Asianet Suvarna News Asianet Suvarna News

Mental Health: ಪಂಚಸೂತ್ರಗಳ ಫಾಲೋ ಮಾಡಿದರೆ, ನೆಮ್ಮದಿ ಜೀವನ ನಿಮ್ಮದು

ನಮ್ಮ ದೇಹ ದಣಿದಾಗ ವಿಶ್ರಾಂತಿ ಹೇಗೆ ಮುಖ್ಯವೋ ಅದೇ ರೀತಿ, ಒತ್ತಡದಿಂದ ಬಳಲಿದ  ಮೆದುಳಿಗೂ ವಿಶ್ರಾಂತಿಯ ಅಗತ್ಯವಿದೆ. ಆಗ ಮಾತ್ರ ನಾವು ಮಾನಸಿಕ ಆರೋಗ್ಯದಿಂದಿರಲು ಸಾಧ್ಯ.

Tips for good mental health to stay healthy and lead happy life
Author
First Published Sep 26, 2022, 12:54 PM IST

ಮನುಷ್ಯನಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸದೃಢತೆಯು ಕೂಡ ತುಂಬಾ ಮುಖ್ಯ. ಮಾನಸಿಕ ದುರ್ಬಲತೆಯಿಂದ ದುಃಖ, ಖಿನ್ನತೆ, ಏಕಾಗ್ರತೆಯ ಕಡಿಮೆ ಸಾಮರ್ಥ್ಯ, ಅತಿಯಾದ ಚಿಂತೆಗಳು, ಆಯಾಸ ಹಾಗೂ ನಿದ್ರಾಹೀನತೆ ಸೇರಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಅಗತ್ಯ ಮತ್ತು ಮಹತ್ವವನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ. ಹಾಗಾದರೆ ಮಾನಸಿಕವಾಗಿ ನಾವು ಸದೃಢವಾಗಿರುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಉತ್ತಮವಾಗಿ ನಿದ್ರೆ ಮಾಡಿ (Sleep Well)
ಮಾನಸಿಕ ಹಾಗೂ ದೈಹಿಕ (Mentally and Physically)  ಆರೋಗ್ಯಕ್ಕೆ ನಿದ್ದೆಯು  (Sleep) ಕೂಡ ಬಹಳ ಮುಖ್ಯ. ಆದ್ದರಿಂದ ಉತ್ತಮವಾಗಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ. ನೀವು ಮಗುವಿನಂತೆ ಮಲಗಲು ರಿಲ್ಯಾಕ್ಸ್ (Relax) ಆಗಿ. ದಿನವು ಆರೋಗ್ಯಕರವಾಗಿ ಆರಂಭವಾಗಬೇಕೆಂದರೆ ನಿಮಗೆ ವಿಶ್ರಾಂತಿ ಅತ್ಯಗತ್ಯ. ಆದ್ದರಿಂದ ಅದಕ್ಕೆ ತಕ್ಕಂತೆ ಸಿದ್ಧರಾಗಿ, ಇದರಿಂದ ನಿಮ್ಮ ನಿದ್ರಾಹೀನತೆ ದೂರಾಗುವುದಲ್ಲದೆ, ಆರೋಗ್ಯವಂತರಾಗಿರಲು ಸಹಾಯ ಮಾಡುತ್ತದೆ. ಇದರಿಂದ ನಾವು ದಿನವಿಡೀ ಮಾನಸಿಕವಾಗಿ (Mentally) ಸದೃಢರಾಗಿರುತ್ತೇವೆ.

ಪ್ರತಿ ದಿನ ಸೂರ್ಯನ ಬೆಳಕು ತೆಗೆದುಕೊಳ್ಳಿ..
ಸೂರ್ಯನ ಬೆಳಕು (Sun light) ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಮೆದುಳಿನಲ್ಲಿ ಸೆರೊಟೊನಿನ್  ರಾಸಾಯನಿಕದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪ್ರತಿದಿನವೂ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಖಿನ್ನತೆಯು (depression) ದೂರ ಆಗುತ್ತದೆ. ಹಾಗೂ ವ್ಯಾಯಾಮದಿಂದ ಕೂಡ ಒತ್ತಡ ಕಡಿಮೆಯಾಗಿ ಮಾನಸಿಕ ಬಳಲಿಕೆ  ಕಡಿಮೆಯಾಗುತ್ತದೆ.

ಮಹಿಳೆಯರು ಸ್ಟ್ರಾಂಗು ಅಂತ ಕಂಡು ಹಿಡಿಯೋದು ಹೇಗೆ?

ದೈಹಿಕ ಆರೋಗ್ಯವು  ಮನಸ್ಸಿನ  ಕನ್ನಡಿ..
ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತೆ ಎಂಬ ಮಾತಿನಂತೆ, ಮಾನಸಿಕವಾಗಿ ಆರೋಗ್ಯದಿಂದಿರಲು ದೈಹಿಕವಾಗಿ ಸದೃಢವಾಗಿರುವುದು ಅವಶ್ಯ. ಸಮತೋಲನ ಆಹಾರ ಸೇವಿಸಿ, ಅಗತ್ಯದ ವಿಶ್ರಾಂತಿ (Rest) ತೆಗೆದುಕೊಂಡು, ವ್ಯಾಯಾಮ ಮಾಡಿದರೆ ಆರೋಗ್ಯದಿಂದಿರಬಹುದು. ಇದರಿಂದ ಮಾನಸಿಕವಾಗಿ ಸಹ ನಾವು ಆರೋಗ್ಯದಿಂದ ಇರುತ್ತೇವೆ. ಮಾನಸಿಕ ಒತ್ತಡವನ್ನು (Stress)  ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಳ್ಳಲು ಆರೋಗ್ಯಕರವಾದ ಜೀವನ ಶೈಲಿಯ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಮಾತ್ರ ಪ್ರತಿದಿನದ ಜೀವನದ ರಗಳೆಯಲ್ಲಿ ಭಾವನಾತ್ಮಕವಾಗಿ ಮನಸ್ಸಿಗೆ ಹೊಡೆತ ಬೀಳುವುದು ತಪ್ಪುತ್ತದೆ.

ಬೇರ್ಪಡುವಿಕೆ (Separation) ಭಾವನೆ ಬೇಡ.
ಬೇರ್ಪಡುವಿಕೆ ಭಾವನೆಯು ಮಾನಸಿಕ ಆರೋಗ್ಯ (Mental Health) ದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಾವು ಇಷ್ಟ ಪಡುವ ವ್ಯಕ್ತಿಗಳು ದೂರವಾದಾಗ ನೋವು, ಖಿನ್ನತೆ (depression) ಎದುರಾಗುತ್ತದೆ. ಇದನ್ನು ಆರಂಭದಿಂದಲೇ ಹೋಗಲಾಡಿಸಬೇಕು. ಅವರು ದೂರ ಆದರೆ ಮುಂದೇನು ಎಂದು ಭಯ ಪಡಬಾರದು. ಈ ಭಾವನೆ ದೂರಾದರೆ ನಾವು ಮಾನಸಿಕವಾಗಿ ಗಟ್ಟಿಯಾಗಿರುತ್ತೇವೆ.

ಬೆಂಬಿಡದೇ ಕಾಡುತ್ತಿದೆ ಒತ್ತಡ, ಮಾನಸಿಕ ನೆಮ್ಮದಿಗಿಲ್ಲ ಜಾಗ

ಈ ಮೂರು ಆಯುರ್ವೇದ ಔಷಧ ಬಳಸಿ‌‌.
ಮಾನಸಿಕ ಸಮಸ್ಯೆಯನ್ನು ತಪ್ಪಿಸಲು ಆಯುರ್ವೇದದಲ್ಲಿ  (Ayurveda) ಮೂರು ಔಷಧಗಳಿವೆ. ಅವುಗಳೇ ಅಶ್ವಗಂಧ, ಶಂಖಪುಷ್ಪಿ ಮತ್ತು ಬ್ರಾಹ್ಮಿ. ಮಾನಸಿಕ ಸಮಸ್ಯೆ ಇದ್ದವರು ಈ ಮೂರು ಔಷಧಗಳನ್ನು  ಬಳಸಬಹುದು. ಬ್ರಾಹ್ಮಿಯು (Brahmi) ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಇದು ಮಾನಸಿಕ ಆಯಾಸವನ್ನು ನಿವಾರಿಸಲು ಮತ್ತು ಹಾರ್ಮೋನುಗಳ (Harmone) ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಅಶ್ವಗಂಧವು (Ashwagandha) ದೈವಿಕ ಔಷಧವಾಗಿದ್ದು, ಮಾನಸಿಕ ಒತ್ತಡದಿಂದ (Mental Stress) ಮನುಷ್ಯನ್ನು ರಕ್ಷಿಸುತ್ತದೆ. ಇನ್ನು ಶಂಖಪುಷ್ಪ (Shankapushpa)  ಔಷಧವು ಮನಸ್ಸನ್ನು ಚುರುಕುಗೊಳಿಸತ್ತದೆ. ಇದನ್ನು ಸೇವಿಸುವುದರಿಂದ ದೇಹ ಮತ್ತು ಮನಸ್ಸು ಎರಡೂ ತಾಜಾತನವನ್ನು ಪಡೆಯುತ್ತದೆ.

ಒಟ್ಟಾರೆ ಮಾನಸಿಕ ಒತ್ತಡವನ್ನು ಹೇಗೆ ನಿರ್ವಹಣೆ ಮಾಡಿಕೊಳ್ಳಬೇಕು ಮತ್ತು ಯಾವ ಯಾವ ಬದಲಾವಣೆಗಳನ್ನು ತಂದುಕೊಳ್ಳಬೇಕು ಎಂಬ ವಿಷಯವನ್ನು ಮೊದಲು ನಾವು ತಿಳಿದುಕೊಂಡಾಗ ಸುಧಾರಣೆ ಸಾಧ್ಯ.

Follow Us:
Download App:
  • android
  • ios