Asianet Suvarna News Asianet Suvarna News

ಹೊಟ್ಟೆಗಲ್ಲ, ತಲೆಗೆ ಸರಿಯಾಗಿ ಎಣ್ಣೆ ಹಾಕಿ, ನಿದ್ರೆ ಬರೋಲ್ಲ ಯಾಕೆ ನೋಡೋಣ!

ಕೆಲವರಿಗೆ ಹಾಸಿಗೆಗೆ ಹೋಗ್ತಿದ್ದಂತೆ ವಿಚಿತ್ರ ಅನುಭವವಾಗುತ್ತದೆ. ಅತಿ ಬೆವರು ಬರುವುದಿದೆ. ಇನ್ನು ಕೆಲವರಿಗೆ ಏನೇ ಮಾಡಿದ್ರೂ ನಿದ್ರೆ ಬರೋದಿಲ್ಲ. ಇದನ್ನು ಚಡಪಡಿಕೆ ಅಂತಾ ಕರೆಯಲಾಗುತ್ತದೆ. ಇದಕ್ಕೆ ಅನೇಕ ಕಾರಣವಿದೆ. ಹಾಗೆ ನಿಮ್ಮ ಬಳಿಯೇ ಪರಿಹಾರವಿದೆ.
 

Home Remedies To Cure Restlessness During Sleep
Author
First Published Sep 26, 2022, 5:43 PM IST

ನಿದ್ರೆ ಸರಿಯಾಗಿದ್ರೆ ಅರ್ಥ ಆರೋಗ್ಯ ಸರಿಯಾಗಿದ್ದಂತೆ. ಅನೇಕ ಅನಾರೋಗ್ಯಕ್ಕೆ ನಿದ್ರೆ ಏರುಪೇರು ಕಾರಣವಾಗಿರುತ್ತದೆ. ಉತ್ತಮ ನಿದ್ರೆಯಿಂದ ಉತ್ತಮ ಆರೋಗ್ಯ ಸಾಧ್ಯ. ಅನೇಕ ಬಾರಿ ಚಡಪಡಿಕೆಯಿಂದಾಗಿ ನಿದ್ರೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ಈ ಚಡಪಡಿಕೆಗೆ ಅನೇಕ ಕಾರಣವಿದೆ. ಒತ್ತಡ, ಹಾರ್ಮೋನ್‌ನಲ್ಲಿನ ಬದಲಾವಣೆ, ಕೆಟ್ಟ ಆಹಾರ ಪದ್ಧತಿ ಇವೆಲ್ಲವೂ ರಾತ್ರಿ ನಿದ್ರೆಗೆ ಡಿಸ್ಟರ್ಬ್ ಮಾಡುತ್ತದೆ. ಚಡಪಡಿಕೆಯಿಂದ ನಿದ್ರೆ ಹಾಳಾಗುತ್ತದೆ. ರಾತ್ರಿ ಚಡಪಡಿಕೆಯಿಂದ ನಿಮಗೂ ನಿದ್ರೆ ಸರಿಯಾಗಿ ಬರ್ತಿಲ್ಲ ಎಂದಾದ್ರೆ ನೀವು ಕೆಲ ಉಪಾಯಗಳನ್ನು ಮಾಡ್ಬೇಕು. ಇದ್ರಿಂದ ನಿಮ್ಮ ಚಡಪಡಿಕೆಯನ್ನು ಸುಲಭವಾಗಿ ಹೋಗಲಾಡಿಸಿ, ಆರಾಮವಾಗಿ ನಿದ್ರೆ ಮಾಡಬಹುದು. 

ನಿದ್ರೆ (Sleep) ಹಾಳು ಮಾಡುವ ಚಡಪಡಿಕೆ (Restlessness) ಯನ್ನು ಹೀಗೆ ಹೋಗಲಾಡಿಸಿ :  

ದೀರ್ಘ ಉಸಿರಾಟ (Breathing) ದಿಂದ ಸಮಸ್ಯೆ ದೂರ : ಹಾಸಿಗೆಗೆ ಹೋಗ್ತಿದ್ದಂತೆ ಕೆಲವರು ಚಡಪಡಿಕೆಗೊಳಗಾಗ್ತಾರೆ. ನಿದ್ರೆ ಮಧ್ಯೆ ಎದ್ದು ಕುಳಿತುಕೊಳ್ಳುವವರಿದ್ದಾರೆ. ನಿಮಗೂ ಹೀಗೆ ಆಗ್ತಿದ್ದರೆ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಉಸಿರಾಟ ಕ್ರಿಯೆ ದೀರ್ಘವಾಗ್ತಿದ್ದಂತೆ ನಿಮ್ಮ ಚಡಪಡಿಕೆ ಕಡಿಮೆಯಾಗುತ್ತದೆ. ಇದ್ರಿಂದ ಸರಿಯಾಗಿ ನಿದ್ರೆ ಬರುತ್ತದೆ. 

ನೀರು (Water) ಸೇವಿಸೋದು ಬೆಸ್ಟ್ : ಮೊದಲೇ ಹೇಳಿದಂತೆ ನಿಮ್ಮ ಕೆಟ್ಟ ಆಹಾರ ಪದ್ಧತಿ ನಿಮ್ಮ ಚಡಪಡಿಕೆಗೆ ಕಾರಣವಾಗುತ್ತದೆ. ತಡರಾತ್ರಿ ಆಹಾರ ಸೇವನೆ ಮಾಡುವುದು ಅಥವಾ ಎಣ್ಣೆಯುಕ್ತ ಆಹಾರ ತಿನ್ನುವುದು ಅಥವಾ ಮಧ್ಯರಾತ್ರಿ ವೇಳೆಯಲ್ಲಿ ಊಟ ಮಾಡುವುದ್ರಿಂದ ಚಡಪಡಿಕೆ ಕಾಡುತ್ತದೆ. ರಾತ್ರಿ ವೇಳೆ ಆಲ್ಕೋಹಾಲ್ ಸೇವನೆ ಮಾಡುವುದ್ರಿಂದ ಅಥವಾ ಕಾಫಿ ಸೇರಿದಂತೆ ಕೆಫೀನ್ ಯುಕ್ತ ಆಹಾರ ಸೇವನೆ ಮಾಡುವುದ್ರಿಂದ ರಾತ್ರಿ ಚಡಪಡಿಕೆ ಕಾಡಬಹುದು. ರಾತ್ರಿ ನಿಮಗೂ ಈ ಸಮಸ್ಯೆ ಆದ್ರೆ ನೀವು ನೀರನ್ನು ಕುಡಿಯಿರಿ. ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನಿರ್ಜಲೀಕರಣ ಸಮಸ್ಯೆ ಕಾಡಿದ್ರೂ ಅನೇಕ ಬಾರಿ ನಿದ್ರೆ ಬರುವುದಿಲ್ಲ. ಮನಸ್ಸು ಗೊಂದಲಕ್ಕೀಡಾಗುತ್ತದೆ.   

ವಾಕಿಂಗ್ ಒಳ್ಳೆ ಮದ್ದು: ರಾತ್ರಿ ಮಲಗುವಾಗ ಚಡಪಡಿಕೆ ಅನಿಸಿದರೆ ನೀವು ವಾಕಿಂಗ್ ಮಾಡಬಹುದು. ವಾಕಿಂಗ್ ಚಡಪಡಿಕೆಗೆ ಪರಿಹಾರ ನೀಡುತ್ತದೆ. ಅನೇಕ ಬಾರಿ ಗ್ಯಾಸ್ಟ್ರಿಕ್ ನಿಂದಾಗಿ ನಿಮಗೆ  ಚಡಪಡಿಕೆಯ ಭಾವನೆ ಬರುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗಲು ಅನೇಕ ಕಾರಣವಿದೆ. ರಾತ್ರಿ ಮಲಗುವ ಮೊದಲು ಕಾಂಪ್ಲೆಕ್ಸ್ ಸಕ್ಕರೆ, ಸಂಸ್ಕರಿಸಿದ ಕಾರ್ಬ್ಸ್, ಕೆಫೀನ್, ಆಲ್ಕೋಹಾಲ್ ಇತ್ಯಾದಿಗಳನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಗ್ಯಾಸ್ ನಿಮ್ಮಲ್ಲಿ ಚಡಪಡಿಕೆಯನ್ನುಂಟು ಮಾಡುತ್ತದೆ. ಇದ್ರಿಂದ ನಿದ್ರೆ ಸರಿಯಾಗಿ ಬರೋದಿಲ್ಲ. ಆ ಸಮಯದಲ್ಲಿ ನೀವು ವಾಕಿಂಗ್ ಮಾಡಬಹುದು. 

Tips for stress: ಅಯ್ಯೋ ತಲೆ ಬಿಸಿ ಆಗ್ತಿದೆ ಅಂತೀರಾ? ಪುದೀನಾ ಎಣ್ಣೆಯಿಂದ ಒತ್ತಡ ನಿವಾರಿಸಿ!

ಹಾರ್ಮೋನ್ ಏರುಪೇರೂ ಕಾರಣವಿಬಹುದು : ರಾತ್ರಿ ಮಲಗುವ ವೇಳೆ ಚಡಪಡಿಕೆ ಉಂಟಾಗಲು ಹಾರ್ಮೋನ್ ಏರುಪೇರು ಕೂಡ ಕಾರಣವಾಗುತ್ತದೆ. ಮುಟ್ಟು (Menopause) ನಿಲ್ಲುವ ಸಮಯದಲ್ಲಿ ಹಾಗೂ ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳು ಸಾಕಷ್ಟು ಪ್ರಮಾಣದಲ್ಲಿ ಬದಲಾಗುತ್ತವೆ. ಈ ಸಮಯದಲ್ಲಿ ಮಹಿಳೆಯರಿಗೆ ಅತಿಯಾಗಿ ಬೆವರುತ್ತದೆ. ಹಾಗೆಯೇ ರಾತ್ರಿ ಮಲಗಲು ಸಾಧ್ಯವಾಗುವುದಿಲ್ಲ. ಚಡಪಡಿಕೆ ಆಗಾಗ ಕಾಡುತ್ತದೆ. ಆಗ ಮಹಿಳೆಯರು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ವೈದ್ಯರ ಸಲಹೆ ಮೇರೆಗೆ ಹಾರ್ಮೋನ್ ಗಳನ್ನು ಸಮತೋಲನಗೊಳಿಸಿದ್ರೆ ಸಮಸ್ಯೆಯಿಂದ ಬಿಡುಗಡೆ ಪಡೆಯಬಹುದು. 

Mental Health: ಪಂಚಸೂತ್ರಗಳ ಫಾಲೋ ಮಾಡಿದರೆ, ನೆಮ್ಮದಿ ಜೀವನ ನಿಮ್ಮದು

ಸಾರ ತೈಲ ಬಳಸಿ ನೋಡಿ : ಒತ್ತಡ (Stress) ಹೆಚ್ಚಾಗಿದೆ, ನಿದ್ರೆ ಸಮಸ್ಯೆ ಕಾಡ್ತಿದೆ, ಚಡಪಡಿಕೆಯಾಗ್ತಿದೆ ಎಂದಾದ್ರೆ ನೀವು ಸಾರ ತೈಲಬವನ್ನು ಬಳಕೆ ಮಾಡಬಹುದು. ದಿಂಬಿನ ಮೇಲೆ 2 ರಿಂದ 3 ಹನಿ ಸಾರ ತೈಲವನ್ನು ಹಾಕಬೇಕು. ನಂತ್ರ ನಿದ್ರೆ ಮಾಡಲು ಪ್ರಯತ್ನಿಸಿ. ಈ ಸಾರ ತೈಲ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಚಡಪಡಿಕೆ ದೂರವಾಗಿ ನಿಮಗೆ ನೆಮ್ಮದಿ ನಿದ್ರೆ ಬರಲು ನೆರವಾಗುತ್ತದೆ.
 

Follow Us:
Download App:
  • android
  • ios