ಮಹಾಭಾರತ, ರಾಮಾಯಣದಲ್ಲಿ ಓದಿದ್ದು ಕೇಳಿದ್ದು ನಿಜವಾಯ್ತು, ಸರ್ಜರಿ ಮೂಲಕ ವಿಶ್ವಕ್ಕೆ ಅಚ್ಚರಿ ನೀಡಿದ ಚೀನಾ!

ಚೀನಾ ಸ್ಯಾಟಲೈಟ್ ಮತ್ತು ರೋಬೋಟ್ ತಂತ್ರಜ್ಞಾನವನ್ನು ಬಳಸಿಕೊಂಡು 1.5 ಲಕ್ಷ ಕಿ.ಮೀ ದೂರದಿಂದ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದೆ. ಈ ತಂತ್ರಜ್ಞಾನ ಯುದ್ಧಕಾಲದಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡಲು ಸಹಾಯಕವಾಗಲಿದೆ.

Mahabharata incident proved to be true China achieves breakthrough worlds first surgery via satellite san

ನವದೆಹಲಿ (ಜ.4): ಮಹಾಭಾರತ ಹಾಗೂ ರಾಮಾಯಣದಲ್ಲಿ ಶಸ್ತ್ರಚಿಕಿತ್ಸೆಯ ಸಾಕಷ್ಟು ಘಟನೆಗಳು ಉಲ್ಲೇಖವಾಗಿದ್ದವು. ಇಲ್ಲಯವರೆಗೂ ಅದು ಪೌರಾಣಿಕ ಕಥೆಗಳು ಮಾತ್ರವೇ ಎನ್ನುತ್ತಿದ್ದ ಜನಕ್ಕೆ ಈಗ ಅಚ್ಚರಿ ಎನ್ನುವಂತೆ ಚೀನಾ ಸ್ಯಾಟಲೈಟ್‌ ಮೂಲಕ ವಿಶ್ವದ ಮೊಟ್ಟಮೊದಲ ಸರ್ಜರಿ ನಡೆಸಿ ಯಶಸ್ವಿಯಾಗಿದೆ. ಮಹಾಭಾರತ ಹಾಗೂ ರಾಮಾಯಣದಲ್ಲಾದ ಯುದ್ಧದ ವೇಳೆ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ, ಕಾಲು ಕಳೆದುಕೊಂಡ ವ್ಯಕ್ತಿಗಳಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು ಎನ್ನುವ ವಿವರಗಳಿವೆ. ಪುರಾತನ ಭಾರತದಲ್ಲಿ ಮೆಡಿಸಿನ್‌ ಅತ್ಯಂತ ಉನ್ನತವಾಗಿತ್ತು ಅನ್ನೋ ವಿವರಗಳೂ ಇವೆ. ಮಹಾಭಾರತದ ಪ್ರಕಾರ ಅರ್ಜುನನ್ನು ಎರಡು ಬಾರಿ ಶಸ್ತ್ರಚಿಕಿತ್ಸೆಯ ಮೂಲಕೇ ಬದುಕಿಸಲಾಗಿತ್ತು. ರಾಮಾಯಣದಲ್ಲಿ ರಾವಣನ ಆಸ್ಥಾನ ವೈದ್ಯ, ಯುದ್ಧದ ವೇಳೆ ಲಕ್ಷ್ಮಣನ ಆರೈಕೆ ಮಾಡಿದ್ದ. ಇನ್ನು ಗಣೇಶನಿಗೆ ಆನೆಯ ರುಂಡವನ್ನೂ ಸೇರಿಸಿದ್ದನ್ನೂ ಇದಕ್ಕೆ ಸೇರಿಸಬಹುದು. ಈಗ ಈ ಸಾಹಸವನ್ನು ಚೀನಾ ಮಾಡಿದೆ.

ಹೌದು, ಚೀನಾ ಈಗ ಸ್ಯಾಟಲೈಟ್‌ ಹಾಗೂ ರೋಬೋಟ್‌ ಟೆಕ್ನಾಲಜಿ ಮೂಲಕ 1.5 ಲಕ್ಷ ಕಿಲೋಮೀಟರ್‌ (ಪ್ರತಿ ಸರ್ಜಕಲ್‌ ಮೂವ್‌ಮೆಂಟ್‌ನ ಟು-ವೇ ಡಿಸ್ಟೆನ್ಸ್‌ ಅಂದಾಜು) ದೂರದಿಂದ ಆಪರೇಷನ್‌ ಮಾಡಲು ಯಶಸ್ವಿಯಾಗಿದೆ. ಯುದ್ಧಕಾಲದ ವೇಳೆ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ಅಥವಾ ಆಪರೇಷನ್‌ ಮಾಡಲು ಈ ತಂತ್ರಜ್ಞಾನ ಬಳಕೆ ಆಗಲಿದೆ.ಚೀನಾದ ವೈದ್ಯರು ತಮ್ಮ ಆಪ್ಸಟರ್‌-6ಡಿ ಬ್ರಾಡ್‌ಬ್ಯಾಂಡ್‌ ಕಮ್ಯುನಿಕೇಷನ್‌ ಸ್ಯಾಟಲೈಟ್‌ ಹಾಗೂ ಸರ್ಜಿಕಲ್‌ ರೋಬೋಟ್‌ ಸಿಸ್ಟಮ್‌ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು ಮಾಡಿ ಯಶಸ್ವಿಯಾಗಿದೆ. ಇದು ವೈದ್ಯಕೀಯ ಹಾಗೂ ತಂತ್ರಜ್ಞಾನ ಜಗತ್ತಿನ ದೊಡ್ಡ ಯಶಸ್ಸು ಎಂದೇ ಹೇಳಲಾಗುತ್ತಿದೆ.

ಐದು ಆಪರೇಷನ್‌ಗಳನ್ನು ಟಿಬೆಟ್‌, ಯುನಾನ್‌ ಹಾಗೂ ಹೈನಾನ್‌ ಪ್ರಾಂತ್ಯಗಳಲ್ಲಿ ಮಾಡಲಾಗಿದೆ. ಭೂಮಿಯಿಂದ 36 ಸಾವಿರ ಕಿಲೋಮೀಟರ್‌ ಎತ್ತರದಲ್ಲಿರುವ ಆಪ್ಸಟರ್‌-6ಡಿ ಬ್ರಾಡ್‌ಬ್ಯಾಂಡ್‌ ಕಮ್ಯುನಿಕೇಷನ್‌ ಸ್ಯಾಟಲೈಟ್‌ಅನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ. ಈ ಎಲ್ಲಾ ಸರ್ಜರಿಗಳು ಯಶಸ್ವಿಯಾಗಿದ್ದು,  ಎಲ್ಲಾ ರೋಗಿಗಳು ಉತ್ತಮ ಚೇತರಿಕೆ ಕಂಡು ಮರುದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಕೂಡ ಆಗಿದ್ದಾರೆ ಎಂದು ಚೀನಾದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ತಿಳಿಸಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿ ಜನರಲ್ ಆಸ್ಪತ್ರೆಯ ವೈದ್ಯರು ಟಿಬೆಟ್‌ನ ಲಾಸಾ, ಯುನ್ನಾನ್‌ನ ಡಾಲಿ ಮತ್ತು ಹೈನಾನ್‌ನ ಸಾನ್ಯಾದಿಂದ ದೂರದಿಂದಲೇ ಐದು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದರು. ಬೀಜಿಂಗ್‌ನಲ್ಲಿರುವ ರೋಗಿಗಳು ತಮ್ಮ ಯಕೃತ್ತು, ಪಿತ್ತಕೋಶ ಅಥವಾ ಮೇದೋಜ್ಜೀರಕ ಗ್ರಂಥಿಯ ಮೇಲೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ರೊಬೊಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯ ಸಹಾಯದಿಂದ ಶಸ್ತ್ರಚಿಕಿತ್ಸಗೆ ಒಳಗಾದರು.

ಚೀನಾದ ಈ ಯಶಸ್ಸು, ಅತ್ಯಂತ ಕುಗ್ರಾಮ ಹಾಗೂ ಕಠಿಣ ಪರಿಸ್ಥಿತಿಯಲ್ಲೂ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳನ್ನು ತಲುಪಿಸಲು ಸಾಧ್ಯವಾಗುವಂಥ ಮೈಲಿಗಲ್ಲು ಎಂದೇ ಬಿಂಬಿಸಲಾಗಿದೆ. ಅತ್ಯಂತ ಸಂಕೀರ್ಣ ಹಾಗೂ ಅಪಾಯಕಾರಿ ಕಾಯಿಲೆಗಳಿಗೂ ಸುಲಭವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ.

ನಿಗೂಢ ವೈರಾಣು ಆರ್ಭಟ, ಜಗತ್ತಿಗೇ ಕಂಟಕ! ಜಪಾನ್‌ನಲ್ಲಿ 7 ಲಕ್ಷ ಮಂದಿಗೆ ಸೋಂಕು?

 

ಏನಿದು ಅಪ್‌ಸ್ಟಾರ್-6ಡಿ?: 2020ರಲ್ಲಿ ಉಡಾವಣೆಯಾದ ಆಪ್‌ಸ್ಟಾರ್-6ಡಿ ಉಪಗ್ರಹ ಈ ಸಾಧನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಪ್ರತಿ ಸೆಕೆಂಡಿಗೆ 50 ಗಿಗಾಬಿಟ್‌ಗಳನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು 15 ವರ್ಷಗಳ ಜೀವಿತಾವಧಿಯನ್ನು ಇದು ಹೊಂದಿದೆ.. ಇದು ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತ ವಿಶೇಷವಾಗಿ ವಾಯು ಮತ್ತು ಸಮುದ್ರ ಮಾರ್ಗಗಳಿಗೆ ವ್ಯಾಪಕವಾದ ವ್ಯಾಪ್ತಿಯನ್ನು ಒದಗಿಸುತ್ತದೆ. ವಿಮಾನ, ಹಡಗುಗಳು ಮತ್ತು ದೂರದ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ನೀಡಲು ವಿನ್ಯಾಸಗೊಳಿಸಲಾದ ಮೂರರಿಂದ ನಾಲ್ಕು ಭೂಸ್ಥಿರ ಉಪಗ್ರಹಗಳ ಯೋಜಿತ ಸಮೂಹದಲ್ಲಿ Apstar-6D ಮೊದಲನೆಯದಾಗಿದೆ.

ಚೀನಾದಲ್ಲಿ HMPV virus ದಾಳಿ; ಏನು ಮಾಡ್ಬೇಕು, ಏನ್‌ ಮಾಡ್ಬಾರದು ಇಲ್ಲಿದೆ ಸಂಪೂರ್ಣ ವಿವರ.

ನವೆಂಬರ್‌ನಲ್ಲಿ, ದೇಶದ ಮೊದಲ ಆಲ್-ಎಲೆಕ್ಟ್ರಿಕ್ ಪ್ರೊಪಲ್ಷನ್ ಸಂವಹನ ಉಪಗ್ರಹವಾದ ಆಪ್‌ಸ್ಟಾರ್-6E ಅನ್ನು ಇಂಡೋನೇಷ್ಯಾಕ್ಕೆ ತಲುಪಿಸುವ ಮೂಲಕ ಚೀನಾ ತನ್ನ ಉಪಗ್ರಹ ಸಂವಹನ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದೆ.

Latest Videos
Follow Us:
Download App:
  • android
  • ios