ಬೇಸಿಗೆಯಲ್ಲಿ ಹಾರ್ಟ್‌ಅಟ್ಯಾಕ್ ಸಾಧ್ಯತೆ ಹೆಚ್ಚು, ಹೃದಯಾಘಾತದ ಸಾಮಾನ್ಯ ಲಕ್ಷಣಗಳ ಬಗ್ಗೆ ಗೊತ್ತಿರ್ಲಿ

ಬೇಸಿಗೆ ಸಮಯದಲ್ಲಿ ಹೆಚ್ಚು ಸುಸ್ತು, ಆಯಾಸ, ಕಿರಿಕಿರಿಯಾಗುತ್ತಿರುತ್ತದೆ. ಹೃದಯಾಘಾತದ ಅಪಾಯವೂ ಈ ಸಮಯದಲ್ಲಿ ಹೆಚ್ಚಿದೆ. ಹೀಗಾಗಿ ಈ ಸಂದರ್ಭದಲ್ಲಿ ಕಂಡು ಬರೋ ಹೃದಯಾಘಾತದ ಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯ. ಆ ಬಗ್ಗೆ ಇಲ್ಲಿದೆ ಮಾಹಿತಿ.

Chest Pain And Other Unusual Signs Of Heart Attack You Must Know This Summer Vin

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಅನ್ನೋದು ತುಂಬಾ ಸಾಮಾನ್ಯವಾಗಿದೆ. ಜಾಗತಿಕವಾಗಿ ಹೆಚ್ಚಿರುವ ಮರಣ ಪ್ರಮಾಣಕ್ಕೆ ಹಾರ್ಟ್‌ಅಟ್ಯಾಕ್‌ ಮುಖ್ಯ ಕಾರಣವಾಗುತ್ತಿದೆ. ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (MI) ಹೃದಯಾಘಾತವನ್ನು ವಿವರಿಸಲು ವೈದ್ಯಕೀಯವಾಗಿ ಬಳಸಲಾಗುವ ಪದವಾಗಿದೆ. ಪರಿಧಮನಿಯ ಅಡಚಣೆಯಿಂದಾಗಿ ಇದು ಸಾಮಾನ್ಯವಾಗಿ ಸಂಭವಿಸುತ್ತದೆ.ಇದು ಹೃದಯ ಸ್ನಾಯುಗಳಿಗೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಹೃದಯಾಘಾತವನ್ನು ಆದಷ್ಟು ಬೇಗ ಗುರುತಿಸುವುದು ಮತ್ತು ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯುವುದು ಮುಖ್ಯವಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯು ಹೃದಯಕ್ಕೆ ಹಾನಿಯನ್ನು ಕಡಿಮೆ ಮಾಡುತ್ತದೆ, ಪೂರ್ಣ ಚೇತರಿಕೆಯ ಸಾಧ್ಯತೆಯನ್ನು ಸುಧಾರಿಸುತ್ತದೆ ಮತ್ತು ಜೀವವನ್ನು ಉಳಿಸುತ್ತದೆ.

ಬೇಸಿಗೆ ಸಮಯದಲ್ಲಿ ಹೆಚ್ಚು ಸುಸ್ತು, ಆಯಾಸ, ಕಿರಿಕಿರಿಯಾಗುತ್ತಿರುತ್ತದೆ. ಹೃದಯಾಘಾತದ ಅಪಾಯವೂ ಈ ಸಮಯದಲ್ಲಿ ಹೆಚ್ಚಿದೆ. ಹೀಗಾಗಿ ಈ ಸಂದರ್ಭದಲ್ಲಿ ಕಂಡು ಬರೋ ಹೃದಯಾಘಾತದ ಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯ. 

ಪಾಲಕರ ಹೃದಯಾಘಾತಕ್ಕೆ ಕಾರಣವಾಗ್ತಿದೆ ಮಕ್ಕಳ ಹೋಮ್ ವರ್ಕ್ ಮಾಡೋ ಕೆಲಸ!

ಹೃದಯಾಘಾತದ ಲಕ್ಷಣಗಳು
ಎದೆಯಲ್ಲಿ ಯಾವುದೇ ಅಸ್ವಸ್ಥತೆ ಅಥವಾ ನೋವು ಹೃದಯಾಘಾತದ ಮುಖ್ಯ ಸೂಚನೆಯಾಗಿದೆ. ಸಾಮಾನ್ಯವಾಗಿ, ಅಸ್ವಸ್ಥತೆಯು ಎದೆ ಬಿಗಿತ, ಎದೆ ಭಾರವಾಗುವುದು ಅಥವಾ ಎದೆಯನ್ನು ಹಿಸುಕುತ್ತಿರುವಂತೆ ಭಾಸವಾಗುವ ಅನುಭವವನ್ನು ಒಳಗೊಂಡಿರುತ್ತದೆ. ಬೆನ್ನು, ಕುತ್ತಿಗೆ, ದವಡೆ, ಹೊಟ್ಟೆ ಮತ್ತು ತೋಳುಗಳಲ್ಲಿ ಸಾಮಾನ್ಯವಾಗಿ ಈ ನೋವು ಕಾಣಿಸಬಹುದು. ಪ್ರತಿಯೊಬ್ಬರೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ಕೆಲವು ಜನರು, ವಿಶೇಷವಾಗಿ ಮಹಿಳೆಯರು, ವೃದ್ಧರು ಮತ್ತು ಮಧುಮೇಹ ರೋಗಿಗಳು, ಸಾಮಾನ್ಯವಲ್ಲದ ರೋಗಲಕ್ಷಣಗಳೊಂದಿಗೆ ಕಾಣಿಸಿಕೊಳ್ಳಬಹುದು. ಹೃದಯಾಘಾತದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ:

ಎದೆ ನೋವು
ಉಸಿರಾಟದ ತೊಂದರೆಗಳು
ವಾಂತಿ, ಅಜೀರ್ಣ ಅಥವಾ ವಾಕರಿಕೆ
ದೌರ್ಬಲ್ಯ, ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವ ಭಾವನೆ.
ಬೆವರುವುದು
ಚಡಪಡಿಕೆ

ಹೃದಯಾಘಾತದ ಕಾರಣಗಳು
ಹೆಚ್ಚಿನ ಹೃದಯಾಘಾತಗಳು ಪರಿಧಮನಿಯ ಕಾಯಿಲೆಯಿಂದ ಉಂಟಾಗುತ್ತವೆ. ಪರಿಧಮನಿಯ ಕಾಯಿಲೆಯಲ್ಲಿ ಒಂದು ಅಥವಾ ಹೆಚ್ಚಿನ ಹೃದಯದ (ಪರಿಧಮನಿಯ) ಅಪಧಮನಿಗಳು ನಿರ್ಬಂಧಿಸಲ್ಪಡುತ್ತವೆ. ಕೊಲೆಸ್ಟ್ರಾಲ್‌ನಿಂದ ಮಾಡಲ್ಪಟ್ಟ ನಿಕ್ಷೇಪಗಳಾಗಿರುವ ಅಡೆತಡೆಗಳು ಸಾಮಾನ್ಯವಾಗಿ ಇದಕ್ಕೆ ಕಾರಣವಾಗಿವೆ. ಅಪಧಮನಿಗಳನ್ನು ನಿರ್ಬಂಧಿಸುವ ಪ್ಲೇಕ್‌ಗಳಿಂದ ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗಬಹುದು ಮತ್ತು ಈ ಪ್ಲೇಕ್‌ಗಳ ಮೇಲೆ ರಕ್ತ ಹೆಪ್ಪುಗಟ್ಟುವಿಕೆ ತೀವ್ರ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಕೊಲೆಸ್ಟ್ರಾಲ್ ಇರೋರು ಆಹಾರ ತಿನ್ನೋವಾಗ ಈ ತಪ್ಪು ಮಾಡಿದ್ರೆ ಜೀವಕ್ಕೇ ಅಪಾಯ!

ಹೃದಯಾಘಾತದ ಅಪಾಯದ ಅಂಶಗಳು
ಕಿರಿಯರಿಗೆ ಹೋಲಿಸಿದರೆ, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮತ್ತು 55 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಹೆಚ್ಚಿನ ಅಪಾಯದಲ್ಲಿದ್ದಾರೆ. ಧೂಮಪಾನವು ಅಪಾಯವನ್ನು ಹೆಚ್ಚಿಸುತ್ತದೆ. ದೀರ್ಘಕಾಲದ ಅಧಿಕ ರಕ್ತದೊತ್ತಡದಿಂದ ಹೃದಯದ ಅಪಧಮನಿಗಳು ಹಾನಿಗೊಳಗಾಗುತ್ತವೆ. ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಅಥವಾ ಬೊಜ್ಜು ಸೇರಿಕೊಂಡಾಗ ಹಾರ್ಟ್‌ಅಟ್ಯಾಕ್‌ ಅಪಾಯವು ಮತ್ತಷ್ಟು ಹೆಚ್ಚಾಗುತ್ತದೆ. ಹಾಗೆಯೇ ಅಧಿಕ ರಕ್ತದ ಸಕ್ಕರೆ ಪ್ರಮಾಣವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ನಿಕಟ ಸಂಬಂಧಿಯು ಆರಂಭಿಕ ಜೀವನದಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದರೆ ಇದು ಕುಟುಂಬದ ಇತರ ಸದಸ್ಯರಿಗೆ ಬರುವ ಸಾಧ್ಯತೆ ಹೆಚ್ಚು. ಜಡ ಜೀವನವನ್ನು ನಡೆಸುವ ಜನರಲ್ಲಿ ಹೃದಯಾಘಾತವು ಹೆಚ್ಚಾಗಿ ಸಂಭವಿಸುತ್ತದೆ. ನಿಯಮಿತ ವ್ಯಾಯಾಮದಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು. ಸಕ್ಕರೆ, ಟ್ರಾನ್ಸ್ ಕೊಬ್ಬುಗಳು, ಸಂಸ್ಕರಿತ ಆಹಾರಗಳು ಮತ್ತು ಉಪ್ಪನ್ನು ಹೊಂದಿರುವ ಆಹಾರಗಳಿಂದ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಫೈಬರ್, ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಕೊಬ್ಬಿನ ಮೇಲೆ ಕೇಂದ್ರೀಕರಿಸಿ. ಭಾವನಾತ್ಮಕ ಒತ್ತಡ ಸಹ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು. ಧೂಮಪಾನವು ಹೃದಯಾಘಾತಕ್ಕೆ ಕಾರಣವಾಗುತ್ತದೆ.

Latest Videos
Follow Us:
Download App:
  • android
  • ios