Asianet Suvarna News Asianet Suvarna News

ನವರಾತ್ರಿಯಲ್ಲಿ ಉಪವಾಸ ಮಾಡ್ಬೇಕಾ? ದೇಸಿ ತುಪ್ಪವನ್ನು ಹೆಚ್ಚು ಬಳಸಿದರೆ ಒಳ್ಳೇದು

ನವರಾತ್ರಿಯ ಸಮಯದಲ್ಲಿ ಹಲವು ವಿಶಿಷ್ಟ ಆಚರಣೆಗಳು ಪದ್ಧತಿಯಲ್ಲಿವೆ. ಈ ಸಮಯದಲ್ಲಿ ಉಪವಾಸ ಮಾಡುವುದು ಹೆಚ್ಚು. ಉಪವಾಸ ಮಾಡುವ ಸಂದರ್ಭಗಳಲ್ಲಿ ದೇಸಿ ತುಪ್ಪವನ್ನು ಬಳಕೆ ಮಾಡುವ ಮೂಲಕ ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.
 

Use desi ghee at Navaratri it will help to boost health when on fasting sum
Author
First Published Oct 4, 2023, 5:33 PM IST | Last Updated Oct 4, 2023, 5:33 PM IST

ಭಾರತದ ಬಹುದೊಡ್ಡ ಹಬ್ಬಗಳ ಉತ್ಸವ ಕಾಲ ಸಮೀಪಿಸುತ್ತಿದೆ. ಬರೋಬ್ಬರಿ 9 ದಿನಗಳ ಕಾಲ ಜನರನ್ನು ಉತ್ಸಾಹ, ಭಕ್ತಿ, ಉಲ್ಲಾಸ, ಪರಸ್ಪರ ಸೌಹಾರ್ದತೆಗಳಲ್ಲಿ ಮಿಂದೇಳುವಂತೆ ಮಾಡುವ ನವರಾತ್ರಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳ ಲೆಕ್ಕ. ವಿಜಯದಶಮಿಯನ್ನೂ ಸೇರಿಸಿದರೆ ನಿರಂತರವಾಗಿ 10 ದಿನಗಳವರೆಗೆ ಆಚರಿಸುವ ಏಕೈಕ ಹಬ್ಬ ನವರಾತ್ರಿ. ದೇಶಾದ್ಯಂತ ಹಲವು ರೀತಿಗಳಲ್ಲಿ ನವರಾತ್ರಿಯ ಆಚರಣೆ ಮೆರಗು ಪಡೆದುಕೊಳ್ಳುತ್ತದೆ. ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ರೀತಿಯ ಆಚರಣೆ ನಮ್ಮ ದೇಶದ ಸೊಬಗು. ಸ್ಥಳೀಯ ಸಂಸ್ಕೃತಿ, ಪರಂಪರೆಗಳಿಗೆ ಅನುಗುಣವಾಗಿ ಒಂದೇ ಹಬ್ಬವನ್ನು ಹಲವು ರೀತಿಯಲ್ಲಿ ಆಚರಿಸುವುದು ವಿಶಿಷ್ಟವೆನಿಸುತ್ತದೆ. ಸಾಮಾನ್ಯವಾಗಿ ಎಲ್ಲರೂ ನವರಾತ್ರಿಯ ಸಮಯದಲ್ಲಿ ಉಪವಾಸ ಆಚರಿಸುತ್ತಾರೆ. ಹಬ್ಬಗಳಲ್ಲಿ ಒಂದು ಹೊತ್ತಾದರೂ ಉಪವಾಸ ಆಚರಿಸಿ ಬಳಿಕ ಹಬ್ಬದೂಟ ಉಣ್ಣುವುದು ದೇಶದೆಲ್ಲೆಡೆ ಕಾಣುವ ಸಂಪ್ರದಾಯ. ಈ ಸಮಯದಲ್ಲಿ ಉಪವಾಸದ ಹಲವು ತಿಂಡಿ ತಿನಿಸುಗಳಿಗೆ ದೇಸಿ ತುಪ್ಪವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ದೇಸಿ ತುಪ್ಪಕ್ಕೇ ಈ ಸಮಯದಲ್ಲಿ ಆದ್ಯತೆ. ದೇಸಿ ತುಪ್ಪದಿಂದ ಆಗುವ ಆರೋಗ್ಯದ ಲಾಭವನ್ನು ಗಮನದಲ್ಲಿ ಇಟ್ಟುಕೊಂಡು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ. 

ನವರಾತ್ರಿಯಲ್ಲಿ ತುಪ್ಪದ ಬಳಕೆ ಏಕೆ ಅಗತ್ಯ? 
ನವರಾತ್ರಿಯ (Navaratri) ಸಮಯದಲ್ಲಿ ಬಹಳಷ್ಟು ಜನ ಉಪವಾಸ (Fasting) ಆಚರಿಸುತ್ತಾರೆ. ಇದರಿಂದ ಕೆಲವೊಮ್ಮೆ ಜೀರ್ಣಾಂಗ ವ್ಯೂಹಕ್ಕೆ ಸಮಸ್ಯೆ ಉಂಟಾಗಬಹುದು. ದೇಹ ದುರ್ಬಲವಾಗಬಹುದು. ಆದರೆ, ಉಪವಾಸದ ಸಮಯದಲ್ಲಿ ಬಳಕೆ ಮಾಡುವ ವಿವಿಧ ರೀತಿಯ ತಿನಿಸುಗಳೊಂದಿಗೆ ದೇಸಿ ತುಪ್ಪವನ್ನು (Desi Ghee) ಸೇವನೆ ಮಾಡಿದರೆ ಈ ಅಪಾಯಗಳಿಂದ ಪಾರಾಗಬಹುದು. ದೇಸಿ ತುಪ್ಪದಲ್ಲಿ ಇರುವ ಬ್ಯೂಟಿರಿಕ್ ಆಸಿಡ್ ಮುಂತಾದ ಪೌಷ್ಟಿಕಾಂಶಗಳು ಜೀರ್ಣಾಂಗ (Digestion) ವ್ಯವಸ್ಥೆಯಲ್ಲಿರುವ ಎಂಜೈಮುಗಳಿಗೆ ಉತ್ತೇಜನ ನೀಡುತ್ತವೆ, ಇವು ಹೊಟ್ಟೆಯನ್ನು ಚೆನ್ನಾಗಿರಿಸುತ್ತವೆ. 

Navratri 2023: ದುರ್ಗಾ ದೇವಿಗೆ ಈ ಹೂವುಗಳನ್ನು ಅರ್ಪಿಸಿದರೆ ಆಶೀರ್ವಾದ ಜೊತೆ ಅದೃಷ್ಟ ಬರುತ್ತದೆ

ದೇಹಕ್ಕೆ ಚೈತನ್ಯ (Energy)
ದೇಸಿ ತುಪ್ಪ ಶಕ್ತಿಯ ಅತ್ಯುತ್ತಮ ಮೂಲವಾಗಿದೆ. ನವರಾತ್ರಿಯ ಉಪವಾಸದ ಸಮಯದಲ್ಲಿ ಶಕ್ತಿ ದೊರೆಯುವುದರಿಂದ ದೇಹ ನವೋಲ್ಲಾಸದಿಂದ ಕೂಡಿರುತ್ತದೆ. ದೇಸಿ ತುಪ್ಪದಲ್ಲಿ ಆರೋಗ್ಯಕರ ಕೊಬ್ಬು (Healthy Fat) ಚೆನ್ನಾಗಿರುವುದರಿಂದ ಶಕ್ತಿ ಲಭ್ಯವಾಗುತ್ತದೆ. ಈ ಕೊಬ್ಬು ನಿಧಾನವಾಗಿ ಜೀರ್ಣವಾಗುತ್ತದೆ ಹಾಗೂ ದೀರ್ಘ ಸಮಯದವರೆಗೆ ದೇಹಕ್ಕೆ ಶಕ್ತಿ ದೊರೆಯುವಂತೆ ಮಾಡುತ್ತದೆ. ಇದನ್ನು ಹೊರತುಪಡಿಸಿ, ದೇಸಿ ತುಪ್ಪದಲ್ಲಿ ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಹಾಗೂ ಒಮೆಗಾ 3 ಫ್ಯಾಟಿ ಆಸಿಡ್ ಕೂಡ ಇರುತ್ತದೆ. ದೇಹದಲ್ಲಿ ಚೈತನ್ಯ ತುಂಬಿರಲು ಈ ಎಲ್ಲ ಅಂಶಗಳು ಕೊಡುಗೆ ನೀಡುತ್ತವೆ. 
ದೇಸಿ ತುಪ್ಪದಲ್ಲಿ ಆಂಟಿಆಕ್ಸಿಡಂಟ್ಸ್ ಹೇರಳವಾಗಿದ್ದು, ನಾರಿನಂಶ, ಕ್ಯಾಲ್ಸಿಯಂ, ಫಾಸ್ಪರಸ್, ಪೊಟ್ಯಾಶಿಯಂನಂತಹ ಅಂಶಗಳೂ ಇರುತ್ತವೆ. ಹೀಗಾಗಿ, ನವರಾತ್ರಿಯ ಉಪವಾಸದ ಸಮಯದಲ್ಲಿ ದೇಸಿ ತುಪ್ಪಕ್ಕೆ ಆದ್ಯತೆ ನೀಡುವುದು ಕಂಡುಬರುತ್ತದೆ. 

Navratri 2023: ನವರಾತ್ರಿ ದಿನಾಂಕ, ಕಲಶ ಸ್ಥಾಪನಾ ಮುಹೂರ್ತ ಇಲ್ಲಿದೆ..

ರೋಗನಿರೋಧಕ ಶಕ್ತಿ (Immunity) ಹೆಚ್ಚಳ
ಉಪವಾಸದ ಸಮಯದಲ್ಲಿ ದೇಹ ಡಿಟಾಕ್ಸ್ ಆಗುತ್ತದೆ. ವಿಷಕಾರಿ ಅಂಶಗಳಿಂದ ಮುಕ್ತಿ ದೊರೆಯುತ್ತದೆ. ತುಪ್ಪದಲ್ಲಿರುವ ವಿಟಮಿನ್ ಇ ಮತ್ತು ಸೆಲೆನಿಯಂ ನಂತಹ ಆಂಟಿಆಕ್ಸಿಡೆಂಟ್ಸ್ (Antioxidant) ವಿಷಕಾರಿ ಅಂಶಗಳನ್ನು ದೇಹದಿಂದ ಹೊರದೂಡುವಲ್ಲಿ ನೆರವಾಗುತ್ತವೆ. ಜತೆಗೆ, ಡಿಎನ್ ಎಗೆ ಹಾನಿ ಮಾಡುವ ಫ್ರೀ ರ್ಯಾಡಿಕಲ್ಸ್ (Free Radicals) ಅನ್ನು ದೂರ ಮಾಡುತ್ತದೆ. ನವರಾತ್ರಿಯ ಸಮಯದಲ್ಲಿ ದೇಸಿ ತುಪ್ಪ ಸೇವನೆ ಮಾಡುವುದರಿಂದ ದೇಹದಲ್ಲಿ (Body) ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಇದರಲ್ಲಿ ನೈಸರ್ಗಿಕವಾಗಿ ಆಂಟಿಬ್ಯಾಕ್ಟೀರಿಯಲ್ ಹಾಗೂ ಆಂಟಿವೈರಲ್ ಗುಣವಿದ್ದು, ರೋಗನಿರೋಧಕ ಶಕ್ತಿಯನ್ನು ಸದೃಢಗೊಳಿಸುತ್ತವೆ. 
ಉಪವಾಸದಿಂದ ದೇಹ ಬಸವಳಿಯದಂತೆ ನೋಡಿಕೊಳ್ಳುವಲ್ಲಿ ದೇಸಿ ತುಪ್ಪ ಪ್ರಮುಖ ಆಹಾರಪದಾರ್ಥವಾಗಿದೆ. ನವರಾತ್ರಿಯ ಸಮಯದಲ್ಲಿ ದಿನಕ್ಕೆ ಒಂದು ಬಾರಿಯಾದರೂ ದೇಸಿ ತುಪ್ಪವನ್ನು ವಿವಿಧ ಆಹಾರಗಳೊಂದಿಗೆ ಸೇವನೆ ಮಾಡುತ್ತಿದ್ದರೆ ದೇಹ ದುರ್ಬಲವಾಗುವುದಿಲ್ಲ. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಅಂಶಗಳು ಮೂಳೆಗಳು ಸವೆಯದಂತೆ ನೋಡಿಕೊಳ್ಳುತ್ತವೆ. 
 

Latest Videos
Follow Us:
Download App:
  • android
  • ios