Asianet Suvarna News Asianet Suvarna News

ಭಾರತಕ್ಕೆ ಆಗಮಿಸಿದ 39 ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟೀವ್!

ಭಾರತದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಆದರೆ ಸಮಸ್ಯೆ ಎದುರಾಗಿರುವುದು ವಿದೇಶಗಳ ಕೋವಿಡ್. ಈ ಆತಂಕದ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣಿಕರ ಪೈಕಿ 39 ಮಂದಿ ವರದಿ ಕೋವಿಡ್ ಪಾಸಿಟೀವ್. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವರು ವಿಮಾನ ನಿಲ್ದಾಣದಲ್ಲಿನ ಕ್ರಮಗಳ ಕುರಿತು ಪರಿಶೀಲನೆಗೆ ಮುಂದಾಗಿದ್ದಾರೆ.

39 International passengers who arrives India tested covid positive last 2 days Center alert precaution measures in Airports ckm
Author
First Published Dec 28, 2022, 7:37 PM IST

ನವದೆಹಲಿ(ಡಿ.28):  ಶಾಂತವಾಗಿದ್ದ ಜಗತ್ತು ಮತ್ತೆ ಕೊರೋನಾ ಭಯದಲ್ಲೇ ಬದುಕುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಮತ್ತೊಮ್ಮೆ ಚೀನಾ. ಚೀನಾದಲ್ಲಿ ಸ್ಪೋಟಗೊಂಡ ಕೊರೋನಾ ಆತಂಕ ಇದೀಗ ಭಾರತಕ್ಕೆ ಕಾಲಿಡುವ ಆತಂಕ ಎದುರಾಗಿದೆ. ಭಾರತದಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದರೂ ಚೀನಾ ಸೇರಿದಂತೆ ವಿದೇಶದಿಂದ ವೈರಸ್ ಆಗಮಿಸುವ ಸಾಧ್ಯತೆ ಹೆಚ್ಚಿದೆ. ಇದೀಗ ಕಳೆದ ಎರಡು ದಿನದಲ್ಲಿ ವಿದೇಶದಿಂದ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ಪೈಕಿ 39 ಮಂದಿ ವರದಿ ಕೋವಿಡ್ ಪಾಸಿಟೀವ್ ಆಗಿದೆ. ಇದು ಭಾರತದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.  ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ, ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇಟಿ ನೀಡಿ ಕ್ರಮಗಳ ಪರಿಶೀಲನೆಗೆ ಮುಂದಾಗಿದ್ದಾರೆ.

ಈಗಾಗಲೇ ಚೀನಾ ಸೇರಿದಂತೆ 5 ದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗಟೀವ್ ವರದಿ ತರಬೇಕು. ಇಷ್ಟೇ ಅಲ್ಲ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ಈ ಕಡ್ಡಾಯ ನಿಯಮದ ಬೆನ್ನಲ್ಲೇ 39 ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟೀವ್ ಕಾಣಿಸಿಕೊಂಡಿದೆ.

ಮುಂದಿನ 40 ದಿನದಲ್ಲಿ ಕೋವಿಡ್ ಸ್ಫೋಟ, ಅಪಾಯದ ತೀವ್ರತೆ ಕಡಿಮೆ; ಆರೋಗ್ಯ ಸಚಿವಾಲಯದ ಎಚ್ಚರಿಕೆ!

ದುಬೈನಿಂದ ಚೆನ್ನೈಗೆ ಆಗಮಿಸಿದ ಇಬ್ಬರು ಪ್ರಯಾಣಿಕರಿಗೂ ಕೋವಿಡ್ ತಗುಲಿದೆ. ಇದೀಗ ಇವರ ರೋಗಲಕ್ಷಣಗಳನ್ನು ಆಧರಿಸಿ ಜೆನೋಮ್ ಸ್ವೀಕೆನ್ಸ್ ಪರೀಕ್ಷೆಗೆ ಮಾದರಿ ಕಳುಹಿಸಲಾಗಿದೆ. ಇದೀಗ ಚೆನ್ನೈನಲ್ಲಿ ಕೋವಿಡ್ ಬಿಎಫ್7 ವೇರಿಯೆಂಟ್ ಆತಂಕ ಹೆಚ್ಚಾಗಿದೆ.

ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಕೆಲ ಕೋವಿಡ್ ಮಾರ್ಗಸೂಚಿಗಳನ್ನು ಮಾತ್ರ ಹೇರಲಾಗಿದೆ. ಆದರೆ ವಿದೇಶದಿಂದ ಯಾವುದೇ ವಿಮಾನ ಸೇವೆಯನ್ನು ನಿರ್ಬಂಧಿಸಿಲ್ಲ. ಆದರೆ ಚೀನಾ, ಜಪಾನ್, ಸೌತ್ ಕೊರಿಯಾ, ಹಾಂಕ್ ಕಾಂಗ್, ಥಾಯ್‌ಲೆಂಡ್, ಸಿಂಗಪೂರದಿಂದ ವಿಮಾನ ಸೇವೆ ನಿರ್ಬಂಧಿಸಲು ಒತ್ತಡಗಳು ಕೇಳಿಬರುತ್ತಿದೆ. ಸದ್ಯ ಕೇಂದ್ರ ಸರ್ಕಾರ ಯಾವುದೇ ವಿಮಾನ ಸೇವೆಗೆ ನಿರ್ಬಂಧ ವಿಧಿಸಿಲ್ಲ. ಇದಕ್ಕೆ ಪ್ರಮುಖ ಕಾರಣ ಭಾರತದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. 

ಕೋವಿಡ್‌ ಹೆಸರಿನಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಿಲ್ಲ ನಿರ್ಬಂಧ: ಸಚಿವ ಸುಧಾಕರ್‌

ಮುಂದಿನ 40 ದಿನ ಅತ್ಯಂತ ಮುಖ್ಯ
ಭಾರತದ್ಲಿ ಮುಂದಿನ 40 ದಿನ ಅತ್ಯಂತ ಮುಖ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ತಜ್ಞರ ಸಮಿತಿ ಹೇಳಿದೆ. ಪೂರ್ವ ಏಷ್ಯಾದಲ್ಲಿ ಕಳೆದೆರಡು ಕೊರೋನಾ ಅಲೆ ಅಪ್ಪಳಿಸಿದ 35 ದಿನಗಳ ಬಳಿಕ ಭಾರತದಲ್ಲಿ ಕೋವಿಡ್ ಅಲೆ ಸ್ಫೋಟಗೊಂಡಿದೆ. ಈ ಬಾರಿ 40 ರಿಂದ 45 ದಿನಗಳಲ್ಲಿ ಭಾರತದಲ್ಲಿ ಕೋವಿಡ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಸಮಿತಿ ಹೇಳಿದೆ. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

188 ಹೊಸ ಕೇಸು, ಯಾವುದೇ ಸಾವಿಲ್ಲ
ದೇಶದಲ್ಲಿ ದಾಖಲಾದ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಬುಧವಾರ 188 ಹೊಸ ಪ್ರಕರಣಗಳು ದಾಖಲಾಗಿವೆ. ಆದರೆ ಸೋಂಕಿತರ ಸಾವು ದಾಖಲಾಗಿಲ್ಲ. ಈ ನಡುವೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,468ಕ್ಕೆ ತಲುಪಿದೆ. ಈವರೆಗೂ ದೇಶದಲ್ಲಿ 4.46 ಕೋಟಿ ಪ್ರಕರಣಗಳು ಹಾಗೂ 5.30 ಲಕ್ಷ ಸಾವು ದಾಖಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,34,995 ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಈವರಗೆ 220.07 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ.

Follow Us:
Download App:
  • android
  • ios