Asianet Suvarna News Asianet Suvarna News

Health Tips: ಮಹಿಳೆಯರ ಆರೋಗ್ಯ ಸುಧಾರಿಸುತ್ತೆ ಕಸೂರಿ ಮೇಥಿ

ಕಸೂರಿ ಮೇಥಿ ಆರೋಗ್ಯದ ರುಚಿ ಹೆಚ್ಚಿಸುತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಆದ್ರೆ ಅದ್ರಿಂದ ಇನ್ನೂ ಅನೇಕ ಪ್ರಯೋಜನವಿದೆ. ಅದು ಮಹಿಳೆಯರ ಆರೋಗ್ಯ ವೃದ್ಧಿಸುವ ಜೊತೆಗೆ ಏನೆಲ್ಲ ಸಹಾಯ ಮಾಡುತ್ತೆ ಎಂಬ ವರದಿ ಇಲ್ಲಿದೆ.
 

Five Big Benefits Of Kasuri Methi Know Why Women Should Include It In Their Diet roo
Author
First Published Sep 19, 2023, 7:00 AM IST | Last Updated Sep 19, 2023, 7:00 AM IST

ನಾವು ಅತ್ಯಂತ ಹೆಚ್ಚು ಬಳಸುವ ಮಸಾಲೆಗಳಲ್ಲಿ ಕಸೂರಿ ಮೇಥಿ ಕೂಡ ಸೇರಿದೆ. ಇದರ ರುಚಿ ಸ್ವಲ್ಪ ಕಹಿಯಾಗಿದ್ದರೂ ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಕಸೂರಿ ಮೇಥಿ ಹೆಚ್ಚು ಸಹಾಯ ಮಾಡುತ್ತದೆ.  ನಾವು ನಿತ್ಯ ಬಳಸುವ ಮಸಾಲೆಗಳಲ್ಲಿ ಒಂದಾದ ಕಸೂರಿ ಮೇಥಿ, ರುಚಿ ಹೆಚ್ಚಿಸುವುದು ಮಾತ್ರವಲ್ಲ  ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ತೂಕ ಇಳಿಕೆ, ಮಧುಮೇಹ ನಿಯಂತ್ರಣ ಸೇರಿದತೆ ಅನೇಕ ಅನಾರೋಗ್ಯದಿದ ಮುಕ್ತಿ ನೀಡುವ ಕೆಲಸವನ್ನು ಕಸೂರಿ ಮೇಥಿ ಮಾಡುತ್ತದೆ. 

ಕಸೂರಿ ಮೇಥಿ (Kasuri Methi) ಪ್ರಯೋಜನಕಾರಿ ಮೂಲಿಕೆಯಾಗಿದೆ. ಕಸೂರಿ ಮೇಥಿ ಅನೇಕ ಪ್ರಮುಖ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಮಹಿಳೆಯರು ಕಸೂರಿ ಮೇಥಿ ಸೇವನೆ ಮಾಡುವುದ್ರಿಂದ ಅನೇಕ ಆರೋಗ್ಯ (Health) ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಾವಿಂದು ಕಸೂರಿ ಮೇಥಿ ಸೇವನೆ ಮಾಡೋದ್ರಿಂದ ಮಹಿಳೆಯರಿಗೆ ಆಗುವ ಲಾಭವೇನು ಎಂಬುದನ್ನು ನಿಮಗೆ ಹೇಳ್ತೇವೆ.

HEALTH TIPS: ಉತ್ತಮ ಆರೋಗ್ಯಕ್ಕಾಗಿ ಖರ್ಜೂರವನ್ನು ಬೆಳಗ್ಗಿನ ಹೊತ್ತಲ್ಲಿ ತಿನ್ನಿ

ಕಸೂರಿ ಮೇಥಿ ಸೇವನೆ ಮಾಡುವುದರಿಂದ ಆಗುವ ಲಾಭಗಳು : 

ಪಿಸಿಓಎಸ್ (PCOS)  ಕಡಿಮೆ ಮಾಡುತ್ತೆ ಕಸೂರಿ ಮೇಥಿ : ಕಸೂರಿ ಮೇಥಿಯು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಪಿಸಿಓಎಸ್ (ಪ್ರಿ ಮೆನ್ಸ್ಟ್ರುವಲ್ ಸಿಂಡ್ರೋಮ್) ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಿಸಿಓಎಸ್ ಸಮಸ್ಯೆ ಹೊಂದಿರುವವರು ನಿತ್ಯ ಜೀವನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸೂರಿ ಮೇಥಿ ಸೇವನೆ ಮಾಡಬೇಕು.

ತೂಕ ಇಳಿಕೆಗೆ ಸಹಕಾರಿ : ತೂಕ ಇಳಿಕೆ ಈಗಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ಏನೇ ಕಸರತ್ತು ಮಾಡಿದ್ರೂ, ಎಷ್ಟೇ ಡಯಟ್ ಮಾಡಿದ್ರೂ ತೂಕ ಇಳಿಕೆ ಸುಲಭವಲ್ಲ. ತೂಕ ಇಳಿಸಿಕೊಳ್ಳಲು ಮಹಿಳೆಯರು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ನಿಮ್ಮ ಬೊಜ್ಜು ಕಡಿಮೆ ಆಗ್ಬೇಕು ಎನ್ನುವುದಾದ್ರೆ ನೀವು ಕಸೂರಿ ಮೇಥಿ ಬಳಕೆ ಮಾಡಿ. ಕಸೂರಿ ಮೇಥಿಯಲ್ಲಿ ಉತ್ತಮ ಪ್ರಮಾಣದ ಫೈಬರ್ ಇದೆ. ಇದು ನಿಮ್ಮ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿವು ಕಡಿಮೆಯಾದ್ರೆ ಆಹಾರ ಸೇವನೆ ಕಡಿಮೆಯಾಗುತ್ತದೆ. ಇದ್ರಿಂದ ತೂಕ ನಿಯಂತ್ರಣ ಮಾಡಬಹುದು.  ಕಸೂರಿ ಮೇಥಿ ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಉತ್ತೇಜಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಕಸೂರಿ ಮೇಥಿ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.  

ಮಾರಣಾಂತಿಕ ಕ್ಯಾನ್ಸರ್‌ ಭೀತಿಯೇ? ಈ 8 ಆಹಾರ ಸೇವಿಸಿ ನಿಶ್ಚಿಂತರಾಗಿರಿ..!

ಗರ್ಭಿಣಿಯರಿಗೆ ಪ್ರಯೋಜನಕಾರಿ : ಕಸೂರಿ ಮೇಥಿ ಉತ್ತಮ ಪ್ರಮಾಣದ ಫೋಲಿಕ್ ಆಮ್ಲವನ್ನು ಹೊಂದಿದೆ. ಗರ್ಭಿಣಿಯರು ಇದನ್ನು ಸೇವನೆ ಮಾಡುವುದ್ರಿಂದ ಗರ್ಭಾವಸ್ಥೆಯಲ್ಲಿ ಮಗುವಿನ ರಚನೆ ಸರಿಯಾಗಿ ಆಗುತ್ತದೆ. ಹೊಟ್ಟೆಯಲ್ಲಿ ಬೆಳೆಯುವ ಭ್ರೂಣಕ್ಕೆ ಫೋಲಿಕ್ ಆಮ್ಲ ಅಗತ್ಯ. ಅದು ಕಸೂರಿ ಮೆಥಿಯಲ್ಲಿ ಕಂಡುಬರುತ್ತದೆ. ಶಿಶುವಿನ ಬೆಳವಣಿಗೆ ಮಾತ್ರವಲ್ಲದೆ ಹೆರಿಗೆ ಸಂದರ್ಭದಲ್ಲಿ ಕಾಡುವ ನೋವನ್ನು ಕೂಡ ಇದು ಕಡಿಮೆ ಮಾಡಲು ಸಹಕಾರಿ.   

ಹಾರ್ಮೋನ್ ಸಮತೋಲನ : ಮಹಿಳೆಯರು ಹಾರ್ಮೋನ್ ಸಮಸ್ಯೆಯಿಂದ ಬಳಲುತ್ತಾರೆ. ಪ್ರತಿ ಹಂತದಲ್ಲೂ ಅವರಿಗೆ ಹಾರ್ಮೋನ್ ಏರುಪೇರಾಗುತ್ತದೆ. ಆದ್ರೆ ಹಾರ್ಮೋನ್ ಸಮತೋಲನಕ್ಕೆ ಕಸೂರಿ ಮೇಥಿ ಸೇವನೆ ಮಾಡಬೇಕು. ಕಸೂರಿ ಮೇಥಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ 1 ಇದೆ. ಅನಿಯಮಿತ ಹಾಗೂ ಅಸಹಜ ಮುಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡಲು ಮಹಿಳೆಯರು ಕಸೂರಿ ಮೇಥಿಯನ್ನು ಬಳಕೆ ಮಾಡಬೇಕು. 

ಹಾಲುಣಿಸುವ ತಾಯಂದಿರಿಗೆ ಪ್ರಯೋಜನಕಾರಿ : ಮಗುವಿಗೆ ಹಾಲುಣಿಸುವ ತಾಯಂದಿರು ಕಸೂರಿ ಮೇಥಿಯ ಬಳಕೆ ಮಾಡಬೇಕು. ಇದು ಎದೆ ಹಾಲಿನ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ ಎದೆ ಹಾಲಿನ ಗುಣಮಟ್ಟವನ್ನು ಕೂಡ ಹೆಚ್ಚಿಸುವ ಕೆಲಸ ಮಾಡುತ್ತದೆ. 

Latest Videos
Follow Us:
Download App:
  • android
  • ios