Asianet Suvarna News Asianet Suvarna News

Curd for Health: ಆ್ಯಸಿಡಿಟಿ ಓಡಿಸುತ್ತೆ ಕೆನೆರಹಿತ ಮೊಸರು

ಮೊಸರನ್ನು ಕೆಲವರು ತಮ್ಮ ಆಹಾರದ ಪಟ್ಟಿಯಿಂದ ದೂರವೇ ಇಡುತ್ತಾರೆ. ವಾರಕ್ಕೊಮ್ಮೆಯೂ ಸೇವಿಸುವುದಿಲ್ಲ. ಕೆಲವರಿಗೆ ಮೊಸರೆಂದರೆ ಪ್ರಾಣ. ಮೂರೂ ಹೊತ್ತು ಮೊಸರು ಬೇಕು. ಇವೆರಡೂ ಸರಿಯಲ್ಲ. ಮೊಸರನ್ನು ಬೆಳಗಿನ ಹೊತ್ತು ಸ್ವಲ್ಪ ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಹಾಗೂ ಆ್ಯಸಿಡಿಟಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 
 

Curd fights with Acid reflex and heart burn
Author
Bangalore, First Published Dec 22, 2021, 9:30 AM IST

ಪರೀಕ್ಷೆಗೆ ತೆರಳುವಾಗ, ಪ್ರಮುಖ ಕಾರ್ಯಗಳಿಗೆ ಹೊರಡುವ ಮುನ್ನ ಒಂದೆರಡು ಚಮಚ ಮೊಸರು (curd) ತಿಂದು ಹೋಗುವಂತೆ ಹಿರಿಯರು ಹೇಳುತ್ತಿದ್ದರು. ಪರೀಕ್ಷೆ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೊರಟಾಗ ಏನೋ ಒಂದು ರೀತಿಯ ಉದ್ವೇಗ (anxiety), ಕಳವಳ ಇರುವುದು ಸಹಜ. ಈ ಭಾವನೆಗಳಿಂದ ಹೊಟ್ಟೆಯಲ್ಲಿ ಒಂದು ರೀತಿಯ ತಳಮಳ, ಒತ್ತಡ (tension) ತುಂಬಿಕೊಳ್ಳುತ್ತದೆ. ಮೊಸರು ತಿನ್ನುವುದರಿಂದ ಈ ತಳಮಳ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಹಿರಿಯರು ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಮೊಸರು ತಿನ್ನುವಂತೆ ಸಲಹೆ ನೀಡುತ್ತಿದ್ದರು. ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿ ಮೊಸರು (curd) ಮುಖ್ಯ ಸ್ಥಾನದಲ್ಲಿದೆ. 

ಹೊಟ್ಟೆಯಲ್ಲಿ ನಿರ್ಮಾಣವಾಗುವ ಒಂದು ರೀತಿಯ ಉದ್ವೇಗ, ಆತಂಕ ಹಾಗೂ ತಳಮಳದಿಂದ ಹೊಟ್ಟೆಯುಬ್ಬರವಾದಂತೆ ಆಗುತ್ತದೆ. ಇದು ದೀರ್ಘಕಾಲದಲ್ಲಿ ತೀವ್ರವಾದ ಆ್ಯಸಿಡಿಟಿ (acidity) ಉಂಟುಮಾಡಬಲ್ಲದು. ಮೊಸರನ್ನು ಸೇವಿಸುವ ಮೂಲಕ ಇದನ್ನು ತಡೆಯಬಹುದು.

ಬೆಳಗ್ಗೆ ಖಾಲಿ ಹೊಟ್ಟೆ (empty stomach)ಯಲ್ಲಿ ನಿನ್ನೆಯ ಅನ್ನ ಹಾಗೂ ಮೊಸರನ್ನು ಕಲೆಸಿ 3-4 ತುತ್ತುಗಳನ್ನು ತಿನ್ನುವಂತೆಯೂ ಕೆಲವು ಆಯುರ್ವೇದ ವೈದ್ಯರು ಸಲಹೆ ನೀಡುತ್ತಾರೆ. ಇದಕ್ಕೂ ಇದೇ ಕಾರಣ. ಎಷ್ಟೋ ಬಾರಿ ಇದು ನಿಮಗೂ ಅನುಭವಕ್ಕೆ ಬಂದಿರಬಹುದು. ಖಾಲಿ ಹೊಟ್ಟೆಯಲ್ಲಿ ಉಂಟಾಗುವ ಪಿತ್ತ ಮೊಸರು ತಿಂದಾಕ್ಷಣ ಶಮನವಾಗುತ್ತದೆ. 

ಬೆಳಗ್ಗಿನ ತಿಂಡಿ (breakfast) ಯೊಂದಿಗೆ ಸ್ವಲ್ಪವಾದರೂ ಮೊಸರು ಸೇವಿಸುವ ಪದ್ಧತಿ ಅನೇಕ ಕಡೆಗಳಲ್ಲಿ ಇಂದಿಗೂ ಇದೆ. ಇದೊಂದು ರೀತಿ ಆ ದಿನದ ಕೆಲಸಕಾರ್ಯಗಳಿಗೆ ಹೊಟ್ಟೆಯನ್ನು ಸಜ್ಜುಗೊಳಿಸುವ ಕ್ರಮ. ಬೆಳಗ್ಗೆ ಮೊಸರು ಸೇವಿಸುವ ಅಭ್ಯಾಸ ತುಂಬ ಉತ್ತಮ. ಮಧ್ಯಾಹ್ನದ ಬಳಿಕ ಯಾವುದೇ ಕಾರಣಕ್ಕೆ  ಸೇವನೆ ಮಾಡಬಾರದು. ಮೊದಲೆಲ್ಲ ಮಧ್ಯಾಹ್ನ ಹಾಗೂ ಸಂಜೆಯ ಊಟಕ್ಕೆ ಮಜ್ಜಿಗೆಯನ್ನು ಧಾರಾಳವಾಗಿ ಬಳಕೆ ಮಾಡಲಾಗುತ್ತಿತ್ತು. ಆದರೆ, ಇಂದು ಬಹುತೇಕ ಮನೆಗಳಲ್ಲಿ ರಾತ್ರಿಯ ಊಟಕ್ಕೂ ಮೊಸರನ್ನು ಧಾರಾಳವಾಗಿ ಬಳಕೆ ಮಾಡಲಾಗುತ್ತದೆ. ಇದರಿಂದ ಮಕ್ಕಳಿಗೆ ಕಫ, ಶೀತ(cold) ದ ಸಮಸ್ಯೆಯಾಗಬಹುದು.

Get Rid of Back Fat: ಅಪ್ಪರ್ ಬ್ಯಾಕ್ ಕೊಬ್ಬು ಕರಗಿಸಲು ಹೀಗೆ ಮಾಡಬಹುದು

 ಕಫದ (sputum) ಪ್ರಕೃತಿಯ ಜನರಿಗೆ ಮೊಸರು ಅಲರ್ಜಿ (allergy) ಯಾಗುತ್ತದೆ. ಅಂದರೆ, ಶೀತವಾಗುವ, ಕಫ ಕಟ್ಟುವ ಸಮಸ್ಯೆ ಉಂಟಾಗುತ್ತದೆ. ಮೈ ಕೈ ನೋವು, ತಲೆನೋವು (headache) ಉಂಟಾಗಬಹುದು. ಅಥವಾ ಮೂಗು ಕಟ್ಟಿಕೊಂಡು ಸಮಸ್ಯೆ ಆಗಬಹುದು.  

ಅಸಲಿಗೆ, ಮೊಸರು ಬೇಗ ಜೀರ್ಣವಾಗುವುದಿಲ್ಲ. ನಿಧಾನವಾಗಿ ಜೀರ್ಣವಾಗುತ್ತದೆ. ಮೊಸರಿನ ವಿಚಾರದಲ್ಲಿ ಮತ್ತೊಂದು ನೆನಪಿಡಬೇಕಾದ ಸಂಗತಿ ಎಂದರೆ, ಋತುಗಳು ಸೇರುವ ಸಮಯ ಅಂದರೆ, ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಸಮಯದಲ್ಲಿ, ಚಳಿಗಾಲ ಮುಗಿದು ಬೇಸಿಗೆ ಶುರುವಾಗುವ ವಾತಾವರಣದಲ್ಲಿ ಮೊಸರನ್ನು ಸೇವಿಸಬಾರದು. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಕೆಮ್ಮು, ಶೀತ, ಸೈನಸ್ (sinus), ಅಸ್ತಮಾ, ಕಫದ ಸಮಸ್ಯೆ ಇರುವವರು, ಮುಟ್ಟಿನ ಸಮಯದಲ್ಲಿ ಹೆಚ್ಚು ಬ್ಲೀಡಿಂಗ್ ಸಮಸ್ಯೆ ಹೊಂದಿರುವವರು ಮೊಸರನ್ನು ಬಳಕೆ ಮಾಡದಿರುವುದು ಕ್ಷೇಮ. 

Sex Coffee Trend: 2022ರಲ್ಲಿ ‘ಸೆಕ್ಸ್ ಕಾಫಿ’ ಟ್ರೆಂಡ್‌, ಏನಿದು..?

ಮೊಸರೆಂದರೆ ಕೇವಲ ಹಸುವಿನದ್ದಲ್ಲ
ಮೊಸರಿನಲ್ಲೂ ವಿವಿಧ ವಿಧಗಳುಂಟು. ನಾವು ಸಾಮಾನ್ಯವಾಗಿ ಹಸುವಿನ ಹಾಲನ್ನು ಬಳಕೆ ಮಾಡುವುದರಿಂದ ಹಸುವಿನ ಮೊಸರಿನ ಬಗ್ಗೆ ಗೊತ್ತಿರುತ್ತದೆ. ಆದರೆ, ಬೇರೆ ಬೇರೆ ಪ್ರಾಣಿಗಳ ಮೊಸರನ್ನೂ ಸೇವನೆ ಮಾಡುವವರಿದ್ದಾರೆ. ಅವುಗಳ ಪರಿಣಾಮ ವಿಭಿನ್ನವಾಗಿರುತ್ತದೆ. ಆಡಿನ ಹಾಲಿನಿಂದ ಮಾಡಿದ ಮೊಸರು ಉಸಿರಾಟದ ತೊಂದರೆ ಇರುವವರಿಗೆ, ಜೀರ್ಣಶಕ್ತಿಗೆ ಬಹಳ ಉತ್ತಮ.  ಎಮ್ಮೆಯ ಮೊಸರು ಜೀರ್ಣವಾಗಲು ಹೆಚ್ಚು ಸಮಯ ಬೇಕು. ವಿಚಿತ್ರವೆಂದರೆ, ಎಮ್ಮೆಯ ಮೊಸರು ಶರೀರದ ಎಲ್ಲ ರೀತಿಯ ದೋಷಗಳನ್ನು ಹೆಚ್ಚಿಸುತ್ತದೆ. ಅಂದರೆ, ವಾತ, ಪಿತ್ತ, ಕಫದ ಸಮಸ್ಯೆಗೆ ಇನ್ನಷ್ಟು ನೀರೆರೆಯುತ್ತದೆ. ಆದರೂ ಸಣ್ಣ ದೇಹ ಹೊಂದಿರುವವರು ಅರ್ಥಾತ್ ಸ್ಥೂಲಕಾಯ ಹೊಂದಿರದೆ ಇರುವವರು ಎಮ್ಮೆಯ ಮೊಸರನ್ನು ಆರಾಮಾಗಿ ಸೇವಿಸಬಹುದು. ದಪ್ಪಗಿರುವವರಿಗೆ ಎಮ್ಮೆಯ ಮೊಸರು ಬೇಡವೇ ಬೇಡ. ಕೆನೆ ತೆಗೆದು ಮಾಡಿದ ಮೊಸರು ಜೀರ್ಣಕಾರಿ. ದೇಸಿ ಹಸುವಿನ ಮೊಸರನ್ನು ಎಲ್ಲರೂ ಬಳಕೆ ಮಾಡಬಹುದು. ಮೊಸರಿನ ಜತೆ ಉಪ್ಪು (salt) ಅಥವಾ ಸಕ್ಕರೆ (sugar) ಸೇರಿಸಿಕೊಂಡು ತಿಂದರೆ ಹೆಚ್ಚಿನ ಹಾನಿಯಾಗುವುದಿಲ್ಲ.  

ಎಚ್ಚರಿಕೆ ಇರಲಿ
ಮೊಸರಿನಲ್ಲಿ ಹಲವು ಉತ್ತಮ ಗುಣಗಳಿರುತ್ತವೆ. ಹೆಚ್ಚು ಪ್ರೊಟೀನ್ ಅಂಶ ಇರುತ್ತದೆ. ಆಹಾರ ಜೀರ್ಣವಾಗಲು ಇದು ಸಹಕಾರಿಯಾಗಿದೆ.  ಪ್ರೊಬಯೋಟಿಕ್ಸ್-ಒಳ್ಳೆಯ ಬ್ಯಾಕ್ಟೀರಿಯಾ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಭೇದಿ ಸಮಸ್ಯೆಯುಂಟಾದಾಗ ಮೊಸರನ್ನ ತಿನ್ನುವುದರಿಂದ ನಿಯಂತ್ರಣಕ್ಕೆ ಬರುವುದು ಅನುಭವಕ್ಕೆ ಬಂದಿರಬಹುದು. ಇದರಲ್ಲಿರುವ ಪ್ರೊಬಯೋಟಿಕ್ ಗಳೇ ಇದಕ್ಕೆ ಕಾರಣ.


 

Follow Us:
Download App:
  • android
  • ios