Asianet Suvarna News Asianet Suvarna News

ಬೀದಿನಾಯಿ ಆರೈಕೆ ಮಾಡುತ್ತಿದ್ದ ಶ್ವಾನ ಪ್ರೇಮಿ ರೇಬಿಸ್‌ ಕಾಯಿಲೆಗೆ ಬಲಿ

ಬೀದಿ ನಾಯಿ ಎಂದರೆ ಸಾಕು ಹೆಚ್ಚಿನವರು ಅಸಡ್ಡೆಯಿಂದ ನೋಡುತ್ತಾರೆ, ಕಲ್ಲೆಸೆಯುವುದನ್ನು ಮಾಡುತ್ತಾರೆ. ಆದ್ರೆ ಇದೆಲ್ಲದರ ಮಧ್ಯೆ ಬೀದಿನಾಯಿಗಳನ್ನು ಅಕ್ಕರೆಯಿಂದ ನೋಡಿಕೊಳ್ಳುವ ಮಂದಿಯೂ ಕೆಲವರಿದ್ದಾರೆ. ಹೀಗೇ ಬೀದಿ ನಾಯಿಗೆ ಆಹಾರವನ್ನು ನೀಡಿ ಸಲಹುತ್ತಿದ್ದ ಶ್ವಾನ ಪ್ರೇಮಿ ರೇಬಿಸ್‌ ಕಾಯಿಲೆಗೆ ಬಲಿಯಾಗಿದ್ದಾರೆ. 

Dog lover who fed strays dies of rabies, scratches on hand proved fatal Vin
Author
First Published Jun 17, 2023, 2:52 PM IST

ತಿರುವನಂತಪುರಂ: ಶ್ವಾನಪ್ರಿಯರು ನಮ್ಮ ನಡುವೆ ಹಲವರಿದ್ದಾರೆ. ಕಾಸ್ಟ್ಲೀ ನಾಯಿಗಳನ್ನು ತಂದು ಸಾಕುತ್ತಾರೆ. ಸ್ಟೈಲಿಶ್ ಆಗಿ ಡ್ರೆಸ್ ಮಾಡಿಸಿ, ವಾಕ್‌ಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಬೀದಿ ನಾಯಿ ಎಂದರೆ ಸಾಕು ಹೆಚ್ಚಿನವರು ಅಸಡ್ಡೆಯಿಂದ ನೋಡುತ್ತಾರೆ, ಕಲ್ಲೆಸೆಯುವುದನ್ನು ಮಾಡುತ್ತಾರೆ. ಆದ್ರೆ ಇದೆಲ್ಲದರ ಮಧ್ಯೆ ಬೀದಿನಾಯಿಗಳನ್ನು ಅಕ್ಕರೆಯಿಂದ ನೋಡಿಕೊಳ್ಳುವ ಮಂದಿಯೂ ಕೆಲವರಿದ್ದಾರೆ. ಹೀಗೇ ಬೀದಿ ನಾಯಿಗೆ ಆಹಾರವನ್ನು ನೀಡಿ ಸಲಹುತ್ತಿದ್ದ ಶ್ವಾನ ಪ್ರೇಮಿ ರೇಬಿಸ್‌ ಕಾಯಿಲೆಗೆ ಬಲಿಯಾಗಿದ್ದಾರೆ. 

ಬೀದಿ ನಾಯಿಗಳಿಗೆ (Street dog) ಆಹಾರವನ್ನು ನೀಡಿ ಅದನ್ನು ಸಲಹುವವರು ತುಂಬಾ ಮಂದಿ ಇರುತ್ತಾರೆ. ಆದರೆ ಅದೇ ಬೀದಿ ನಾಯಿ ಪ್ರಾಣಕ್ಕೆ ಆಪತ್ತು ತಂದರೆ ಹೇಗೆ? ಇಂಥದ್ದೇ ಒಂದು ಘಟನೆ ಇತ್ತೀಚೆಗೆ ಕೇರಳದಲ್ಲಿ ನಡೆದಿರುವುದು ವರದಿಯಾಗಿದೆ. ತಿರುವನಂತಪುರಂನ ಚಿರಾಯಿಂಕೀಝು ಮೂಲದ ಸ್ಟೆಫಿನ್ ವಿ ಪಿರೇರಾ (49) ಎಂಬ ಮಹಿಳೆ ಬೀದಿ ನಾಯಿಗಳಿಗೆ ಸದಾ ಆಹಾರವನ್ನು (Food) ನೀಡುತ್ತಿದ್ದರು. ರಸ್ತೆಬದಿಯ ನಾಯಿಗಳಿಗೆ ಆಹಾರವನ್ನು ನೀಡುವ ಜೊತೆಗೆ ಅವುಗಳನ್ನು ಸಲಹುತ್ತಿದ್ದರು. ಇತ್ತೀಚೆಗೆ ಅವರು ಬೀದಿ ನಾಯಿಯೊಂದಿಗೆ ಆಹಾರವನ್ನು ನೀಡುವಾಗ, ನಾಯಿಯೊಂದು ಉಗುರುಗಳಿಂದ ಪರಚಿದೆ. ಆ ನಂತರ ಸ್ಟೆಫಿನ್ ವಿ.ಪಿರೇರಾ ಅವರ ಆರೋಗ್ಯದಲ್ಲಿ ಸಮಸ್ಯೆ (Health problem) ಕಾಣಿಸಿಕೊಂಡಿದ್ದು, ಆಸ್ಪತ್ತೆಗೆ ದಾಖಲಿಸಲಾಗಿದೆ.

Chikkamagaluru: ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆಯದೇ ಬಾಲಕ ಸಾವು

ಬೀದಿ ನಾಯಿಗಳ ಹಾವಳಿಯ ಆತಂಕದ ನಡುವೆಯೇ ಕೇರಳದಾದ್ಯಂತ ರೇಬಿಸ್ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಸ್ಟೆಫಿನ್ ವಿ ಪಿರೇರಾರನ್ನು ಪರೀಕ್ಷಿಸಿದ ವೈದ್ಯರು ರೇಬೀಸ್ ರೋಗ ಲಕ್ಷಣವನ್ನು (Symptoms) ಪತ್ತೆ ಹಚ್ಚಿದ್ದಾರೆ. ಇದು ಹೇಗೆ ಬಂತು ಎನ್ನುವುದನ್ನು ವೈದ್ಯರು ಕೇಳಿದಾಗ ಬೀದಿ ನಾಯಿ ಪರಚಿದ ಬಗ್ಗೆ ಸ್ಟೆಫಿನ್ ಹೇಳಿದ್ದಾರೆ. ಕಳೆದ ಕೆಲವು ದಿನದಿಂದ ರೇಬೀಸ್ ಕಾಯಿಲೆಗೆ ಚಿಕಿತ್ಸೆ (Treatment) ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ. 

ರೇಬೀಸ್ ಎಂದರೇನು ?
ರೇಬೀಸ್ ಎಂದರೆ ಕೇಂದ್ರ ನರಮಂಡಲವನ್ನು ಹೊಡೆಯುವ ಗಂಭೀರವಾದ ವೈರಲ್ ಸೋಂಕು. ಲಸಿಕೆ (Vaccine) ಹಾಕದ ನಾಯಿಯಿಂದ ಕಚ್ಚಿಸಿಕೊಂಡರೆ, ರೇಬೀಸ್ ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಚಿಕಿತ್ಸೆ (Treatment) ನೀಡದಿದ್ದರೆ, ಸೋಂಕಿನ ಕೆಲವೇ ದಿನಗಳಲ್ಲಿ ಸಾವು (Death) ಕೂಡ ಸಂಭವಿಸಬಹುದು.ಇದೊಂದು ಮಾರಣಾಂತಿಕ ರೋಗವಾಗಿದೆ. ರೋಗಿ ರೇಬಿಸ್‌ಗೆ ತುತ್ತಾದರೆ ಯಾವುದೇ ಚಿಕಿತ್ಸೆ ಫಲಕಾರಿಯಾಗುವುದಿಲ್ಲ.

ರೇಬಿಸ್‌ ಹೇಗೆ ಹರಡುತ್ತದೆ?
ಸೋಂಕಿತ ಪ್ರಾಣಿಯೊಂದು ಇನ್ನೊಂದು ಪ್ರಾಣಿಯನ್ನು ಕಚ್ಚಿದಾಗ ಸೋಂಕಿತ ಪ್ರಾಣಿಯ ಜೊಲ್ಲಿನಲ್ಲಿರುವ ವೈರಸ್ ವರ್ಗಾವಣೆಗೊಳ್ಳುತ್ತದೆ. ಪ್ರಾಣಿಗಳು ತಮ್ಮ ಪಂಜ ಅಥವಾ ಉಗುರುಗಳನ್ನು ನೆಕ್ಕುತ್ತಿರುವುದರಿಂದ ಅವುಗಳು ಪರಚಿದರೂ ಅಪಾಯಕಾರಿಯಾಗುತ್ತದೆ. ಗಾಯ ಅಥವಾ ಗೀರು ಅಥವಾ ಬಾಯಿ ಮತ್ತು ಕಣ್ಣುಗಳ ಲೋಳೆಯ ಪದರಗಳ ಮೂಲಕ ರೇಬಿಸ್ ವೈರಸ್ ಶರೀರವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಅದು ಮಿದುಳು (Brain) ಮತ್ತು ಮಿದುಳು ಬಳ್ಳಿ ಅಥವಾ ಬೆನ್ನುಹುರಿಗೆ ಸಾಗುತ್ತದೆ. ಸೋಂಕು ಮಿದುಳಿಗೆ ಹರಡಿದಾಗ ಅದು ಮಿದುಳಿನ ನರಗಳ ಮೂಲಕ ಶರೀರದಲ್ಲಿ ಇಳಿಯುತ್ತದೆ ಮತ್ತು ವಿವಿಧ ಅಂಗಾಂಗಗಳಿಗೆ ದಾಳಿಯಿಡುತ್ತದೆ. 

ರೇಬಿಸ್‌ ಲಕ್ಷಣಗಳು
ರೇಬಿಸ್‌ ಪೀಡಿತರಿಗೆ ಮೊದಲಿಗೆ ಮಿದುಳಿನ ಜೀವಕೋಶಗಳಿಗೆ ಊತವಾಗಬಹುದು. ಜ್ವರ (Fever) ಬರಬಹುದು. ಗಾಯದ ಬಳಿ ಸಂವೇದನೆ ಇಲ್ಲದಂತೆ ಆಗಬಹುದು. ಉದ್ರೇಕ ನಿಯಂತ್ರಿಸಲಾಗದೆ ಇರುವುದು, ನೀರಿನ ಭಯ, ದೇಹದ (Body) ಕೆಲವು ಭಾಗಗಳ ನಿಯಂತ್ರಣ ತಪ್ಪುವಿಕೆ, ಪ್ರಜ್ಞೆ ತಪ್ಪುವುದು ಇತ್ಯಾದಿಗಳು ರೇಬಿಸ್‌ ರೋಗದ ಲಕ್ಷಣಗಳಾಗಿವೆ. ನಾಯಿ ಕಚ್ಚಿದ ಬಳಿಕ ಜ್ವರ, ತಲೆನೋವು, ವಾಕರಿಕೆ, ವಾಂತಿ, ತಳಮಳ, ಆತಂಕ, ಗೊಂದಲ, ಅತಿಚಟುವಟಿಕೆ, ಜೊಲ್ಲು ಸುರಿಸುವುದು, ನೀರಿನ ಭಯ, ನಿದ್ರಾಹೀನತೆ ಇತ್ಯಾದಿಗಳು ಬಂದರೆ ರೇಬಿಸ್‌ ಸೋಂಕು ಹರಡಿದೆ ಎಂದರ್ಥ.

ರೇಬಿಸ್ ತಡೆಗಟ್ಟುವುದು ಹೇಗೆ ?
ಪ್ರತಿವರ್ಷ ಭಾರತದಲ್ಲಿ ರೇಬಿಸ್‌ನಿಂದ 20 ಸಾವಿರ ಸಂಭವಿಸುತ್ತದೆ ಎಂದು ಕೇಂದ್ರ ಸರಕಾರವೇ ಹೇಳಿಕೊಂಡಿದೆ. ಹೀಗಾಗಿ ಮಕ್ಕಳು, ಹಿರಿಯರು ಶ್ವಾನಗಳಿಂದ ದೂರವಿಡಬೇಕು. ಬೀದಿನಾಯಿಗಳೊಂದಿಗೆ ವ್ಯವಹರಿಸುವಾದ ಜಾಗರೂಕರಾಗಿರಬೇಕು. ನಾಯಿಗಳ ಜತೆ ಮಕ್ಕಳು ಹೆಚ್ಚು ಆಟವಾಡುತ್ತಾರೆ. ನಾಯಿ ಅಥವಾ ಬೆಕ್ಕುಗಳನ್ನು ಕೆಣಕುವುದು ಇತ್ಯಾದಿಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ರೇಬಿಸ್‌ಗೆ ತುತ್ತಾಗುತ್ತಿದ್ದಾರೆ. ಹೀಗಾಗಿ, ಮಕ್ಕಳಿಗೆ ಪ್ರಾಣಿಗಳ ವರ್ತನೆ ಕುರಿತು ಬಾಲ್ಯದಿಂದಲೇ ಹೇಳಿಕೊಡಬೇಕು.

Follow Us:
Download App:
  • android
  • ios