Lip Care: ಚೆಲುವೆಯ ಅಂದದ ಮೊಗಕೆ ತುಟಿಯೂ ಭೂಷಣ
ತುಟಿಗಳು ಗುಲಾಬಿ ಅಥವಾ ದಟ್ಟ ಗುಲಾಬಿ ಬಣ್ಣದಲ್ಲಿರುವುದು ಸಾಮಾನ್ಯ. ಕೆಲವರದ್ದು ಇನ್ನೂ ತಿಳಿಗುಲಾಬಿ ಬಣ್ಣದಲ್ಲಿ ಆಕರ್ಷಕವಾಗಿರುತ್ತದೆ. ಆದರೆ, ಕೆಲವರ ತುಟಿಗಳು ಮಾತ್ರ ಕಪ್ಪಾಗಿ, ಪೇಲವವಾಗಿ ಕಾಣಿಸುತ್ತದೆ. ಇದಕ್ಕೆ ಅವರ ಅನೇಕ ಅಭ್ಯಾಸಗಳೂ ಕಾರಣವಾಗಿರಬಹುದು.
ಮುಖ(Face)ದಲ್ಲಿ ಬೇರೆಲ್ಲ ಅಂಗಗಳಿಗಿಂತ ಸ್ವಲ್ಪ ಹೆಚ್ಚೇ ಆಗಿ ಗಮನ ಸೆಳೆಯುವ ಅಂಗವೆಂದರೆ ತುಟಿ(Lip)ಗಳು. ತುಟಿಗಳಲ್ಲೂ ಎಷ್ಟೊಂದು ವಿಧ! ಕೆಲವರ ತುಟಿಗಳು ಬಾಗಿದಂತಿದ್ದರೆ, ಕೆಲವರದ್ದು ಕಡ್ಡಿಯಂತೆ ನೇರವಾಗಿರುತ್ತದೆ. ಕೆಲವರದ್ದು ಮೇಲ್ಮುಖವಾಗಿದ್ದರೆ, ಹಲವರದ್ದು ಕೆಳಮುಖವಾಗಿರುತ್ತದೆ. ದಪ್ಪಗಿರುವ, ಪುಟ್ಟದಾಗಿರುವ, ತೆಳ್ಳಗಿರುವ ತುಟಿಗಳು… ಹೀಗೆ ಎಷ್ಟು ನಮೂನೆ! ಅಲ್ಲವೇ? ಹಾಗೆಯೇ ಬಣ್ಣಗಳಲ್ಲೂ ಹಲವು ವಿಧ. ಕೆಲವರದ್ದು ಮುಖಕ್ಕೆ ಹೊಂದುವ ಬಣ್ಣದಲ್ಲಿದ್ದರೆ ಕೆಲವರದ್ದು ಗುಲಾಬಿ, ಅದರಲ್ಲೇ ಹಲವು ಬಣ್ಣಗಳು. ಕೆಲವರ ಮುಖಕ್ಕೆ ಅವರ ತುಟಿಗಳ ಬಣ್ಣ ಅಷ್ಟಾಗಿ ಹೊಂದಾಣಿಕೆಯಾಗುವುದೇ ಇಲ್ಲ. ಇನ್ನು ಕೆಲವರದ್ದು ಎದ್ದು ಕಾಣುವಷ್ಟು ಕಪ್ಪಾಗಿ (Black) ಗೋಚರಿಸುತ್ತದೆ. ಸ್ವಲ್ಪ ಮಸುಕಾಗಿದ್ದರೂ ಓಕೆ. ಆದರೆ, ಕಪ್ಪಾದ ತುಟಿಗಳು ಸ್ವಲ್ಪ ಮುಜುಗರ ಮೂಡಿಸುತ್ತವೆ. ಅದಕ್ಕಾಗಿ ದಿನವೂ ಲಿಪ್ ಸ್ಟಿಕ್ ಮೊರೆ ಹೋಗುವಂತಾಗುತ್ತದೆ.
ತುಟಿಗಳು ಕಪ್ಪಾಗುವಲ್ಲಿ ನಮ್ಮ ಕೊಡುಗೆಯೂ ಇರುತ್ತದೆ. ನಾವು ಅನುಸರಿಸುವ ಹಲವು ಅಭ್ಯಾಸ(Habbit)ಗಳು, ನಮ್ಮ ದೈನಂದಿನ ರೂಢಿಗಳಿಂದ ತುಟಿಗಳು ನಿಧಾನವಾಗಿ ಕಪ್ಪಾಗಬಲ್ಲವು. ಅಂತಹ ಅಭ್ಯಾಸಗಳನ್ನು ಗುರುತಿಸಿಕೊಂಡು ಅವುಗಳನ್ನು ಕೈಬಿಟ್ಟು ನೋಡಿ. ಕ್ರಮೇಣ ತುಟಿಗಳಿಗೆ ಮೊದಲಿನ ಬಣ್ಣ (Color) ಬರುತ್ತದೆ ಹಾಗೂ ಆಕರ್ಷಕ(Attractive)ವಾಗುತ್ತದೆ.
ಸುಂದರವಾಗಿರುವ ಹಾಗೂ ಆಕರ್ಷಕವಾಗಿರುವ ತುಟಿಗಳನ್ನು ಯಾರು ತಾನೇ ಬಯಸುವುದಿಲ್ಲ? ವಿಶೇಷವಾಗಿ ಮಹಿಳೆಯರಿಗೆ ಈ ಆಸೆ ಹೆಚ್ಚು. ಆಕರ್ಷಕ ತುಟಿಗಳಿಗಾಗಿ ಕೆಲವು ಅಭ್ಯಾಸಗಳನ್ನು ಬದಲಿಸಿಕೊಳ್ಳುವುದು ಅಗತ್ಯ.
Corona Virus Study: ಪರ್ಮನೆಂಟ್ ಆಗಿಯೂ ಸ್ಮೆಲ್ ಹೋಗುತ್ತೆ ಹುಷಾರ್ !
• ಡೆಡ್ ಸ್ಕಿನ್ (Dead Skin): ತುಟಿಗಳಿಗೂ ಡೆಡ್ ಸ್ಕಿನ್ ಇರುತ್ತದೆ ಎಂದರೆ ಅಚ್ಚರಿಯಾಗಬಹುದು. ತುಟಿ ಕೂಡ ಚರ್ಮದ ಭಾಗವೇ ಆಗಿರುವುದರಿಂದ ಅಲ್ಲಿ ಮೃತ ಚರ್ಮದ ಭಾಗ ಇರುವುದು ಸಹಜ. ಡೆಡ್ ಸ್ಕಿನ್ ನಿಂದಾಗಿ ತುಟಿಯ ಬಣ್ಣ ಪೇಲವವಾಗುತ್ತದೆ. ಅದನ್ನು ತೆಗೆಯುವುದು ಅಗತ್ಯ. ದಿನವೂ ತುಟಿಗಳನ್ನು ಲಘುವಾಗಿ ಮಸಾಜ್ ಮಾಡಿಕೊಳ್ಳುವುದರಿಂದ ಡೆಡ್ ಸ್ಕಿನ್ ರಿಮೂವ್ ಮಾಡಿಕೊಳ್ಳಬಹುದು.
Parenting Tips : ಮಕ್ಕಳ ಜೀವನ ಹಾಳು ಮಾಡುತ್ತೆ ಪಾಲಕರ ಅತಿಯಾದ ಮುದ್ದು
• ಲಿಪ್ ಸ್ಟಿಕ್ (Lip Stick) ಬಳಕೆ: ದಿನವೂ ಲಿಪ್ ಸ್ಟಿಕ್ ಬಳಕೆ ಮಾಡುವುದರಿಂದ ತುಟಿಗಳ ಬಣ್ಣ ಕುಂದುತ್ತದೆ, ಕ್ರಮೇಣ ಕಪ್ಪಾಗುತ್ತದೆ. ಗುಣಮಟ್ಟದ ಲಿಪ್ ಸ್ಟಿಕ್ ಬಳಕೆಯಿಂದಲೂ ತುಟಿಗಳು ಹಾಳಾಗುತ್ತವೆ. ಲಿಪ್ ಸ್ಟಿಕ್ ತಯಾರಿಕೆಗೆ ಅಪಾರ ಪ್ರಮಾಣದ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತದೆ. ಅವು ತುಟಿಗಳಿಗೆ ಹಾನಿಯುಂಟುಮಾಡುತ್ತವೆ. ಹೀಗಾಗಿ, ದಿನವೂ ಲಿಪ್ ಸ್ಟಿಕ್ ಬಳಕೆ ಮಾಡುವುದು ಸೂಕ್ತವಲ್ಲ. ಬದಲಿಗೆ, ಎಂದಾದರೊಮ್ಮೆ ಫಂಕ್ಷನ್ ಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಗುಣಮಟ್ಟದ ಲಿಪ್ ಸ್ಟಿಕ್ ಬಳಕೆ ಮಾಡಿ.
• ಸ್ಮೋಕಿಂಗ್ (Smoking): ಧೂಮಪಾನದಿಂದಾಗಿ ತುಟಿಗಳು ಬಹಳ ಬದಲಾಗುತ್ತವೆ, ಬಣ್ಣ ಕಳೆದುಕೊಂಡು ಕಪ್ಪಾಗುತ್ತವೆ. ಇಂದಿನ ದಿನಗಳಲ್ಲಿ ಮಹಿಳೆಯರೂ ಧೂಮಪಾನ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಅವರ ತುಟಿಗಳು ಕಪ್ಪಾಗುವುದು ಸಹಜ. ಚೆಂದದ ತುಟಿಗಳು ಬೇಕೆಂದರೆ, ಧೂಮಪಾನ ಬಿಡಬೇಕು. ಅಲ್ಲದೆ, ಲಿಪ್ ಸ್ಟಿಕ್ ಹಾಕಿಕೊಂಡಾಗಲೂ ಧೂಮಪಾನ ಮಾಡುವುದು ಹೆಚ್ಚು ಹಾನಿ ತರುತ್ತದೆ.
• ನೀರಿನ ಕೊರತೆ (Water Shortage): ದೇಹಕ್ಕೆ ನೀರಿನ ಕೊರತೆಯಾದಾಗಲೂ ತುಟಿಗಳು ಕಪ್ಪಾಗುತ್ತವೆ. ಹೀಗಾಗಿ, ಹೆಚ್ಚು ನೀರು ಕುಡಿಯಬೇಕು. ಚಳಿಗಾಲದಲ್ಲಿ ದೇಹಕ್ಕೆ ನೀರಿನ ಅಗತ್ಯ ಹೆಚ್ಚಿರುತ್ತದೆ. ನೀರು ಕುಡಿಯಬೇಕೆಂಬಾಸೆ ಆಗದಿದ್ದರೂ ದೇಹಕ್ಕೆ ಅಗತ್ಯವೆಂದರಿತು ಆಗಾಗ ಕುಡಿಯಬೇಕು. ಕನಿಷ್ಠ ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿಯಬೇಕು.
• ತುಟಿಗಳಿಗೆ ಅವಧಿ ಮೀರಿದ (Expired) ವಸ್ತುಗಳ ಬಳಕೆ: ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಲಿಪ್ ಬಾಮ್ ಬಳಕೆ ಮಾಡುತ್ತೇವೆ. ಎಂದೋ ತಂದು ಇಟ್ಟುಕೊಂಡ ಲಿಪ್ ಬಾಮ್ ಚಳಿಗಾಲದಲ್ಲಿ ಬಳಕೆಯಾಗುತ್ತದೆ. ಅವಧಿ ಮೀರಿದ ಲಿಪ್ ಬಾಮ್, ಲಿಪ್ ಸ್ಟಿಕ್ ಗಳ ಬಳಕೆಯಿಂದ ತುಟಿಗಳು ಹಾಳಾಗುತ್ತವೆ, ಕಪ್ಪಾಗುತ್ತವೆ.