Asianet Suvarna News Asianet Suvarna News

Male Menopause: ಮಹಿಳೆ ಮಾತ್ರವಲ್ಲ ಪುರುಷನನ್ನೂ ಕಾಡುತ್ತೆ ಋತುಬಂಧ!

ಪಿರಿಯಡ್ಸ್, ಋತುಬಂಧ ಎಲ್ಲ ಸಮಸ್ಯೆ ಮಹಿಳೆಗೆ ಮಾತ್ರ ಅಂತಾ ನಾವಂದುಕೊಂಡಿದ್ದೇವೆ. ಆದ್ರೆ ನಮ್ಮ ನಂಬಿಕೆ ತಪ್ಪು. ಪುರುಷರು ಕೂಡ ಈ ಸಮಸ್ಯೆಗಳಿಂದ ಬಳಲ್ತಾರೆ. ಅವರಲ್ಲೂ ಅನೇಕ ಲಕ್ಷಣ ಕಾಣಿಸುತ್ತೆ.

Male Menopause Is The More Common Term For Andropause roo
Author
First Published Nov 1, 2023, 3:33 PM IST

ವಯಸ್ಸಾಗ್ತಿದ್ದಂತೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಆಗ್ತವೆ. ಕೆಲವು ಒಳ್ಳೆಯ ಬದಲಾವಣೆ ಆದ್ರೆ ಮತ್ತೆ ಕೆಲವನ್ನು ಸಹಿಸೋದು ಸ್ವಲ್ಪ ಕಷ್ಟವೆನ್ನಿಸುತ್ತದೆ. ಮಹಿಳೆಯರಿಗೆ ಹಾರ್ಮೋನ್ ಏರುಪೇರಾಗುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಬರೀ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಈ ಹಾರ್ಮೋನ್ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಹಿಂದೆಯೇ ಪುರುಷರು ಕೂಡ ಪಿರಿಯಡ್ಸ್ ಪ್ರಕ್ರಿಯೆಗೆ ಒಳಗಾಗ್ತಾರೆ ಎಂಬ ವಿಷ್ಯವನ್ನು ವೈದ್ಯರು ಹೇಳಿದ್ರು. ಬ್ಲೀಡಿಂಗ್ ಹೊರತುಪಡಿಸಿ ಮೂಡ್ ಸ್ವಿಂಗ್ ಸೇರಿದಂತೆ ಕೆಲ ಸಮಸ್ಯೆ ಪುರುಷರನ್ನು ಕಾಡುತ್ತದೆ ಎಂದು ಹೇಳಲಾಗಿತ್ತು. ಪಿರಿಯಡ್ಸ್ ರೀತಿಯಲ್ಲೇ ಪುರುಷರು ಕೂಡ ಋತುಬಂಧದ ಲಕ್ಷಣವನ್ನು ಅನುಭವಿಸುತ್ತಾರೆಂದು ತಜ್ಞರು ಹೇಳ್ತಾರೆ.

ಪುರುಷರಿಗೂ ವಯಸ್ಸಾಗ್ತಿದ್ದಂತೆ ಹಾರ್ಮೋನ್ (Hormone) ನಲ್ಲಿ ಬದಲಾವಣೆ ಆಗುತ್ತದೆ. ಋತುಬಂಧಕ್ಕೆ ಸಂಬಂಧಿಸಿದ ಕೆಲ ಲಕ್ಷಣ ಕಾಣಿಸುತ್ತದೆ. ಅದನ್ನು ಆಂಡ್ರೋಪಾಸ್ (Andropause) ಎಂದು ಕರೆಯಲಾಗುತ್ತದೆ. ಸುಮಾರು ೫೦ನೇ ವಯಸ್ಸಿನಲ್ಲಿ ಪುರುಷರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಶೇಕಡಾ ೩೦ರಷ್ಟು ಪುರುಷರು ೫೦ ವರ್ಷವಾಗ್ತಿದ್ದಂತೆ ಈ ಸಮಸ್ಯೆಗೆ ಒಳಗಾಗ್ತಾರೆ ಎಂದು ತಜ್ಞರು ಹೇಳ್ತಾರೆ. ಮಹಿಳೆಯರ ಋತುಬಂಧ (Menopause) ಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಪುರುಷರ ಆಂಡ್ರೋಪಾಸ್ ಮತ್ತು ಮಹಿಳೆಯರ ಮೆನೋಪಾಸ್ ನಡುವೆ ಹಲವು ವ್ಯತ್ಯಾಸಗಳಿವೆ. ನಾವಿಂದು ಪುರುಷರ ಋತುಬಂಧದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

ಹಲಸಿನ ಹಣ್ಣು ಇವನ್ನೆಲ್ಲಾ ತಿಂದ್ರೆ ಆರೋಗ್ಯ ಕೆಡೋದು ಗ್ಯಾರಂಟಿ!

ಪುರುಷರ ಋತುಬಂಧ ಆಂಡ್ರೋಪಾಸ್ ಎಂದರೇನು? : ಪುರುಷರಲ್ಲಿ ಟೆಸ್ಟೋಸ್ಟೆರಾನ್ (Testosterone) ಕೊರತೆ ಪ್ರಾರಂಭವಾದಾಗ ಆಂಡ್ರೋಪಾಸ್ ಕಾಡುತ್ತದೆ. 50 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಈ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. 30 ವರ್ಷ ದಾಟಿದ ನಂತರ, ಟೆಸ್ಟೋಸ್ಟೆರಾನ್ ಮಟ್ಟವು ಪ್ರತಿ ವರ್ಷ ಸುಮಾರು ಶೇಕಡಾ 1 ರಷ್ಟು ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ. 

ಟೆಸ್ಟೋಸ್ಟೆರಾನ್ ಮಟ್ಟದಲ್ಲಿ ಇಳಿಕೆಯಾಗಲು ನಾನಾ ಕಾರಣವಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಸ್ಥೂಲಕಾಯ, ಮಧುಮೇಹ, ಮೂತ್ರಪಿಂಡ ಕಾಯಿಲೆ, ಎಚ್‌ಐವಿ, ಒತ್ತಡ ಮತ್ತು ಔಷಧಿ, ಖಿನ್ನತೆ ಇವೆಲ್ಲವೂ ಟೆಸ್ಟೋಸ್ಟೆರಾನ್ ಮೇಲೆ ಪ್ರಭಾವ ಬೀರುತ್ತದೆ. ಮಹಿಳೆಯರಿಗೆ ಋತುಬಂಧದ ನಂತ್ರ ಸಂತಾನೋತ್ಪತ್ತಿ ಸಾಧ್ಯವಿಲ್ಲ. ಆದ್ರೆ ಪುರುಷರಲ್ಲಿ ಆಂಡ್ರೋಪಾಸ್ ನಂತ್ರ ಸಂತಾನೋತ್ಪತ್ತಿ ಅಂಗಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ. ಪುರುಷರು ಇನ್ನೂ ವೀರ್ಯವನ್ನು ಉತ್ಪಾದಿಸುತ್ತಾರೆ. 

ಬ್ರಾ ಹರಿದಿಲ್ಲ ಅಂತ ಬಳಸ್ತಾನೇ ಇದ್ರೆ? ಬರೀ ಸೌಂದರ್ಯಕ್ಕಲ್ಲ, ನಿಮ್ಮ ವಿಶ್ವಾಸಕ್ಕೇ ಕುತ್ತು!

ಪುರುಷರ ಋತುಬಂಧದ ಆರಂಭಿಕ ಲಕ್ಷಣ : ದೇಹದಲ್ಲಿ ಶಕ್ತಿಯ ಕೊರತೆ, ದುಃಖ ಅಥವಾ ಖಿನ್ನತೆ, ಕುಗ್ಗಿದ ಮನಸ್ಸು, ಆತ್ಮವಿಶ್ವಾಸದ ಕೊರತೆ, ನಿರಾಸಕ್ತಿ, ನಿದ್ರೆಯ ಕೊರತೆ, ಕೊಬ್ಬು ಹೆಚ್ಚಾಗುವುದು, ಬೊಜ್ಜಿನ ಸಮಸ್ಯೆ, ದೈಹಿಕ ದೌರ್ಬಲ್ಯ, ಗೈನೆಕೊಮಾಸ್ಟಿಯಾ  ಅಥವಾ ಸ್ತನಗಳ ಬೆಳವಣಿಗೆ, ಮೂಳೆ ನೋವು, ಬಂಜೆತ, ಮೂಳೆಗಳ ದುರ್ಬಲತೆ, ಕೂದಲು ಉದುರುವುದು, ಕಡಿಮೆ ಕಾಮಾಸಕ್ತಿ, ಲೈಂಗಿಕ ರೋಗ, ಚರ್ಮ ತೆಳುವಾಗುವುದು, ಚರ್ಮದ ಶುಷ್ಕತೆ, ಕಡಿಮೆಯಾದ ಏಕಾಗ್ರತೆಯ ಸಾಮರ್ಥ್ಯ, ಅತಿಯಾದ ಬೆವರು ಇದ್ರ ಲಕ್ಷಣವಾಗಿದೆ. 

ಇದಕ್ಕೆ ಚಿಕಿತ್ಸೆ : ಪುರುಷರಿಂದ ಪುರುಷರಿಗೆ ಇದು ಭಿನ್ನ ಲಕ್ಷಣವನ್ನು ಹೊಂದಿರುತ್ತದೆಯಾದರೂ ಇದ್ರಲ್ಲಿ ಒಂದೆರಡು ಲಕ್ಷಣ ಕಂಡು ಬಂದಲ್ಲಿ ಅದನ್ನು ನಿರ್ಲಕ್ಷ್ಯಿಸಬಾರದು. ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಆಂಡ್ರೋಪಾಸ್ ನಿಂದ ಬಳಲುವ ಪುರುಷರಿಗೆ  ಟೆಸ್ಟೋಸ್ಟೆರಾನ್ ಚಿಕಿತ್ಸೆ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚರ್ಮದ ತೇಪೆಗಳು, ಕ್ಯಾಪ್ಸುಲ್ಗಳು, ಜೆಲ್ಗಳು ಮತ್ತು ಚುಚ್ಚುಮದ್ದುಗಳಂತಹ ಹಲವು ರೂಪಗಳಲ್ಲಿ ಲಭ್ಯವಿದೆ. ನಿಮ್ಮ ಸ್ಥಿತಿ ಪರಿಗಣಿಸಿ ವೈದ್ಯರು ಇದಕ್ಕೆ ಚಿಕಿತ್ಸೆ ನೀಡುತ್ತಾರೆ.  ಇದಲ್ಲದೆ ಜೀವನಶೈಲಿಯಲ್ಲಿ ಬದಲಾವಣೆ ಮುಖ್ಯ.  ಆರೋಗ್ಯಕರ ಆಹಾರ  ಸೇವಿನೆ, ವ್ಯಾಯಾಮ, ಸೂಕ್ತ ನಿದ್ರೆ ಹಾಗೂ ಒತ್ತಡದಿಂದ ದೂರವಿದ್ರೆ ಅನೇಕ ಬಾರಿ ಸಮಸ್ಯೆ ತಾನಾಗಿಯೇ ಸರಿಯಾಗುತ್ತದೆ.

Follow Us:
Download App:
  • android
  • ios