ನವರಾತ್ರಿ ಉಪವಾಸ ಮಾಡ್ತೀರಿ ಅಂತಾದ್ರೆ ಇವನ್ನು ಫಾಲೋ ಮಾಡಿ, ಆರಾಮಾಗಿರಿ

ನವರಾತ್ರಿ ಉತ್ಸಾಹ, ಉಲ್ಲಾಸಗಳನ್ನು ನೀಡುವ ಸಮಯ. ಎಲ್ಲೆಡೆ ಸಂಭ್ರಮದ ವಾತಾವರಣ ಉಂಟಾಗುತ್ತದೆ. ಹಬ್ಬದ ಸಿಹಿತಿನಿಸುಗಳು, ಕರಿದ ತಿಂಡಿಗಳ ಜತೆಗೆ ಭರ್ಜರಿ ಭೋಜನವೂ ಇರುತ್ತದೆ. ಇವುಗಳ ನಡುವೆ ಆರೋಗ್ಯವನ್ನು ಮರೆಯುವಂತಿಲ್ಲ. ಜತೆಗೆ, ಉಪವಾಸ ಮಾಡುವವರು ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
 

Follow these tips for Navaratri fasting

ನಮ್ಮ ದೇಶದಲ್ಲಿ ನವರಾತ್ರಿ ಪ್ರಮುಖ ಹಬ್ಬ. ಸ್ತ್ರೀ ಶಕ್ತಿಗೆ ಹಿಂದು ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ. ನವರಾತ್ರಿ ಸ್ತ್ರೀ ಶಕ್ತಿಯ ಪ್ರತಿನಿಧಿಯಾಗಿರುವ “ಅಮ್ಮನವರನ್ನುʼ ದೇಶದೆಲ್ಲೆಡೆ ನಾನಾ ರೀತಿಯಲ್ಲಿ ಆರಾಧಿಸುವ ಸಮಯ. ಸ್ತ್ರೀ ಶಕ್ತಿಯನ್ನು ಆರಾಧಿಸುವ, ಪೂಜಿಸುವ ಹಬ್ಬವೇ ನವರಾತ್ರಿ. ಇದು ಒಂದಲ್ಲ, ಎರಡಲ್ಲ, ಬರೋಬ್ಬರಿ 9 ದಿನಗಳ ಕಾಲದ ಉತ್ಸವ ಮತ್ತು ಉತ್ಸಾಹ. ನವರಾತ್ರಿಯ ಆಚರಣೆಗೆ ಕೆಲವು ಪ್ರದೇಶಗಳು ಭಾರೀ ಪ್ರಸಿದ್ಧಿ ಪಡೆದಿವೆ. ಅಲ್ಲಿನ ನವರಾತ್ರಿ ಆಚರಣೆಗಳು ಅದ್ದೂರಿಯಾಗಿರುವ ಜತೆಗೆ ವಿಶಿಷ್ಟಪೂರ್ಣವಾಗಿವೆ. ನವರಾತ್ರಿಯ ಆಚರಣೆಗಳಲ್ಲಿ ನೃತ್ಯದಿಂದ ಹಿಡಿದು ಆಹಾರದವರೆಗೆ ವಿಭಿನ್ನತೆಯಿದೆ. ಉಪವಾಸ ವ್ರತಗಳೊಂದಿಗೆ ಭರ್ಜರಿ ಭೋಜನವೂ ಇದೆ. ಸಿಹಿ ತಿನಿಸುಗಳ ಜತೆಗೆ ಕಟ್ಟುನಿಟ್ಟಿನ ಪದ್ಧತಿಗಳೂ ಇವೆ. ಈ ಸಮಯದಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸುವುದು ಅತ್ಯಂತ ಅಗತ್ಯ. ಉಪವಾಸ ಆಚರಿಸುವ ಸಮಯದಲ್ಲಿ ಆರೋಗ್ಯಕರ ಆಹಾರಶೈಲಿಯನ್ನು ಅನುಸರಿಸುವುದು ಅತ್ಯಂತ ಅಗತ್ಯ. ಯಾವುದನ್ನಾದರೂ ತಿನ್ನುತ್ತಿದ್ದರೆ ಹೊಟ್ಟೆ ಕೆಟ್ಟು ವ್ರಚಾಚರಣೆಗೆ ಭಂಗ ಉಂಟಾಗಬಹುದು. ಹೀಗಾಗಿ, ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. 

•    ರುಚಿಯ (Taste) ಜತೆಗೆ ಆರೋಗ್ಯಕ್ಕೂ ಪೂರಕ (Healthy) ಆಹಾರವಿರಲಿ (Food)
ಉಪವಾಸ ಮಾಡುವ ಸಮಯದಲ್ಲಿ ಕೇವಲ ರುಚಿಯ ಬಗ್ಗೆ ಗಮನ ಹರಿಸಿದರೆ ಆರೋಗ್ಯದ ಸಮಸ್ಯೆ (Problem) ಆರಂಭವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ದುರ್ಗಾ ದೇವಿಯನ್ನು ಆರಾಧಿಸುವ ಈ ಸಮಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಾದುದು ಅತಿ ಅಗತ್ಯ. ಈ ಹಿನ್ನೆಲೆಯಲ್ಲಿ ನಿಮ್ಮ ದೇಹಕ್ಕೆ ಹೊಂದುವ ಆಹಾರಗಳನ್ನು ಮಾತ್ರವೇ ಸ್ವೀಕಾರ ಮಾಡಿ. ಹಣ್ಣುಗಳು (Fruits), ಮಖಾನ, ಕೆಂಪು ಅಕ್ಕಿಗಳ (Red Rice) ವಿವಿಧ ತಿನಿಸುಗಳನ್ನು ಮಾಡಿ ಸವಿಯಬಹುದು.

ನವರಾತ್ರಿ ಪುಣ್ಯಕಾಲದಲ್ಲಿ ಯಾವ ಆಹಾರ ಸೂಕ್ತ? ಯಾವ ಕೆಲಸವನ್ನೆಲ್ಲ ಮಾಡ್ಲೇಬಾರ್ದು ಗೊತ್ತಾ?

ಕೆಲವು ಪ್ರದೇಶಗಳಲ್ಲಿ ಪ್ರತಿದಿನವೂ ಏನಾದರೊಂದು ಸಿಹಿತಿನಿಸುಗಳನ್ನು (Sweets) ಮಾಡುವ ಪದ್ಧತಿಯಿದೆ. ನಿಮಗೆ ಮಧುಮೇಹವಿದ್ದರೆ (Diabetes) ಅವುಗಳ ಗೋಜಿಗೆ ಹೋಗಬೇಡಿ. ಕೊನೆಯ ಮೂರು ದಿನಗಳಲ್ಲಾದರೂ ಸರಿ, ಹೆಚ್ಚಿನ ಸಿಹಿ ತಿನಿಸು ನಿಮಗೆ ಬೇಡ. ಹಾಗೆಯೇ, ಉಪವಾಸದ ಸಮಯದಲ್ಲಿ ಕರಿದ (Fried) ತಿಂಡಿಗಳನ್ನು ತಿನ್ನಬೇಡಿ. ಅತಿಯಾದ ಸಕ್ಕರೆಯುಕ್ತ (Sugary) ಪದಾರ್ಥದಿಂದ ದೂರವಿರಿ. ಇದರಿಂದ ನಿಮ್ಮ ತೂಕ (Weight) ಹೆಚ್ಚಬಹುದು.

•    ಅತಿಯಾಗಿ ತಿನ್ನುವುದು (Over Eating) ಸಲ್ಲದು
ಒಂದೊಮ್ಮೆ ಉಪವಾಸ ಮಾಡದೇ ಇರುವ ಸಮಯದಲ್ಲಾದರೂ ಸರಿ, ಅತಿಯಾಗಿ ತಿನ್ನುವ ಅಭ್ಯಾಸ ಯಾವತ್ತೂ ಒಳ್ಳೆಯದಲ್ಲ. ನೀವು ಉಪವಾಸ (Fasting) ವ್ರತಾಚರಣೆ ಮಾಡುವವರಾಗಿದ್ದರೆ ಅತಿಯಾಗಿ ತಿನ್ನುವುದು ಸರಿಯಲ್ಲ. ಊಟದ ಮಧ್ಯದ ಸಮಯದಲ್ಲಿ ತೀವ್ರ ಹಸಿವಾಗುತ್ತಿದ್ದರೆ ಆ ಸಮಯದಲ್ಲಿ ಹಣ್ಣುಗಳು ಸೇರಿದಂತೆ ಸುಲಭವಾಗಿ ಪಚನವಾಗುವ ತಿನಿಸು ಸೇವಿಸಿ. ಹಾಗೂ ನಿಮ್ಮ ಆಹಾರವನ್ನು ವಿಭಜಿಸಿಕೊಂಡು ಮೂರು ಬಾರಿಯ ಬದಲು ಐದು ಬಾರಿ ಆಹಾರ ಸೇವನೆ ಮಾಡಿ. ಒಣ್ಣಹಣ್ಣುಗಳನ್ನು ಸೇವನೆ ಮಾಡುವುದು ಅತ್ಯಂತ ಒಳ್ಳೆಯದು. ಇದರಿಂದ ದೇಹದಲ್ಲಿ ಉತ್ಸಾಹ ಇರುತ್ತದೆ. 

•    ಸಂಸ್ಕರಿತ (Processed) ಆಹಾರ ಬೇಡ
ಸಂಸ್ಕರಿತ ಆಹಾರದಲ್ಲಿ ಸಿಕ್ಕಾಪಟ್ಟೆ ಪ್ರಿಸರ್ವೇಟಿವ್ಸ್‌ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಿಪ್ಸ್‌ ಮುಂತಾದ ಸಂಸ್ಕರಿತ ತಿನಿಸುಗಳಲ್ಲಿ ಉಪ್ಪು ಮತ್ತು ಕೊಬ್ಬಿನಂಶವಲ್ಲದೆ ಬೇರೆ ಏನೂ ಇರುವುದಿಲ್ಲ. ಇವುಗಳನ್ನು ಕಳಪೆ ಗುಣಮಟ್ಟದ ಎಣ್ಣೆಯಿಂದ ತಯಾರಿಸಲಾಗುತ್ತದೆ. ಇವುಗಳನ್ನು ಸೇವನೆ ಮಾಡುವುದರಿಂದ ದೇಹ ಹಗುರವಾಗಿ ಇರುವುದಿಲ್ಲ. ಅನಾರೋಗ್ಯ ಉಂಟಾಗುತ್ತದೆ. ದೈಹಿಕ ಅಸ್ವಸ್ಥತೆ ಕಂಡುಬರುತ್ತದೆ. 

ನವರಾತ್ರಿಯಲ್ಲಿ ಉಪವಾಸ ಮಾಡ್ಬೇಕಾ? ದೇಸಿ ತುಪ್ಪವನ್ನು ಹೆಚ್ಚು ಬಳಸಿದರೆ ಒಳ್ಳೇದು

•    ನೀರು ಕುಡಿಯಿರಿ (Hydrated)
ಉಪವಾಸದ ಸಮಯದಲ್ಲಿ ಹೆಚ್ಚು ನೀರು ಸೇವನೆ ಅತ್ಯಗತ್ಯ. ಬಹಳಷ್ಟು ಮಹಿಳೆಯರು (Woman) ಹೆಚ್ಚು ನೀರು ಕುಡಿಯದೇ ಆರೋಗ್ಯದಲ್ಲಿ ಸಮಸ್ಯೆ ಉಂಟುಮಾಡಿಕೊಳ್ಳುತ್ತಾರೆ. ಮಜ್ಜಿಗೆ, ಎಳೆನೀರು, ಮಿಲ್ಕ್‌ ಶೇಕ್‌, ಜ್ಯೂಸ್‌ (Juice) ಗಳನ್ನೂ ಸೇವನೆ ಮಾಡಬಹುದು. 

•    ಸರಿಯಾಗಿ ನಿದ್ರೆ (Sleep) ಮಾಡಿ
ಹಬ್ಬದ ಸಂಭ್ರಮ, ಗಡಿಬಿಡಿಯಲ್ಲಿ ನಿದ್ರೆ ಸರಿಯಾಗಿ ಮಾಡಿಲ್ಲವೆಂದರೆ, ಆಸಿಡಿಟಿ, ಗ್ಯಾಸ್ಟ್ರಿಕ್‌, ವೀಕ್‌ ನೆಸ್‌, ತಲೆನೋವು (Headache) ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. 
 

Latest Videos
Follow Us:
Download App:
  • android
  • ios