ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ನನ್ನು ಮೆಂಟಲ್ ಹಾಸ್ಪಿಟಲ್‌ಗೆ ಸೇರಿಸೋಕೆ ರಿಯಾ ಚಕ್ರವರ್ತಿ ಪ್ಲಾನ್ ಮಾಡಿರುವ ಸಂಗತಿ ಈಗ ಹೊರಗೆ ಬಂದಿದೆ. ಪ್ರಕರಣ ಸಿಬಿಐಗೆ ಸೇರಿದ್ದು, ಹೊಸ ಬೆಳವಣಿಗೆ ತನಿಖೆಯಲ್ಲಿ ಬಹಿರಂಗವಾಗಿದೆ.

ಜನವರಿ 20 ರಿಂದ ಜನವರಿ 24, 2020ರ ನಡುವೆ ರಿಯಾ ಚಕ್ರವರ್ತಿ ಸುಮಾರು 25 ಸಲ ಸುಶಾಂತ್ ಫೋನ್‌ಗೆ ಕರೆ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸುಶಾಂತ್ ಸಾವಿನ ಸಂಬಂಧ ಪಟ್ನಾ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾದಾಗಿನಿಂದಲೂ ರಿಯಾ ಪ್ರಮುಖ ಆರೋಪಿ ಎಂದೇ ಹೇಳಲಾಗುತ್ತಿದೆ.

ದಿಶಾ, ಸುಶಾಂತ್‌ ಸಾವಿನ ಮಧ್ಯೆ ತನ್ನನ್ನು ಎಳೆದಿದ್ದಕ್ಕೆ ಬಾಲಿವುಡ್ ಯಂಗ್ ನಟ ಗರಂ..!

ಇದೀಗ ಕೇಳಿ ಬರುತ್ತಿರುವ ಆರೋಪಗಳಿಗೆ ಪೂರಕವಾಗಿ ಸಾಕ್ಷ್ಯಾಧಾರಗಳೂ ಲಭಿಸಲಾರಂಭಿಸಿವೆ. ಸುಶಾಂತ್ ಸಾವಿಗೆ ರಿಯಾಳೆ ಕಾರಣ. ಆಕೆ ಆತ ಆತ್ಮಹತ್ಯೆ ಮಾಡಲು ಪ್ರಚೋದಿಸಿದ್ದರು. 15 ಕೋಟಿ ಸುಶಾಂತ್ ಖಾತೆಯಿಂದ ವರ್ಗಾಯಿಸಿದ್ದಳು ಎಂದು ಸುಶಾಂತ್ ತಂದೆ ಕೆಕೆ ಸಿಂಗ್ ಆರೋಪಿಸಿದ್ದರು.

ಸುಶಾಂತ್ ಸಹೋದರಿ ರಾಣಿ ಜೊತೆಗಿರುವ ಸಂದರ್ಭ ರಿಯಾ 5 ದಿನದಲ್ಲಿ ಸುಮಾರು 25 ಸಲ ಫೋನ್ ಮಾಡಿದ್ದಳು. ಜನವರಿಯ 20-24ರ ನಡುವೆ ಸುಶಾಂತ್ ಚಂಡೀಗಡಕ್ಕೆ ಹೋಗಿದ್ದಾಗ ಈ ಘಟನೆ ನಡೆದಿತ್ತು.

ತಾನೇ ನಿರ್ಮಿಸಿದ ಸಿನಿಮಾ ಟ್ರೈಲರ್, ಪೋಸ್ಟರ್‌ನಿಂದ ಕರಣ್ ಔಟ್..! ಅಸಲಿಗೆ ಆಗಿದ್ದೇನು..?

2019 ನವೆಂಬರ್‌ನಲ್ಲಿ ಸುಶಾಂತ್ ಸಹಾಯಕ್ಕಾಗಿ ಕೇಳಿದ್ದ. ಚಂಡೀಗಡಕ್ಕೆ ಟಿಕೆಟ್‌ನ್ನೂ ಕಾಯ್ದಿರಿಸಿದ್ದ. ಆದರೆ ಆ ಸಂದರ್ಭ ರಿಯಾ ಬ್ಲಾಕ್‌ಮೇಲ್ ಮಾಡಿ ಆತನನ್ನು ಉಳಿದುಕೊಳ್ಳಲು ಒತ್ತಾಯಿಸಿದ್ದಾಗಿ ಹೇಳಲಾಗುತ್ತಿದೆ.

ನಂತರ ಸುಶಾಂತ್ ಡಿಸೆಂಬರ್ 2019ರಲ್ಲಿ ತನ್ನ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದ. ಆ ನಂತರ ಸುಶಾಂತ್ ಫೋನಿನಿಂದ ಸಹಾಯಕ್ಕಾಗಿ ಕೇಳಿ ಇನ್ನೊಂದು ಕರೆ ಬಂದಿತ್ತು.

ತನ್ನದೇ ಸಿನಿಮಾ ಗುಂಜನ್ ಸಕ್ಸೇನಾ ಬ್ಯಾನರ್‌ನಲ್ಲಿ ಕರಣ್ ಹೆಸರಿಲ್ಲ, ತಿರುಗಿಬಿತ್ತಾ ನೆಪೊಟಿಸಂ ಬಾಣ..?

ರಿಯಾ ಹಾಗೂ ಆಕೆಯ ಕುಟುಂಬಸ್ಥರು ನನ್ನನ್ನು ಮೆಂಟಲ್ ಹಾಸ್ಪಿಟಲ್‌ಗೆ ದಾಖಲಿಸಲು ಪ್ರಯತ್ನಿಸುತ್ತಿದ್ದಾರೆ. ನನಗೆ ಹೋಗಲು ಇಷ್ಟವಿಲ್ಲ. ಮುಂಬೈನಿಂದ ಮನೆ ಖಾಲಿ ಮಾಡಿ ಹಿಮಾಚಲ ಪ್ರದೇಶದಲ್ಲಿರುತ್ತೇನೆ ಎಂದಿದ್ದರು. ನಂತರದಲ್ಲಿ 2 ದಿನ ಚಂಡೀಗಡದಲ್ಲಿ ಸಹೋದರಿ ರಾಣಿ ಜೊತೆಗೆ ಸುಶಾಂತ್ ಸಿಂಗ್ ವಾಸವಿದ್ದರು. ನಂತರದಲ್ಲಿ ಜನವರಿ 24-25ಕ್ಕೆ ಮುಂಬೈಗೆ ಮರಳಿದ್ದರು