Asianet Suvarna News Asianet Suvarna News

Health Tips: ಬೆಳಗ್ಗೆ ಕಾಣಿಸಿಕೊಳ್ಳೋ ಕಾಲುನೋವು, ಕಾರಣವೇನು ತಿಳ್ಕೊಳ್ಳಿ

ಆರೋಗ್ಯ ಸಮಸ್ಯೆ ಯಾರಿಗೆ ಇರಲ್ಲ ಹೇಳಿ. ಆದರೆ ಬೆಳಗ್ಗೆ ಎದ್ದಾಗಲೇ ಹೆಲ್ತ್ ಪ್ರಾಬ್ಲಂ ಅಂದ್ರೆ ಸಹಿಸೋದು ಕಷ್ಟ. ಅದರಲ್ಲೂ ಹೆಚ್ಚಿನವರು ಬೆಳಗ್ಗೆಯೇ ಕಾಲುನೋವಿನ ಸಮಸ್ಯೆಯಿಂದ ನರಳುತ್ತಾರೆ. ಅದಕ್ಕೇನು ಕಾರಣವೆಂದು ತಿಳಿಯಿರಿ. 

Health tips: Foot pain in the morning, Know what it means Vin
Author
First Published Dec 23, 2022, 1:36 PM IST

ಪ್ರತಿದಿನ ಬೆಳಗ್ಗೆ ಉಲ್ಲಾಸಕರವಾಗಿ ಆರಂಭಿಸಲು ಪ್ರತಿಯೊಬ್ಬರೂ ಉತ್ಸುಕರಾಗಿರುತ್ತಾರೆ. ಆದರೆ ಎಲ್ಲರ ಪಾಲಿಗೆ ಮಾರ್ನಿಂಗ್ ಆರಾಮದಾಯಕವಾಗಿರುವುದಿಲ್ಲ. ಕೆಲವೊಬ್ಬರು ಬೆಳಗ್ಗೇ ಆರೋಗ್ಯ ಸಮಸ್ಯೆ (Health tips)ಯನ್ನು ಎದುರಿಸುತ್ತಾರೆ. ಅದರಲ್ಲೂ ಹೆಚ್ಚಿನವರಲ್ಲಿ ಕಾಲು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ಕಾಣಿಸಿಕೊಳ್ಳುವ ಕಾಲು ನೋವಿಗೆ (Leg pain) ಹಲವು ಕಾರಣಗಳಿವೆ. ಆದರೆ ಪಾದಗ:ಲ್ಲಿ ತೀವ್ರವಾದ ನೋವು ಕಾಣಿಸಿಕೊಂಡರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಪಾದಗಳು ಅಥವಾ ಹಿಮ್ಮಡಿಗಳಲ್ಲಿ ನೋವು ಮಹಿಳೆ (Women)ಯರಲ್ಲಿ ಸಾಮಾನ್ಯ ಸ್ಥಿತಿಯಾಗಿದೆ. ಎಚ್ಚರಗೊಳ್ಳುವುದು ಮತ್ತು ಪಾದಗಳಲ್ಲಿನ ನೋವನ್ನು ಅನುಭವಿಸುವುದು ನೀವು ಮಾತ್ರವಲ್ಲ. ಪಾದಗಳು ಅಥವಾ ಹಿಮ್ಮಡಿಗಳಲ್ಲಿ ನೋವು ಮಹಿಳೆಯರಲ್ಲಿ ಸಾಮಾನ್ಯ ಸ್ಥಿತಿಯಾಗಿದೆ ಮತ್ತು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನ ಕೊರತೆಯು ಇದಕ್ಕೆ ಕಾರಣವಾಗುವ ಸಾಮಾನ್ಯ ಅಂಶವಾಗಿದೆ ಎಂದು ಅಕ್ಬರ್ ಹೇಳುತ್ತಾರೆ.

Pain and Causes: ಕಾಲಲ್ಲಿ ನೋವು ಕಾಣಿಸಿಕೊಂಡಿದೆಯೇ? ಹಾಗಿದ್ರೆ ಈ ಭಯಾನಕ ರೋಗ ಕಾಡಬಹುದು

ಋತುಬಂಧದ ಘಟ್ಟವನ್ನು ತಲುಪಿದ ಮಹಿಳೆಯರು: ಋತುಬಂಧದ ಘಟ್ಟವನ್ನು ತಲುಪಿದ ಮಹಿಳೆಯರು ಬೆಳಗ್ಗೆ ಕಾಲು ನೋವಿನ ಸಮಸ್ಯೆಯನ್ನು ಅನುಭವಿಸಬಹುದು. ಹೆಚ್ಚಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರು ಮೂಳೆ (Bone)ಗಳನ್ನು ದುರ್ಬಲಗೊಳಿಸುವ ಆಸ್ಟಿಯೊಪೊರೋಸಿಸ್ನಿಂದ ಬಳಲುತ್ತಿರುತ್ತಾರೆ. ಹೀಗಾಗಿ ಕಾಲು ನೋವಿನ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ಮಧುಮೇಹಿಗಳು ಪಾದಗಳಲ್ಲಿ ನೋವು ಸಾಮಾನ್ಯ: ಕಾಲುಗಳಲ್ಲಿನ ನೋವಿಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಕನಿಷ್ಠ ಮಧುಮೇಹ ರೋಗಿಗಳಲ್ಲಿ ಮಧುಮೇಹ ಹೊಂದಿರುವ ಯುವಕರು ಮತ್ತು ವೃದ್ಧರು ಸಹ ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ನೀವು ಕುಳಿತುಕೊಳ್ಳುವಾಗ ಅಥವಾ ಚಲಿಸುವಾಗ ನಿಮ್ಮ ಪಾದಗಳು ಅಥವಾ ಹಿಮ್ಮಡಿಗಳಲ್ಲಿ ನೋವನ್ನು ಅನುಭವಿಸಬಹುದು. ಸಂಧಿವಾತ ಅಥವಾ ಅಸ್ಥಿಸಂಧಿವಾತದಿಂದ ಬಳಲುತ್ತಿರುವವರು ನೋವಿನ ಪರಿಸ್ಥಿತಿಗಳಿಂದ ಬಳಲುತ್ತಾರೆ. ಹಲವು ವಾರಗಳಿಂದ ಅಥವಾ ತಿಂಗಳುಗಳಿಂದ ಸಮಸ್ಯೆ ಎದುರಿಸುತ್ತಿದ್ದರೆ ಕೂಡಲೇ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು.

Fashion Tips : ಹೀಲ್ಸ್ ಧರಿಸಿದ್ರೆ ಪಾದದಲ್ಲಿ ಸೆಳೆತ ಕಾಣಿಸಿಕೊಳ್ಳುತ್ತಾ?

ಕಾಲು ನೋವಿಗೆ ಚಿಕಿತ್ಸೆ ನೀಡುವುದು ಹೇಗೆ?
ಸಂಧಿವಾತ ಅಥವಾ ಅಸ್ಥಿಸಂಧಿವಾತದ ಸಂದರ್ಭದಲ್ಲಿ, ಆರೋಗ್ಯಕರ ಆಹಾರದೊಂದಿಗೆ ಔಷಧವು ಮುಖ್ಯವಾಗಿದೆ. ಚಿಕಿತ್ಸೆಯಲ್ಲಿ ಫಿಸಿಯೋಥೆರಪಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆಯಾಗಿದ್ದರೆ ಹಾಲನ್ನು ಹೆಚ್ಚು ಸೇವಿಸಬೇಕು. ಹಾರ್ವರ್ಡ್ T.H ಚಾನ್ ಪ್ರಕಾರ, ಕೆಲವು ಆಹಾರಗಳು ನೈಸರ್ಗಿಕವಾಗಿ ವಿಟಮಿನ್ D3ಯಲ್ಲಿ ಸಮೃದ್ಧವಾಗಿವೆ. ಸಣ್ಣ ಪ್ರಮಾಣದ ವಿಟಮಿನ್ ಚೀಸ್, ಮೊಟ್ಟೆಯ ಹಳದಿ ಭಾಗ ಸೇವಿಸಬಹುದು. ಕೆಲವು ಅಣಬೆಗಳು ವಿಟಮಿನ್ ಡಿ 2 ಅನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತವೆ. ಆದ್ದರಿಂದ, ಸರಿಯಾದ ಆಹಾರವನ್ನು ಸೇವಿಸಿ ಮತ್ತು ನಿಮ್ಮ ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಸಿ.ಇದರಿಂದ ಕಾಲು ನೋವಿನ ಸಮಸ್ಯೆಯಿಂದ ದೂರವಿರಬಹುದು.

ರಾತ್ರಿ ನಿದ್ರೆ ಹಾಳ್ಮಾಡುವ ಕಾಲ್ನೋವಿಗೆ ಇಲ್ಲಿದೆ ಪರಿಹಾರ
ರಾತ್ರಿ ಸರಿಯಾಗಿ ನಿದ್ರೆ ಬಂದ್ರೆ ಆರೋಗ್ಯ ಸರಿಯಾಗಿರುತ್ತೆ. ಇದ್ರಲ್ಲಿ ಎರಡು ಮಾತಿಲ್ಲ. ಆದ್ರೆ ನಿದ್ರೆ ಸರಿಯಾಗಿ ಆಗಿಲ್ಲವೆಂದ್ರೆ ಇಡೀ ದಿನ ಕಿರಿಕಿರಿ ತಪ್ಪಿದ್ದಲ್ಲ. ನಿತ್ಯದ ಕೆಲಸಕ್ಕೆ ತೊಂದರೆಯಾಗುತ್ತದೆ. ಇದಲ್ಲದೆ ಅನೇಕ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ರಾತ್ರಿ ನಿದ್ರೆ ಭಂಗಕ್ಕೆ ಕಾಲಿನ ನೋವು ಕೂಡ ಕಾರಣ. ಕೆಲ ಮನೆಮದ್ದುಗಳ ಮೂಲಕ ಕಾಲು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಂದು ನಾವು ರಾತ್ರಿ ಕಾಡುವ ಕಾಲು ನೋವಿಗೆ ಮನೆ ಮದ್ದು ಏನು ಎಂಬುದನ್ನು ಹೇಳ್ತೇವೆ.  

ಸಾಸಿವೆ (Mustard) ಎಣ್ಣೆ : ರಾತ್ರಿಯಾಗ್ತಿದ್ದಂತೆ ಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ನೀವು ಔಷಧಿಯಾಗಿ ಸಾಸಿವೆ ಎಣ್ಣೆಯನ್ನು ಬಳಸಬಹುದು. ಸಾಸಿವೆ ಎಣ್ಣೆಯನ್ನು ನಿಮ್ಮ ಪಾದಗಳಿಗೆ ಹಚ್ಚಿ ಮಸಾಜ್  ಮಾಡಬೇಕು. ಇದರಿಂದ ನಿಮಗೆ ತಕ್ಷಣ ಪರಿಹಾರ ಸಿಗುತ್ತದೆ. ಕಾಲು ನೋವು ಕಡಿಮೆಯಾಗುತ್ತದೆ. ನಿಮಗೆ ಆರಾಮವಾಗಿ ನಿದ್ರೆ ಮಾಡಲು ನೆರವಾಗುತ್ತದೆ. ಇದು ಹಿಂದಿನಿಂದಲೂ ಬಳಕೆಯಲ್ಲಿರುವ ಮನೆ ಮದ್ದಾಗಿದೆ.

ಆಪಲ್ ವಿನೆಗರ್ : ಆಪಲ್ ಸೈಡರ್ ವಿನೆಗರ್ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಕಾಲು ನೋವನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆಪಲ್ ಸೈಡರ್ ವಿನೆಗರ್ ನೋವು ನಿವಾರಕ ಗುಣಗಳನ್ನು ಹೊಂದಿದೆ.  ಇದು ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ನೀವು ಎರಡು ಚಮಚ ವಿನೆಗರ್‌ನಲ್ಲಿ ಜೇನುತುಪ್ಪವನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಮಾಡಿದ್ರೆ ನೋವು ಕಡಿಮೆಯಾಗಿ, ನಿಮ್ಮ ಸಮಸ್ಯೆ ನೀಗುತ್ತದೆ.

ಮೆಂತ್ಯ : ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವ ಸಾಮಾನುಗಳಲ್ಲಿ ಮೆಂತ್ಯ ಕೂಡ ಒಂದು. ಇದನ್ನು ಅನೇಕ ಆಹಾರ ತಯಾರಿಕೆ ಬಳಸ್ತಾರೆ. ಮೆಂತ್ಯದಲ್ಲಿ ಔಷಧಿ ಗುಣವಿದೆ. ಇದು ಕಹಿ ಎನ್ನುವ ಕಾರಣಕ್ಕೆ ಅನೇಕರು ಇದನ್ನು ಬಳಸುವುದಿಲ್ಲ. ಆದ್ರೆ ಮೆಂತ್ಯವು ನೋವು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ನೀವು ಮಾಡಬೇಕಾಗಿರುವುದು ಏನೆಂದ್ರೆ ಒಂದು ಚಮಚ ಮೆಂತ್ಯ ಕಾಳುಗಳನ್ನು ರಾತ್ರಿಯಿಡೀ ನೆನೆಸಿಡಿ. ನಂತರ ನೀವು ಅದನ್ನು ಬೆಳಿಗ್ಗೆ ತಿನ್ನಿ. ಹೀಗೆ ಮಾಡುವುದರಿಂದ ಕಾಲು ನೋವು ನಿವಾರಣೆಯಾಗುತ್ತದೆ.

Follow Us:
Download App:
  • android
  • ios