MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • Tips for stress: ಅಯ್ಯೋ ತಲೆ ಬಿಸಿ ಆಗ್ತಿದೆ ಅಂತೀರಾ? ಪುದೀನಾ ಎಣ್ಣೆಯಿಂದ ಒತ್ತಡ ನಿವಾರಿಸಿ!

Tips for stress: ಅಯ್ಯೋ ತಲೆ ಬಿಸಿ ಆಗ್ತಿದೆ ಅಂತೀರಾ? ಪುದೀನಾ ಎಣ್ಣೆಯಿಂದ ಒತ್ತಡ ನಿವಾರಿಸಿ!

ಒತ್ತಡವು ಒಂದು ಮಾನಸಿಕ ಅಸ್ವಸ್ಥತೆಯಾಗಿದೆ. ಇತ್ತೀಚೆಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಾರಿ ಒತ್ತಡದ ಸಮಸ್ಯೆಯಿಂದ ಬಳಲುತ್ತಾರೆ. ಒಬ್ಬ ವ್ಯಕ್ತಿಯ ಮನಸ್ಸು ಮತ್ತು ಮೆದುಳು ಸಂದರ್ಭಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದಾಗ ಒತ್ತಡ ಉಂಟಾಗುತ್ತೆ. ಇದು ವ್ಯಕ್ತಿಯ ಮನಸ್ಸಿನಲ್ಲಿ ನಿರಾಶೆಯ ಅಲೆಯನ್ನು ಸೃಷ್ಟಿಸುತ್ತೆ. ಇದರಿಂದ ಒತ್ತಡ ಸೃಷ್ಟಿಯಾಗುತ್ತೆ. ಇದರಿಂದ ವ್ಯಕ್ತಿಯು ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ.

2 Min read
Suvarna News
Published : Sep 25 2022, 04:04 PM IST
Share this Photo Gallery
  • FB
  • TW
  • Linkdin
  • Whatsapp
17

ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಒತ್ತಡ(Stress) ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಉದ್ಯೋಗ ನಷ್ಟ, ಸಾಲ, ವ್ಯವಹಾರವು ಚೆನ್ನಾಗಿನಡೆಯದಿರೋದು, ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ನಷ್ಟ, ಇತ್ಯಾದಿಗಳು ಸೇರಿವೆ. ಇದರಿಂದ ಬಳಲುತ್ತಿರುವ ಜನರು ಕತ್ತಲೆ ಜಗತ್ತಿನಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ. ವ್ಯಕ್ತಿಗೆ ಸಮಸ್ಯೆಗಳಿಂದ ಎಷ್ಟು ತೊಂದರೆಗೆ ಒಳಗಾಗುತ್ತಾರೆ ಎಂದರೆ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಬಯಸುತ್ತಾರೆ. ಹಾಗಾದರೆ ಸಮಸ್ಯೆಗೆ ಒಳಗಾಗದಿರಲು ಏನು ಮಾಡಬೇಕು ನೋಡೋಣ.

27

ಒತ್ತಡದ ಸಮಸ್ಯೆಗೆ ಒಳಗಾಗದಿರಲು ನೀವು ಒಳಗಿನಿಂದ ಬಲವಾಗಿ ಇರಬೇಕು. ಪ್ರತಿದಿನ ಸಮತೋಲಿತ ಆಹಾರ ಸೇವಿಸಬೇಕು, ವ್ಯಾಯಾಮ ಮಾಡಿ, ಒತ್ತಡದಿಂದ ದೂರವಿರಿ, ಸಾಕಷ್ಟು ನಿದ್ರೆ(Sleep) ಮಾಡಿ. ಈ ನಿಯಮಗಳನ್ನು ಅನುಸರಿಸೋದರಿಂದ ಒತ್ತಡದಲ್ಲಿ ಪರಿಹಾರ ಸಿಗುತ್ತೆ. ಮಾನಸಿಕ ಆರೋಗ್ಯ ಉತ್ತಮವಾಗಿರುತ್ತೆ.

37

ಒತ್ತಡದ ಸಮಸ್ಯೆಯನ್ನು ನಿವಾರಿಸಲು ನೀವು ಪುದೀನಾ ಎಣ್ಣೆಯನ್ನು(Mint oil) ಸಹ ಬಳಸಬಹುದು. ಪುದೀನಾ ಎಣ್ಣೆಯು ಒತ್ತಡವನ್ನು ನಿವಾರಿಸಲು ಸಮರ್ಥವಾಗಿದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ. ಪುದೀನಾ ಎಣ್ಣೆಯಿಂದ ಒತ್ತಡ ದೂರವಾಗೋದು ಹೇಗೆ ನೋಡೋಣ.
 

 

47

ಪುದೀನಾ(Mint) ಸಸ್ಯ
ಆಯುರ್ವೇದದಲ್ಲಿ ಪುದೀನವನ್ನು ಒಂದು ಔಷಧಿ ಎಂದು ಪರಿಗಣಿಸಲಾಗಿದೆ. ಇದರ ಗುಣ ತಣ್ಣಗಿರುತ್ತೆ. ಇದಕ್ಕಾಗಿ, ಹೊಟ್ಟೆಯ ಅಸ್ವಸ್ಥತೆಗಳನ್ನು ತೆಗೆದುಹಾಕಲು ಪುದೀನಾ ಹೆಚ್ಚು ಪ್ರಯೋಜನಕಾರಿ. ಇದನ್ನು ನೀವು ವಿವಿಧ ರೀತಿಯಲ್ಲಿ ಬಳಕೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಬಹುದು.

57

ಜೀರ್ಣಾಂಗ ವ್ಯವಸ್ಥೆಯ(Digestion) ಸಮಸ್ಯೆಗಳನ್ನು ನಿವಾರಿಸಲು ಪುದೀನವನ್ನು ಬಳಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಪುದೀನಾ ಎಲೆ ಚಟ್ನಿಯನ್ನು ತಯಾರಿಸಿ ಸೇವಿಸಲಾಗುತ್ತೆ. ಇದರಲ್ಲಿ ಮೆಂಥಾಲ್ ಕಂಡುಬರುತ್ತೆ. ಇದು ಒತ್ತಡದಲ್ಲಿ ಬಹಳ ಬೇಗನೆ ಪರಿಹಾರವನ್ನು ನೀಡುತ್ತೆ.

67

ಒತ್ತಡದಿಂದ ಪರಿಹಾರ ಪಡಿಯಲು ಪ್ರತಿದಿನ ರಾತ್ರಿ ಮಲಗುವ ಮೊದಲು ಪುದೀನಾ ಎಣ್ಣೆಯಿಂದ ಕೂದಲನ್ನು ಮಸಾಜ್ (Hair Massage)ಮಾಡಿ. ತಲೆಗೆ ಪುದೀನಾ ಎಣ್ಣೆಯನ್ನು ಹಚ್ಚೋದರಿಂದ ಒತ್ತಡದಿಂದ ಶೀಘ್ರದಲ್ಲೇ ಪರಿಹಾರ ಸಿಗುತ್ತೆ. ಉತ್ತಮ ನಿದ್ರೆಯನ್ನು ಪಡೆಯಲು ಸಹ ಸಹಕಾರಿಯಾಗಿದೆ.

77

ಇದಲ್ಲದೆ, ಪುದೀನಾ ಎಣ್ಣೆಯ ವಾಸನೆ(Smell) ಸಹ ಒತ್ತಡವನ್ನು ನಿವಾರಿಸುತ್ತೆ. ಇದು ಮೆದುಳಿನಲ್ಲಿ ಸಂತೋಷದ ಹಾರ್ಮೋನುಗಳನ್ನು ಹೊರಸೂಸುತ್ತೆ. ಆದ್ದರಿಂದ ನೀವು ಒತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ಪುದೀನವನ್ನು ಉಪಯೋಗಿಸಿ ನೋಡಿ, ಅದು ಹೇಗೆ ಮ್ಯಾಜಿಕ್ ನಂತೆ ಕೆಲಸ ಮಾಡುತ್ತೆಯೆಂದು.  

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved