Asianet Suvarna News Asianet Suvarna News

ಕೊರೋನಾ ಸಾವಿನ ಪ್ರಮಾಣ ಇಳಿಸೋಕೆ ಕೇಜ್ರಿ ಸರ್ಕಾರ ಮಾಡಿದ ಪ್ಲಾನ್ ಇದು..!

ದೇಶದಲ್ಲಿ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಆರಂಭದಿಂದಲೇ ಹೆಚ್ಚಾಗಿತ್ತು. ನಂತರದಲ್ಲಿ ಸೋಂಕಿತರ ಸಂಖ್ಯೆಯೂ, ಸಾವಿನ ಸಂಖ್ಯೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ ಈಗ ದೆಹಲಿಯಲ್ಲಿ ಕೊರೋನಾ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕೇಜ್ರಿ ಸರ್ಕಾರ ಮಾಡಿದ್ದೇನು..? ಇಲ್ಲಿ ಓದಿ.

 

how delhi govt worked with 10 hospitals to reduce coronavirus death rate in city
Author
Bangalore, First Published Aug 6, 2020, 4:21 PM IST

ದೇಶದಲ್ಲಿ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಆರಂಭದಿಂದಲೇ ಹೆಚ್ಚಾಗಿತ್ತು. ನಂತರದಲ್ಲಿ ಸೋಂಕಿತರ ಸಂಖ್ಯೆಯೂ, ಸಾವಿನ ಸಂಖ್ಯೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ ಈಗ ದೆಹಲಿಯಲ್ಲಿ ಕೊರೋನಾ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ.

ಜನಸಂಖ್ಯೆ ಹೆಚ್ಚಿರುವ ರಾಜಧಾನಿಯಲ್ಲಿ ಕೊರೋನಾ ಹತ್ತಿಕ್ಕುವುದು ಸುಲಭದ ಮಾತಲ್ಲ ಎಂಬುದು ಎಲ್ಲಿನ ಸೋಂಕಿತರ ಸಂಖ್ಯೆಯೇ ಹೇಳಿದ ಸತ್ಯ. ಹೀಗಿದ್ದರೂ ಕೊರೋನಾ ಸಾವಿನ ಪ್ರಕರಣ ಕಡಿಮೆ ಮಾಡುವಲ್ಲಿ ದೆಹಲಿ ಕೇಜ್ರಿ ಸರ್ಕಾರ ನಿಧಾನವಾಗಿ ಕಾರ್ಯ ನಿರ್ವಹಿಸುತ್ತಿದೆ.

ಸುಶಾಂತ್‌ನನ್ನು ಮೆಂಟಲ್ ಹಾಸ್ಪಿಟಲ್‌ಗೆ ಸೇರಿಸೋಕೆ ಪ್ಲಾನ್ ಮಾಡಿದ್ದ ರಿಯಾ..!

ದೆಹಲಿಯಲ್ಲಿ ಕೊರೋನಾ ಸಾವಿನ ಪ್ರಮಾಣ ಮತ್ತು ಸೋಂಕಿತರ ಸಂಖ್ಯೆ ಲೆಕ್ಕ ವಿಶ್ಲೇಷಿಸುವುದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಪರಿಸ್ಥಿತಿಯನ್ನು ಅವಲೋಕಿಸಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ವರದಿ ನೀಡಿತ್ತು.

ವರದಿ ಪರಿಶೀಲಿಸಿದ ಸಿಎಂ ಕೊರೋನಾ ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಅಚಿವಾಲಯಕ್ಕೆ ಸೂಚಿಸಿದರು.

ಕೊರೋನಾ ಔಷಧ ಫ್ಯಾವಿಪಿರಾವಿರ್ ಭಾರತದಲ್ಲಿ ಬಿಡುಗಡೆ; ಪ್ರತಿ ಮಾತ್ರೆಗೆ 49 ರೂ!

ಹಲವು ಸಮಿತಿಗಳನ್ನು ರಚಿಸಿ ದೆಹಲಿಯಲ್ಲಿ ಹೆಚ್ಚು ಕೊರೋನಾ ಸಾವು ಸಂಭವಿಸುತ್ತಿರುವ ಕೊರೋನಾ ಆಸ್ಪತ್ರೆಗಳನ್ನು ಗುರುತಿಸಲಾಯಿತು. ಹೆಚ್ಚು ಸಾವು ಸಂಭವಿಸಿದ ಆಸ್ಪತ್ರೆಗಳಿಗೆ ಜು.25ರಂದು ಪ್ರತ್ಯೇಕ ಮಾರ್ಗಸೂಚಿಯನ್ನು ನೀಡಲಾಯಿತು. ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ ನಂತರ ಕೊರೋನಾ ಸಾವಿನ ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

ಬುಧವಾರ ಸಿಎಂ ಸಮಿತಿಯೊಂದಿಗೆ ಸಭೆ ನಡೆಸಿದ್ದು, ಈ ಸಂದರ್ಭ ಸಾವಿನ ಪ್ರಮಾಣ ಇಳಿಕೆಯಾಗಿರುವುದನ್ನು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳಿಗೆ ಹೋಲಿಸಿದಲ್ಲಿ ಈ ತಿಂಗಳೂ ಸಾವಿನ ಪ್ರಮಾಣ ಕಡಿಮೆಯಾಗಿದೆ.

ಕೊರೋನಾ ಲಸಿಕೆಯಲ್ಲಿ ಝೈಡಸ್ ಕ್ಯಾಡಿಲಾಗೆ ಭರ್ಜರಿ ಯಶಸ್ಸು, ಮೊದಲ ಪ್ರಯೋಗ ಯಶಸ್ವಿ!.

ದೆಹಲಿಯ ಲೋಕ ನಾಯಕ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಸಫ್‌ದರ್ಜಂಗ್ ಆಸ್ಪತ್ರೆ, ಮ್ಯಾಕ್ಸ್‌ ಈಸ್ಟ್ ಹಾಗೂ ವೆಸ್ಟ್ ಆಸ್ಪತ್ರೆ, ಗಂಗಾರಾಮ್ ಆಸ್ಪತ್ರೆ,ಆರ್‌ಎಂಎಲ್ ಆಸ್ಪತ್ರೆ, ಜೈಪುರ ಗೋಲ್ಡನ್ ಆಸ್ಪತ್ರೆ, ಹಾಗೂ ಇತರ ಆಸ್ಪತ್ರೆಗಳನ್ನು ಲಿಸ್ಟ್ ಮಾಡಲಾಗಿತ್ತು.

Follow Us:
Download App:
  • android
  • ios