Asianet Suvarna News Asianet Suvarna News

ಯಾವಾಗ್ಲೂ ಖುಷಿಯಾಗಿರಲು ಏನ್ಮಾಡ್ಬೇಕು, ದಲೈಲಾಮಾ ಏನ್ ಹೇಳ್ತಾರೆ ಕೇಳಿ

ಟಿಬೆಟಿಯನ್ ಜನರ ಆಧ್ಯಾತ್ಮಿಕ ನಾಯಕ ಮತ್ತು ಟಿಬೆಟಿಯನ್ ಬೌದ್ಧಧರ್ಮದ ಜಾಗತಿಕ ನಾಯಕರಾದ ದಲೈ ಲಾಮಾ ಅವರು ತಮ್ಮ ಶಾಂತಿಯುತ ಮಾತುಗಳಿಂದ ಜಗತ್ತನ್ನು ಗುಣಪಡಿಸುವ ಅತ್ಯಂತ ಶಾಂತ ಮತ್ತು ಹಿತವಾದ ಮಾರ್ಗವನ್ನು ಹೊಂದಿದ್ದಾರೆ. ಯಾವಾಗಲೂ ಖುಷಿಯಾಗಿರಲು ಏನು ಮಾಡ್ಬೇಕು ಎಂಬುದನ್ನು ಅವರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ.

Five Secrets To Happiness According To Dalai Lama Vin
Author
First Published Dec 3, 2022, 3:01 PM IST

ಮನುಷ್ಯ ಅಂದ್ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆ ಇದ್ದಿದ್ದೆ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ (Problem), ಚಿಂತೆ ಇರುತ್ತದೆ. ಮಕ್ಕಳಿಗೆ ಓದು, ಪರೀಕ್ಷೆ ಚಿಂತೆಯಾದ್ರೆ ದೊಡ್ಡವರಿಗೆ ನೌಕರಿ, ಹಣಕಾಸಿನ ಚಿಂತೆ ಕಾಡುತ್ತದೆ. ಇನ್ನು ಗೃಹಿಣಿಯರಿಗೆ ಸಂಸಾರದ ಚಿಂತೆ ತಪ್ಪಿದ್ದಲ್ಲ. ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆಯನ್ನು ಅನುಭವಿಸುತ್ತಾರೆ. ಒಬ್ಬರಿಗೆ ಸಮಸ್ಯೆಯಾಗಿರುವ ವಿಷ್ಯ ಇನ್ನೊಬ್ಬರಿಗೆ ಸಮಸ್ಯೆ ಎನ್ನಿಸದೆ ಇರಬಹುದು. ಪ್ರತಿಯೊಬ್ಬರು ನೋಡುವ ದೃಷ್ಟಿಯೂ ಭಿನ್ನವಾಗಿರುತ್ತದೆ. ಚಿಂತೆ ಬಗ್ಗೆ ಚಿಂತಿಸುತ್ತಾ ಕೂತ್ರೆ ಆರೋಗ್ಯ (Health) ಹಾಳಾಗುತ್ತದೆ, ಜೀವನದಲ್ಲಿ ಖುಷಿಯೂ ಇರುವುದಿಲ್ಲ. ಸದಾ ಸಂತೋಷ (Happy)ವಾಗಿರುವ ವ್ಯಕ್ತಿ ಬೇರೆಯವರ ಜೊತೆ ಉತ್ತಮ ಸಂಬಂಧ ಹೊಂದಿರುತ್ತಾನೆ. ಹಾಗೆ ಆತನ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ.

ಟಿಬೆಟಿಯನ್ ಜನರ ಆಧ್ಯಾತ್ಮಿಕ ನಾಯಕ ಮತ್ತು ಟಿಬೆಟಿಯನ್ ಬೌದ್ಧಧರ್ಮದ ಜಾಗತಿಕ ನಾಯಕರಾದ ದಲೈ ಲಾಮಾ ಅವರು ತಮ್ಮ ಶಾಂತಿಯುತ ಮಾತುಗಳಿಂದ ಜಗತ್ತನ್ನು ಗುಣಪಡಿಸುವ ಅತ್ಯಂತ ಶಾಂತ ಮತ್ತು ಹಿತವಾದ ಮಾರ್ಗವನ್ನು ಹೊಂದಿದ್ದಾರೆ. ಜೀವನವನ್ನು ಸಂತೋಷ, ಧನಾತ್ಮಕ (Positive) ಮತ್ತು ಆರೋಗ್ಯಕರ ರೀತಿಯಲ್ಲಿ ಹೇಗೆ ಬದುಕಬೇಕು ಎಂಬ ಅವರ ಬುದ್ಧಿವಂತಿಕೆಯು ಜನರು ತಮ್ಮ ಜೀವನ (Life)ವನ್ನು ಪೂರ್ಣವಾಗಿ ಬದುಕಲು ಪ್ರೇರೇಪಿಸುತ್ತದೆ. ಖುಷಿಯಾಗಿರಲು ಏನ್ ಮಾಡ್ಬೇಕು ? ದಲೈಲಾಮ ಏನ್‌ ಹೇಳುತ್ತಾರೆ ತಿಳಿಯೋಣ.

Happy Life: ಸುಖಕರ ಜೀವನಕ್ಕೆ ನಿಮಗೆ ನೀವೇ ಕೊಡಬಹುದು ಈ ಉಡುಗೊರೆ

ನೀವು ಮಾಡುವ ಕೆಲಸ ನಿಮ್ಮ ಸಂತೋಷವನ್ನು ನಿರ್ಧರಿಸುತ್ತವೆ: ಸಂತೋಷಕ್ಕಾಗಿ ನಾವು ಎಲ್ಲೆಲ್ಲೂ ಹುಡುಕಬೇಕಾಗಿಲ್ಲ. ಸಂತೋಷ ನಮ್ಮೊಳಗೇ ಇರುತ್ತದೆ. ನಾವದನ್ನು ಹುಡುಕಿಕೊಳ್ಳಬೇಕಷ್ಟೆ. ನಾವು ಮಾಡುವ ಕೆಲಸಗಳಿಂದ ಸಂತೋಷ ಲಭಿಸುತ್ತದೆ. ನಾವು ಮಾಡುವ ಕೆಲಸಗಳು ನಮ್ಮಲ್ಲಿ ಖುಷಿಯ ಭಾವನೆ (Feelings)ಗಳನ್ನು ಹುಟ್ಟು ಹಾಕುತ್ತವೆ. ಹೀಗಾಗಿ ಯಾವಾಗಲೂ ಉತ್ತಮ ಕೆಲಸ ಮಾಡಿ ಎಂದು ದಲೈಲಾಮಾ ಹೇಳುತ್ತಾರೆ

ಇತರರಿಗೆ ಸಹಾಯ ಮಾಡುವುದರಿಂದ ಖುಷಿಯಾಗುತ್ತದೆ:  ಜೀವನದಲ್ಲಿ ಮುಖ್ಯ ಉದ್ದೇಶ ಇತರರಿಗೆ ಸಹಾಯ (Help) ಮಾಡುವುದಾಗಿರಬೇಕು. ನೀವು ಅವರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರನ್ನು ನೋಯಿಸಬೇಡಿ ಎಂದು ದಲೈಲಾಮ ಹೇಳುತ್ತಾರೆ. ಇತರರಿಗೆ ಸಹಾಯ ಮಾಡಿದಾಗ, ನೀವು ತಕ್ಷಣ ನಿಮ್ಮ ಮನಸ್ಸಿನಲ್ಲಿ ಹೆಮ್ಮೆ ಮತ್ತು ಸಂತೋಷವನ್ನು ಅನುಭವಿಸುತ್ತೀರಿ. ಜನರಿಗೆ ಅವರ ಕಷ್ಟದ ಸಮಯದಲ್ಲಿ ಸಹಾಯ ಮಾಡುವುದು ಮತ್ತು ಅವರ ಕೃತಜ್ಞತೆಯನ್ನು ಸ್ವೀಕರಿಸುವುದು ನಿಮ್ಮ ಮನಸ್ಸನ್ನು ಖುಷಿ ಪಡಿಸುತ್ತದೆ.

ಕೋಪವನ್ನು ಬಿಟ್ಟುಬಿಡಿ: ಕೋಪವು (Angry) ಮನಸ್ಸಿನಲ್ಲಿ ಅಶಾಂತಿಯನ್ನು ಹುಟ್ಟುಹಾಕುತ್ತದೆ. ಕೋಪವು ಶಾಂತಿಯ ಸ್ಥಿತಿಯನ್ನು ಸಾಧಿಸುವುದನ್ನು ತಡೆಯುವ ಏಕೈಕ ವಿಷಯವಾಗಿದೆ. ಕೋಪ, ದ್ವೇಷ ಮತ್ತು ಅಸೂಯೆಗಳು ನಿಮ್ಮನ್ನು ಆವರಿಸಿಕೊಂಡಾಗ ಯಾವ ಸಂತೋಷವನ್ನು ಸಹ ಆಸ್ವಾದಿಸಲಾಗುವುದಿಲ್ಲ. ಒಮ್ಮೆ ನೀವು ಈ ನಕಾರಾತ್ಮಕ ಭಾವನೆಗಳನ್ನು ಬಿಟ್ಟುಬಿಟ್ಟರೆ ಖುಷಿಯಿಂದ ಇರಲು ಸಾಧ್ಯವಾಗುತ್ತದೆ.

ದೇಹದಲ್ಲಿ ಹ್ಯಾಪಿ ಹಾರ್ಮೋನು ಹೆಚ್ಚಿಸುವ 7 ಅದ್ಭುತ ಗಿಡಮೂಲಿಕೆಗಳು

ಯೋಚನೆ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ: ಯೋಚಿಸುವ (Thinking) ರೀತಿ ಯಾವಾಗಲೂ ಸರಿಯಾಗಿರಬೇಕು. ಆಶಾವಾದಿಯಾಗಿರಲು ಆಯ್ಕೆ ಮಾಡುವುದು ಉತ್ತಮವಾಗಿದೆ. ನಿಮ್ಮ ದೃಷ್ಟಿಕೋನವನ್ನು ಧನಾತ್ಮಕವಾಗಿ ಬದಲಾಯಿಸುವುದು ನೀವು ಖುಷಿಯಾಗಿರಲು ಅವಕಾಶ ಮಾಡಿಕೊಡುತ್ತದೆ. ಧನಾತ್ಮಕ ಕೋನದಿಂದ ಜೀವನವನ್ನು ನೋಡುವುದು ಬಹಳಷ್ಟು ವ್ಯತ್ಯಾಸವನ್ನು ಮಾಡಬಹುದು. ಆದರೆ ನೀವು ಋಣಾತ್ಮಕ ಸಂದರ್ಭಗಳ ಬಗ್ಗೆ ಹೆಚ್ಚು ಯೋಚಿಸಿದರೆ ಖುಷಿಯಾಗಿರುವ ಕ್ಷಣಗಳನ್ನು ಕಳೆದುಕೊಳ್ಳುತ್ತೀರಿ.

ಖುಷಿ ನೀಡುವ ಸ್ಥಳಗಳಲ್ಲಿ ಹೋಗಿ: ನಮ್ಮ ಎಲ್ಲಾ ಭಾವನೆಗಳು ಎಲ್ಲಾ ಸ್ಥಳದಲ್ಲಿ ಒಂದೇ ರೀತಿ ಇರಬೇಕೆಂದಿಲ್ಲ. ಕೆಲವೊಂದು ಜಾಗಗಳು ನಮಗೆ ಹೆಚ್ಚು ಖುಷಿಯನ್ನು ನೀಡುತ್ತವೆ. ಕೆಲವೊಂದು ಸ್ಥಳ ಬ್ಯಾಡ್ ವೈಬ್ ನೀಡುತ್ತದೆ. ಹೀಗಾಗಿ ಯಾವಾಗಲೂ ನಿಮಗೆ ಖುಷಿ ನೀಡುವ ಸ್ಥಳವನ್ನು ಆಯ್ಕೆ ಮಾಡಿ. ಅಲ್ಲೇ ಹೆಚ್ಚು ಸಮಯ ಕಳೆಯಲು ಯತ್ನಿಸಿ.

Follow Us:
Download App:
  • android
  • ios