ಪ್ರತಿ ದಿನ ಆರ್ ಒ ನೀರು ಕುಡಿಯುವವರಿದ್ದಾರೆ. ಖನಿಜವಿಲ್ಲದ ಈ ನೀರು ನಮ್ಮ ಆರೋಗ್ಯ ಹಾಳು ಮಾಡುತ್ತಾ? ಈ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ. ನಿಮ್ಮ ಮನೆಯಲ್ಲೂ ಆರ್ ಒ ನೀರು ಕುಡಿಯುತ್ತಿದ್ದರೆ ತಪ್ಪದೇ ಇದನ್ನು ಓದಿ.
ಆರೋಗ್ಯವಾಗಿರಲು ಶುದ್ಧ ನೀರು ಕುಡಿಯೋ ಅಗತ್ಯ ಎಲ್ಲರಿಗೂ ಗೊತ್ತು. ಇದೇ ಕಾರಣಕ್ಕೆ ಬಹುತೇಕ ಎಲ್ಲರ ಮನೆಗಳಲ್ಲಿ RO ವಾಟರ್ ಪ್ಯೂರಿಫೈಯರ್ ಸಾಮಾನ್ಯವಾಗಿದೆ. ಪ್ರತಿದಿನ RO ನೀರು ಕುಡಿಯೋದು ಎಷ್ಟು ಸರಿ? RO ನೀರನ್ನು ಪ್ರತಿ ದಿನ ಕುಡಿಯುತ್ತಿದ್ರೆ ಏನಾಗುತ್ತೆ ಎನ್ನುವ ಪ್ರಶ್ನೆ ಬರೋದು ಸಾಮಾನ್ಯ. ಖನಿಜ ಇಲ್ಲದ ನೀರು ಕುಡಿಯೋದ್ರಿಂದ ಅಡ್ಡಪರಿಣಾಮವಾಗುತ್ತೆ ಅಂತ ಅನೇಕರು ನಂಬ್ತಾರೆ.
ಆರೋಗ್ಯ ಹಾಳು ಮಾಡುತ್ತಾ ಆರ್ ಒ ವಾಟರ್ ?
ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು, 10 ವರ್ಷಗಳಿಂದ ರಿವರ್ಸ್ ಆಸ್ಮೋಸಿಸ್ ನೀರನ್ನು ಕುಡಿಯುತ್ತಿದ್ದೆ. ಯಾವುದೇ ಖನಿಜ ಸೇರ್ಸಿಲ್ಲ. ಇದ್ರಿಂದ ನನ್ನ ಆರೋಗ್ಯ ಹಾಳಾಗುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ತಜ್ಞರು ಉತ್ತರ ನೀಡಿದ್ದಾರೆ. RO ನೀರಿನ ಕೊಳಕನ್ನು ತೆಗೆಯುತ್ತದೆ. ಅದ್ರ ಜೊತೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳನ್ನು ಸಹ ತೆಗೆದುಹಾಕುತ್ತದೆ. ಹಾಗಂತ, ಹೆಚ್ಚಿನ ಜನರಿಗೆ ಕುಡಿಯುವ ನೀರು ಪೋಷಕಾಂಶಗಳ ಪ್ರಾಥಮಿಕ ಮೂಲವಲ್ಲ ಎನ್ನುತ್ತಾರೆ ತಜ್ಞರು.
ಬೆಳಗ್ಗೆ ಎದ್ದ ಕೂಡಲೇ ಹೀಗೆ ಆಗುತ್ತಾ?, ನಿರ್ಲಕ್ಷಿಸ್ಬೇಡಿ.. ಅದು ಈ 5 ಅಪಾಯಕಾರಿ ಕಾಯಿಲೆಯ ಮುನ್ಸೂಚನೆ!
• ಆರ್ ಒ ನೀರನ್ನು ಕುಡಿಯುವುದಕ್ಕಿಂತ ಕಳಪೆ ಆಹಾರದಿಂದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕೊರತೆ ಸಂಭವಿಸುವ ಸಾಧ್ಯತೆ ಹೆಚ್ಚು. ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇರುವಂತೆ ನೋಡ್ಕೊಳ್ಬೇಕು.
• ಆರ್ ಒ ನೀರಿನ ಸೇವನೆ ಮಾಡ್ತಿರುವ ನೀವು ಡೈರಿ ಉತ್ಪನ್ನ, ದ್ವಿದಳ ಧಾನ್ಯಗಳು, ಡ್ರೈ ಫ್ರೂಟ್ಸ್, ತರಕಾರಿ ಸೇರಿದ ಸಮತೋಲಿತ ಆಹಾರ ತೆಗೆದುಕೊಳ್ತಿದ್ದರೆ ನಿಮಗೆ ಯಾವುದೇ ಖನಿಜದ ಕೊರತೆ ಆಗೋದಿಲ್ಲ.
• ಅನೇಕ ವರ್ಷಗಳಿಂದ ನೀವು ಆರ್ ಒ ನೀರು ಕುಡಿಯುತ್ತಿದ್ರೆ ನಿಮ್ಮ ದೇಹದಲ್ಲಿರುವ ಕ್ಯಾಲ್ಸಿಯಂ ಚೆಕ್ ಮಾಡಿ. ಕ್ಯಾಲ್ಸಿಯಂ ಕಡಿಮೆ ಇದ್ದಲ್ಲಿ ಕ್ಯಾಲ್ಸಿಯಂ ಭರಿತ ಆಹಾರ, ಸೊಪ್ಪು, ಡ್ರೈ ಫ್ರೂಟ್ಸ್, ಉತ್ತಮ ಗುಣಮಟ್ಟದ ಪ್ರೋಟೀನ್ ಇರುವ ಆಹಾರ ತೆಗೆದುಕೊಳ್ಳಿ.
ಕಾಡುವ ಸಮಸ್ಯೆ ಏನು?
ನಿಮ್ಮ ಆಹಾರದಲ್ಲೂ ಖನಿಜ ಕೊರತೆ ಇದೆ, ನೀರಿನಲ್ಲೂ ಕೊರತೆ ಇದೆ ಎಂದಾಗ ಆರೋಗ್ಯ ಸಮಸ್ಯೆ ಕಾಡುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಸಿಕ್ಕಿಲ್ಲ ಎಂದಾಗ ಸ್ನಾಯು ನೋವಿ ಕಾಡುತ್ತದೆ. ಮೂಳೆಗಳು ದುರ್ಬಲಗೊಳ್ಳುತ್ತವೆ. ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಇದ್ರಿಂದ ಆಯಾಸ ಹೆಚ್ಚಾಗುತ್ತದೆ. ಹೃದಯದ ಲಯ ಮತ್ತು ರಕ್ತದೊತ್ತಡದಲ್ಲಿ ಅಸಮತೋಲನ ಉಂಟಾಗಬಹುದು. ಮೂಳೆಗಳು ಮತ್ತು ಹಲ್ಲುಗಳು ದುರ್ಬಲಗೊಳ್ಳುವುದು. ಮಕ್ಕಳು, ಮಹಿಳೆಯರು ಮತ್ತು ವೃದ್ಧರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಪದೇ ಪದೇ ನೀರು ಕುಡಿಯುತ್ತಿದ್ರೂ ಬಾಯಾರಿಕೆ ಆಗ್ತಿದೆ ಅಂದ್ರೆ ಖನಿಜದ ಕೊರತೆ ಇದೆ ಎಂದರ್ಥ. ಸೋಡಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಅಗತ್ಯ ಖನಿಜ ದೇಹಕ್ಕೆ ಸಿಗದಿದ್ದಾಗ ಬಾಯಾರಿಕೆ ಹೆಚ್ಚಾಗುತ್ತದೆ.
ಮೊಡವೆಗಳೇ ನಿಮ್ಮ ಚಿಂತೆಯೇ? ಹಾಗಿದ್ರೆ ಇಲ್ಲಿದೆ ನೋಡಿ 7 ಸಿಂಪಲ್ ಮನೆಮದ್ದುಗಳು
ಯಾವಾಗ ಆರ್ ಒ ಅಗತ್ಯ?
ಎಲ್ಲರೂ, ಎಲ್ಲ ಪ್ರದೇಶದಲ್ಲೀ ಆರ್ ಒ ನೀರು ಕುಡಿಯಬೇಕಾಗಿಲ್ಲ. ಮೊದಲು ನಿಮ್ಮ ಪ್ರದೇಶದಲ್ಲಿರುವ ನೀರಿನ TDS ಮಟ್ಟ ಪರೀಕ್ಷೆ ಮಾಡಿ. ಟಿಡಿಎಸ್ 300 ಕ್ಕಿಂತ ಹೆಚ್ಚಿದ್ದರೆ ಮಾತ್ರ ನೀವು ಮನೆಯಲ್ಲಿ RO ಬಳಸಿ. ಟಿಡಿಎಸ್ ಮೀಟರ್ಗಳು ಸುಲಭವಾಗಿ ಸಿಗುತ್ತವೆ. ಅದರ ಮೂಲಕ ನೀವು ಮನೆಗೆ ಬರುವ ನೀರನ್ನು ಪರೀಕ್ಷೆ ಮಾಡ್ಬೇಕು. ನೀರಿನ TDS 300 ಕ್ಕಿಂತ ಕಡಿಮೆಯಿದ್ದರೆ, ನೀವು RO ಬದಲಿಗೆ ಸೆರಾಮಿಕ್ ಫಿಲ್ಟರ್ ಬಳಸಬಹುದು.


