Asianet Suvarna News Asianet Suvarna News

ಎಷ್ಟು ತಿಂಗಳಿಗೊಮ್ಮೆ BP ಚೆಕ್‌ ಮಾಡ್ಬೇಕು..ತಜ್ಞ ವೈದ್ಯರು ಈ ಬಗ್ಗೆ ಏನಂತಾರೆ?

ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅನಾರೋಗ್ಯಕರ ಆಹಾರ, ಜಡ ಜೀವನಶೈಲಿ, ಧೂಮಪಾನ ಮತ್ತು ಇತರ ಕೆಟ್ಟ ಅಭ್ಯಾಸಗಳಿಂದಾಗಿ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆರೋಗ್ಯ ಹದಗೆಡದಿರಲು ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾದ ವಿಚಾರ ನಿಯಮಿತವಾಗಿ ಬಿಪಿ ಚೆಕ್ ಮಾಡೋದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

How Often Should You Check Your Blood Pressure Numbers, Heres A Complete Guide Vin
Author
First Published Sep 12, 2023, 11:51 AM IST

ಜೀವನಶೈಲಿ ಬದಲಾಗಿರುವುದರ ಜೊತೆಗೆ ಜನರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯವಾಗಿದೆ. ಅನಾರೋಗ್ಯಕರ ಆಹಾರ, ಜಡ ಜೀವನಶೈಲಿ, ಧೂಮಪಾನ ಮತ್ತು ಇತರ ಕೆಟ್ಟ ಅಭ್ಯಾಸಗಳಿಂದಾಗಿ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅಡ್ಡಪರಿಣಾಮಗಳನ್ನು ನಿಯಂತ್ರಿಸಲು ಸಮಯೋಚಿತ ತಡೆಗಟ್ಟುವಿಕೆ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಆರೋಗ್ಯಕರ ಆಹಾರದ ಆಯ್ಕೆಯನ್ನು ಮಾಡುವುದರ ಜೊತೆಗೆ ನಿಯಮಿತವಾಗಿ ಬಿಪಿ ಚೆಕ್ ಮಾಡುವ ಅಭ್ಯಾಸ ಹೊಂದಿರಬೇಕು.

ರಕ್ತದೊತ್ತಡದ (Blood pressure) ಸಮಸ್ಯೆ ಉಲ್ಬಣಗೊಳಿಸದಿರಲು ನಿಯಮಿತವಾಗಿ ಪರಿಶೀಲಿಸುವುದು ಮುಖ್ಯವಾಗಿದೆ. ಹೀಗೆ ಮಾಡುವುದರಿಂದ ರಕ್ತದೊತ್ತಡ ಹೆಚ್ಚಾದರೆ ತಕ್ಷಣ ನಿಯಂತ್ರಣಕ್ಕೆ (Control) ತರಲು ನೀವು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಿದ್ರೆ ವರ್ಷದಲ್ಲಿ ಎಷ್ಟು ಬಾರಿ ರಕ್ತದೊತ್ತಡವನ್ನು ಪರೀಕ್ಷಿಸಬೇಕು. ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಬಿಪಿ ಲೋ ಆಯ್ತು ಅಂತ ಟೆನ್ಶನ್ ಮಾಡ್ಕೋಬೇಡಿ, ಈ ಆಹಾರ ತಿಂದ್ರೆ ಥಟ್ಟಂತ ಹುಷಾರಾಗ್ತೀರಿ

ರಕ್ತದೊತ್ತಡ ಯಾವಾಗ ಪರಿಶೀಲಿಸಬೇಕು?
ಮಕ್ಕಳು ವರ್ಷಕ್ಕೊಮ್ಮೆಯಾದರೂ ರಕ್ತದೊತ್ತಡವನ್ನು ಪರೀಕ್ಷಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ, ಆದರೆ ವಯಸ್ಕರು ತಿಂಗಳಿಗೊಮ್ಮೆ ಟೆಸ್ಟ್ ಮಾಡಲು ಶಿಫಾರಸು ಮಾಡಲಾಗುತ್ತದೆ. ಆಂಟಿಹೈಪರ್ಟೆನ್ಸಿವ್ ಔಷಧಿಯನ್ನು (Medicine) ಸೇವಿಸುವವರು ವಾರಕ್ಕೊಮ್ಮೆ ತಮ್ಮ ರಕ್ತದೊತ್ತಡವನ್ನು ಪರಿಶೀಲಿಸಬಹುದು. ರಕ್ತದೊತ್ತಡದ ಔಷಧವನ್ನು ಈಗಾಗಲೇ ಪ್ರಾರಂಭಿಸಿದ್ದರೆ ಅಥವಾ ಪೂರ್ವ-ಹೈಪರ್‌ಟೆನ್ಷನ್ ರೋಗನಿರ್ಣಯ ಮಾಡಿದ್ದರೆ, ಅವರ BPಯನ್ನು 1ರಿಂದ 3 ತಿಂಗಳ ವರೆಗೆ ದಿನಕ್ಕೆ ಎರಡು ಬಾರಿ ಅಥವಾ ರಕ್ತದೊತ್ತಡವು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ವರೆಗೆ ಆಗಾಗ ಪರೀಕ್ಷಿಸಬೇಕು.

ರಕ್ತದೊತ್ತಡ ಪರೀಕ್ಷಿಸಲು ಉತ್ತಮ ಸಮಯ ಯಾವುದು?
ಆರಂಭಿಕ ಹಂತದಲ್ಲಿ, ಅಧಿಕ ರಕ್ತದೊತ್ತಡ ಹೊಂದಿರುವವರು ದಿನಕ್ಕೆ ಎರಡು ಬಾರಿ ರಕ್ತದೊತ್ತಡವನ್ನು ಪರೀಕ್ಷಿಸಬೇಕು ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ರಕ್ತದೊತ್ತಡವನ್ನು ಪರೀಕ್ಷಿಸಲು ಬೆಳಗ್ಗೆ ಎಚ್ಚರವಾದ ತಕ್ಷಣ ಮತ್ತು ಸಂಜೆ (Evening) ಉತ್ತಮ ಸಮಯ ಎಂದು ಹೇಳುತ್ತಾರೆ.

ರಾತ್ರಿ ಲೈಟ್ ಆನ್​ ಮಾಡಿಟ್ಟು ಮಲಗಿದ್ರೆ ರಕ್ತದೊತ್ತಡ ಹೆಚ್ಚಾಗುತ್ತೆ ಹುಷಾರ್!

ಯಾವ ವಯಸ್ಸಿನಲ್ಲಿ ವ್ಯಕ್ತಿ ಅಧಿಕ ರಕ್ತದೊತ್ತಡದ ಸಮಸ್ಯೆ ಒಳಗಾಗಬಹುದು?
ಅನುವಂಶಿಕವಾಗಿದ್ದರೆ, ರಕ್ತದೊತ್ತಡದ ಸಮಸ್ಯೆ ಸಾಮಾನ್ಯವಾಗಿ 40-60 ವರ್ಷಗಳ ನಡುವೆ ಕಾಣಿಸಿಕೊಳ್ಳುತ್ತದೆ. ಆನುವಂಶಿಕವಲ್ಲದ ಪ್ರಕರಣಗಳು 40 ವರ್ಷಗಳ ಮೊದಲು ಅಥವಾ 60 ವರ್ಷಗಳ ನಂತರ ಕಾಣಿಸಿಕೊಳ್ಳಬಹುದು. ಈ ಅವಧಿಯಲ್ಲಿ ಯಾರಾದರೂ ಅಧಿಕ ರಕ್ತದೊತ್ತಡವನ್ನು ಅಭಿವೃದ್ಧಿಪಡಿಸಿದರೆ, ಅಧಿಕ ರಕ್ತದೊತ್ತಡಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಹೃದ್ರೋಗಶಾಸ್ತ್ರಜ್ಞರನ್ನು ಭೇಟಿ ಮಾಡಬೇಕಾಗುತ್ತದೆ, ನಂತರ ಸ್ಥಿತಿಯನ್ನು ನಿಯಂತ್ರಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.

ಯಾವುದೇ ವಯಸ್ಸಿನಲ್ಲಿ ಮತ್ತು ಯಾವುದೇ ಸಮಯದಲ್ಲಿ, ನಿಮ್ಮ ರಕ್ತದೊತ್ತಡವು 120/80 mmHg ಗೆ ಸಮನಾಗಿರಬೇಕು. ಯಾವುದೇ ಪ್ರಮುಖ ಏರಿಳಿತ ಕಂಡುಬಂದರೆ, ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ನಾರ್ಮಲ್ ಬಿಪಿ ಇದ್ದರೆ 135 ಬೈ 90ವರೆಗೂ ಇರುತ್ತದೆ. ಆದರೆ 140ರಿಂದ 100ರವರೆಗೆ ನಿಮ್ಮ ಬಿಪಿ ಹೆಚ್ಚಾದರೆ, ಅದು ಬಿಪಿ ಲಕ್ಷಣ. 150 ಬೈ 110 ಇದ್ರೆ ಅದು ಸ್ಟೇಜ್ 2 ರಕ್ತದೊತ್ತಡ. ಇದಕ್ಕೂ ಹೆಚ್ಚಿದ್ರೆ ಹೈ ಬಿಪಿ ಎನ್ನುತ್ತಾರೆ. ತೂಕ ಹೆಚ್ಚಳ ರಕ್ತದೊತ್ತಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವ್ಯಾಯಾಮ, ಯೋಗ, ವಾಕಿಂಗ್ ಮೊದಲಾದ ಆರೋಗ್ಯ ಚಟುವಟಿಕೆಗಳ ಮೂಲಕ ಬಿಪಿ ಕಡಿಮೆ ಮಾಡಿಕೊಳ್ಳಬಹುದು.

Follow Us:
Download App:
  • android
  • ios