ಮೈಕೆಲ್ ಜಾಕ್ಸನ್ ಒಂದೇ ಕೈಗೆ ಗ್ಲೌಸ್ ಧರಿಸುತ್ತಿದ್ದು ಸ್ಟೈಲ್ ಕಾರಣಕ್ಕಲ್ಲ, ಈ ಚರ್ಮದ ಸಮಸ್ಯೆ ಮುಚ್ಚಿಕೊಳ್ಳಲು!
'ಕಿಂಗ್ ಆಫ್ ಪಾಪ್' ಎಂದೇ ಜನಪ್ರಿಯನಾಗಿದ್ದ ಮೈಕೆಲ್ ಜಾಕ್ಸನ್ ಅವರದೇ ಆದ ಸ್ಟೈಲ್ ಹೊಂದಿದ್ದರು. ಅವರು ಒಂದೇ ಕೈಗೆ ಗ್ಲೌಸ್ ಧರಿಸುವುದನ್ನು ಕೂಡಾ ಜನ ಸಿಗ್ನೇಚರ್ ಸ್ಟೈಲ್ ಎಂದು ಭಾವಿಸಿದರು. ಆದರೆ, ಅದರ ಅಸಲೀಯತ್ತು ಬೇರೆಯೇ ಇತ್ತು.
ಬದುಕಿದ್ದಾಗಲೇ ದಂತಕತೆಯಾಗಿದ್ದ ಪಾಪ್ ಸ್ಟಾರ್ ಮೈಕೆಲ್ ಜಾಕ್ಸನ್. ಆತ ಪಾಪ್ ಸಂಗೀತದಲ್ಲಿ ಕ್ರಾಂತಿಯನ್ನೇ ಮಾಡಿ 'ಕಿಂಗ್ ಆಫ್ ಪಾಪ್' ಎನಿಸಿಕೊಂಡ.
ಅವನ ಧ್ವನಿ, ಸಂಗೀತ, ನೃತ್ಯ- ಸಾಮಾನ್ಯ ಸಂಗೀತದ ವಿಡಿಯೋಗಳನ್ನು ಚಲನಚಿತ್ರ-ಪ್ರಮಾಣದ ವೈಶಿಷ್ಟ್ಯಗಳಾಗಿ ಪರಿವರ್ತಿಸುವ ಸೃಜನಾತ್ಮಕತೆ ಎಲ್ಲವೂ ಅವನ ಯಶಸ್ಸಿನಲ್ಲಿ ಪಾಲು ಪಡೆದಿವೆ. ಆತ ಮಾಡಿದ ಪ್ರತಿ ಆಲ್ಬಂ ಕೂಡಾ ವಿಶಿಷ್ಠವಾಗಿದ್ದು ಇತಿಹಾಸ ನಿರ್ಮಿಸಿತು. ಇದರೊಂದಿಗೆ ಮೈಕೆಲ್ ಜಾಕ್ಸನ್‌ಗೆ ಜನರ ಹಾಗೂ ಮಾಧ್ಯಮಗಳ ಗಮನ ಸೆಳೆವ ತಂತ್ರಗಾರಿಕೆಯೂ ಚೆನ್ನಾಗಿ ಒಲಿದಿತ್ತು. ಅದರ ಭಾಗವಾಗಿ ಅವನ ಸ್ಟೈಲನ್ನು ನೋಡಬಹುದು.
ಆತ 'ಥ್ರಿಲ್ಲರ್' ಸಂಗೀತ ವೀಡಿಯೊದಲ್ಲಿ ಧರಿಸಿದ ಕೆಂಪು ಚರ್ಮದ ಜಾಕೆಟ್ ಆಗಿರಬಹುದು ಅಥವಾ ಎಲ್ವಿಸ್ ಪ್ರೀಸ್ಲಿ-ಪ್ರೇರಿತ ಕಪ್ಪು ಶೂ ಮತ್ತು ಬಿಳಿ ಕಾಲ್ಚೀಲದ ಸಂಯೋಜನೆಯಾಗಿರಬಹುದು, ಮೈಕೆಲ್ ಧರಿಸಿದ್ದೆಲ್ಲವೂ ಟ್ರೆಂಡ್ ಹುಟ್ಟು ಹಾಕಿತು. ಹೆಚ್ಚಿನ ಪಾಪ್ ತಾರೆಗಳಂತೆ ವಿಲಕ್ಷಣರಾಗಿದ್ದ ಮೈಕೆಲ್‌ರ ಜುಟ್ಟು, ಬಣ್ಣ, ಜೊತೆಗೆ ಒಂದೇ ಕೈಗೆ ಧರಿಸುತ್ತಿದ್ದ ಬಿಳಿಯ ಹೊಳೆವ ಗ್ಲೌಸ್ ಕೂಡಾ ಅವರ ಸಿಗ್ನೇಚರ್ ಸ್ಟೈಲ್ ಎನಿಸಿಕೊಂಡಿದ್ದವು.
ಬೋರ್ಡ್ ಎಕ್ಸಾಂನಲ್ಲಿ ಶೇ.99ಕ್ಕೂ ಹೆಚ್ಚು ಅಂಕ ತೆಗೆಯೋದು ಹೇಗೆ? ಇಲ್ಲಿವೆ ಟಾಪರ್ಸ್ ಟಿಪ್ಸ್
ಇದರಲ್ಲಿ ಮೈಕೆಲ್ ಧರಿಸುತ್ತಿದ್ದ ಬಿಳಿ ಗ್ಲೌಸ್ ಹಿನ್ನೆಲೆ ವಿಶಿಷ್ಠವಾಗಿದೆ. 1983 ರಿಂದ ಆತ ತನ್ನ ಬಲಗೈಗೆ ಬಿಳಿ ಕೈಗವಸು ಧರಿಸುತ್ತಿದ್ದ. ಜನ ಇದನ್ನು ಸ್ಟೈಲ್ ಎಂದುಕೊಂಡರು. ಹಲವರು ಒಂದೇ ಕೈಗೆ ಗ್ಲೌಸ್ ಧರಿಸುವುದೇ ಒಂದು ಟ್ರೆಂಡ್ ಎಂದುಕೊಂಡು ಅದನ್ನು ಫಾಲೋ ಮಾಡಿದರೆ. ಆದರೆ, ಇದನ್ನು ಧರಿಸುತ್ತಿದ್ದ ಕಾರಣ ಮೈಕೆಲ್‌ನ ಫ್ಯಾಶನ್ ಸ್ಟೇಟ್‌ಮೆಂಟ್ ಆಗಿರಲಿಲ್ಲ. ಬದಲಿದೆ, ಆತ ಹೆಚ್ಚು ಮುಜುಗರ ತರುತ್ತಿದ್ದ ಆರೋಗ್ಯ ಸಮಸ್ಯೆಯನ್ನು ಎಲ್ಲರಿಂದ ಮುಚ್ಚಿಡಲು ಹೀಗೆ ಮಾಡುತ್ತಿದ್ದ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಹೌದು, 2009ರ ಜೂನ್ 25ರಂದು ಮೈಕೆಲ್ ನಿಧನರಾದ ನಂತರ, ನಟಿ ಸಿಸಿಲಿ ಟೈಸನ್, ಮೈಕೆಲ್ ಕೈಗವಸು ಧರಿಸುವ ನಿರ್ಧಾರದ ಬಗ್ಗೆ ಮಾತನಾಡಿದರು. ಒಂದು ಹಂತದಲ್ಲಿ ಮೈಕೆಲ್ ಜೊತೆ ಫ್ಯಾಶನ್ ಡಿಸೈಮರನ್ನು ಹಂಚಿಕೊಂಡಿದ್ದ ಆಕೆ, ಮೈಕೆಲ್ ಒಂದೇ ಕೈಗೆ ಗ್ಲೌಸ್ ಧರಿಸುತ್ತಿದ್ದುದರ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.
'ಒಮ್ಮೆ ನನ್ನ ವಸ್ತ್ರ ವಿನ್ಯಾಸಕ ನನಗೆ ನಾನು ಮೈಕೆಲ್‌ಗಾಗಿ ಈ ಕೈಗವಸು ಮಾಡುತ್ತಿದ್ದೇನೆ ಎಂದು ಹೇಳಿದರು. ಮತ್ತು ಅದರ ಕಾರಣ ಸ್ಟೈಲ್ ಅಲ್ಲದೆ, ಮೈಕೆಲ್ ಕೈಲಿದ್ದ ಚರ್ಮದ ಸಮಸ್ಯೆ ವಿಟಿಲಿಗೋ(ತೊನ್ನು)ವನ್ನು ಮುಚ್ಚಿಡುವುದಾಗಿತ್ತು ಎಂದು ತಿಳಿಸಿದರು' ಎಂದು ಸಿಸಿಲಿ ನೆನಪಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ದಿನೇದಿನೆ ಹೆಚ್ಚಳವಾಗ್ತಿದೆ ಕೊರೊನಾ! ಇಂದು 252 ಮಂದಿಗೆ ಪಾಸಿಟಿವ್, ಇಬ್ಬರು ಸಾವು!
ತೊನ್ನು ಮೆಲನಿನ್ ಕೊರತೆಯಿಂದ ಉಂಟಾಗುತ್ತದೆ. ಮತ್ತು ಇದು ಚರ್ಮದ ಮೇಲೆ ತೆಳು ಬಿಳಿ ತೇಪೆಗಳು ಬೆಳೆಯುವ ದೀರ್ಘಾವಧಿಯ ಸ್ಥಿತಿಯಾಗಿದೆ. ಮೈಕೆಲ್ ಮೈ ತುಂಬಾ ತೊನ್ನು ಇದ್ದಿದ್ದರಿಂದ ಅವನಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇದು ಆತ್ಮಾವಿಶ್ವಾಸಕ್ಕೆ ಧಕ್ಕೆ ತರುವಂತಿತ್ತು. ಹಾಗಾಗಿ, ಆತ ತೊನ್ನಿಗೆ ವಿಪರೀತ ಚಿಕಿತ್ಸೆ ತೆಗೆದುಕೊಂಡಿದ್ದೇ ಅಲ್ಲದೆ, ವೇದಿಕೆ ಮೇಲೆ ಬಹಳ ದಪ್ಪಗೆ ಮೇಕಪ್ ಮಾಡಿಕೊಂಡು ಮುಖದ ತೊನ್ನು ಕಾಣದಂತೆ ಚರ್ಮದ ಟೋನ್ ನಯಪಡಿಸಿಕೊಳ್ಳುತ್ತಿದ್ದ. ಮೈಕೆಲ್‌ಗೆ ಜೀವನದುದ್ದಕ್ಕೂ ಈ ಚರ್ಮದ ಸಮಸ್ಯೆ ಪೀಡಿಸಿತ್ತು. ಮೈಗೆ ಬಟ್ಟೆ, ಮುಖಕ್ಕೆ ಮೇಕಪ್‌ನಿಂದ ತೊನ್ನನ್ನು ಕವರ್ ಮಾಡಿಕೊಂಡರೂ, ಕೈಲಿದ್ದ ತೊನ್ನು ಎದ್ದು ಕಾಣಿಸುತ್ತಿತ್ತು. ಹಾಗಾಗಿ ಆತ ಕೈಗೆ ಗ್ಲೌಸ್ ಧರಿಸಿ, ಅದನ್ನೇ ಸ್ಟೈಲ್ ಸ್ಟೇಟ್‌ಮೆಂಟ್ ಎಂದ.
ಜನರು ಆತ ಕಪ್ಪಗೆ ಜನಿಸಿ, ಬೆಳ್ಳಗಾಗಬೇಕೆಂದು ಸರ್ಜರಿಗಳನ್ನು ಮಾಡಿಸಿಕೊಂಡ ಎಂದರು. ಆದರೆ, ಸ್ವತಃ ಮೈಕೆಲ್ ಹೇಳಿದಂತೆ ಚರ್ಮದ ಸಮಸ್ಯೆಯ ಕಾರಣದಿಂದ ಅವನ ಲುಕ್ ಬದಲಾಯಿತು.