೆ ಅತಿಯಾದ್ರೆ ಮತ್ತೊಂದಿಷ್ಟು ಕಷ್ಟ ಎದುರಿಸಬೇಕಾಗುತ್ತದೆ. ಕುಳಿತು ಕೆಲಸ ಮಾಡೋರು ಕೂಡಾ ಆರೋಗ್ಯ ಕಾಪಾಡಿಕೊಳ್ಳಬಹುದು.
ಒಂದೇ ಕಡೆ ಕುಳಿತು ಏಳೆಂಟು ಗಂಟೆ ಕೆಲಸ ಮಾಡೋದು ಕೆಲವರಿಗೆ ಅನಿವಾರ್ಯ. ಬರೀ ಐಟಿ ಕಂಪನಿ ಉದ್ಯೋಗಿಗಳ ಮಾತ್ರವಲ್ಲ ಅಂಚೆ ಕಚೇರಿಯಲ್ಲಿ, ಬ್ಯಾಂಕ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೂಡ ಸತತವಾಗಿ ಕುಳಿತು ಕೆಲಸ ಮಾಡ್ತಾರೆ. ಒಂದೇ ಕಡೆ ಕುಳಿತು ಕೆಲಸ ಮಾಡೋದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕೆಲಸದ ಮೇಲೆ ಸಂಪೂರ್ಣ ಗಮನವಿರುವ ಕಾರಣ ಅಥವಾ ಕೆಲಸದ ಒತ್ತಡ ಹೆಚ್ಚಿರುವ ಕಾರಣ ಮಧ್ಯೆ ಮಧ್ಯೆ ಎದ್ದು ವಾಕ್ ಮಾಡೋದು, ರೆಸ್ಟ್ ಮಾಡೋದು ಕೆಲವರಿಗೆ ಸಾಧ್ಯವಿಲ್ಲ. ಇದ್ರಿಂದಾಗಿ ಅವರಿಗೆ ಅಜೀರ್ಣ ಸಮಸ್ಯೆ ಹೆಚ್ಚಾಗುತ್ತದೆ.
ಒಂದೇ ಕಡೆ ಕುಳಿತು ಕೆಲಸ ಮಾಡುವವರ ಜೀರ್ಣಾಂಗ ವ್ಯವಸ್ಥೆಯು ನಿಧಾನಗತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದ್ರಿಂದ ಹೊಟ್ಟೆ (Stomach) ನೋವು, ಗ್ಯಾಸ್ (Gas), ಬೊಜ್ಜು, ಹೊಟ್ಟೆ ಉಬ್ಬರ ಮುಂತಾದ ಹಲವು ಸಮಸ್ಯೆ ಅವರನ್ನು ಕಾಡಲು ಶುರುವಾಗುತ್ತದೆ. ನೀವೂ ಇಂಥ ಸಮಸ್ಯೆ ಎದುರಿಸುತ್ತಿದ್ದರೆ ಕೆಲ ಸುಲಭ ವಿಧಾನದ ಅನುಸರಿಸುವ ಮೂಲಕ ಹೊಟ್ಟೆ ಸಮಸ್ಯೆ ಹಾಗೂ ಅಜೀರ್ಣ (Indigestion) ಸಮಸ್ಯೆಗೆ ಗುಡ್ ಬೈ ಹೇಳಿ.
SUMMER HEALTH TIPS: ಬೇಸಿಗೆಯಲ್ಲಿ ಯಾವ ಹಣ್ಣು-ತರಕಾರಿ ತಿನ್ನೋದು ಒಳ್ಳೇದು?
ತುಂಬಾ ಸಮಯ ಕುಳಿತು ಕೆಲಸ ಮಾಡುವ ಜನರು ದೇಹದಲ್ಲಿ (Body) ಸಂಗ್ರಹವಾಗುವ ಕೊಬ್ಬಿನ ಬಗ್ಗೆ ಚಿಂತೆ ಮಾಡುವ ಬದಲು ದೇಹವನ್ನು ಹೇಗೆ ಸಕ್ರಿಯವಾಗಿಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಬೇಕು. ಬಯೋಲಾಜಿಕಲ್ ಕ್ಲಾಕ್ ಹಾಗೂ ಚಯಾಪಚಯ ಕ್ರಿಯೆ ಸರಿಯಾಗಿ ಕೆಲಸ ಮಾಡಿದ್ರೆ ನೀವು ಆರೋಗ್ಯವಾಗಿರುತ್ತೀರಿ. ಒಂದ್ವೇಳೆ ಇದ್ರ ಆರೋಗ್ಯ (Health) ಕೆಟ್ಟರೆ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹೊಟ್ಟೆಯಲ್ಲಿ ಅನಿಲ ರಚನೆಯ ಸಮಸ್ಯೆ, ಹುಳಿ ತೇಗು, ಗ್ಯಾಸ್ ಮತ್ತು ಅಂತಿಮವಾಗಿ ದೇಹ ಉಬ್ಬುವ ತೊಂದರೆ ನಿಮ್ಮನ್ನು ಕಾಡುತ್ತದೆ. ಕುಳಿತು ಕೆಲಸ ಮಾಡುವವರು ತುಂಬಾ ಕಷ್ಟಪಬೇಕಾಗಿಲ್ಲ. ಆಹಾರ ಸೇವನೆ ಮಾಡಿದ ನಂತ್ರ ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಸಾಕು.
ಆಹಾರ ಸೇವನೆ ನಂತ್ರ ಇದನ್ನು ತಿನ್ನಿ : ಸಾಮಾನ್ಯವಾಗಿ ಊಟದ ನಂತ್ರ ಸಿಹಿ (Sweet) ತಿನ್ನುವ ಬಯಕೆಯಾಗುತ್ತದೆ. ಮನೆಗಿಂತ ಕಚೇರಿಯಲ್ಲಿ ಈ ಬಯಕೆ ಹೆಚ್ಚು. ನೀವೂ ಆಹಾರದ ನಂತ್ರ ಚಾಕೋಲೇಟ್ ಅಥವಾ ಸಿಹಿ ಪದಾರ್ಥ ತಿನ್ನುವವರಾಗಿದ್ದರೆ ಅದ್ರ ಬದಲು ಸೋಂಪು ಮತ್ತು ಕಲ್ಲು ಸಕ್ಕರೆಯನ್ನು ಸೇವನೆ ಮಾಡಿ. ಇದು ನಿಮ್ಮ ಬಾಯಿಯನ್ನು ಸಿಹಿ ಮಾಡುವುದಲ್ಲದೆ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ.
ವಿಶ್ರಾಂತಿ ಅಗತ್ಯ : ಊಟ ಮಾಡಿದ ತಕ್ಷಣ ವಿಶ್ರಾಂತಿ ಕೂಡ ಅಗತ್ಯವಾಗುತ್ತದೆ. ನೀವು ಊಟಮಾಡಿ ಹಾಗೆಯೇ ಕೆಲಸಕ್ಕೆ ಕುಳಿತುಕೊಳ್ಳಬೇಡಿ. ಇಲ್ಲವೆ ನಡೆಯಲು ಶುರುಮಾಡಬೇಡಿ. 10 ನಿಮಿಷ ವಿಶ್ರಾಂತಿ (Rest) ಪಡೆದು ನಂತ್ರ ಮುಂದಿನ ಕೆಲಸಕ್ಕೆ ಹೋಗಿ.
Health Tips: ಆರೋಗ್ಯದ ಬಗ್ಗೆ ಇದೆ ಈ ಎಲ್ಲ ಸುಳ್ಳು ನಂಬಿಕೆ
ಆಹಾರ ಸೇವಿಸಿ 15 ನಿಮಿಷವಾದ್ಮೇಲೆ ಹೀಗೆ ಮಾಡಿ : ನೀವು ಎಲ್ಲಿಯೇ ಕೆಲಸ ಮಾಡ್ತಿರಿ, ಆಹಾರ ಸೇವನೆ ಮಾಡಿದ 15 ನಿಮಿಷದ ನಂತ್ರ ಸಣ್ಣ ವಾಕಿಂಗ್ ಅಗತ್ಯವಾಗಿ ಮಾಡಿ. ನೀವು ಮನೆಯಲ್ಲಿರಲಿ ಇಲ್ಲ ಕಚೇರಿಯಲ್ಲಿರಲಿ, ಸಣ್ಣ ವಾಕಿಂಗ್ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ನೀವು ಗಂಟೆಗಟ್ಟಲೆ ನಡೆಯಬೇಕಾಗಿಲ್ಲ. ಕೇವಲ 5 ನಿಮಿಷ ಹೆಜ್ಜೆ ಹಾಕಿದ್ರೂ ಸಾಕು.
ಶುಂಠಿ ಟೀ : ನೀವು ಆಹಾರ ಸೇವನೆ ಮಾಡಿದ ನಂತ್ರ ಶುಂಠಿ ಟೀ ಕುಡಿಯಬಹುದು. ಇದು ನಿಮ್ಮ ಜೀರ್ಣಶಕ್ತಿಯನ್ನು (Digestion) ಹೆಚ್ಚಿಸುತ್ತದೆ. ಶುಂಠಿ ಹಾಗೂ ಏಲಕ್ಕಿ ಬಳಸಿ ಟೀ ತಯಾರಿಸಿ. ಆದ್ರೆ ಅದಕ್ಕೆ ಹಾಲನ್ನು ಹಾಕ್ಬೇಡಿ.
ಅರ್ಧಗಂಟೆ ನಂತ್ರ ಈ ಕೆಲಸ ಮಾಡೋಕೆ ಮರೆಯಬೇಡಿ : ನಿಮಗೆ ವಾಕಿಂಗ್ ಸಾಧ್ಯವಿಲ್ಲ, ಶುಂಠಿ ಟೀ ಕಷ್ಟ ಎಂದಾದ್ರೆ ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಸೇವನೆ ಮಾಡಿ. ಊಟವಾದ ಅರ್ಧಗಂಟೆ ನಂತ್ರ ನೀವು ಈ ಕೆಲಸ ಮಾಡಬೇಕು.