ನವದೆಹಲಿ(ಆ.06): ಡ್ರಗ್ ಫಾರ್ಮಾ ಲುಪಿನ್ ಕಂಪನಿ ಇದೀಗ ಭಾರತದಲ್ಲಿ ಕೊರೋನಾ ನಿಯಂತ್ರಣ ಔಷಧ ಫ್ಯಾವಿಪಿರಾವಿರ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಕೋವಿಹಾಲ್ಟ್ ಅನ್ನೋ ಹೆಸರಿನಲ್ಲಿ ಈ ಔಷಧ ಬಿಡುಗಡೆಯಾಗುತ್ತಿದೆ. ಫ್ಯಾವಿಪಿರಾವಿರ್ ಮಾತ್ರೆ ಕೊರೋನಾ ವೈರಸ್ ತುಗುಲಿದ ಆರಂಭಿಕ ಹಂತದಲ್ಲಿ ಪರಿಣಾಮಕಾರಿಯಾಗಿದೆ ಎಂದು ಪ್ರಯೋಗದಲ್ಲಿ ದೃಢಪಟ್ಟಿದೆ. ವಿಶೇಷ ಅಂದರೆ ಪ್ರತಿ ಮಾತ್ರೆ ಬೆಲೆ 49 ರೂಪಾಯಿ ಮಾತ್ರ.

ಕೊರೋನಾ ಲಸಿಕೆಯಲ್ಲಿ ಝೈಡಸ್ ಕ್ಯಾಡಿಲಾಗೆ ಭರ್ಜರಿ ಯಶಸ್ಸು, ಮೊದಲ ಪ್ರಯೋಗ ಯಶಸ್ವಿ!.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI) ಫ್ಯಾವಿಪಿರಾವಿರ್ ಕೊರೋನಾ ನಿಯಂತ್ರಣ ಮಾತ್ರೆಗೆ ಅನುಮತಿ ನೀಡಿದೆ. ಪ್ರತಿ ಶೀಟ್‌ನಲ್ಲಿ 200mgಯ 10 ಮಾತ್ರೆಗಳಿದ್ದು, ಪ್ರತಿ ಮಾತ್ರೆ ಬೆಲೆ 49 ರೂಪಾಯಿ. ಇದು ಮೈಲ್ಡ್ ಡೋಸೇಜ್ ಆಗಿದ್ದು, ಕೊರೋನಾ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಅಧಿಕೃತ ಮಾನ್ಯತೆ ಕೂಡ ಸಿಕ್ಕಿದೆ ಎಂದು ಲುಪಿನ್ ಡ್ರಗ್ ಫಾರ್ಮ್ ಭಾರತದ ನಿರ್ದೇಶಕ ರಾಜೀವ್ ಸಿಬಲ್ ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಸದ್ಯ 19,64,536 ಪ್ರಕರಣಗಳು ವರದಿಯಾಗಿದೆ. 5,95,501 ಪ್ರಕರಣಗಳು ಸಕ್ರಿಯವಾಗಿದೆ. ಇನ್ನು 13 ಲಕ್ಷ ಮಂದಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 40,699ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,51,449ಕ್ಕೇರಿಕೆಯಾಗಿದೆ.