ಬೆಂಗಳೂರು(ಆ.05): ಕೊರೋನಾ ವಿರುದ್ಧ ಹೋರಾಟದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಲಸಿಕೆ ಸಂಶೋಧನೆ ನಡೆಸುತ್ತಿದೆ. ಹಲವು ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿದೆ. ಲಸಿಕೆ ಸಂಶೋಧನೆಯಲ್ಲಿ ಭಾರತ ಕೂಡ ಮುಂಚೂಣಿಯಲ್ಲಿದೆ. ಇದೀಗ ಬೆಂಗಳೂರಿನಲ್ಲಿ ಕೊರೋನಾ ವೈರಸ್ ವಿರುದ್ಧ ಪ್ರಯೋಗ ನಡೆಸಿದ ಝೈಡಸ್ ಕ್ಯಾಡಿಲಾ ಲಸಿಕೆಗೆ ಆರಂಭಿಕ ಹಂತದಲ್ಲೇ ಭರ್ಜರಿ ಯಶಸ್ಸು ಸಿಕ್ಕಿದೆ.

ದೇಶದಲ್ಲಿ ಚೇತರಿಕೆ ಪ್ರಮಾಣ ಸಕ್ರಿಯ ಕೇಸಿಗಿಂತ 2 ಪಟ್ಟು ಹೆಚ್ಚು!

ಝೈಡಸ್ ಕ್ಯಾಡಿಲಾ ಲಸಿಕೆ ಪ್ರಯೋಗಿಸಿದವರೆಲ್ಲಾ ಸುರಕ್ಷಿತ ಹಾಗೂ ಆರೋಗ್ಯವಾಗಿದ್ದಾರೆ. ಇಷ್ಟೇ ಅಲ್ಲ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಹೀಗಾಗಿ ಇದೀಗ ಝೈಡಸ್ ಕ್ಯಾಡಿಲಾ ಮಧ್ಯಮ ಹಂತದ ಪ್ರಯೋಗ ಮಾಡಲು ಮುಂದಾಗಿದೆ. ಸುಮಾರು 1,000 ಆರೋಗ್ಯವಂತರಿಗೆ ಈ ಲಸಿಕೆ ಪ್ರಯೋಗ ಮಾಡಲಾಗುವುದು ಎಂದಿದೆ.

ಬೆಳಗಾವಿಯಲ್ಲಿ ನಾಲ್ವರ ಮೇಲೆ ಕೊರೋನಾ ಲಸಿಕೆ ಪ್ರಯೋಗ: ಎಲ್ಲರೂ ಸೇಫ್.

ಝೈಡಸ್ ಕ್ಯಾಡಿಲಾ ಲಸಿಕೆಯ ಅಂತಿಮ ಹಂತದ ಪ್ರಯೋಗವನ್ನು ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದೆ. ಬಳಿಕ 100 ಮಿಲಿಯನ್ ಡೋಸೇಜ್ ಉತ್ಪಾದಿಸಲಾಗುವುದು ಎಂದು ಕಂಪನಿ ಚೇರ್ಮೆನ್ ಹೇಳಿದ್ದಾರೆ. 

ಈಗಾಗಲೇ ಭಾರತದ ಹಲವು ಕೊರೋನಾ ಲಸಿಕಾ ಕಂಪನಿಗಳು ಯಶಸ್ವಿ ಪ್ರಯೋಗ ನಡೆಸಿದೆ. ಕೆಲ ಲಸಿಕೆಗಳು ಮಾತ್ರ ಅಂತಿಮ ಹಂತದ ಪ್ರಯೋಗಕ್ಕೆ ಸಿದ್ದತೆ ನಡೆಸುತ್ತಿದೆ. ಹೀಗಾಗಿ ಕೊರೋನಾ ಲಸಿಕೆ ಮಾರುಕಟ್ಟೆ ಪ್ರವೇಶ ಕೊಂಚ ವಿಳಂಬವಾಗುವ ಸಾಧ್ಯತೆ ಇವೆ.