Asianet Suvarna News Asianet Suvarna News

Covid Variant XBB.1.5 : ಅಮೇರಿಕಾದಲ್ಲಿ ಮತ್ತೆ ಕೋವಿಡ್‌ ಸ್ಫೋಟ, ಎಕ್ಸ್‌ಬಿಬಿ.1.5 ಆತಂಕ !

ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಮಧ್ಯೆ ಅಮೆರಿಕದಲ್ಲಿ ಕೋವಿಡ್‌ನ ಒಮಿಕ್ರೋನ್‌ ರೂಪಾಂತರಿಯ ಎಕ್ಸ್‌ಬಿಬಿ.1.5 ತಳಿಯು ಪ್ರಾಬಲ್ಯ ಪಡೆದುಕೊಳ್ಳುತ್ತಿದ್ದು, ಹೊಸ ಕೋವಿಡ್‌ ಅಲೆಯ ಆತಂಕ ಸೃಷ್ಟಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Covid variant XBB.1.5 account for over 40% of cases in US Vin
Author
First Published Jan 1, 2023, 9:54 AM IST

ವಾಷಿಂಗ್ಟನ್‌: ಕೋವಿಡ್‌ನ ಒಮಿಕ್ರೋನ್‌ ರೂಪಾಂತರಿಯ (Omicron variant) ಎಕ್ಸ್‌ಬಿಬಿ.1.5 ತಳಿಯು ಅಮೆರಿಕದಲ್ಲಿ ಪ್ರಾಬಲ್ಯ ಪಡೆದುಕೊಳ್ಳುತ್ತಿದ್ದು, ಹೊಸ ಕೋವಿಡ್‌ ಅಲೆಯ ಆತಂಕ (Anxiety) ಸೃಷ್ಟಿಸಿದೆ. ಅಮೆರಿಕದಲ್ಲಿ ವರದಿಯಾಗುತ್ತಿರುವ ಒಟ್ಟು ಕೇಸುಗಳಲ್ಲಿ ಎಕ್ಸ್‌ಬಿಬಿ.1.5 ಪಾಲು ಶೇ.41ರಷ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಎಕ್ಸ್‌ಬಿಬಿ.1.5 ತಳಿಯು ಇತರೆ ಉಪತಳಿಗಳಿಗೆ ಹೋಲಿಸಿದರೆ ತೀವ್ರ ಸೋಂಕುಕಾರಕವಾಗಿದೆ. ಕಳೆದ 1 ವಾರದಲ್ಲೇ ಎಕ್ಸ್‌ಬಿಬಿ.1.5 ಕೇಸುಗಳು ದುಪ್ಪಟ್ಟಾಗಿವೆ ಎಂದು ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರ ಕಳವಳ ವ್ಯಕ್ತಪಡಿಸಿದೆ.

ಕಳೆದ ವಾರ ವರದಿಯಾದ ಕೇಸುಗಳಲ್ಲಿ ಎಕ್ಸ್‌ಬಿಬಿ.1.5 ಪಾಲು ಶೇ. 21.7ರಿಂದ ಶೇ.41ಕ್ಕೆ ಏರಿಕೆಯಾಗಿದೆ. ಕೋವಿಡ್‌ ಲಸಿಕೆ (Vaccine) ಹಾಗೂ ಒಮಿಕ್ರೋನ್‌ ಬೂಸ್ಟರ್‌ ಡೋಸುಗಳು ಎಕ್ಸ್‌ಬಿಬಿ.1.5 ಎದುರು ದುರ್ಬಲ ಎನಿಸುತ್ತಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಮೊಟ್ಟಮೊದಲ ಬಾರಿ ಎಕ್ಸ್‌ಬಿಬಿ ತಳಿ ಪತ್ತೆಯಾಗಿತ್ತು. ಎಕ್ಸ್‌ಬಿಬಿ.1 ಹಾಗೂ ಎಕ್ಸ್‌ಬಿಬಿ.1.5 ಇದೇ ವಂಶಕ್ಕೆ ಸೇರಿದ ಉಪತಳಿಗಳಾಗಿವೆ.

ಭಾರತದ ಕೋವಿಡ್‌ ಔಷಧಕ್ಕೆ ಚೀನಾದಲ್ಲಿ ಭಾರೀ ಡಿಮ್ಯಾಂಡ್: ಕಾಳಸಂತೆಯ ಮೊರೆ ಹೋದ ಚೀನಿಯರು..!

ಯುನೈಟೆಡ್ ಸ್ಟೇಟ್ಸ್‌ನಲ್ಲಿ 40% ಕ್ಕಿಂತ ಹೆಚ್ಚು Covid-19 ಪ್ರಕರಣಗಳು ಈಗ Omicron XBB.1.5 ನಿಂದ ಉಂಟಾಗುತ್ತವೆ, US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್‌ನಿಂದ ಬಿಡುಗಡೆ ಮಾಡದ ಡೇಟಾ ದೃಢಪಡಿಸಿದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ. ಹಿಂದಿನ ರೂಪಾಂತರಗಳಿಗಿಂತ XXB15 ರೂಪಾಂತರವು ಪ್ರಸರಣ R ಮೌಲ್ಯ ಮತ್ತು ಸೋಂಕಿನ ದರದಲ್ಲಿ ಹೆಚ್ಚು ಕೆಟ್ಟದಾಗಿದೆ ಎಂದು ಬಹು ಮಾದರಿಗಳು ತೋರಿಸುತ್ತವೆ ಎಂದು ಅವರು ಹೇಳಿದರು. ವಿಪರ್ಯಾಸವೆಂದರೆ, ಬಹುಶಃ ಇದೀಗ ಜಗತ್ತು ಎದುರಿಸುತ್ತಿರುವ ಅತ್ಯಂತ ಕೆಟ್ಟ ರೂಪಾಂತರವೆಂದರೆ XBB ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕೆಲ್ ಓಸ್ಟರ್‌ಹೋಮ್, ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಕೋವಿಡ್-19: XXB.1.5 ರೂಪಾಂತರ ಎಂದರೇನು?
XXB.1.5 ಎಂಬುದು ಕೊರೋನವೈರಸ್ ಸೋಂಕಿನ ಉಪ-ವ್ಯತ್ಯಯವಾಗಿದ್ದು ಅದು ಯುನೈಟೆಡ್ ಸ್ಟೇಟ್ಸ್‌ನಲ್ಲಿ 40% ಕ್ಕಿಂತ ಹೆಚ್ಚು ಪ್ರಕರಣಗಳಿಗೆ ಕಾರಣವಾಗಿದೆ. ಹಿಂದಿನ ರೂಪಾಂತರಗಳಿಗಿಂತ XXB.1.5 ಪ್ರಸರಣಮೌಲ್ಯ ಮತ್ತು ಸೋಂಕಿನ ದರದಲ್ಲಿ ಹೆಚ್ಚು ಕೆಟ್ಟದಾಗಿದೆ ಎಂದು ಬಹು ಮಾದರಿಗಳು ತೋರಿಸುತ್ತವೆ. ಸರಳವಾಗಿ ಹೇಳುವುದಾದರೆ, XBB ಮತ್ತು XBB.1.5 ಎರಡೂ BA.2 ರೂಪಾಂತರದ ಮರುಸಂಯೋಜಕಗಳಾಗಿವೆ. ವೈರಾಲಜಿಸ್ಟ್ ಜಿ ಕಾಂಗ್ ಪ್ರಕಾರ, XXB ಎಲ್ಲಾ ಓಮಿಕ್ರಾನ್ ಸಬ್‌ವೇರಿಯಂಟ್‌ಗಳಂತೆ ಜನರಿಗೆ ಸುಲಭವಾಗಿ ಸೋಂಕು ಹರಡಿಸುತ್ತದೆ. 

ಭಾರತಕ್ಕೆ ಆಗಮಿಸಿದ 39 ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟೀವ್!

ಭಾರತಕ್ಕೆ ಕೋವಿಡ್ 4ನೇ ಅಲೆ ಭೀತಿ, ಹೊಸ ವರ್ಷದ ಆರಂಭದಿಂದ ನಿರ್ಬಂಧ ಜಾರಿ!
ಭಾರತದಲ್ಲಿ ಕೋವಿಡ್ ಭೀತಿ ಹೆಚ್ಚಾಗಿದೆ. ಚೀನಾದಲ್ಲಿನ ಪ್ರತಿ ದಿನ ಪ್ರಕರಣ ಸಂಖ್ಯೆ 5 ಲಕ್ಷ ದಾಟಿದೆ. ಆಸ್ಪತ್ರೆಗಳು (Hospitals) ಭರ್ತಿಯಾಗಿವೆ. ಸಾವಿನ ಸಂಖ್ಯೆ ಏರಿಕೆಯಾಗಿದೆ. ಇದರಿಂದ ಭಾರತದಲ್ಲೂ ಒಂದೊಂದೆ ನಿರ್ಬಂಧ ಜಾರಿಯಾಗುತ್ತಿದೆ. ಇದೀಗ ಭಾರತದಲ್ಲಿ ಕೋವಿಡ್ ನಾಲ್ಕನೇ ಅಲೆ ಭೀತಿ ಎದುರಾಗಿರುವ ಕಾರಣ ಜನವರಿ 1 ರಿಂದ ಕೋವಿಡ್ ನಿಯಮ ಮತ್ತಷ್ಟು ಕಠಿಣವಾಗುತ್ತಿದೆ. ಮೊದಲ ಹಂತದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿರುವ ಚೀನಾ ಸೇರಿದಂತೆ 5 ದೇಶಗಳ ಪ್ರಯಾಣಿಕರಿಗೆ ನಿರ್ಬಂದ ವಿಧಿಸಲಾಗಿದೆ. ಚೀನಾ, ಜಪಾನ್, ಹಾಂಕ್ ಕಾಂಗ್, ಸೌತ್ ಕೊರಿಯಾ, ಸಿಂಗಾಪುರ ಹಾಗೂ ಥಾಯ್‌ಲೆಂಡ್ ದೇಶದಿಂದ ಆಗಮಿಸುವ ಪ್ರಯಾಣಿಕರು (Passengers) ಕಡ್ಡಾಯವಾಗಿ ಆರ್‌ಟಿ ಪಿಸಿಆರ್ ನೆಗಟೀವ್ ವರದಿ ಆಗಿರಬೇಕು ಎಂದು ಭಾರತ ಹೊಸ ಮಾರ್ಗಸೂಚಿ ಹೊರಡಿಸಿದೆ.

5 ದೇಶಗಳ ಪ್ರಯಾಣಿಕರು ಭಾರತಕ್ಕೆ ಆಗಮಿಸುವಾಗ ಕೋವಿಡ್ ನೆಗಟೀವ್ ವರದಿ ತರಬೇಕು. ಈ ವರದಿ 72 ಗಂಟೆ ಮೀರಿರಬಾರದು. ಈ ನಿಯಮ ಜನವರಿ 1, 2023ರಿಂದ ಜಾರಿಯಾಗುತ್ತಿದೆ. ಈಗಾಗಲೇ ಭಾರತದಲ್ಲಿ ಒಂದೊಂದೆ ನಿಯಮಗಳು ಜಾರಿಯಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್, ಸಾಮಾಜಿಕ ಅಂತರ (Social distance) ಕಾಪಾಡಿಕೊಳ್ಳುವುದು, ಕೋವಿಡ್ ಮಾರ್ಗಸೂಚಿ ಪಾಲನೆ ಸೇರಿದಂತೆ ಹಲವು ನಿಯಮಗಳು ಜಾರಿಯಾಗಿದೆ. 

Follow Us:
Download App:
  • android
  • ios