ಹಬ್ಬದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಭಯವೇ? ಇಲ್ಲಿದೆ ಮನೆಯಲ್ಲೇ ಮಾಡಬಹುದಾದ ಸ್ವಿಟ್ಸ್!
ಗಣೇಶ ಚತುರ್ಥಿ ಹಬ್ಬ ಮನೆಯಲ್ಲಿ ಸಡಗರ ಸಂಭ್ರಮ ಹೆಚ್ಚಿಸಿದೆ. ತೋರಣಗಳು ನಲಿಯುತ್ತಿವೆ, ಹೂಗಳು ಮನೆಯಲ್ಲಿ ನಗೆಬೀರುತ್ತಿವೆ. ಗಣೇಶನಿಗೆ ಇಷ್ಟವಾಗುವ ಖಾದ್ಯಗಳು ಒಂದು ಬದಿ ಘಮ್ ಎಂದು ತಯಾರಾಗುತ್ತಿವೆ. ಮತ್ತೊಂದೆಡೆ ಢಣ ಢಣ ಘಂಟೆ ಶಬ್ಧ ಮನೆ ಮನಸ್ಸಿನ ತುಂಬಾ ಆವರಿಸಿವೆ. ಇಷ್ಟೇ ಇದ್ದರೆ ಸಾಕೆ. ಹಬ್ಬ ಮತ್ತಷ್ಟು ಜೋರಾಗಿಸಲು ಈ ಸ್ಪೆಷಲ್ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿ ಮನಸಾರೆ ಸಂಭ್ರಮಿಸಿ. ಈ ಸ್ಪಷಲ್ ರೆಸಿಪಿ ಇಲ್ಲಿದೆ.
ಗಣೇಶ ಹಬ್ಬದಲ್ಲಿ ಸಿಹಿ, ಎಣ್ಣೆ, ತುಪ್ಪದ ಐಟಂಗಳು ಹೆಚ್ಚು. ಹಬ್ಬ ಎಂದರೆ ಹಾಗೆ ಅಲ್ಲಿ ಸಿಹಿ ಹೆಚ್ಚಾಗಿರುತ್ತದೆ. ಹಬ್ಬ ಅಲ್ವಾ ಬಿಡು ಎಂದು ಆರೋಗ್ಯದ ಕಾಳಜಿಗೆ ಸ್ವಲ್ಪ ಬ್ರೇಕ್ ಹಾಕುತ್ತೇವೆ. ಏನ್ ಬೇಕಾದರೂ ತಿನ್ನಬಹುದು, ಎಷ್ಟು ಬೇಕಾದರೂ ತಿನ್ನಬಹುದು ಎಂದು ಟೇಕ್ ಫಾರ್ ಗ್ರಾö್ಯಂಟೆಡ್ ಎಂದುಕೊಳ್ಳುತ್ತೇವೆ. ಆರೋಗ್ಯ ಹಾಗೂ ಸಂಭ್ರಮ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ರೆಸಿಪಿಗಳು ಇಲ್ಲಿವೆ. ಭಾರತೀಯರಿಗೆ ದೊಡ್ಡ ಹಬ್ಬ ಎಂದರೆ ಅದು ಗಣೇಶ ಚತುರ್ಥಿ. ಈ ವೇಳೆ ಹಲವು ರೀತಿಯ ಖಾದ್ಯಗಳನ್ನು ತಯಾರಿಸಿ ಸೇವಿಸುತ್ತೇವೆ. ಅಧಿಕ ಕೊಲೆಸ್ಟ್ರಾಲ್ ಮಟ್ಟದಿಂದ ಬಳಲುತ್ತಿದ್ದರೆ, ಈ ಹಬ್ಬದ ಸಮಯವು ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ಹಬ್ಬದ ಉತ್ಸಾಹದಲ್ಲಿ ತೊಡಗಿರುವಾಗ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದು ಸವಾಲಾಗಿದೆ. ಸಿಹಿ ತಿಂಡಿಗಳನ್ನು ತಪ್ಪಿಸಬಹುದಾದ ಬದಲಿಗೆ ಸಾಮಾನ್ಯ ಪ್ರಮಾಣದಲ್ಲಿ ಆರೋಗ್ಯಕರ ಪರ್ಯಾಯಗಳನ್ನು ಆರಿಸಿಕೊಳ್ಳುವ, ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Sugar Free ಮೋದಕ, ಸಕ್ಕರೆ ಕಾಯಿಲೆ ಇರೋರು ಭಯ ಪಡ್ದೆ ತಿನ್ಬೋದು
ಸೋರೆಕಾಯಿ ಪಾಯಸ
ಡಯೆಟ್ ಫ್ರೆಂಡ್ಲಿಯೂ ಆಗಿರುವ ಸೋರೆಕಾಯಿ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುತ್ತದೆ. ಸೋರೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್, ಖನಿಜಾಂಶಗಳಿದ್ದು ಕೊಲೆಸ್ಟಾçಲ್ ಲೆವೆಲ್ ಕಾಪಾಡುತ್ತದೆ.
ಬೇಕಾಗುವ ಸಾಮಾಗ್ರಿಗಳು: ಸೋರೆಕಾಯಿ, ಹಾಲು, ಸಕ್ಕರೆ, ಏಲಕ್ಕಿ, ತುಪ್ಪ, ತೆಂಗಿನತುರಿ, ಗೋಡಂಬಿ, ಬಾದಾಮಿ, ಪಿಸ್ತಾ.
ಮಾಡುವ ವಿಧಾನ: ಮೊದಲು ಸೋರೆಕಾಯಿ ಸಿಪ್ಪಿ ಹಾಗೂ ತಿರುಳು ತೆಗೆದು ತುರಿದುಕೊಳ್ಳಬೇಕು. ಒಂದು ಪ್ಯಾನ್‌ಗೆ ತುಪ್ಪ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಬಾದಾಮಿ, ಗೋಡಂಬಿ, ದ್ರಾಕ್ಷಿ, ಪಿಸ್ತಾವನ್ನು ಫ್ರೆöÊ ಮಾಡಿಕೊಂಡು ಗೋಲ್ಡನ್ ಬ್ರೌನ್ ಬಂದ ತಕ್ಷಣ ತುಪ್ಪ ಹಾಗೆ ಬಿಟ್ಟು ಎತ್ತಿಟ್ಟುಕೊಳ್ಳಿ. ನಂತರ ಇದಕ್ಕೆ ತುರಿದ ಸೋರೆಕಾಯಿಯನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ನಂತರ ಇದಕ್ಕೆ ಹಾಲು, ಸಕ್ಕರೆ ಹಾಕಿ ಬೇಯಿಸಿಕೊಳ್ಳಿ. ಒಂದು ಜಾರ್‌ನಲ್ಲಿ ತೆಂಗಿನತುರಿ, ಏಲಕ್ಕಿ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈ ರುಬ್ಬಿದ ಮಿಶ್ರಣವನ್ನು ಬೇಯಿಸಿಕೊಂಡ ಸೋರೆಕಾಯಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಚೆನ್ನಾಗಿ ಕುದಿ ಬಂದ ನಂತರ ಸ್ಟೌ ಆಫ್ ಮಾಡಿ ತುಪ್ಪದಲ್ಲಿ ಹುರಿದುಕೊಂಡ ಡ್ರೈ ಫ್ರೂಟ್ಸ್‌ನಿಂದ ಅಲಂಕರಿಸಿದರೆ ಸೋರೆಕಾಯಿ ಪಾಯಸ ರೆಡಿ.
ಇದನ್ನೂ ಓದಿ: ಹಬ್ಬದ ಕಳೆ ಹೆಚ್ಚಿಸುವ ವಿವಿಧ ಬಗೆಯ ಹೋಳಿಗೆ ಇಲ್ಲಿದೆ !
ಹಣ್ಣಿನ ಮೊಸರು
ಇದು ಒಂದು ಸಲಾಡ್ ಅಥವಾ ಕಸ್ಟರ್ಡ್ ಸಲಾಡ್ ರೀತಿಯ ಆಹಾರ. ಇದರಲ್ಲಿ ನಾನಾ ರೀತಿಯ ಹಣ್ಣುಗಳನ್ನು ಹಾಕುವುದರಿಂದ ಒಂದು ಉತ್ತಮ ಪೌಷ್ಠಿಕ ಆಹಾರವಾಗಿದೆ. ಮೊಸರಿನಲ್ಲಿ ಪ್ರೋಬಯಾಟಿಕ್ ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಹಣ್ಣು ಮತ್ತು ಮೊಸರಿನ ಪದಾರ್ಥವು ದೇಹದಲ್ಲಿನ ಲಿಪಿಡ್ ಪ್ರೊಫೈಲ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಬೇಕಾಗುವ ಸಾಮಗ್ರಿಗಳು: ನಾನಾ ರೀತಿಯ ಹಣ್ಣು, ಹಾಲು, ಸಕ್ಕರೆ, ಏಲಕ್ಕಿ ಕಸ್ಟರ್ಡ್ ಪೌಡರ್, ಬೇಕಾದಲ್ಲಿ ಡ್ರೆöÊ ಫ್ರೂಟ್ಸ್.
ಮಾಡುವ ವಿಧಾನ: ಒಂದು ಪ್ಯಾನ್‌ಗೆ ಹಾಲು ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ. ಹಾಲು ಕಾದ ನಂತರ ಅದಕ್ಕೆ ಸಕ್ಕರೆ ಹಾಕಿ ಕೈಯ್ಯಾಡಿ. ಮತ್ತೊಂದು ಬೌಲ್‌ನಲ್ಲಿ ಎರಡು ಚಮಚ ಕಸ್ಟರ್ಡ್ ಪೌಡರ್ ಹಾಕಿ ತಣ್ಣನೆಯ ಹಾಲಿನಲ್ಲಿ ಗಂಟುಗಳಿರದAತೆ ಕಲಸಿ. ಇದನ್ನು ಕುದಿಯುತ್ತಿರುವ ಹಾಲಿಗೆ ಹಾಕಿ ಚೆನ್ನಾಗಿ ಕೈಯ್ಯಾಡಿ. ಸ್ವಲ್ಪ ಗಟ್ಟಿಯಾದ ನಂತರ ಸ್ಟೌ ಆಫ್ ಮಾಡಿ ತಣ್ಣಗಾಗಲು ಬಿಡಿ. ಮೊತ್ತೊಂದು ಬೌಲ್‌ನಲ್ಲಿ ಸಣ್ಣಗೆ ಹೆಚ್ಚಿದ ನಾನಾ ರೀತಿಯ ಹಣ್ಣು, ಅದಕ್ಕೆ ಮೊಸರು, ತಣ್ಣಗಾದ ಕಸ್ಟರ್ಡ್ , ಏಲಕ್ಕಿ ಪುಡಿ, ಬೇಕಾದಲ್ಲಿ ಡ್ರೆöÊ ಫ್ರೂಟ್ಸ್ ಹಾಕಿದರೆ ಮೊಸರು ಹಣ್ಣು ರೆಡಿ.
ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಈ ಬಾರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಮೋದಕ ತಯಾರಿಸಿ
ಡ್ರೈ ಫ್ರೂಟ್ ಮೋದಕ
ಮೋದಕ ಎಂದರೆ ಗಣೇಶನಿಗೆ ಪ್ರಿಯವಾದದು. ಮೋದಕ ಇಲ್ಲದ ಪೂಜೆ ಪೂರ್ಣವಲ್ಲ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆಧುನಿಕ ಕಾಲದಲ್ಲಿ ಮೋದಕದಲ್ಲೂ ಮಾರ್ಪಾಡುಗಳನ್ನು ಮಾಡಲಾಗಿದೆ. ಆಹಾರದಲ್ಲಿ ಎಚ್‌ಡಿಎಲ್‌ನಂತಹ ಉತ್ತಮ ಕೊಬ್ಬನ್ನು ಸೇರಿಸಲು ಸುಲಭವಾದ ಮಾರ್ಗವೆಂದರೆ ಅದು ಜೇನುತುಪ್ಪ ಅಥವಾ ಬೆಲ್ಲದ ಪಾಕ. ಕೆಲ ಬೀಜಗಳನ್ನು ರುಬ್ಬಿ ಅದನ್ನು ಬೆಲ್ಲದ ಪಾಕ ಅಥವಾ ಜೇನುತುಪ್ಪದಲ್ಲಿ ಕಲಸಿ ಮೋದಕದ ರೂಪ ನೀಡುವುದು. ಬೀಜಗಳಲ್ಲಿನ ಎಚ್‌ಡಿಎಲ್ ದೇಹದ ನಾನಾ ಭಾಗಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದು ಎಲ್ಲಾ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕಿ ಯಕೃತ್ತಿಗೆ ಒಯ್ಯುತ್ತದೆ.
ಬೇಕಾಗುವ ಸಾಮಾಗ್ರಿಗಳು: ಸೂರ್ಯಕಾಂತಿ, ಅಗಸೆ, ಗಸಗಸೆ, ಕುಂಬಳಕಾಯಿ, ಕಲ್ಲಂಗಡಿಯAತಹ ಬೀಜಗಳು, ಬೆಲ್ಲ/ ಜೇನುತುಪ್ಪ. ಬೇಕಾದಲ್ಲಿ ಏಲಕ್ಕಿ.
ಮಾಡುವ ವಿಧಾನ: ಎಲ್ಲಾ ಬೀಜಗಳನ್ನು ಹುರಿದುಕೊಳ್ಳಬೇಕು. ಹುರಿದು ತಣ್ಣಗಾದ ಬೀಜಗಳನ್ನು ಒಂದು ಜಾರ್‌ನಲ್ಲಿ ರುಬ್ಬಿ ಪುಡಿ ಮಾಡಿಟ್ಟುಕೊಳ್ಳಿ. ಮತ್ತೊಂದು ಪ್ಯಾನ್‌ನಲ್ಲಿ ಬೆಲ್ಲ ಸ್ವಲ್ಪ ನೀರು ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ತುಪ್ಪ, ಪುಡಿ ಮಾಡಿಕೊಂಡ ಬೀಜಗಳು ಹಾಕಿ ಚೆನ್ನಾಗಿ ಕಲಸಿ. ಸಣ್ಣ ಸಣ್ಣ ಉಂಡೆಯಾಗಿಸಿ ಮೋದಕದ ಅಚ್ಚಿಗೆ ಹಾಕಿದರೆ ಮೋದಕ ರೆಡಿ.