Asianet Suvarna News Asianet Suvarna News

ಭಾರತದ ಕೋವಿಡ್‌ ಔಷಧಕ್ಕೆ ಚೀನಾದಲ್ಲಿ ಭಾರೀ ಡಿಮ್ಯಾಂಡ್: ಕಾಳಸಂತೆಯ ಮೊರೆ ಹೋದ ಚೀನಿಯರು..!

ಕೋವಿಡ್‌ ಹೆಚ್ಚಳದ ಕಾರಣ ಚೀನಾ ಮೂಲದ ಔಷಧಗಳ ಕೊರತೆ ಎದುರಾಗಿದ್ದು, ಚೀನಾ ನಿಯಮದ ಅನ್ವಯ ಭಾರತದ ಔಷಧಗಳಿಗೆ ನಿಷೇಧ ಇದೆ. ಹೀಗಾಗಿ ಕಾಳಸಂತೆಯಲ್ಲಿ ಭಾರತದ ಔಷಧಕ್ಕೆ ಚೀನೀಯರು ಮೊರೆ ಹೋಗಿದ್ದಾರೆ. 

chinese turn to black market for indian covid drugs amid surge ash
Author
First Published Dec 29, 2022, 11:30 AM IST

ಬೀಜಿಂಗ್‌: ಚೀನಾದಲ್ಲಿ (China) ಕೋವಿಡ್‌ (COVID) ತಾರಕಕ್ಕೇರುತ್ತಿದ್ದಂತೆಯೇ ಕೊರೋನಾಗೆ (Corona)  ಸಂಬಂಧಿಸಿದ ಔಷಧಗಳ (Medicines) ಹಾಹಾಕಾರ ಉಂಟಾಗಿದೆ. ಹೀಗಾಗಿ ಚೀನೀಯರು ಭಾರತದಿಂದ ಅಕ್ರಮವಾಗಿ ಆಮದು (Illegal Import) ಮಾಡಿಕೊಳ್ಳುವ ಔಷಧಗಳ ಮೊರೆ ಹೋಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಚೀನಾ ಈ ವರ್ಷ ಎರಡು ಕೋವಿಡ್‌-19 ಆಂಟಿವೈರಲ್‌ ಔಷಧಗಳನ್ನು (Antiviral Medicines) ಅನುಮೋದಿಸಿದೆ. ಅವು ಫೈಜರ್‌ನ ಪಾಕ್ಸ್‌ಲೋವಿಡ್‌ ಹಾಗೂ ಚೀನಾ ಕಂಪನಿಯೊಂದರ ಆಜ್ವುಡೈನ್‌ ಎಂಬ ಎಚ್‌ಐವಿ ಮಾತ್ರೆಗಳು. ಆದರೆ ಇವೆರಡೂ ಚೀನಾದ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ ಇವೆ. ಎಲ್ಲೆಡೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚೀನಾ ಜನರು ಬ್ಲ್ಯಾಕ್‌ ಮಾರ್ಕೆಟ್‌ನತ್ತ (Black Market) ಮುಖ ಮಾಡಿದ್ದಾರೆ.

ಭಾರತೀಯ ಜೆನರಿಕ್‌ ಔಷಧಗಳಿಗೆ ಚೀನಾ ಸರ್ಕಾರ ಅನುಮೋದನೆ ನೀಡಿಲ್ಲ ಹಾಗೂ ಅವನ್ನು ಮಾರುವುದು ಶಿಕ್ಷಾರ್ಹ ಅಪರಾಧ. ಹೀಗಿ ಕಾಳಸಂತೆಯಲ್ಲಿ 4 ಭಾರತೀಯ ಕೋವಿಡ್‌ ಆ್ಯಂಟಿವೈರಲ್‌ ಮಾತ್ರೆಗಳನ್ನು ಮಾರಲಾಗುತ್ತಿದೆ. ಪ್ರಿಮೋವಿರ್‌, ಪಾಕ್ಸಿಸ್ಟಾ, ಮಲ್ನೌನಾಟ್‌ ಹಾಗೂ ಮೊಲ್ನಾಟ್ರಿಸ್‌ ಎಂಬ ಹೆಸರಿನಲ್ಲಿ ಭಾರತೀಯ ಔಷಧಿಗಳು ಮಾರಾಟಕ್ಕಿವೆ. ಪ್ರತಿ ಬಾಕ್ಸ್‌ಗೆ 144 ಡಾಲರ್‌ನಂತೆ ಇವುಗಳ ಮಾರಾಟ ನಡೆದಿದೆ ಎಂದು ‘ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

ಇದನ್ನು ಓದಿ: ಕೋವಿಡ್ ಸ್ಫೋಟ, ಚೀನಾ ಸೇರಿ 7 ರಾಷ್ಟ್ರಗಳ ಪ್ರಯಾಣದಿಂದ ದೂರವಿರಿ!

ಆದರೆ, ಚೀನಾದ ಆರೋಗ್ಯ ತಜ್ಞರು ಮತ್ತು ವೈದ್ಯರು ಈ ಅಕ್ರಮ ಔಷಧಗಳ ಸಂಭವನೀಯ ಅಪಾಯಗಳ ಬಗ್ಗೆ ಎಚ್ಚರಿಸಿದ್ದಾರೆ ಮತ್ತು ಖರೀದಿಸದಂತೆ ಜನರನ್ನು ಒತ್ತಾಯಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಔಷಧ ರಫ್ತು ಉತ್ತೇಜನಾ ಮಂಡಳಿ ಅಧ್ಯಕ್ಷ ಸಾಹಿಲ್‌ ಮುಂಜಾಲ್‌, ‘ಭಾರತದ ಔಷಧ ಕಂಪನಿಗಳಿಗೆ ಐಬುಪ್ರೊಫೆನ್‌ ಹಾಗೂ ಪ್ಯಾರಾಸಿಟಮಾಲ್‌ಗೆ ಬೇಡಿಕೆಗಳು ಬರುತ್ತಿವೆ’ ಎಂದರು.

ಬೂಸ್ಟರ್‌ ಡೋಸ್‌ ಪಡೆದವರು ಇನ್‌ಕೊವ್ಯಾಕ್‌ ಪಡೆಯಂಗಿಲ್ಲ
ಈಗಾಗಲೇ ಬೂಸ್ಟರ್‌ ಡೋಸ್‌ (3ನೇ ಡೋಸ್‌) ಲಸಿಕೆ ಪಡೆದವರು 4ನೇ ಡೋಸ್‌ ಆಗಿ ಮೂಗಿನ ಮೂಲಕ ನೀಡಬಹುದಾದ ಇನ್‌ಕೋವ್ಯಾಕ್‌ ಲಸಿಕೆಯನ್ನು ಪಡೆಯುವಂತಿಲ್ಲ ಎಂದು ಕೋವಿಡ್‌ ಲಸಿಕೆ ಟಾರ್ಸ್‌ಫೋರ್ಸ್‌ನ ಮುಖ್ಯಸ್ಥ ಡಾ.ಎನ್‌.ಕೆ. ಅರೋರಾ ಹೇಳಿದ್ದಾರೆ. ಈಗಾಗಲೇ 3ನೇ ಡೋಸ್‌ ಪಡೆದವರು ಇನ್‌ಕೋವ್ಯಾಕ್‌ ಪಡೆದರೆ ಅವರಿಗೆ ಆ್ಯಂಟಿಜೆನ ಸಿಂಕ್‌ ಸಮಸ್ಯೆ ಆಗಬಹುದು. ಅಂದರೆ ಒಬ್ಬ ವ್ಯಕ್ತಿ ಪದೇ ಪದೇ ಒಂದೇ ರೀತಿಯ ಆ್ಯಂಟಿಜೆನ್‌ ಪಡೆದರೆ, ಅದಕ್ಕೆ ದೇಹ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸುತ್ತದೆ. ಹೀಗಾಗಿ ಇನ್‌ಕೋವ್ಯಾಕ್‌ ಅನ್ನು ಕೇವಲ 3ನೇ ಡೋಸ್‌ ಆಗಿ ಮಾತ್ರವೇ ಶಿಫಾರಸು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚೀನಾದ ಕೋವಿಡ್ ನೈಜ ಪರಿಸ್ಥಿತಿ ಬಹಿರಂಗ, ಶವಗಳ ನಡುವೆ ಸೋಂಕಿತರಿಗೆ ಚಿಕಿತ್ಸೆ!

ಭಾರತದಲ್ಲೂ ಕೋವಿಡ್‌ ಸ್ಪೋಟದ ಎಚ್ಚರಿಕೆ..!
ಈ ಮಧ್ಯೆ, ಭಾರತದಲ್ಲಿ ಕೋವಿಡ್ ಸ್ಫೋಟಗೊಳ್ಳಲಿದೆ ಅನ್ನೋ ಎಚ್ಚರಿಕೆ ಸಂದೇಶ ಬಂದಿದೆ. ಮುಂದಿನ 40 ದಿನ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಜನವರಿ ಮಧ್ಯಬಾಗದಿಂದ ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ. ಪೂರ್ವ ಏಷ್ಯಾದಲ್ಲಿ ಕೋವಿಡ್ ಸ್ಫೋಟಗೊಂಡ 30 ರಿಂದ 35 ದಿನಗಳ ಬಳಿಕ ಭಾರತದಲ್ಲಿ ಕೋವಿಡ್ ಅಲೆ ಸೃಷ್ಟಿಯಾಗಿತ್ತು. ಕಳೆದೆರಡು ಅಲೆಗಳು ಇದೇ ಅಂತರದಲ್ಲಿ ಕಾಣಿಸಿಕೊಂಡಿದೆ. ಈ ಬಾರಿಯ ಭಾರತದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿರುವ ಕಾರಣ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯ ಏರಿಕೆಗೆ 40 ರಿಂದ 45 ದಿನಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಮುಂಜಾಗ್ರತೆ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆಯ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ. 

ಭಾರತದಲ್ಲಿ ಕೋವಿಡ್ ಸ್ಫೋಟಗೊಂಡರೂ ಮತ್ತೊಂದು ಕೋವಿಡ್ ಅಲೆ ಸೃಷ್ಟಿಯಾದರೂ ಆತಂಕವಿಲ್ಲ. ಈ ಹಿಂದಿನ ಪರಿಸ್ಥಿತಿ ಭಾರತಕ್ಕೆ ಎದುರಾಗುವುದಿಲ್ಲ. ಮೈಲ್ಡ್ ಸಿಂಪ್ಟಮ್ಸ್ ಇರಲಿದೆ. ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಕಡಿಮೆ ಇರಲಿದೆ. ಹೀಗಾಗಿ ಭಾರತದಲ್ಲಿ ಅಪಾಯದ ತೀವ್ರತೆ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. 

ಇದನ್ನೂ ಓದಿ: ತರಕಾರಿ ಖರೀದಿಸಲು ವಿಚಿತ್ರ ವೇಷದಲ್ಲಿ ಬಂದ ಚೀನಾ ದಂಪತಿ... ವಿಡಿಯೋ ವೈರಲ್

Latest Videos
Follow Us:
Download App:
  • android
  • ios