ಮಕ್ಕಳಿಗೆ ಫಾಸ್ಟ್‌ಪುಡ್‌ ಕೊಡೋ ಮುನ್ನ ಎಚ್ಚರ..ನೂಡಲ್ಸ್ ತಿಂದು ಇಬ್ಬರು ಮಕ್ಕಳು ಸಾವು

ಇತ್ತೀಚಿನ ಮಕ್ಕಳಿಗೆ ಮನೆಯಲ್ಲಿ ಎಷ್ಟೇ ಚೆನ್ನಾಗಿರೋ ಅಡುಗೆ ಮಾಡಿದ್ರೂ ಫಾಸ್ಟ್‌ಫುಡ್ ತಿನ್ನೋಕೇನೆ ಇಷ್ಟ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಅಂತ ಹೊತ್ತುಗೊತ್ತಿನ ಪರಿವೆಯಿಲ್ಲದೆ ಜಂಕ್‌ಫುಡ್ ತಿನ್ತಾರೆ. ಹಾಗೇ ಇಲ್ಲೊಂದೆಡೆ ರಸ್ತೆ ಬದಿಯ ನೂಡಲ್ಸ್ ಇಬ್ಬರ ಮಕ್ಕಳ ಜೀವವನ್ನೇ ತೆಗೆದಿದೆ. ಏನಿದು ಫುಡ್ ಪಾಯ್ಸನಿಂಗ್ ಇಲ್ಲಿದೆ ಮಾಹಿತಿ.

Children die of suspected food poisoning after eating noodles, parathas in Haryana Vin

ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಗೊತ್ತಿದ್ರೂ ಜನ್ರು ಫಾಸ್ಟ್‌ಫುಡ್ ತಿನ್ನೋದನ್ನು ಮಾತ್ರ ಬಿಡೋದಿಲ್ಲ. ಹೊತ್ತುಗೊತ್ತಿನ ಪರಿವೆಯಿಲ್ಲದೆ ಬೇಕಾಬಿಟ್ಟಿ ಫಾಸ್ಟ್‌ಫುಡ್ ತಿನ್ತಿರ್ತಾರೆ. ಹಾಗೆಯೇ, ಹರಿಯಾಣದ ಸೋನಿಪತ್‌ನಲ್ಲಿ ರಸ್ತೆಬದಿ ನೂಡಲ್ಸ್, ಚೌಮೈನ್ ಮತ್ತು ಪರಾಠಾಗಳನ್ನು ಸೇವಿಸಿದ ನಂತರ ಫುಡ್ ಪಾಯ್ಸನಿಂಗ್ ಆಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. 7 ಮತ್ತು 5 ವರ್ಷದ ಇಬ್ಬರು ಮಕ್ಕಳು ಆಹಾರ ವಿಷಪೂರಿತವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ಮಾಯಾಪುರಿ ಕಾಲೋನಿಯಲ್ಲಿ ಘಟನೆ ನಡೆದಿದೆ. 

ಮಾಹಿತಿ ಪ್ರಕಾರ ಭೂಪೇಂದ್ರ ಎಂಬವರ ಕುಟುಂಬದವರು ಬುಧವಾರ ರಾತ್ರಿ ಪರೋಟ ಮತ್ತು ನೂಡಲ್ಸ್ ತಿಂದಿದ್ದಾರೆ. ಆದರೆ ರಾತ್ರಿ ಒಂದು ಗಂಟೆ ಸುಮಾರಿಗೆ ಭೂಪೇಂದ್ರ ಅವರ ಮೂವರು ಮಕ್ಕಳ ಸ್ಥಿತಿ ತೀವ್ರ ಹದಗೆಟ್ಟಿತು. ನಂತರ ಮೂವರನ್ನೂ ಸಮೀಪದ ಸರ್ಕಾರಿ ಆಸ್ಪತ್ರೆಗೆ (Hospital) ದಾಖಲಿಸಲಾಯಿತು ಎಂದು ತಿಳಿದುಬಂದಿದೆ.

ಮ್ಯಾಗಿಗೆ ಜೀವ ತೆತ್ತ ಕೂಲಿ ಮಹಿಳೆ, ಅಷ್ಟಕ್ಕೂ ತಿಂದ ಆಹಾರ ವಿಷವಾಗಿದ್ದು ಹೇಗೆ?

ಒಂದೇಕುಟುಂಬದ ಮೂವರು ಮಕ್ಕಳು ಅಸ್ವಸ್ಥ
ನೂಡಲ್ಸ್, ಚೌಮೈನ್, ಪರಾಠಾ ತಿಂದು ಒಂದೇ ಕುಟುಂಬದ ಮೂವರು ಮಕ್ಕಳು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಮಕ್ಕಳ (Children) ಪರಿಸ್ಥಿತಿ ಸುಧಾರಿಸದ ಕಾರಣ ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ವೇಳೆ ಇಬ್ಬರು ಮೃತಪಟ್ಟಿದ್ದಾರೆ. ಮೃತ ಮಕ್ಕಳನ್ನು ಹೇಮಾ ಮತ್ತು ತರುಣ್ ಎಂದು ಗುರುತಿಸಲಾಗಿದೆ. ಇನ್ನೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 8 ವರ್ಷದ ಮಗ ಪ್ರವೇಶ್ ಚಿಕಿತ್ಸೆ (Treatment) ಇನ್ನೂ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. 

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಂಬಂಧಿಕರ ಪ್ರಕಾರ, ನೂಡಲ್ಸ್ ಅನ್ನು ನೆರೆಹೊರೆಯ ಫಾಸ್ಟ್​ಫುಡ್​ ಸೆಂಟರ್​ನಿಂದಲೇ ಖರೀದಿಸಲಾಗಿದೆ, ಅದನ್ನು ತಿಂದ ನಂತರ ಮಕ್ಕಳ ಸ್ಥಿತಿ ಹದಗೆಟ್ಟು, ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬ ಸದಸ್ಯರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ಏನೆಂದು ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಳೆಗಾಲದಲ್ಲಿ ಕಾಡೋ ಫುಡ್ ಪಾಯ್ಸನ್ ಸಮಸ್ಯೆ ಹೀಗೆ ಬಗೆಹರಿಸಿಕೊಳ್ಳಿ

ಫುಡ್‌ ಪಾಯ್ಸನಿಂಗ್ ಎಂದರೇನು? ಲಕ್ಷಣಗಳೇನು
ಬ್ಯಾಕ್ಟೀರಿಯಾ, ವೈರಸ್ ಅಥವಾ ಪರಾವಲಂಬಿ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಗೆ ಉಂಟಾಗುವ ಅನಾರೋಗ್ಯವನ್ನು ಫುಡ್ ಪಾಯ್ಸನಿಂಗ್ ಎಂದು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಫುಡ್ ಪಾಯ್ಸನ್ ಹಲವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ರೋಗಲಕ್ಷಣಗಳು ನಿರ್ಧಿಷ್ಟ ಸೇವನೆಯ ನಂತರ ಗಂಟೆಗಳು, ದಿನಗಳು ಅಥವಾ ವಾರಗಳ ನಂತರ ಪ್ರಾರಂಭವಾಗಬಹುದು. ಫುಡ್‌ ಪಾಯ್ಸನ್‌ ಆದಾಗ ವ್ಯಕ್ತಿಯಲ್ಲಿ ವಾಕರಿಕೆ, ವಾಂತಿ ಮತ್ತು ಅತಿಸಾರ, ಹೊಟ್ಟೆನೋವು ಇತರ ರೋಗಲಕ್ಷಣಗಳೂ ಇರಬಹುದು. ಜನರು ಜ್ವರ, ಆಯಾಸ ಮತ್ತು ದೌರ್ಬಲ್ಯ, ತಲೆನೋವು, ಹೊಟ್ಟೆ ನೋವು ಮತ್ತು ನಿರಂತರ ಅತಿಸಾರವನ್ನು ಅನುಭವಿಸಬಹುದು.

ಫುಡ್ ಪಾಯ್ಸನ್‌ಗೆ ಕಾರಣವೇನು ?
ಕೆಟ್ಟದಾಗಿ ತಯಾರಿಸಿದ, ಹಳಸಿದ ಅಥವಾ ಯಾವುದೇ ವಿಷಕಾರಿ ಪದಾರ್ಥವನ್ನು ಹೊಂದಿರುವ ಆಹಾರಗಳು ಫುಡ್ ಪಾಯ್ಸನಿಂಗ್‌ಗೆ ಕಾರಣವಾಗಬಹುದು. ದೇಹವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಆಹಾರ ವಿಷವಾಗುತ್ತದೆ. ಕೆಲವು ಆಹಾರಗಳು ತಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂದು ಕೆಲವರು ಹೇಳುವ ಸ್ಥಿತಿಯೂ ಫುಡ್ ಪಾಯ್ಸನ್ ಆಗಿದೆ.

Latest Videos
Follow Us:
Download App:
  • android
  • ios