ಉಸ್ತಾದ್ ರಶೀದ್ ಖಾನ್ ಬಲಿ ಪಡೆದ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು?

ಕ್ಯಾನ್ಸರ್ ನಲ್ಲಿ ಅನೇಕ ವಿಧಗಳಿವೆ. ಕೆಲವೊಂದು ಕ್ಯಾನ್ಸರ್ ಲಕ್ಷಣ ಆರಂಭದಲ್ಲಿ ಪತ್ತೆಯಾಗೋದಿಲ್ಲ. ಶುರುವಿನಲ್ಲೇ ಕ್ಯಾನ್ಸರ್ ಪತ್ತೆಯಾದ್ರೆ ಚಿಕಿತ್ಸೆ ಸುಲಭ. ಪುರುಷರನ್ನು ಕಾಡುವ ಪ್ರಾಸ್ಟೇಟ್ ಕ್ಯಾನ್ಸರ್ ಕೂಡ ಇದ್ರಲ್ಲಿ ಒಂದು.
 

Classical Maestro Ustad Rashid Khan Death Reason Is Prostate Cancer roo

ಗಾಯಕ ಮತ್ತು ಸಂಗೀತ ಚಕ್ರವರ್ತಿ ಉಸ್ತಾದ್ ರಶೀದ್ ಖಾನ್  ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಜನವರಿ 9ರಂದು ಅವರು ಇಹಲೋಕ ತ್ಯಜಿಸಿದ್ದಾರೆ.  ದೀರ್ಘಕಾಲದಿಂದ ಅವರು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಡಿಸೆಂಬರ್ ನಲ್ಲಿ ಅವರು ಸೆರೆಬ್ರಲ್ ಅಟ್ಯಾಕ್‌ ಗೆ ಒಳಗಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಸ್ತಾದ್ ರಶೀದ್ ಖಾನ್, ಚಿಕಿತ್ಸೆ ಫಲ ನೀಡದೆ ನಿಧನರಾಗಿದ್ದಾರೆ. ಉಸ್ತಾದ್ ರಶೀದ್ ಖಾನ್ ರಿಗೆ ಕಾಣಿಸಿಕೊಂಡಿದ್ದ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಅನೇಕರಿಗೆ ಈ ಕ್ಯಾನ್ಸರ್ ದೇಹದ ಯಾವ ಭಾಗದಲ್ಲಿ ಕಾನಿಸಿಕೊಳ್ಳುತ್ತದೆ ಎನ್ನುವ ಬಗ್ಗೆ ಅರಿಯಾದ ಮಾಹಿತಿ ಇಲ್ಲ. ನಾವಿಂದು ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

 ಪ್ರಾಸ್ಟೇಟ್ (Prostate)  ಗ್ರಂಥಿ ಪುರುಷರ ದೇಹದ ಪ್ರಮುಖ ಭಾಗ. ಇದು ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಪರ್ಕ ಹೊಂದಿರುತ್ತದೆ.  ಮೂತ್ರಕೋಶದ ಕೆಳಗೆ ಮತ್ತು ಗುದನಾಳದ ಮುಂದೆ ಇರುತ್ತದೆ. ಮೂತ್ರನಾಳದ ಮೇಲ್ಭಾಗದ ಸುತ್ತಲೂ ಇದು ಸುತ್ತಿಕೊಂಡಿರುತ್ತದೆ.  ಪ್ರಾಸ್ಟೇಟ್ ನಲ್ಲಾಗುವ ಸಮಸ್ಯೆ ಮೂತ್ರ ವಿಸರ್ಜನೆ ಮತ್ತು ಲೈಂಗಿಕ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.

ಮೈಕೆಲ್ ಜಾಕ್ಸನ್ ಒಂದೇ ಕೈಗೆ ಗ್ಲೌಸ್ ಧರಿಸುತ್ತಿದ್ದು ಸ್ಟೈಲ್ ಕಾರಣಕ್ಕಲ್ಲ, ಈ ಚರ್ಮದ ಸಮಸ್ಯೆ ಮುಚ್ಚಿಕೊಳ್ಳಲು!

ಪ್ರಾಸ್ಟೇಟ್ ಕ್ಯಾನ್ಸರ್ ( Cancer ) ಲಕ್ಷಣಗಳು ಯಾವುವು : ಪುರುಷನಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಶುರುವಾದಲ್ಲಿ  ಮೊದಲ ರೋಗಲಕ್ಷಣಗಳು ಮೂತ್ರ (Urine) ದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸ್ವಲ್ಪ ನೀರು ಕುಡಿದ ನಂತರವೂರೋಗಿಯು ಮೂತ್ರ ವಿಸರ್ಜನೆ ಒತ್ತಡಕ್ಕೆ ಒಳಗಾಗುತ್ತಾನೆ. ಇದಲ್ಲದೆ ಮೂತ್ರ ವಿಸರ್ಜನೆಯಲ್ಲಿ ತೊಂದರೆ, ದುರ್ಬಲ ಮೂತ್ರದ ಹರಿವು, ಗಾಳಿಗುಳ್ಳೆಯನ್ನು ಸಂಪೂರ್ಣವಾಗಿ ಖಾಲಿ ಮಾಡಲು ಸಾಧ್ಯವಾಗದೆ ಇರುವುದು, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಮತ್ತು ನೋವು ಹಾಗೂ ಮೂತ್ರ ಅಥವಾ ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕೂಡ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣವಾಗಿದೆ. ಪುರುಷರ ಸೊಂಟದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ, ಲೈಂಕಿಕ ಕ್ರಿಯೆ ವೇಳೆ ನೋವು, ಸಮಸ್ಯೆಯಾಗ್ತಿದ್ದರೆ ಇದು ಕೂಡ ಕ್ಯಾನ್ಸರ್ ಲಕ್ಷಣವಾಗಿದೆ. 

ಪ್ರಾಸ್ಟೇಟ್ ಕ್ಯಾನ್ಸರ್ ಗೆ ಕಾರಣ : ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ ಈ ಕ್ಯಾನ್ಸರ್ ಗೆ ಅನೇಕ ಕಾರಣವಿದೆ. ಒಂದು ಕುಟುಂಬದ ಇತಿಹಾಸ. ಜಿನ್ ಮುಖ್ಯ ಕಾರಣವಾಗುತ್ತದೆ. ಇದಲ್ಲದೆ ಹೆಚ್ಚಾಗುವ ವಯಸ್ಸು, ಬೊಜ್ಜು, ಧೂಮಪಾನ, ಸಂಸ್ಕರಿಸಿದ ಆಹಾರ ಸೇವನೆ ಮಾಡುವವರಲ್ಲಿ ಈ ಅಪಾಯ ಹೆಚ್ಚು. ಇದಲ್ಲದೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದವರು, ಎಸ್ ಐಟಿಯಿಂದ ಬಳಲುತ್ತಿರುವವರಲ್ಲಿ ಕೂಡ ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಕ್ಯಾನ್ಸರ್ ಪ್ರಾಸ್ಟೇಟ್ ನಿಂದ ಹೊರಗೆ ಹರಡಿದಾಗ ಅಪಾಯ ಹೆಚ್ಚು. ಆಗ ನಿಮಗೆ ಸೊಂಟ, ತೊಡೆ, ಭುಜ ಮತ್ತು ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಪಾದಗಳು ಅಥವಾ ಅಡಿಭಾಗಗಳಲ್ಲಿ ಊತ ಉಂಟಾಗುತ್ತದೆ. ಹಠಾತ್ ತೂಕ ಇಳಿಯುವುದಲ್ಲದೆ ಸುಸ್ತು ಕಾಣಿಸಿಕೊಳ್ಳುತ್ತದೆ. 

ಪ್ರಾಸ್ಟೇಟ್ ಕ್ಯಾನ್ಸರ್ ಗೆ ಚಿಕಿತ್ಸೆ ಲಭ್ಯವಿದೆ. ಆರಂಭದಲ್ಲಿಯೇ ಇದ್ರ ಪತ್ತೆಯಾದ್ರೆ ಗುಣಮುಖವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಶಸ್ತ್ರಚಿಕಿತ್ಸೆ ಮೂಲಕ ಇದನ್ನು ಗುಣಪಡಿಸಲಾಗುತ್ತದೆ. ರೋಗಿಗೆ ಕ್ಯಾನ್ಸರ್ ಯಾವ ಹಂತದಲ್ಲಿದೆ ಮತ್ತು ಎಷ್ಟು ಆಳದಲ್ಲಿದೆ ಎನ್ನುವುದರ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆ ನಡೆಯುತ್ತದೆ. 

ಮಹಿಳೆಯ ಸೊಂಟದ ಗಾತ್ರ ಹೆಚ್ಚಾದಂತೆ, ಗರ್ಭಿಣಿಯಾಗೋ ಸಾಧ್ಯತೆಯೂ ಕಡಿಮೆಯಂತೆ!

ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ರಕ್ಷಣೆ ಹೇಗೆ ? : ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಈ ಕ್ಯಾನ್ಸರ್ ನಿಂದ ದೂರವಿರಬಹುದು. ತಂಬಾಕು ತ್ಯಜಿಸಬೇಕು. ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಬೇಕು. ಮದ್ಯಪಾನದಿಂದ ದೂರವಿರಬೇಕು. ಆರೋಗ್ಯಕರ ತೂಕಕ್ಕಾಗಿ ವ್ಯಾಯಾಮ, ಯೋಗ, ವಾಕಿಂಗ್ ಅನುಸರಿಸಬೇಕು. ಅಲ್ಲದೆ ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತವಾದ ಮಾರ್ಗವಾಗಿದೆ. 
 

Latest Videos
Follow Us:
Download App:
  • android
  • ios