Fashion Tips : ಹೀಲ್ಸ್ ಧರಿಸಿದ್ರೆ ಪಾದದಲ್ಲಿ ಸೆಳೆತ ಕಾಣಿಸಿಕೊಳ್ಳುತ್ತಾ?

ಫ್ಯಾಷನ್ ಬೇಕು ಅಂದಾಗ ಕೆಲ ನೋವುಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹೀಲ್ಸ್ ಕೂಡ ಪಾದಗಳಿಗೆ ನೋವು ನೀಡುತ್ತದೆ. ಹೀಲ್ಸ್ ಧರಿಸಿದ್ರೂ ಕಾಲು ನೋವು ಬರಬಾರದು ಅಂದ್ರೆ ಕೆಲ ಉಪಾಯ ತಿಳಿದಿರಬೇಕು.
 

Avoid Leg Cramps While Wearing Heels

ಹೀಲ್ಸ್ ಧರಿಸೋದು ಹಳೆ ಫ್ಯಾಷನ್. ಈಗ ಬಹುತೇಕ ಎಲ್ಲ ಹುಡುಗಿಯರು, ಮಹಿಳೆಯರು ಹೀಲ್ಸ್ ಧರಿಸ್ತಾರೆ. ಕೆಲವರು ಫ್ಯಾಷನ್ ಆಗಿ ಧರಿಸಿದ್ರೆ ಮತ್ತೆ ಕೆಲವರು ಹೈಟ್ ಹೆಚ್ಚಾಗ್ಲಿ ಅಂತಾ ಧರಿಸ್ತಾರೆ. ಒಟ್ಟಿನಲ್ಲಿ ಈಗ ಹೀಲ್ಸ್ ಧರಿಸೋದು ವಿಶೇಷವೇನಲ್ಲ. ಆದ್ರೆ ಹೀಲ್ಸ್ ಧರಿಸಿದೋರಿಗೆ ಮಾತ್ರ ಅದರ ಕಷ್ಟಗೊತ್ತು. ಹೀಲ್ಸ್ ಧರಿಸೋದ್ರಿಂದ ಪಾದಗಳ ಮೇಲೆ ಹೆಚ್ಚು ಒತ್ತಡ ಬೀರುತ್ತದೆ. ಹೀಲ್ಸ್ ಪ್ರತಿ ದಿನ ಧರಿಸಿದ್ರೆ ಪಾದಗಳಿಗೆ ಒಳ್ಳೆಯದಲ್ಲ. ಹೀಲ್ಸ್ ಧರಿಸುವುದರಿಂದ ಪಾದಗಳಲ್ಲಿ ನೋವು, ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  ಹೀಲ್ಸ್ ಧರಿಸುವುದರಿಂದ ಪಾದಗಳ ಸ್ನಾಯುಗಳಲ್ಲಿ ಸೆಳೆತ ಉಂಟಾಗುತ್ತದೆ. ಇದ್ರಿಂದ ಕಾಲು ನೋವು ಬರುತ್ತದೆ. ಈ ನೋವು ತೊಡೆಯವರೆಗೆಊ ಬರುವುದಿಲ್ಲ. ಹೀಲ್ಸ್ ಧರಿಸೋದ್ರಿಂದ ನಿಮಗೂ ಪಾದ, ಕಾಲುಗಳನ್ನು ನೋವು ಕಾಣಿಸಿಕೊಳ್ತಿದ್ದರೆ ಕೆಲ ವಿಧಾನಗಳ ಮೂಲಕ ಈ ನೋವನ್ನು ಕಡಿಮೆ ಮಾಡಿಕೊಳ್ಳಿ. ನಾವಿಂದು ಯಾವ ವಿಧಾನ ಪಾಲಿಸಿ ನೀವು ಕಾಲಿನ ನೋವನ್ನು ಕಡಿಮೆ ಮಾಡಬಹುದು ಎಂಬುದನ್ನು ಹೇಳ್ತೇವೆ.

ಹೀಲ್ಸ್ (Heels) ನಲ್ಲಿ ಬದಲಾವಣೆ ಮಾಡಿ : ನೀವು ಚೂಪಾದ ಹೀಲ್ಸ್ ಧರಿಸುತ್ತಿದ್ದು, ಅದ್ರಿಂದ ಕಾಲು (Foot ) ನೋವು (Pain), ಕಾಲಿನಲ್ಲಿ ಊತ ಅಥವಾ ಕಾಲಿನಲ್ಲಿ ಸೆಳೆತ ಕಾಣಿಸಿಕೊಳ್ತಿದ್ದರೆ ನೀವು ಹೀಲ್ಸ್ ಬದಲಿಸಿ. ಅಂದ್ರೆ ಚೂಪಾದ ಹೀಲ್ಸ್ ಬದಲು ಅಗಲವಾದ ಹೀಲ್ಸ್ ಗೆ ಆದ್ಯತೆ ನೀಡಿ.  ಅಗಲವಾದ ಹೀಲ್ಸ್ ಧರಿಸುವುದ್ರಿಂದ ನೆಲ ಮತ್ತು ಪಾದದ ನಡುವೆ ಉತ್ತಮ ಪ್ಯಾಡಿಂಗ್ ಸಿಗುತ್ತದೆ. ಇದ್ರಿಂದ ನಿಮ್ಮ ಪಾದಗಳಿಗೆ ಹೆಚ್ಚು ಆರಾಮ ಸಿಗುತ್ತದೆ.  

ಹೀಲ್ಸ್ ಎತ್ತರ (Height) ದ ಬಗ್ಗೆ ಗಮನವಿರಲಿ : ಹೀಲ್ಸ್ ಖರೀದಿ ವೇಳೆ ಅದ್ರ ಎತ್ತರವನ್ನು ಗಮನಿಸಿ. ಎತ್ತರವಾದ ಹೀಲ್ಸ್ ಪಾದಗಳ ನೋವನ್ನು ಹೆಚ್ಚು ಮಾಡುತ್ತದೆ. ಇದ್ರಿಂದ ಸೊಂಟ ನೋವು ಕೂಡ ಬರುವುದಿದೆ. ಹಾಗಾಗಿ ಕಡಿಮೆ ಎತ್ತರದ ಹೀಲ್ಸ್ ಖರೀದಿ ಮಾಡಿ. ಇದು ನಿಮ್ಮ ಪಾದಗಳಿಗೆ ಆರಾಮದಾಯಕವಾಗಿರುತ್ತದೆ. ಪಾರ್ಟಿ ಅಥವಾ ಸಮಾರಂಭಗಳಲ್ಲಿ ಹೀಲ್ಸ್ ಧರಿಸಬೇಕು ಎನ್ನುವವರು ಹೀಲ್ಸ್ ಬೂಟ್ ಧರಿಸುವುದು ಒಳ್ಳೆಯದು.

ಹೀಲ್ಸ್ ಸೈಜ್ ಬಗ್ಗೆ ಇರಲಿ ಗಮನ : ಹೀಲ್ಸ್ ಖರೀದಿಸುವ ವೇಳೆ ಎತ್ತರಕ್ಕೆ ಮಾತ್ರವಲ್ಲ ಸೈಜ್ ಗೂ ಗಮನ ನೀಡ್ಬೇಕು. ಅತಿ ಬಿಗಿಯಾದ ಹಾಗೂ ಅತಿ ಸಡಿಲವಾದ ಹೀಲ್ಸ್ ನಿಮಗೆ ಸಮಸ್ಯೆ ತರುತ್ತದೆ. ಅತಿ ಬಿಗಿಯಾದ ಹೀಲ್ಸ್ ಧರಿಸುವುದ್ರಿಂದ ಕಾಲು ನೋವು ಹೆಚ್ಚಾಗಬಹುದು. ಹಾಗೆಯೇ ಅತಿ ಸಡಿಲವಾದ ಹೀಲ್ಸ್ ಧರಿಸಿದ್ರೆ ಓಡಾಡೋದು ಕಷ್ಟವಾಗುತ್ತದೆ. ಹಾಗಾಗಿ ನೀವು ನಿಮ್ಮ ಪಾದದ ಗಾತ್ರಕ್ಕೆ ಸರಿ ಹೊಂದುವ ಹೀಲ್ಸ್ ಖರೀದಿ ಮಾಡಿ.

ಅನಿರೀಕ್ಷಿತವಾಗಿ ಗರ್ಭಧಾರಣೆಯ ಪರೀಕ್ಷೆ POSITIVE ಬಂದರೆ ಸಂಗಾತಿಗೆ ಹೇಗೆ ತಿಳಿಸುತ್ತೀರಾ?

ಹೀಲ್ಸ್ ಅಲ್ಲ ನಿಮ್ಮ ನಿಲ್ಲುವ ಭಂಗಿ ಕಾರಣವಾಗಿರಬಹುದು ಪರೀಕ್ಷಿಸಿ : ತುಂಬಾ ಸಮಯ ಒಂದೇ ಕಡೆ ನಿಲ್ಲುವುದ್ರಿಂದಲೂ ಕಾಲು ನೋವು ಬರುತ್ತದೆ. ಹಾಗೆಯೇ ನೀವು ಯಾವ ಭಂಗಿಯಲ್ಲಿ ನಿಲ್ಲುತ್ತೀರಿ ಎಂಬುದು ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ನೀವು ಸರಿಯಾದ ಭಂಗಿಯಲ್ಲಿ ನಿಲ್ಲದೆ ಹೋದ್ರೆ ನಿಮ್ಮ ಕಾಲು ನೋಯುವುದು ಸಹಜ. ಹಾಗಾಗಿ ಹೀಲ್ಸ್ ಧರಿಸಿ ತುಂಬ ಸಮಯ ನಿಲ್ಲುತ್ತೀರಿ ಎಂದಾದ್ರೆ ನಿಲ್ಲುವ ಭಂಗಿ ಬಗ್ಗೆ ಗಮನವಿರಲಿ.

ಪಾದದ ಸೆಳೆತಕ್ಕೆ ಮದ್ದು : ಹೀಲ್ಸ್ ಧರಿಸಿದ ನಂತ್ರ ನಿಮ್ಮ ಪಾದ, ಕಾಲಿನಲ್ಲಿ ನೋವು ಕಾಣಿಸಿಕೊಳ್ತಿದೆ ಎಂದಾದ್ರೆ ನೀವು ಆಹಾರದಲ್ಲಿ ಬದಲಾವಣೆ ತರಬೇಕು. ಹೆಚ್ಚು ಖನಿಜಾಂಶವಿರುವ ಆಹಾರ ಸೇವನೆ ಮಾಡ್ಬೇಕು. ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರವನ್ನು ತಿನ್ನಬೇಕು. ಬಾಳೆಹಣ್ಣು,ಕಿತ್ತಳೆ ಹಣ್ಣಿನ ರಸ ಸೇವನೆ ಕೂಡ ಒಳ್ಳೆಯದು. ಸಾಕಷ್ಟು ನೀರುವ ಸೇವನೆ ಮಾಡ್ಬೇಕು.

ಹೆಣ್ಣಿಗಿಂತಲೂ ಗಂಡಿಗೇ ಸೌಂದರ್ಯ ಪ್ರಜ್ಞೆ ಹೆಚ್ಚು, ಸರ್ಜರಿ ಮಾಡಿಸಿಕೊಳ್ಳೋದು ಹೆಚ್ಚು

ಹೀಲ್ಸ್ ನಿಮ್ಮ ಕಾಲಿಗೆ ಗಾಯಮಾಡಬಾರದು ಎಂದಾದ್ರೆ ನೀವು ಹೀಲ್ಸ್ ಧರಿಸುವ ಮುನ್ನ ಕಾಲನ್ನು ಒಣಗಿಸಿ ನಂತ್ರ ಧರಿಸಿ. ಒಂದ್ವೇಳೆ ಹೀಲ್ಸ್ ನಿಮ್ಮ ಕಾಲಿಗೆ ಗಾಯ ಮಾಡ್ತಿದೆ ಎಂದಾದ್ರೆ ಮೊದಲು ಲಿಪ್ ಬಾಮ್ ಅನ್ವಯಿಸಿ, ನಂತ್ರ ಹೀಲ್ಸ್ ಧರಿಸಿ.
 

Latest Videos
Follow Us:
Download App:
  • android
  • ios