Asianet Suvarna News Asianet Suvarna News

Winter Health Tips: ಚಳಿಗಾಲದಲ್ಲಿ ಎಚ್ಚರ ತಪ್ಪಿದ್ರೆ ಸ್ಟ್ರೋಕ್ ಗ್ಯಾರಂಟಿ

ಹೃದಯಾಘಾತ ಮಾತ್ರವಲ್ಲ ಸ್ಟ್ರೋಕ್ ನಿಂದ ಸಾವನ್ನಪ್ಪುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಚಳಿಗಾದಲ್ಲಿ ಇದ್ರ ಪ್ರಮಾಣ ಹೆಚ್ಚು. ಸ್ಟ್ರೋಕ್ ಗೆ ಮುಖ್ಯ ಕಾರಣವೇನು ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.  
 

Dehydration And Stroke Risk How Are They Linked during winter  roo
Author
First Published Nov 2, 2023, 3:06 PM IST

ಚಳಿಗಾಲದಲ್ಲಿ ಹವಾಮಾನದಲ್ಲಿ ಏರುಪೇರಾಗುವುದರಿಂದ ಆರೋಗ್ಯದಲ್ಲಿ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೇ ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಜನರು ಹೆಚ್ಚು ನೀರು ಕುಡಿಯೋದಿಲ್ಲ. ಇದರಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುತ್ತದೆ. ಶರೀರ ಡಿಹೈಡ್ರೇಟ್ ಆಗುವುದರಿಂದಲೇ ಎಷ್ಟೋ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗೆಯೇ ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಕೂಡ ಹೆಚ್ಚು.

ಅಮೆರಿಕ (America) ದಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಪಾರ್ಶ್ವವಾಯು (Paralysis) ಅಂಗವಿಕಲತೆ ಮತ್ತು ಸಾವಿಗೆ ಕಾರಣವಾಗುತ್ತಿದೆ. ಅಧ್ಯಯನದ ಪ್ರಕಾರ, ಎಲ್ಲ ಪಾರ್ಶ್ವವಾಯು ಪ್ರಕರಣಗಳಲ್ಲಿ ವ್ಯಕ್ತಿಯು ಡಿಹೈಡ್ರೇಟ್ ಆಗಿರುವುದು ಕಂಡುಬಂದಿದೆ. ಇದರಿಂದ ಡಿಹೈಡ್ರೇಷನ್ (Dehydration) ಗೆ ಹಾಗೂ ಸ್ಟ್ರೋಕ್ ಗೆ ಒಂದಕ್ಕೊಂದು ಸಂಬಂಧವಿದೆ ಎಂಬುದು ಸ್ಪಷ್ಟವಾಗುತ್ತದೆ. ಸ್ಟ್ರೋಕ್ ಕಾರಣದಿಂದ ಮನುಷ್ಯ ವಿಕಲಾಂಗನಾಗಬಹುದು. ಅಮೆರಿಕದಲ್ಲಿ ಸ್ಟ್ರೋಕ್, ಮನುಷ್ಯನ ಸಾವಿಗೆ ಐದನೇ ಪ್ರಮುಖ ಕಾರಣವಾಗಿದೆ ಎನ್ನುವುದು ತಿಳಿದುಬಂದಿದೆ. ಅಲ್ಲಿ ಎದುರಾಗುವ ಸಾವಿನ ಪ್ರಕರಣದಲ್ಲಿ ಪ್ರತಿಶತ 50ರಷ್ಟು ಜನರು ಡಿಹೈಡ್ರೇಟ್ ಆಗಿರುತ್ತಾರೆ ಎಂದು ಅಧ್ಯಯನ ಹೇಳಿದೆ. ಮಾಡರ್ನ್ ಮೈಗ್ರೇನ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನ್ಯೂರಾಲಜಿಸ್ಟ್ ಆಗಿರುವ ರಿಸಾ ರೆವಿಟ್ಸ್,  13 ರಾಜ್ಯಗಳಲ್ಲಿ ಪಾರ್ಶ್ವವಾಯುವಿಗೆ ಚಿಕಿತ್ಸೆ ಕೊಡುತ್ತಾರೆ. ಅವರು, ಪಾರ್ಶ್ವವಾಯು ಮತ್ತು ನಿರ್ಜಲೀಕರಣದ ನಡುವೆ ಸಂಬಂಧವಿದೆ ಎಂದು ಹೇಳಿದ್ದಾರೆ.

ಯುವಕರು ಹಾರ್ಟ್ ಅಟ್ಯಾಕ್ ಸತ್ರೆ ಕ್ರ್ಯಾಶ್ ಡಯಟ್ ಎಫೆಕ್ಟ್ ಅಂತಾರಲ್ಲ, ಏನದು?

ವಯಸ್ಸಾದವರು ಚಳಿಗಾಲದಲ್ಲಿ ಹೆಚ್ಚು ನೀರು ಸೇವಿಸಿ : ದೇಹಕ್ಕೆ ನೀರು ಅತೀ ಅವಶ್ಯಕ. ಡಿಹೈಡ್ರೇಷನ್ (Dehydration) ನಿಂದ ಬಚಾವಾಗಲು ನೀರು ಕುಡಿಯಲೇಬೇಕು. ವಿಪರೀತ ನೀರು ಕುಡಿದರೂ ಅಪಾಯ ಕಟ್ಟಿಟ್ಟ ಬುತ್ತಿ. ವಯಸ್ಸಾದಂತೆ ಶರೀರದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಹಾಗಾಗಿ ವಯಸ್ಕರು ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯಬೇಕು.

ನಿಮ್ಮ ಶರೀರ ನಿರ್ಜಲೀಕರಣಗೊಂಡಿದೆ ಎನ್ನುವುದನ್ನು ಪತ್ತೆ ಹಚ್ಚೋದು ಹೇಗೆ? : ದಿನಕ್ಕೆ ಒಂದು ಲೀಟರ್ ಗಿಂತ ಕಡಿಮೆ ನೀರು ಸೇವನೆ ಮಾಡುವವರಿದ್ದಾರೆ. ಅವರಿಗೆ ಬಾಯಾರಿಕೆ ಆಗೋದಿಲ್ಲ. ಹಾಗಾಗಿ ನಿರ್ಜಲೀಕರಣ ಸಮಸ್ಯೆ ತಮಗಿದೆ ಎನ್ನುವುದೇ ತಿಳಿಯೋದಿಲ್ಲ. ಆದ್ರೆ ನಿಮ್ಮ ಶರೀರದಲ್ಲಿ ಆಗುವ ಕೆಲ ಬದಲಾವಣೆಯಿಂದ ನೀವು ನಿಮ್ಮ ದೇಹಕ್ಕೆ ನೀರಿನ ಕೊರತೆಯಾಗಿದೆ ಎಂಬುದನ್ನು ತಿಳಿಯಬಹುದು. ಮಲಬದ್ಧತೆ, ಬಾಯಿ ಒಣಗುವುದು, ನರಗಳ ನೋವು ಹಾಗೂ ಸೆಳೆತ, ತಲೆ ಸುತ್ತುವುದು, ಸುಸ್ತು, ಮಲದ ಬಣ್ಣ ಬದಲಾಗುವುದು, ಜೋರಾದ ಉಸಿರು ಮತ್ತು ಎದೆಬಡಿತ ಹೆಚ್ಚುವುದು, ತಲೆನೋವು ಮುಂತಾದ ಸಮಸ್ಯೆಗಳು ನಿರ್ಜಲಿಕರಣದಲ್ಲಿ ಕಾಡುತ್ತದೆ.

ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತೆ ಡಿಹೈಡ್ರೇಷನ್ ಲಕ್ಷಣ : ವಯಸ್ಸಿಗೆ ಅನುಗುಣವಾಗಿ ಡಿಹೈಡ್ರೇಷನ್ ಲಕ್ಷಣಗಳು ಕೂಡ ಭಿನ್ನವಾಗಿರುತ್ತದೆ. ಚಿಕ್ಕ ಮಕ್ಕಳು ಅಳುವಾಗ ಅವರ ಕಣ್ಣಲ್ಲಿ ನೀರು ಬರುತ್ತಿಲ್ಲ ಎಂದಾದರೆ ಅವರ ದೇಹ ನಿರ್ಜಲೀಕರಣವಾಗಿದೆ ಎಂದರ್ಥ. ಇನ್ನು ವಯಸ್ಕರಿಗೆ ಚರ್ಮ ಸುಕ್ಕಾಗುವುದು, ಬೆವರು ಬರದೇ ಇರುವುದು, ಬಿಪಿ ಇಳಿಕೆಯಾಗುವುದು ಕೂಡ ಡಿಹೈಡ್ರೇಷನ್ ಲಕ್ಷಣವೇ ಆಗಿದೆ. ನಿಮ್ಮ ಶರೀರ ಆಗಾಗ ಡಿಹೈಡ್ರೇಟ್ ಆಗುತ್ತಿದ್ದರೆ ನೀವು ಹೈಪೋವೊಲೆಮಿಕ್ ಆಘಾತ ಅಥವಾ ರೋಗಗ್ರಸ್ಥರಾಗಬಹುದು. ಇದರಿಂದ ದೂರವಿರಲು ನೀವು ವೈದ್ಯರನ್ನು ಸಂಪರ್ಕಿಸಬೇಕು.

Male Menopause: ಮಹಿಳೆ ಮಾತ್ರವಲ್ಲ ಪುರುಷನನ್ನೂ ಕಾಡುತ್ತೆ ಋತುಬಂಧ!

ಸ್ಟ್ರೋಕ್ ಅನ್ನು ಸೆರೆಬ್ರೊವ್ಯಾಸ್ಕ್ಯುಲರ್ ಆಕ್ಸಿಡೆಂಟ್ (CVA) ಎಂದು ಕೂಡ ಹೇಳಲಾಗುತ್ತದೆ. ಮೆದುಳಿಗೆಕ ರಕ್ತ ಸಂಚಾರ ಸರಿಯಾಗಿ ಆಗದೇ ಇದ್ದಾಗ ಸಿವಿಎ ಆಗುತ್ತದೆ. ಮೆದುಳಿಗೆ ಸರಿಯಾದ ಪೌಷ್ಠಿಕಾಂಶ ಮತ್ತು ಆಮ್ಲಜನಕ ಪೂರೈಕೆಯಾಗದೇ ಇದ್ದಾಗ ಸ್ಟ್ರೋಕ್ ಸಂಭವಿಸುತ್ತದೆ. ಇದರಿಂದಾಗಿ ಮೆದುಳಿನ ಕೋಶಗಳು ಸಾಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ.

ಈ ರೋಗಕ್ಕೆ ಒಳಗಾದವರಿಗೂ ಸ್ಟ್ರೋಕ್ ಹೆಚ್ಚು : ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ರೋಗ, ಹಳೆ ನೋವು, ಧೂಮಪಾನ, ಅಧಿಕ ವಯಸ್ಸು, ವಂಶವಾಹಿನಿ, ಹೈ ಕೊಲೆಸ್ಟ್ರಾಲ್ ಹಾಗೂ ದೀರ್ಘಕಾಲದ ನೋವನ್ನು ಹೊಂದಿದವರಿಗೆ ಪಾರ್ಶ್ವವಾಯು ಹೆಚ್ಚು ಕಾಡುತ್ತದೆ. ಇದರ ಹೊರತಾಗಿ ಅಪಧಮನಿಯಲ್ಲಿ ಪ್ಲೇಕ್ ನಿರ್ಮಾಣವಾದಾಗ ಅಥವಾ ರಕ್ತ ಹೆಪ್ಪುಗಟ್ಟುವಿಕೆಯಿಂದ ಇಸ್ಕೆಮಿಕ್ ಸ್ಟ್ರೋಕ್ ಉಂಟಾಗುತ್ತದೆ. ಮೆದುಳಿನಲ್ಲಿ ರಕ್ತನಾಳ ಒಡೆದಾಗ ಹೆಮರಾಜಿಕ್ ಸ್ಟ್ರೋಕ್ ಸಂಭವಿಸುತ್ತದೆ.
 

Follow Us:
Download App:
  • android
  • ios