ಒಣದ್ರಾಕ್ಷಿ ನೀರು ಮೂತ್ರಪಿಂಡ, ಯಕೃತ್ತು, ಹೃದಯ ಮತ್ತು ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಅತಿಯಾದ ಸೇವನೆ ಒಳ್ಳೆಯದಲ್ಲ.

ದ್ರಾಕ್ಷಿಯನ್ನು ಒಣಗಿಸುವ ಮೂಲಕ ಒಣದ್ರಾಕ್ಷಿ ತಯಾರಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಒಣದ್ರಾಕ್ಷಿಯ ಜೊತೆಗೆ ಒಣದ್ರಾಕ್ಷಿ ನೀರು ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು, ಆಯುರ್ವೇದದಲ್ಲಿ ಒಣದ್ರಾಕ್ಷಿ ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಇದನ್ನು ಸೇವಿಸುವುದರಿಂದ ತೂಕ ಇಳಿಕೆಯಿಂದ ಹಿಡಿದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳವರೆಗೆ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ನೀವು ಯಾವುದೇ ಸಮಯದಲ್ಲಿ ಒಣದ್ರಾಕ್ಷಿ ನೀರನ್ನು ಕುಡಿಯಬಹುದಾದರೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಿದರೆ ಅದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇಂದಿನ ಲೇಖನದಲ್ಲಿ ಒಣದ್ರಾಕ್ಷಿ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಹಾಗೂ ವಿಶೇಷವಾಗಿ ದೇಹದ ಯಾವ ಭಾಗಕ್ಕೆ ಪ್ರಯೋಜನಕಾರಿ ಎಂದು ಕೊಡಲಾಗಿದೆ. 

ಮೂತ್ರಪಿಂಡ ಮತ್ತು ಯಕೃತ್ತಿಗೆ ಪ್ರಯೋಜನಕಾರಿ
ಹೌದು, ಒಣದ್ರಾಕ್ಷಿ ನೀರು ನಮ್ಮ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಈ ಒಣ ಹಣ್ಣಿನ ನೀರು ಯಕೃತ್ತಿನಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಿದೆ. ಆರೋಗ್ಯ ತಜ್ಞರ ಪ್ರಕಾರ, ಇದು ದೇಹವನ್ನು ನಿರ್ವಿಷಗೊಳಿಸಲು ಉತ್ತಮ ಆಯ್ಕೆಯಾಗಿದೆ.

ಹೃದಯವನ್ನು ಆರೋಗ್ಯವಾಗಿಡಲು
ನೀವು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸಲು ಬಯಸಿದರೆ, ಒಣದ್ರಾಕ್ಷಿ ನೀರನ್ನು ಕುಡಿಯಲು ಪ್ರಾರಂಭಿಸಿ. ಒಣದ್ರಾಕ್ಷಿ ನೀರನ್ನು ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಬಲಪಡಿಸಬಹುದು ಮತ್ತು ಗಂಭೀರ ಹಾಗೂ ಮಾರಣಾಂತಿಕ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಇದಲ್ಲದೆ, ಫೈಬರ್ ಸಮೃದ್ಧವಾಗಿರುವ ಒಣದ್ರಾಕ್ಷಿ ನೀರು ನಮ್ಮ ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ.  

ಮೂಳೆಗಳಿಗೆ ಪ್ರಯೋಜನಕಾರಿ
ಕೀಲು ನೋವಿನ ಸಮಸ್ಯೆಯಿಂದ ಮುಕ್ತಿ ಪಡೆದು ಮೂಳೆಗಳನ್ನು ಬಲಪಡಿಸಲು ಬಯಸುವಿರಾ? ಹೌದು ಎಂದಾದರೆ, ನಿಮ್ಮ ದೈನಂದಿನ ಡಯಟ್‌ನಲ್ಲಿ ಒಣದ್ರಾಕ್ಷಿ ನೀರನ್ನು ಸೇರಿಸಿಕೊಳ್ಳಬೇಕು. ಇದಲ್ಲದೆ, ರಕ್ತಹೀನತೆಯನ್ನು ತಪ್ಪಿಸಲು ಒಣದ್ರಾಕ್ಷಿ ನೀರನ್ನು ಕುಡಿಯಲು ಸಹ ಸಲಹೆ ನೀಡಲಾಗುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ಒಣದ್ರಾಕ್ಷಿ ನೀರನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಕುಡಿಯುವುದು ಬಹಳ ಮುಖ್ಯ.  

ಅಧಿಕ ರಕ್ತದೊತ್ತಡ ಇರುವವರು 
ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿದ ನಂತರ ಅವುಗಳಲ್ಲಿರುವ ಪೊಟ್ಯಾಶಿಯಂನ ಮೌಲ್ಯವು ಮತ್ತಷ್ಟು ಹೆಚ್ಚಾಗುತ್ತದೆ. ನೀವು ಹೆಚ್ಚು ಪೊಟ್ಯಾಶಿಯಂ ಸೇವಿಸಿದಷ್ಟೂ ಮೂತ್ರದ ಮೂಲಕ ನಿಮ್ಮ ದೇಹದಿಂದ ಸೋಡಿಯಂ ಹೆಚ್ಚು ಹೊರಹಾಕಲ್ಪಡುತ್ತದೆ. ಪೊಟ್ಯಾಶಿಯಂ  ರಕ್ತನಾಳಗಳ ಗೋಡೆಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಇರುವವರು ಖಂಡಿತವಾಗಿಯೂ ನೆನೆಸಿದ ಒಣದ್ರಾಕ್ಷಿ ಸೇವಿಸಬೇಕು. 

ತೂಕ ಹೆಚ್ಚಿಸಲು 
ಅನೇಕ ಪ್ರಯತ್ನಗಳ ನಂತರವೂ ನಿಮ್ಮ ತೂಕ ಹೆಚ್ಚಾಗುತ್ತಿಲ್ಲವಾದರೆ ನಿಮ್ಮ ಆಹಾರದಲ್ಲಿ ಒಣದ್ರಾಕ್ಷಿಗಳನ್ನು ಸೇರಿಸಿ. ರಾತ್ರಿಯಿಡೀ 10-12 ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಒಣದ್ರಾಕ್ಷಿಗಳನ್ನು ಸೇವಿಸಿ. ನೀರಿನಲ್ಲಿ ನೆನಸಿದ ನಂತರ ಒಣದ್ರಾಕ್ಷಿಗಳಲ್ಲಿ ಗ್ಲೂಕೋಸ್ ಅಂಶ ಹೆಚ್ಚಾಗುತ್ತದೆ. ಇದು ತೂಕ ಹೆಚ್ಚಿಸಲು ಸಹಾಯಕವಾಗಿದೆ ಎಂದು ಸಾಬೀತಾಗಿದೆ. 

ಅತಿಯಾಗಿ ಸೇವಿಸಬೇಡಿ 
ಒಣದ್ರಾಕ್ಷಿ ನೀರು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದನ್ನು ನೆನಪಿನಲ್ಲಿಡಿ. ಆದರೆ ಅದನ್ನು ಅತಿಯಾಗಿ ಸೇವಿಸಬೇಡಿ. ಹಾಗೆಯೇ ನೀವು ತಾಜಾ ದ್ರಾಕ್ಷಿ ಮತ್ತು ಒಣದ್ರಾಕ್ಷಿಗಳ ನಡುವೆ ಯಾವುದು ಆಯ್ಕೆ ಮಾಡಬೇಕೆಂದು ಗೊಂದಲದಲ್ಲಿದ್ದರೆ ತಾಜಾ ದ್ರಾಕ್ಷಿ ನಿಮ್ಮ ಆರೋಗ್ಯಕ್ಕೆ ಉತ್ತಮ.  ಏಕೆಂದರೆ ತಾಜಾ ಹಣ್ಣುಗಳಿಗೆ ಹೋಲಿಸಿದರೆ ಒಣ ಹಣ್ಣುಗಳು ಹೆಚ್ಚಿನ ಕ್ಯಾಲೋರಿಗಳು, ಕಾರ್ಬೋಹೈಡೇಟ್‌ಗಳು ಮತ್ತು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ. ಇದು ಬೊಜ್ಜುತನವನ್ನು ಹೆಚ್ಚಿಸುತ್ತದೆ. ಆದ್ದರಿಂದ ನೀವು ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಬಯಸಿದರೆ, ತಾಜಾ ದ್ರಾಕ್ಷಿಯನ್ನು ಆರಿಸಿ. ಇದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.