ಪಾಲಕರ ಹೃದಯಾಘಾತಕ್ಕೆ ಕಾರಣವಾಗ್ತಿದೆ ಮಕ್ಕಳ ಹೋಮ್ ವರ್ಕ್ ಮಾಡೋ ಕೆಲಸ!

ಮಕ್ಕಳನ್ನು ಓದಿಸುವ ಜವಾಬ್ದಾರಿ ಪಾಲಕರದ್ದು. ಮಕ್ಕಳನ್ನು ಪರ್ಫೆಕ್ಟ್ ಮಾಡ್ಬೇಕು ಎನ್ನುವ ಆತುರದಲ್ಲಿ ಪಾಲಕರು ಆರೋಗ್ಯ ಹಾಳು ಮಾಡಿಕೊಳ್ತಿದ್ದಾರೆ. ಏಕಾಏಕಿ ಬರುವ ಕೋಪ ಅವರನ್ನು ಆಸ್ಪತ್ರೆಗೆ ಸೇರಿಸುತ್ತಿದೆ. ಚೀನಾದ ವರದಿ ದಂಗಾಗಿಸಿದೆ.
 

Parents Increasingly Suffering Heart Attacks Strokes Helping Kids Homework China roo

ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿದ್ರೆ ಪಾಲಕರ ಜವಾಬ್ದಾರಿ ಹೆಚ್ಚು. ಅವರ ಆರೋಗ್ಯ, ಆರೈಕೆ ಮಾತ್ರವಲ್ಲ ಅವರ ಶಿಕ್ಷಣದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಮಕ್ಕಳು ಶಾಲೆಯಿಂದ ಬರ್ತಿದ್ದಂತೆ ಅವರಿಗೆ ಏನು ಹೋಂ ವರ್ಕ್ ನೀಡಲಾಗಿದೆ, ನಾಳೆ ಏನೆಲ್ಲ ವಿಷ್ಯಗಳನ್ನು ಮಕ್ಕಳು ನೆನಪಿನಲ್ಲಿಟ್ಟುಕೊಂಡು ಹೋಗಬೇಕು, ಏನೆಲ್ಲ ಕೆಲಸಗಳನ್ನು ಪಾಲಕರು ಮಾಡಬೇಕು ಎಂಬುದನ್ನು ತಿಳಿಯಬೇಕು.  ಇದು ಸ್ಪರ್ಧಾತ್ಮಕ ಯುಗ. ಹಿಂದೆ ಹತ್ತನೇ ತರಗತಿ, ಹನ್ನೆರಡನೇ ತರಗತಿ ಮಕ್ಕಳು ಮಾತ್ರ ಹೆಚ್ಚು ಒತ್ತು ನೀಡಿ ವಿದ್ಯಾಭ್ಯಾಸ ಮಾಡಿದ್ರೆ ಸಾಕಿತ್ತು. ಆದ್ರೆ ಎಲ್ ಕೆಜಿಯಿಂದ ಹಿಡಿದು ಶಿಕ್ಷಣ ಮುಗಿಸುವವರೆಗೂ ಮಕ್ಕಳು ಅಂಕದ ಹಿಂದೆ ಓಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳನ್ನು ಎಲ್ಲರದಲ್ಲೂ ಪರ್ಫೆಕ್ಟ್ ಮಾಡುವ ಆತುರದಲ್ಲಿ ಪಾಲಕರು ಕೂಡ ಅವರ ಹಿಂದೆ ಓಡ್ತಾರೆ. ಒಂದಿಷ್ಟು ಒತ್ತಡಕ್ಕೆ ಒಳಗಾಗ್ತಾರೆ. 

ದಿನದ ಎಲ್ಲ ಸಮಯ ಕೂಲ್ ಆಗಿರುವ ಪಾಲಕರು, ಮಕ್ಕಳಿಗೆ ಪಾಠ ಹೇಳಿಕೊಡುವಾಗ ಒತ್ತಡ (Stress) ಕ್ಕೆ ಒಳಗಾಗ್ತಾರೆ. ಮನೆ ಕೆಲಸ, ಕಚೇರಿ ಕೆಲಸದ ಒತ್ತಡ, ಕೋಪವನ್ನೆಲ್ಲ ಮಕ್ಕಳ ಮೇಲೆ ತೋರಿಸ್ತಾರೆ. ಮಕ್ಕಳಿಗೆ ಒಂದೆರಡು ಬಾರಿ ಹೇಳಿದ್ರೂ ಪಾಠ ಅರ್ಥವಾಗಿಲ್ಲ, ಗಣಿತ (Mathematics) ಬಂದಿಲ್ಲ ಎಂದಾಗ ಕೋಪ ಹೆಚ್ಚಾಗುತ್ತದೆ. ಇದೇ ಕೋಪ ಹೃದಯ ಸಮಸ್ಯೆ ಹಾಗೂ ಪಾರ್ಶ್ಚವಾಯುವಿನಂತಹ ಸಮಸ್ಯೆಗೆ ಕಾರಣವಾಗುತ್ತಿದೆ. ನೆರೆ ರಾಷ್ಟ್ರ ಚೀನಾದಲ್ಲಿ ಮಕ್ಕಳ ಹೋಮ್ ವರ್ಕ್ (Homework) ಪಾಲಕರು ಆಸ್ಪತ್ರೆ ಸೇರುವಂತೆ ಮಾಡ್ತಿದೆ.

ತೂಕ ಇಳಿಸುವ ಪ್ರಯತ್ನದಲ್ಲಿದ್ದೀರಾ? ಹಾಗಾದ್ರೆ ಮಲಗುವ ಮುನ್ನ ಈ ಕೆಲಸ ಮಾಡಿ!

ಕೆಲ ದಿನಗಳ ಹಿಂದೆ ಹ್ಯಾಂಗ್‌ಝೌದ ಇಬ್ಬರು ಮಕ್ಕಳ ತಾಯಿ 40 ವರ್ಷದ ಡಾಂಗ್ ತನ್ನ ಮಕ್ಕಳಿಗೆ ಹೋಮ್ ವರ್ಕ್ ಹೇಳಿಕೊಡ್ತಿದ್ದಳು. ಒಂದು ಮಗುವಿಗೆ ಗಣಿತ ಹೇಳ್ತಿದ್ದ ವೇಳೆ ಆತನಿಗೆ ಗಣಿತ ಬರಲಿಲ್ಲ. ಇದರಿಂದ ಆಕೆ ಒತ್ತಡಕ್ಕೆ ಒಳಗಾಗಿದ್ದಾಳೆ. ತೀವ್ರ ಎದೆ ನೋವು ಆಕೆಗೆ ಕಾಣಿಸಿಕೊಂಡಿದೆ. ನಂತ್ರ ವಾಂತಿಯಾಗಿದೆ. ಇದಾದ್ಮೇಲೆ ನೆಲದ ಮೇಲೆ ಬಿದ್ದ ಆಕೆಗೆ ಏಳಲು ಸಾಧ್ಯವಾಗ್ಲಿಲ್ಲ. ನಂತ್ರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನಡೆಸಿದ ವೈದ್ಯರು ಸಾಂಟೋನಿಯಸ್ ಸಬ್ಅರಾಕ್ನಾಯಿಡ್ ಹೆಮರೇಜ್ (Spontaneous Subarachnoid Hemorrhage) ಕಾಣಿಸಿಕೊಂಡಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಅತಿಯಾದ ಒತ್ತಡದಲ್ಲಿ ಕಾಣಿಸಿಕೊಳ್ಳುತ್ತದೆ. ಇದೊಂದು ರೀತಿ ಸ್ಟ್ರೋಕ್ ಆಗಿದೆ. ಏಕಾಏಕಿ ಆಕೆಗೆ ಕಾಣಿಸಿಕೊಂಡ ಕೋಪ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.

2019ರಲ್ಲಿ 36 ವರ್ಷದ ಮಹಿಳೆಯೊಬ್ಬಳಿಗೆ ಹೃದಯಾಘಾತವಾಗಿತ್ತು. ಮಗುವಿಗೆ ಗಣಿತ ಹೇಳುವ ವೇಳೆ ಆಕೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇದು ಚೀನಾದಲ್ಲಿ ಮೊದಲ ಘಟನೆಯಾಗಿತ್ತು. ಆದ್ರೆ ಇದಾದ ನಂತ್ರ ಇಂಥ ಸುದ್ದಿಗಳು ನಿರಂತರವಾಗಿ ಕೇಳಿ ಬರ್ತಿವೆ. 45 ವರ್ಷದ ವ್ಯಕ್ತಿಯೊಬ್ಬನಿಗೂ ಹೋಮ್ ವರ್ಕ್ ಸಮಯದಲ್ಲಿ ಇದೇ ಸಮಸ್ಯೆ ಆಗಿತ್ತು. ಜನವರಿ 13 ರಂದು, ಚೀನಾದ ಜಿಯಾಂಗ್ಸು ಪ್ರಾಂತ್ಯದ ಲಿಯಾನ್ಯುಂಗಾಂಗ್‌ನ 37 ವರ್ಷದ ಮಹಿಳೆ ತನ್ನ ನಾಲ್ಕನೇ ತರಗತಿಯ ಮಗನಿಗೆ ಗಣಿತ ಕಲಿಸುತ್ತಿದ್ದಳು. ಮಗನಿಗೆ ಗಣಿತ ಬರ್ತಿರಲಿಲ್ಲ. ಇದ್ರಿಂದ ಆಕೆ ಕೋಪ ಹೆಚ್ಚಾಗಿ ಮೊದಲೇ ಇದ್ದ ರಕ್ತದೊತ್ತಡ ಮತ್ತಷ್ಟು ಏರಿಕೆಯಾಗಿದೆ. ಎದೆ ನೋವು, ಸ್ಟ್ರೋಕ್ ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿ ಹೆಂಡತಿಯೂ ತನ್ನ ಪತಿಯಿಂದ ಬಯಸುವ ಆ 5 ವಿಷ್ಯಗಳು ಯಾವುವು ಗೊತ್ತಾ?

ಮನೆ ಕೆಲಸ, ಕಚೇರಿ, ಮಕ್ಕಳ ಆರೈಕೆ ಎಲ್ಲದರಲ್ಲೂ ಮಹಿಳೆಯರು ಹೆಚ್ಚು ಬ್ಯುಸಿ ಇರುವ ಕಾರಣ ಅವರಿಗೆ ಈ ಸಮಸ್ಯೆ ಕಾಡೋದು ಹೆಚ್ಚು. ಹೋಂ ವರ್ಕ್ ಕೂಡ ಇದ್ರಲ್ಲಿ ಸೇರಿದೆ ಎಂದು ತಜ್ಞರು ಹೇಳಿದ್ದಾರೆ. ಮಕ್ಕಳ ವಿದ್ಯಾಭ್ಯಾಸವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. 

Latest Videos
Follow Us:
Download App:
  • android
  • ios