Asianet Suvarna News Asianet Suvarna News

ಗಣೇಶ ಹಬ್ಬಕ್ಕೆ ಈ ಬಾರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಮೋದಕ ತಯಾರಿಸಿ

ಗಣೇಶ ಹಬ್ಬಕ್ಕೆ ಇನ್ನೇನು ಎರಡೇ ದಿನ ಬಾಕಿ ಇದೆ. ಎಲ್ಲರ ಮನೆಯಲ್ಲೂ ನಾನಾ ಬಗೆಯ ತಿಂಡಿಗಳು ರೆಡಿಯಾಗುತ್ತಿವೆ. ಈ ಸಮಯದಲ್ಲಿ ಗಣೇಶನಿಗೆ ಪ್ರಿಯವಾದ ಮೋದಕ ಮಿಸ್ ಮಾಡಿದ್ರೆ ಹೇಗೆ. ಹಾಗಂತ ಒಂದೇ ಬಗೆಯ ಮೋದಕ ತಯಾರಿಸಬೇಕಾಗಿಲ್ಲ. ಇಲ್ಲಿದೆ ವೆರೈಟಿ ಮೋದಕಗಳ ರೆಸಿಪಿ.

Diet Friendly Healthy Modaka's Recipe
Author
First Published Aug 28, 2022, 2:25 PM IST

ಹಿಂದೂ ಸಂಸ್ಕೃತಿಯಲ್ಲಿ ಹಬ್ಬಗಳನ್ನು ಬಹಳ ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುವ ಹಬ್ಬವೆಂದರೆ ಅದು ಗಣೇಶ ಹಬ್ಬ. ವಾರಗಟ್ಟಲೆ ಗಣೇಶನನ್ನು ಮನೆಯಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಕೂರಿಸಿ ಆರಾಧಿಸುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ಗಣಪನಿಗೆ ಇಷ್ಟವಾಗುವ ಎಲ್ಲಾ ಭಕ್ಷö್ಯಗಳನ್ನು ಮಾಡಿ ಉಣಬಡಿಸುತ್ತಾರೆ. ಗಣಪನಿಗೆ ಪ್ರಿಯವಾದ ಭಕ್ಷ್ಯವೆಂದರೆ ಮೋದಕ. ಮೋದಕದಲ್ಲೂ ವೆರೈಟಿಗಳಿವೆ. ನಮ್ಮ ಆರೋಗ್ಯಕ್ಕೂ ಇವು ಉತ್ತಮವಾಗಿವೆ. ಗಣಪನಿಗೆ ಇನ್ನಷ್ಟು ಇಷ್ಟವಾಗುವ ಮೋದಕಗಳನ್ನು ಮನೆಯಲ್ಲಿ ಮಾಡಿ ನೋಡಿ. ಆ ಬಗ್ಗೆ ಮಾಹಿತಿ ಇಲ್ಲಿದೆ.

ದೇವರಿಗೆ ನೈವೇದ್ಯ ಮಾಡುವುದು ಸಹಜ. ನೈವೇದ್ಯ ಮಾಡಿದ ಪದಾರ್ಥಗಳು ಕೊನೆಗೆ ನಮ್ಮ ಹೊಟ್ಟೆಗೆ ಸೇರುವುದು. ಮಾಡುವ ಪದಾರ್ಥಗಳು ರುಚಿ ಹೆಚ್ಚಿಸುವಂತಿದ್ದರೆ ಮತ್ತಷ್ಟು ತಿನ್ನಬೇಕು ಎನಿಸುವುದು ಸಹಜ. ಗಣಪನಿಗೆ ಪ್ರಿಯವಾಗುವ ಮೋದಕಗಳನ್ನು ವಿಭಿನ್ನ ಶೈಲಿಯಲ್ಲಿ, ಆರೋಗ್ಯಕರ ಮತ್ತು ಸುಲಭವಾಗಿ ಮಾಡಬಹುದಾಗಿದೆ. ಕ್ಯಾಲೋರಿ ಹೆಚ್ಚಿಸುವ ಮೋದಕಗಳ ಬಗ್ಗೆ ಒಂದಷ್ಟು ರೆಸಿಪಿಗಳನ್ನು ಇಲ್ಲಿ ಹೇಳಲಾಗಿದೆ. ಇದು ದೊಡ್ಡವರಿಂದ ಹಿಡಿದು ಪುಟ್ಟ ಮಕ್ಕಳಿಗೂ ಇಷ್ಟವಾಗುತ್ತದೆ.

ಗಣಪನಿಗೆ ಪ್ರಿಯವಾದ ಕರ್ಜಿಕಾಯಿ ತಯಾರಿಸುವುದು ಹೇಗೆ?

ರೋಸ್ ಮತ್ತು ಕ್ಯಾಶ್ಯು ಮೋದಕ

ಬೇಕಾಗುವ ಸಾಮಗ್ರಿಗಳು: ತುಪ್ಪ,, ಬಾದಾಮಿ ಹಿಟ್ಟು, ರೋಸ್ ವಾಟರ್, ಬಟರ್‌ಸ್ಕಾಚ್ ಎಸೆನ್ಸ್, ಗುಲಾಬಿ ದಳಗಳು, ಕಡೆಂನ್ಸಡ್ ಮಿಲ್ಕ್, ತೆಂಗಿನಕಾಯಿ ಮತ್ತು ಬಾದಾಮಿ ಹಾಲು.

ಮಾಡುವ ವಿಧಾನ: ಒಂದು ಪ್ಯಾನ್‌ಗೆ ಪುಡಿ ಮಾಡಿದ ಗೋಡಂಬಿ, ಬಾದಾಮಿ, ತುಪ್ಪ ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಕಡೆನ್ಸಡ್ ಮಿಲ್ಕ್, ಸಣ್ಣದಾಗಿ ತುರಿದ ತೆಂಗಿನಕಾಯಿ, ಬಾದಾಮಿ ಹಾಲು, ಬಟರ್‌ಸ್ಕಾಚ್ ಎಸೆನ್ಸ್, ಗುಲಾಬಿ ದಳ, ರೋಸ್ ವಾಟರ್ ಎಲ್ಲವೂ ಹಾಕಿಕೊಂಡು ಚೆನ್ನಾಗಿ ಕೈಯಾಡಿಸಬೇಕು. ಉಂಡೆ ಕಟ್ಟುವಷ್ಟು ಗಟ್ಟಿಯಾದ ನಂತರ ಸ್ಟೌ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಉಂಡೆ ಕಟ್ಟಿ ಅದನ್ನು ಮೋದಕದ ಮೌಲ್ಡ್‌ನಲ್ಲಿ ಹಾಕಿ ತೆಗೆದರೆ ಕ್ಯಾಶ್ಯು ಮತ್ತು ರೋಸ್ ಮೋದಕ ರೆಡಿ.

ಡೇಟ್ಸ್ ಮೋದಕ

ಬೇಕಾಗುವ ಸಾಮಗ್ರಿಗಳು: ವಾಲ್‌ನಟ್ಸ್, ಬಾದಾಮಿ, ಚಿಯಾ ಬೀಜಗಳು, ಡೇಟ್ಸ್, ಸಿಹಿ ಇಲ್ಲದ ಕೋಕೋ ಪೌಡರ್, ತುಪ್ಪ.

ಮಾಡುವ ವಿಧಾನ: ಸಣ್ಣದಾಗಿ ಪೀಸ್ ಮಾಡಿಕೊಂಡ ವಾಲ್‌ನಟ್, ಬಾದಾಮಿ, ಚಿಯಾ ಬೀಜಗಳನ್ನು ಸ್ವಲ್ಪ ತುಪ್ಪ ಹಾಕಿ ಲೈಟ್ ಗೋಲ್ಡನ್ ಬ್ರೌನ್ ಬರುವವರೆಗೂ ಹುರಿದುಕೊಳ್ಳಬೇಕು. ನಂತರ ಸ್ಟಾ ಆಫ್ ಮಾಡಿ ತಣ್ಣಗಾಗಲು ಬಿಡಬೇಕು. ಒಂದು ಪಾತ್ರೆಯಲ್ಲಿ ರುಬ್ಬಿಕೊಂಡ ಡೇಟ್ಸ್, ಕೋಕೋ ಪೌಡರ್ ಹಾಕಿ ಹುರಿದುಕಂಡ ಮಿಶ್ರವನ್ನು ಹಾಕಿ ಕಲಸಿಕೊಳ್ಳಬೇಕು. ಇದನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಮೋದಕದ ಮೌಲ್ಡ್ಗೆ ಹಾಕಿದರೆ ಡೇಟ್ಸ್ ಮೋದಕ ರೆಡಿ. ಇದಕ್ಕೆ ಬೇಕೆಂದರೆ ಗುಲ್ಕನ್ ಸಹ ಸೇರಿಸಿಕೊಳ್ಳಬಹುದು.

ಶಿರಸಿ ಸುತ್ತ ‘ಕೈಚಕ್ಕುಲಿ’ಯ ಕೈಚಳಕ ಜೋರು!

ಪಿಸ್ತಾ ಮತ್ತು ಬಾದಾಮಿ ಮೋದಕ

ಬೇಕಾಗುವ ಸಾಮಗ್ರಿಗಳು: ಬಾದಾಮಿ, ಪಿಸ್ತಾ, ತೆಂಗಿನಕಾಯಿ, ಸಕ್ಕರೆ ಪುಡಿ.
ಮಾಡುವ ವಿಧಾನ: ಒಂದು ಪ್ಯಾನ್‌ಗೆ ಸಮ ಪ್ರಮಾಣದಲ್ಲಿ ತೆಗೆದುಕೊಂಡ ಬಾದಾಮಿ, ಪಿಸ್ತಾವನ್ನು ಹುರಿದುಕೊಳ್ಳಬೇಕು. ಇದನ್ನು ಸಣ್ಣದಾಗಿ ಪುಡಿ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿಕೊಳ್ಳಿ. ತುರಿದ ತೆಂಗಿನಕಾಯಿಯನ್ನು ಹತ್ತು ನಿಮಿಷ ಹುರಿದು ಪುಡಿ ಮಾಡಿಕೊಂಡು ಬಾದಾಮಿ, ಪಿಸ್ತಾ ಪುಡಿಗೆ ಸೇರಿಸಬೇಕು. ಈ ಮಿಶ್ರಣಕ್ಕೆ ಸಕ್ಕರೆ ಪುರಿ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ  ಕೇಸರಿ ಹಾಖಿದ ಹಾಲನ್ನು ಈ ಮಿಶ್ರಣಕ್ಕೆ ಸೇರಿಸಿ ಉಂಡೆ ಮಾಡಿ ಮೋದಕದ ಮೌಲ್ಡ್ಗೆ ಹಾಕಿದರೆ ಮೋದಕ ರೆಡಿ.

Follow Us:
Download App:
  • android
  • ios