ಸಿ-ಸೆಕ್ಷನ್ ನಂತರ ದೇಹವು ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಬೆನ್ನುನೋವು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಹಲವು ವಾರಗಳಿಂದ ಹಲವು ತಿಂಗಳುಗಳವರೆಗೆ ಇರುತ್ತದೆ. ಬೆನ್ನು ನೋವು ಕಡಿಮೆ ಮಾಡಲು ಏನು ಮಾಡಬೇಕೆಂಬ ಬಗ್ಗೆ ಇಲ್ಲಿ ಮಾಹಿತಿ ಇದೆ.

ಸಿ ಸೆಕ್ಷನ್ ಅಥವಾ ಸಿಸೇರಿಯನ್ ಹೆರಿಗೆಯ ನಂತರ ಅನೇಕ ಮಹಿಳೆಯರು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಒಂದು ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆಯ ದೇಹದಲ್ಲಿ ಹಲವರು ಮಹತ್ತರವಾದ ಬದಲಾವಣೆಗಳಾಗುತ್ತವೆ. ಸಹಜ ಹೆರಿಗೆಯಾದರೂ ಸರಿ ಹೆರಿಗೆಯ ನಂತರ ಕೆಲವೊಮ್ಮೆ ಮಹಿಳೆಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಿರುವಾಗ ಸಿ ಸೆಕ್ಷನ್ ನಡೆದರಂತು ಜೀವನಪರ್ಯಂತ ಬೆನ್ನು ನೋವು ಸೊಂಟ ನೋವಿನಂತಹ ಸಮಸ್ಯೆಗಳಿಂದ ಮಹಿಳೆಯರು ಬಳಲುತ್ತಾರೆ. ವಿಶೇಷವಾಗಿ ಸಿ-ಸೆಕ್ಷನ್ ನಂತರ ದೇಹವು ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಬೆನ್ನುನೋವು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಹಲವು ವಾರಗಳಿಂದ ಹಲವು ತಿಂಗಳುಗಳವರೆಗೆ ಇರುತ್ತದೆ. ಈ ನೋವು ಕೆಲವೊಮ್ಮೆ ತುಂಬಾ ತೀವ್ರವಾಗಿರುತ್ತದೆ, ಇದರಿಂದ ದೈನಂದಿನ ಕೆಲಸಗಳನ್ನು ಮಾಡುವುದೂ ಕಷ್ಟವಾಗುತ್ತದೆ. ನೀವು ಸಹ ಸಿ-ಸೆಕ್ಷನ್ ನಂತರ ನಿರಂತರ ಬೆನ್ನುನೋವಿನಿಂದ ಬಳಲುತ್ತಿದ್ದರೆ, ಚಿಂತಿಸಬೇಕಾಗಿಲ್ಲ. ನೀವು ಕೆಲವು ಮನೆಮದ್ದುಗಳು ಮತ್ತು ನೈಸರ್ಗಿಕ ಪರಿಹಾರಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಬೆನ್ನು ನೋವು ಕಡಿಮೆ ಮಾಡಲು ಏನು ಮಾಡಬೇಕೆಂಬ ಬಗ್ಗೆ ಇಲ್ಲಿ ಮಾಹಿತಿ ಇದೆ.

ಬಿಸಿನೀರಿನ ಶಾಕ
ಹೆರಿಗೆಯ ನಂತರದ ನೋವನ್ನು ಕಡಿಮೆ ಮಾಡಲು ಬಿಸಿನೀರಿನ ಶಾಕವನ್ನು ಬಳಸಬಹುದು. ಸಿ-ಸೆಕ್ಷನ್ ನಂತರ ಬೆನ್ನುನೋವಿನಿಂದ ಪರಿಹಾರ ಪಡೆಯಲು ಪ್ರತಿದಿನ 15ರಿಂದ 20 ನಿಮಿಷಗಳ ಕಾಲ ಬಿಸಿನೀರಿನ ಬಾಟಲಿ ಅಥವಾ ಹೀಟಿಂಗ್ ಪ್ಯಾಡ್‌ನಿಂದ ಬೆನ್ನಿಗೆ ಒತ್ತಡ ನೀಡಿ. ಇದು ಸ್ನಾಯುಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನೋವಿನಿಂದ ಪರಿಹಾರ ನೀಡುತ್ತದೆ.

ಇದನ್ನೂ ಓದಿ: ಇನ್ಸುಲಿನ್​, ಮಾತ್ರೆ ಇಲ್ಲದೇ ಮಧುಮೇಹದಿಂದ ಮುಕ್ತಿ ಪಡೆದ ಸಚಿವ ಅಮಿತ್​ ಶಾ ಮಾತು ಕೇಳಿ

ಲಘು ಯೋಗ ಮತ್ತು ಸ್ಟ್ರೆಚಿಂಗ್ ಪ್ರಯೋಜನಕಾರಿ
ಸಿ-ಸೆಕ್ಷನ್ ಹೆರಿಗೆಯ ಕೆಲವು ಸಮಯದ ನಂತರ ನೀವು ಲಘು ಯೋಗ ಮತ್ತು ಸ್ಟ್ರೆಚಿಂಗ್ ಮಾಡುವ ಮೂಲಕ ಬೆನ್ನುನೋವಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಯೋಗ ಮಾಡುವ ಮೊದಲು ತಜ್ಞರ ಸಲಹೆ ಪಡೆಯಿರಿ. ಇದು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ನೋವು ಕಡಿಮೆ ಮಾಡುತ್ತದೆ.

ಸರಿಯಾದ ಭಂಗಿ ಅಳವಡಿಸಿಕೊಳ್ಳಿ
ಕೆಲವೊಮ್ಮೆ ತಪ್ಪು ಭಂಗಿಯಲ್ಲಿ ಮಗುವಿಗೆ ಹಾಲುಣಿಸುವುದರಿಂದ ಸಿ-ಸೆಕ್ಷನ್ ನಂತರ ಮಹಿಳೆಯರಿಗೆ ಬೆನ್ನುನೋವಿನ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಮಗುವಿಗೆ ಸರಿಯಾದ ಭಂಗಿಯಲ್ಲಿ ಹಾಲುಣಿಸಿ. ಇದಕ್ಕಾಗಿ ಮಗುವಿಗೆ ಹಾಲುಣಿಸುವಾಗ ದಿಂಬನ್ನು ಬಳಸಿ ಸೊಂಟಕ್ಕೆ ಆಧಾರ ನೀಡಿ. ಹೆಚ್ಚು ಹೊತ್ತು ಬಗ್ಗಿ ಕುಳಿತುಕೊಳ್ಳಬೇಡಿ. ಯಾವಾಗಲೂ ನೇರವಾಗಿ ಕುಳಿತುಕೊಳ್ಳುವ ಮತ್ತು ಎದ್ದುನಿಲ್ಲುವ ಅಭ್ಯಾಸ ಮಾಡಿಕೊಳ್ಳಿ.

ಲಘು ಮಸಾಜ್
ಬಿಸಿ ಎಳ್ಳು ಅಥವಾ ತೆಂಗಿನ ಎಣ್ಣೆಯಿಂದ ಬೆನ್ನಿಗೆ ಲಘು ಮಸಾಜ್ ಮಾಡಿಸಿ. ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಸ್ನಾಯುಗಳಲ್ಲಿ ಸಂಗ್ರಹವಾದ ಆಯಾಸವನ್ನು ನಿವಾರಿಸುತ್ತದೆ.

ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಭರಿತ ಆಹಾರ
ಎಲುಬುಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ಆಹಾರದಲ್ಲಿ ಹಾಲು, ಮೊಸರು, ಪನೀರ್, ಹಸಿರು ಎಲೆಗಳ ತರಕಾರಿಗಳು, ಬಾದಾಮಿ ಮತ್ತು ಮೊಟ್ಟೆಗಳನ್ನು ಸೇರಿಸಿ. ಇದರಿಂದ ನಿಧಾನವಾಗಿ ಬೆನ್ನುನೋವಿನ ಸಮಸ್ಯೆ ಕಡಿಮೆಯಾಗಬಹುದು.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲೇ ಅಂಡಾಶಯದ ಕ್ಯಾನ್ಸರ್: ತಾಯಿಯ ಚಿಕಿತ್ಸೆಗಾಗಿ ಎರಡೆರಡು ಬಾರಿ ಜನಿಸಿದ ಮಗು!