ಮುಟ್ಟಿನ ಕುರಿತ ಮೌನ ಮುರಿದ ಫಸ್ಟ್ ಪೀರಿಯೆಡ್ ಪಾರ್ಟಿ! ಕಣ್ತೆರೆಸೋ ಈ ಪ್ರೋಗ್ರಾಂ ನೋಡಿ
ಮಹಾರಾಷ್ಟ್ರದ ಉಲ್ಹಾಸನಗರದ ಶಾಲೆಯಲ್ಲಿ ಅದೊಂದು ಮರೆಯಲಾಗದ ದಿನ. ಇತ್ತೀಚೆಗೆ ಋತುಮತಿಯರಾದ 32 ಮಂದಿ ಹುಡುಗಿಯರಿಗೂ ಅವರ ಕ್ಲಾಸ್‌ಮೇಟ್ ಹುಡುಗರಿಗೂ ಜೀವನದಲ್ಲಿ ಅರ್ಥಪೂರ್ಣ ಪಾಠ ಕಲಿಸಿದ, 'ಫಸ್ಟ್ ಪೀರಿಯಡ್ ಪಾರ್ಟಿ' ಆಚರಿಸಿದ ದಿನ. ಏನಿದು? ತಿಳಿಯೋಣ ಬನ್ನಿ.
ಮುಟ್ಟಾಗುವುದು ಅಥವಾ ಪೀರಿಯೆಡ್ಸ್ ಅಂದ್ರೇನು ಅಂತ ಸುಶಿಕ್ಷಿತರಾದ, ನಗರವಾಸಿಗಳಾದ ಅಪ್ಪ- ಅಮ್ಮ ತಮ್ಮ ಹೆಣ್ಣು ಮಕ್ಕಳಿಗೆ ಹೇಳಿಕೊಟ್ಟಿರಬಹುದು. ಆದರೆ ಇಂಥವರ ಸಂಖ್ಯೆ ಭಾರತದಲ್ಲಿ ಹತ್ತೋ ಹದಿನೈದೋ ಪರ್ಸೆಂಟ್ ಮಾತ್ರ ಇರಬಹುದು. ಉಳಿದವರಿಗೆ, ಪೀರಿಯೆಡ್ ಆಗ್ತಾ ಇರೋ ಹುಡುಗಿಯರಿಗೇ ಅದೇನಂತ ಗೊತ್ತಿಲ್ಲದ ಪರಿಸ್ಥಿತಿ ಭಾರತದ ಹೆಚ್ಚಿನ ಹಳ್ಳಿಗಳಲ್ಲಿ, ಮನೆಗಳಲ್ಲಿ ಇದೆ. ಇಲ್ಲಿ ಅದೇನು ಅಂತ ಹೇಳಿಕೊಡೋರೂ ಇಲ್ಲ. ಹೆತ್ತವರಿಗೆ ಪುರುಸೊತ್ತಿಲ್ಲ. ಶಿಕ್ಷಕ- ಶಿಕ್ಷಕಿಯರಿಗೆ ಆಸಕ್ತಿಯಿಲ್ಲ. ಹೀಗಾಗಿ ಮದುವೆಯ ವಯಸ್ಸಗೆ ಬಂದರೂ ಈ ಬಗ್ಗೆ ಅಜ್ಞಾನ ಇಟ್ಟುಕೊಂಡಿರುವ ಹುಡುಗ- ಹುಡುಗಿಯರೇ ಹೆಚ್ಚು. ಹುಡುಗಿಯರ ಜೊತೆಗೆ ಹುಡುಗರಿಗೂ ಈ ಬಗ್ಗೆ ಶಿಕ್ಷಣ ಕೊಡಬೇಕು ಎಂಬ ಅರಿವು ನಮ್ಮಲ್ಲಿ ಕಡಿಮೆ.
ಇಂಥ ಹೊತ್ತಿನಲ್ಲಿ ಮಹಾರಾಷ್ಟ್ರದ ಒಂದು ಕಡೆ ʼಫಸ್ಟ್ ಪೀರಿಯೆಡ್ ಪಾರ್ಟಿʼ ಮಾಡಲಾಗ್ತಿದೆ. ಮಹಾರಾಷ್ಟ್ರದ ಉಲ್ಹಾಸನಗರ ಎಂಬ ಗ್ರಾಮದಲ್ಲಿ ಎಸ್‌ಎಂಎಸ್ ಠಾಕೂರ್ ವಿದ್ಯಾಲಯ ಶಾಲೆಗೆ ಬರ್ತಾ ಇದ್ದ ಸುಮಾರು 32 ಮಂದಿ ಹುಡುಗಿಯರು ಈ ವರ್ಷ ಋತುಮತಿಯರಾದರು. ಇವರೆಲ್ಲಾ ಬಡ ಕುಟುಂಬದವರು. ಮಿಲ್ಲುಗಳಲ್ಲಿ ಬಟ್ಟೆ ನೇಯ್ದು ತಮ್ಮ ಹೆತ್ತವರಿಗೆ ನೆರವಾಗುತ್ತಿದ್ದವರು. ಆದ್ರೆ ಇವರಿಗೆ ಮುಟ್ಟಾಗುವುದು ಎಂದರೆ ಏನೆಂದರೆ ಏನೂ ಗೊತ್ತಿರಲಿಲ್ಲ. ಆಗ ಎಂಟರ್ ಆದವರೇ ಸಿದ್ದೇಶ್ ಲೋಖರೆ ಎಂಬ ಡಿಜಿಟಲ್ ಕ್ರಿಯೇಟರ್. ಅವರು ಒಂದಿಷ್ಟು ಗೆಳೆಯ ಗೆಳತಿಯರನ್ನು ಸೇರಿಸಿಕೊಂಡು ಈ ಬಗ್ಗೆ ಹುಡುಗ- ಹುಡುಗಿಯರನ್ನೂ ಜೊತೆಯಾಗಿ ಎಜುಕೇಟ್ ಮಾಡುವ, ಅದರ ಬಗ್ಗೆ ಇರೋ ಮೂಢನಂಬಿಕೆಗಳನ್ನು ಬ್ರೇಕ್ ಮಾಡುವ ಕೆಲಸ ಮಾಡಿದರು.
ಅವರು ಶಾಲೆಯಲ್ಲಿ ʼಫಸ್ಟ್ ಪೀರಿಯಡ್ ಪಾರ್ಟಿʼ ಹಮ್ಮಿಕೊಂಡರು. ಹುಡುಗರನ್ನೂ ಹುಡುಗಿಯರನ್ನೂ ಒಟ್ಟಿಗೆ ಕೂರಿಸಿ ಪೀರಿಯಡ್ಸ್ ಅಂದ್ರೇನು ಅಂತ ವಿವರಿಸಿದರು. ಹೆಣ್ಣಿನ ದೇಹದ ಪ್ರತಿಕೃತಿ ಮುಂದಿಟ್ಟುಕೊಂಡು ಪಾಠ ಹೇಳಿದರು. ಮುಟ್ಟಿನ ಬಗ್ಗೆ ಇರೋ ಅಪಂಬಿಕೆಗಳನ್ನೆಲ್ಲ ತೊಡೆದುಹಾಕಿದರು. ಇದೇ ಸಂದರ್ಭದಲ್ಲಿ ಹುಡುಗರ ಬಾಡಿಯ ಬೆಳವಣಿಗೆಯ ಬಗ್ಗೆ ಕೂಡ ಹುಡುಗಿಯರಿಗೆ ವಿವರಿಸಲಾಯ್ತು. ಇದನ್ನೆಲ್ಲ ಮನೋರಂಜಕವಾಗಿ, ತಮಾಷೆಯಾಗಿ, ಮಕ್ಕಳಿಗೆ ಇಷ್ಟವಾಗುವಂತೆ ಮಾಡಲಾಯಿತು ಎಂಬುದು ಮುಖ್ಯ.
ಮಹಾಭಾರತ, ರಾಮಾಯಣದಲ್ಲಿ ಓದಿದ್ದು ಕೇಳಿದ್ದು ನಿಜವಾಯ್ತು, ಸರ್ಜರಿ ಮೂಲಕ ವಿಶ್ವಕ್ಕೆ ಅಚ್ಚರಿ ನೀಡಿದ ಚೀನಾ!
ಅಂದು ಕ್ಲಾಸಿನ ಹುಡುಗರ ಕೈಯಲ್ಲೇ ಮೆಡಿಕಲ್‌ಗಳಿಂದ ಹುಡುಗಿಯರಿಗಾಗಿ ಪ್ಯಾಡ್‌ಗಳನ್ನು ತರಿಸಲಾಯ್ತು. ಕೆಲವರು ಅದೇ ಮೊದಲ ಬಾರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೋಡುತ್ತಿದ್ದರು! ನಂತರ ಕೇಕ್ ಕೂಡ ತರಿಸಲಾಯ್ತು. ಕೇಕ್ ಕಟ್ ಮಾಡಿ, ಹುಡುಗಿಯರಿಗೆ ವಿಶ್ ಮಾಡಿ ಹುಡುಗರು ಫಸ್ಟ್ ಪೀರಿಯಡ್ ಪಾರ್ಟಿ ಆಚರಿಸಿದರು. ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸೋದು ಹೇಗೆ ಅಂತ ಎಲ್ಲರಿಗೂ ಪ್ರಾತ್ಯಕ್ಷಿಕೆ ತೋರಿಸಲಾಯ್ತು. ಹುಡುಗರೇ ಹುಡುಗಿಯರಿಗೆ ಆರತಿ ಸಹ ಮಾಡಿದರು! ಹುಡುಗಿಯರ ಜೀವನದಲ್ಲಿ ಎಂದು ಮರೆಯದ ದಿನವಾಗಿ ಅದು ದಾಖಲಾಯಿತು. ಬಹುಶಃ ಹುಡುಗರಿಗೆ ಸಹ.
ಹೆಣ್ಮಕ್ಕಳು ರಾತ್ರಿ ಬ್ರಾ ಧರಿಸಿ ಮಲಗಲೇಬಾರದು, ಈ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿಬಿಡಿ
ಈ ಎಲ್ಲ ಚಟುವಟಿಕೆಗಳನ್ನು ಇನ್‌ಸ್ಟಗ್ರಾಂನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಲಕ್ಷಾಂತರ ಮಂದಿ ಈ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ಇಂಥದ್ದು ಪ್ರತೀ ಗ್ರಾಮದಲ್ಲೂ ನಡೆಯಬೇಕು ಎಂದಿದ್ದಾರೆ. ಋತಿಮತಿಯರಾಗುವ ಹೊತ್ತಿಗೆ ಶುಚಿತ್ವ, ಆರೋಗ್ಯ ಕಾಪಾಡಿಕೊಳ್ಳುವ ರೀತಿಯನ್ನು ಪ್ರತೀ ಹುಡುಗಿಯೂ ಕಲಿಯಬೇಕು. ಆ ಹೊತ್ತಿನಲ್ಲಿ ಹುಡುಗಿಯರ ಮನಸ್ಥಿತಿ ಹೇಗಿರುತ್ತೆ ಅನ್ನೋದು ಹುಡುಗರಿಗೂ ಗೊತ್ತಿರಬೇಕು ಎಂದು ನೆಟಿಜನ್‌ಗಳು ಹೇಳಿದ್ದಾರೆ. ಹುಡುಗಿಯರಿಗೆ ಮಾತ್ರವಲ್ಲ ಹುಡುಗರಿಗೂ ಜೊತೆಯಾಗಿ ಒಂದು ಹಬ್ಬದಂತೆ ಇದನ್ನು ಆಚರಿಸಿರೋದು ನೆಕ್ಸ್ಟ್ ಲೆವೆಲ್. ಇಂಥದು ಇಡೀ ಭಾರತದಲ್ಲಿ ನಡೀಬೇಕು ಎಂದು ಮೆಚ್ಚಿಕೊಂಡಿದ್ದಾರೆ.